ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,14,15, 2016

Question 1

1. ಈ ಕೆಳಗಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗಮನಿಸಿ:

I) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

II) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

III) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

IV) ಸರ್ದಾರ ವಲ್ಲಬ್ ಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಮೇಲಿನ ಯಾವುವು ಕಾರ್ಬನ್ ನ್ಯೂಟ್ರಲ್ ಸ್ಥಾನಮಾನ ಪಡೆದುಕೊಂಡ ವಿಮಾನ ನಿಲ್ದಾಣಗಳಾಗಿವೆ?

A
I & II
B
II & III
C
I, II & III
D
ಮೇಲಿನ ಎಲ್ಲವೂ
Question 1 Explanation: 
II & III

ಹೈದ್ರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಏಷ್ಯಾ ಫೆಸಿಫಿಕ್ ವಲಯದಲ್ಲಿ ಕಾರ್ಬನ್ ನ್ಯೂಟ್ರಲ್ ಸ್ಥಾನಮಾನ ಪಡೆದುಕೊಂಡ ಎರಡನೇ ವಿಮಾನ ನಿಲ್ಧಾಣವೆಂಬ ಗೌರವಕ್ಕೆ ಇತ್ತೀಚೆಗೆ ಪಾತ್ರವಾಗಿದೆ. ಇದಕ್ಕೂ ಮುಂಚೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಬನ್ ನ್ಯೂಟ್ರಲ್ ಸ್ಥಾನಮಾನ ಪಡೆದುಕೊಂಡ ಏಷ್ಯಾ ಫೆಸಿಫಿಕ್ ವಲಯದ ಮೊದಲ ವಿಮಾನ ನಿಲ್ದಾಣವಾಗಿತ್ತು. ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಿ ಸಾಧನೆ ಮಾಡುವ ವಿಮಾನ ನಿಲ್ದಾಣಗಳಿಗೆ ಈ ಸ್ಥಾನಮಾನವನ್ನು ನೀಡಲಾಗುತ್ತದೆ.

Question 2

2. ಈ ಮುಂದಿನ ಯಾವುದನ್ನು “ನಗೆ ಅನಿಲವೆಂದು (Laughing Gas)” ಕರೆಯಲಾಗುತ್ತದೆ?

A
ನೈಟ್ರೋಜನ್
B
ನೈಟ್ರಸ್ ಆಕ್ಸೈಡ್
C
ನೈಟ್ರಿಕ್ ಆಕ್ಸೈಡ್
D
ನೈಟ್ರೋಜನ್ ಪೆಂಟಾ ಆಕ್ಸೈಡ್
Question 2 Explanation: 
ನೈಟ್ರಸ್ ಆಕ್ಸೈಡ್ (Nitrous Oxide)
Question 3

3. ದೇಶದ ಮೊದಲ ಭೂಚಲಚರ ಬಸ್ (Amphibious Bus) ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?

A
ಪಂಜಾಬ್
B
ಕೇರಳ
C
ಮಹಾರಾಷ್ಟ್ರ
D
ಗುಜರಾತ್
Question 3 Explanation: 
ಪಂಜಾಬ್

ದೇಶದ ಮೊದಲ ಭೂಜಲಚರ ಬಸ್ ಸೇವೆಯನ್ನು ಪಂಜಾಬ್ ರಾಜ್ಯ ಸರ್ಕಾರ ಆರಂಭಿಸಿದೆ. “ಹರಿಕೆ ಕ್ರೂಸ್” ಹೆಸರಿನ ಈ ಬಸ್ ಸೇವೆಯನ್ನು ಪಂಜಾಬ್ ನ ಅಮೃತ್ ಸರದ ಬಳಿ ಇರುವ ಹರಿಕೆ ಸರೋವರದಲ್ಲಿ ಆರಂಭಿಸಲಾಗಿದೆ. ಭೂಮಿ ಮತ್ತು ನೀರು ಎರಡರ ಮೇಲೂ ಈ ಬಸ್ ಸಂಚರಿಸಲಿದೆ. ಇದಕ್ಕಾಗಿ ಪಂಜಾನ್ ಸರ್ಕಾರ ರೂ 11 ಕೋಟಿ ವ್ಯಯಿಸಿದೆ. 34 ಆಸನಗಳನ್ನು ಹೊಂದಿರುವ ಈ ಬಸ್ ಅಮೃತಸರದಿಂದ ಹರಿಕೆ ಸರೋವರದ ವರೆಗೆ 13 ಕಿ.ಮೀ ಚಲಿಸಲಿದೆ. ಆನಂತರ 4 ಕಿ.ಮೀ ನೀರಿನ ಮೇಲೆ ಚಲಿಸುತ್ತದೆ.

Question 4

4. ಯಾವ ರಾಜ್ಯ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯನ್ನು ಬಲಗೊಳಿಸಲು ಟಾಟಾ ಟ್ರಸ್ಟ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಉತ್ತರ ಪ್ರದೇಶ
B
ಜಾರ್ಖಂಡ್
C
ಅರುಣಾಚಲ ಪ್ರದೇಶ
D
ತೆಲಂಗಣ
Question 4 Explanation: 
ಉತ್ತರ ಪ್ರದೇಶ

ಉತ್ತರ ಪ್ರದೇಶ ಸರ್ಕಾರ ರಾಜ್ಯದ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಟಾಟಾ ಟ್ರಸ್ಟ್ ನೊಂದಿಗೆ ಕೈಜೋಡಿಸಿದೆ. ಅದರಂತೆ ಲಕ್ನೋದ ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಡಿವೈಸ್ (Electronic point of sale of device)ಗಳನ್ನು ಅಳವಡಿಸಿದ್ದು, ಆಧಾರ್ ಕಾರ್ಡ್ ಆಧರಿತ ವಿತರಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Question 5

5. “2016 ಫಿಫಾ ಬ್ಯಾಲನ್ ಡಿ ಒರ್ ಆರ್ಡರ್ (FIFA Ballon d’ Or Award)” ಪ್ರಶಸ್ತಿ ಪಡೆದ ಪುಟ್ಬಾಲ್ ಆಟಗಾರ ಯಾರು?

A
ನೇಮರ್
B
ಕ್ರಿಸ್ಟಿಯಾನೋ ರೋನಾಲ್ಡೊ
C
ಲಿಯೊನೆಲ್ ಮೆಸ್ಸಿ
D
ಅಂಟೊನೆ ಗ್ರೀಜ್ ಮನ್
Question 5 Explanation: 
ಕ್ರಿಸ್ಟಿಯಾನೋ ರೋನಾಲ್ಡೊ

ಪೋರ್ಚಗೀಸ್ ನ ಪ್ರಖ್ಯಾತ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೊ ರವರು 2016 ಫಿಫಾ ಬ್ಯಾಲನ್ ಡಿ ಒರ್ ಆರ್ಡರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೋನಾಲ್ಡೊ ರವರಿಗೆ ಇದು 4ನೇ ಫಿಫಾ ಬ್ಯಾಲನ್ ಡಿ ಒರ್ ಆರ್ಡರ್ ಪ್ರಶಸ್ತಿಯಾಗಿದೆ.

Question 6

6. ಭಾರತದ ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ (Indoor Stadium) ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಗುಜರಾತ್
B
ಪಶ್ಚಿಮ ಬಂಗಾಳ
C
ಆಂಧ್ರ ಪ್ರದೇಶ
D
ಹರಿಯಾಣ
Question 6 Explanation: 
ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಕೊಲ್ಕತ್ತ ಬಳಿ ದೇಶದ ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ ಸ್ಥಾಪನೆಯಾಗಲಿದೆ. ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತಲಿರುವ ಈ ಕ್ರೀಡಾಂಗಣದಲ್ಲಿ ಒಂದೇ ಬಾರಿಗೆ 15,400 ಜನರು ಕೂತು ವೀಕ್ಷಿಸಬಹುದಾಗಿದೆ. ಲಾನ್ ಟೆನ್ನಿಸ್, ಖೋಖೋ, ಕಬಡ್ಡಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್ ಮತ್ತು ಟೆನ್ನಿಸ್ ಕೋರ್ಟ್ ಗಳನ್ನು ಇದು ಒಳಗೊಂಡಿರಲಿದೆ.

Question 7

7. 6ನೇ ಏಷ್ಯಾ ಫೆಸಿಫಿಕ್ ವಸತಿ ಮತ್ತು ನಗರಾಭಿವೃದ್ದಿ ಅಧಿಕಾರಿಗಳ ಸಮ್ಮೇಳನ ಯಾವ ನಗರದಲ್ಲಿ ಆರಂಭಗೊಂಡಿದೆ?

A
ರಾಂಚಿ
B
ಕೊಚ್ಚಿ
C
ನವ ದೆಹಲಿ
D
ಕೊಲ್ಕತ್ತ
Question 7 Explanation: 
ನವ ದೆಹಲಿ:

6ನೇ ಏಷ್ಯಾ ಫೆಸಿಫಿಕ್ ವಸತಿ ಮತ್ತು ನಗರಾಭಿವೃದ್ದಿ ಅಧಿಕಾರಿಗಳ ಸಮ್ಮೇಳನವನ್ನು ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯ ನಾಯ್ಡು ರವರು ನವದೆಹಲಿಯಲ್ಲಿ ಉದ್ಘಾಟಿಸಿದರು. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ನಗರೀಕರಣ ಮತ್ತು ನಗರೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು.

Question 8

8. ಏಷ್ಯಾ ಅಭಿವೃದ್ದಿ ಬ್ಯಾಂಕ್ ನ “ಏಷ್ಯಾ ಡೆವಲೆಪ್ ಮೆಂಟ್ ಔಟ್ ಲುಕ್-2016” ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ 2016-17 ಸಾಲಿನಲ್ಲಿ ಎಷ್ಟಿರಲಿದೆ?

A
7.2%
B
7.4%
C
7.0%
D
7.6%
Question 8 Explanation: 
7.0%

ಏಷ್ಯಾ ಅಭಿವೃದ್ದಿ ಬ್ಯಾಂಕ್ ನ “ಏಷ್ಯಾ ಡೆವಲೆಪ್ ಮೆಂಟ್ ಔಟ್ ಲುಕ್-2016” ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ 2016-17 ಸಾಲಿನಲ್ಲಿ ಶೇ 7.0% ಇರಲಿದೆ. ಈ ಮುಂಚೆ ಶೇ 7.4% ಇರಲಿದೆ ಎನ್ನಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಮಂದಗತಿ ಬೆಳವಣಿಗೆ, ಬಂಡವಾಳ ಹೂಡಿಕೆಯಲ್ಲಿ ಕೊರತೆ ಮತ್ತು ಕೇಂದ್ರ ಸರ್ಕಾರದ ನೋಟು ರದ್ದು ನಿರ್ಣಯದಿಂದ ನಗದು ಕೊರತೆ ಉಂಟಾಗಿರುವುದು ಬೆಳವಣಿಗೆ ಕುಂಠಿತವಾಗಲು ಕಾರಣ ಎನ್ನಲಾಗಿದೆ.

Question 9

9. ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ನೀಡುವ “2016 ವರ್ಷದ ಸುಧಾರಿತ ಆಟಗಾರ್ತಿ ಪ್ರಶಸ್ತಿ (Most Improved Player)” ಯಾರಿಗೆ ಲಭಿಸಿದೆ?

A
ಕ್ಯಾರೊಲಿನಾ ಮರಿನ್
B
ಪಿ ವಿ ಸಿಂಧು
C
ಸೈನಾ ನೆಹ್ವಾಲ್
D
ಯೂ ಚೆನ್
Question 9 Explanation: 
ಪಿ ವಿ ಸಿಂಧು

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಶನ್‌ (ಬಿಡಬ್ಲ್ಯೂಎಫ್‌) ನೀಡುವ 'ವರ್ಷದ ಸುಧಾರಿತ ಆಟಗಾರ್ತಿ' ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ. ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಧು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪುರುಷರ ವಿಭಾಗ ವರ್ಷದ ಆಟಗಾರ ಪ್ರಶಸ್ತಿ ಮಲೇಷಿಯಾದ ಆಟಗಾರ ಲಿ ಚಾಂಗ್‌ ವಿ ಪಾಲಾಯಿತು.

Question 10

10. ಇತ್ತೀಚೆಗೆ ನಿಧನರಾದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಥಾಮಸ್ ಶೆಲ್ಲಿಂಗ್ ಯಾವ ದೇಶದವರು?

A
ಅಮೆರಿಕ
B
ಫ್ರಾನ್ಸ್
C
ಜಪಾನ್
D
ಜರ್ಮನಿ
Question 10 Explanation: 
ಅಮೆರಿಕ

ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಥಾಮಸ್ ಶೆಲ್ಲಿಂಗ್ ನಿಧನರಾದರು. 2005ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ರಾಬರ್ಟ್ ಔಮನ್ನ್ ರೊಂದಿಗೆ ಥಾಮಸ್ ಶೆಲ್ಲಿಂಗ್ ರವರು ಜಂಟಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯ ಹಾಗೂ ಮೆರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿದ್ದ ಥಾಮಸ್ ಶೆಲ್ಲಿಂಗ್ ಅವರು, ಪರಮಾಣು ತಂತ್ರಗಾರಿಕೆಯನ್ನು ಗೇಮ್ ಥಿಯರಿ ಮೂಲಕ ವಿವರಿಸಿದ್ದರು. ಥಾಮಸ್ ಶೆಲ್ಲಿಂಗ್ ಅವರ ಗೇಮ್ ಥಿಯರಿ ಗಣಿತಶಾಸ್ತ್ರದ ಅಧ್ಯಯನವಾಗಿದ್ದು, ಸ್ಪರ್ಧಾತ್ಮಕ ಸಂದರ್ಭಗಳ ತಂತ್ರಗಾರಿಕೆಯಾಗಿವೆ. ಇವರ ಸಾಧನೆಯನ್ನು ಪುರಸ್ಕರಿಸಿ ಅವರಿಗೆ 2005ರಲ್ಲಿ ನೊಬೆಲ್ ಪಾರಿತೋಷಕ ನೀಡಲಾಗಿತ್ತು.

There are 10 questions to complete.

[button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್1415-2016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.