ಅಗ್ನಿ-1 ಖಂಡಾಂತರ ಕ್ಷಿಪಣೆ ಪರೀಕ್ಷೆ ಯಶಸ್ವಿ

ಸ್ವದೇಶಿ ನಿರ್ಮಿತ ಸಿಡಿಲ ತಲೆ ಹೊತ್ತೊಯ್ಯಬಲ್ಲ ಅಗ್ನಿ-1 ಖಂಡಾತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಒರಿಸ್ಸಾದ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. ಕಳೆದ ಮಾರ್ಚ್ 2016 ಇದೇ ಸ್ಥಳದಲ್ಲಿ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.

ಅಗ್ನಿ-1 ಕ್ಷಿಪಣಿ:

  • ಅಗ್ನಿ-1 ಖಂಡಾಂತರ ಹಾಗೂ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿ. ಅಗ್ನಿ ಸರಣಿಯ ಮೊದಲ ಕ್ಷಿಪಣಿಯನ್ನು 1983 ರಲ್ಲಿ ಪ್ರಾರಂಭಿಸಲಾಯಿತು.
  • ಅಗ್ನಿ ಕ್ಷಿಪಣಿಯು 700 ಕಿಮೀ. ದೂರದ ವರೆಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
  • 12 ಟನ್ ತೂಕವಿರುವ ಈ ಖಂಡಾಂತರ ಕ್ಷಿಪಣಿಯು 15 ಮೀಟರ್ ಉದ್ದವಿದ್ದು, 1 ಟನ್ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಲಿದೆ.
  • DRDO ಹಾಗೂ ರಿಸರ್ಜ್ ಸೆಂಟರ್ ಇಮ್ರಾತ್ ಮತ್ತು ಹೈದರಾಬಾದ್‌ನ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ ಕೂಡಿಕೊಂಡು ಅಗ್ನಿ-1 ಕ್ಷಿಪಣಿಯನ್ನು ವಿನ್ಯಾಸ ಮಾಡಿವೆ.

ಹಿರಿಯ ಪತ್ರಕರ್ತ ದಿಲೀಪ್ ಪಡಗಾಂವ್ಕರ್ ನಿಧನ

ಹಿರಿಯ ಪತ್ರಕರ್ತ ಹಾಗೂ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ದಿಲೀಪ್‌ ಪಡಗಾಂವ್ಕರ್ ನಿಧನರಾದರು. ಕೆಲವು ವಾರಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. 2008ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸತತವಾಗಿ ಉದ್ವಿಗ್ನ ವಾತಾವರಣ ಉಂಟಾದ ಬಳಿಕ ಕೇಂದ್ರ ಸರ್ಕಾರ ಮಾತುಕತೆಗೆ ಮೂವರು ಸದಸ್ಯರ ಗುಂಪೊಂದನ್ನು ರಚಿಸಿತ್ತು. ಫ್ರೊಫೆಸರ್ ಎಂ.ಎಂ.ಅನ್ಸಾರಿ, ಫ್ರೊಫೆಸರ್ ರಾಧ ಕುಮಾರ್ ಹಾಗೂ ಪಡಗಾಂವ್ಕರ್‌ ಸಮಿತಿಯ ಸದಸ್ಯರಾಗಿದ್ದರು.

ದಿಲೀಪ್ಪಡಗಾಂವ್ಕರ್ ಬಗ್ಗೆ:

  • 1944 ರಲ್ಲಿ ಪುಣೆಯಲ್ಲಿ ಜನಿಸಿದ ಪಡಗಾಂವ್ಕರ್ ರವರು ಫೆರ್ಗುಸನ್ ಕಾಲೇಜಿನಿಂದ ರಾಜಕೀಯಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
  • ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸುವ ಮುನ್ನ 1968ರಲ್ಲಿ ಮಾನವಿಕ ಶಾಸ್ತ್ರದಲ್ಲಿ ಫ್ರಾನ್ಸ್ ನ ಸೊರ್ಬೊನ್ನೆ ವಿವಿಯಿಂದ ಡಾಕ್ಟರೇಟ್‌ ಪಡೆದಿದ್ದರು.
  • ಅವರು ಟೈಮ್ಸ್‌ ಆಫ್‌್ ಇಂಡಿಯಾ ಪತ್ರಿಕೆ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು.
    1988ರಿಂದ ಆರು ವರ್ಷಗಳ ಅವಧಿಗೆ ಅವರು ಟೈಮ್ಸ್‌ ಆಫ್‌ ಇಂಡಿಯಾ ಸಂಪಾದಕರಾಗಿದ್ದರು.
  • 1978ರಿಂದ 1986ರವರೆಗೆ ಅವರು ಬ್ಯಾಂಕಾಕ್‌ ಹಾಗೂ ಪ್ಯಾರಿಸ್‌ನಲ್ಲಿ ಯುನೆಸ್ಕೊ ಜತೆ ಅವರು ಕಾರ್ಯನಿರ್ವಹಿಸಿದ್ದರು.
  • ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾದ ಲಿಜ್ಹನ್ ಡಿ ಹಾನರ್ ಗೌರವನ್ನು 2002 ರಲ್ಲಿ ನೀಡಿ ಗೌರವಿಸಲಾಗಿತ್ತು.

ಅನ್ನಪೂರ್ಣ ರಸೊಯ್ ಯೋಜನೆಯನ್ನ ಜಾರಿಗೊಳಿಸಲಿರುವ ರಾಜಸ್ತಾನ

ಕಾರ್ಮಿಕರು ಮತ್ತು ದುರ್ಬಲ ವರ್ಗದ ಜನರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಪೂರೈಸುವ ಸಲುವಾಗಿ ಅನ್ನಪೂರ್ಣ ರಸೊಯ್ ಯೋಜನೆಯನ್ನು ಜಾರಿಗೆ ತರಲು ರಾಜಸ್ತಾನ ಸರ್ಕಾರ ನಿರ್ಧರಿಸಿದೆ. ರಿಕ್ಷಾ ಎಳೆಯುವವರು, ಆಟೋ ಚಾಲಕರು, ವಿದ್ಯಾರ್ಥಿಗಳು, ಮಹಿಳಾ ಕಾರ್ಮಿಕರು, ಹಿರಿಯರು ಮತ್ತು ದುರ್ಬಲ ವರ್ಗದ ಜನರು ಈ ಯೋಜನೆಯ ಫಲಾನುಭವಿಗಳಾಗಿರಲಿದ್ದಾರೆ.

ಪ್ರಮುಖಾಂಶಗಳು:

  • ಈ ಕಾರ್ಯಕ್ರಮದಡಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಬೆಳಗಿನ ಉಪಹಾರ ರೂ 5 ಮತ್ತು ಮಧ್ಯಾಹ್ನದ ಊಟವನ್ನು ರೂ. 8 ದರದಲ್ಲಿ ನೀಡಲಾಗುವುದು.
  • ಈ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ 12 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು. ಅವುಗಳೆಂದರೆ ಜೈಪುರ, ಜೋದ್ ಪುರ, ಉದಯ್ ಪುರ, ಅಜ್ಮೇರ್, ಕೋಟ, ಬಿಕನೇರ್, ಭರತ್ ಪುರ, ಪ್ರತಾಪ್ ಘರ್, ದುಂಗರ್ಪುರ, ಬನ್ಸ್ವಾರ, ಬರಣ್ ಮತ್ತು ಜಾಲವರ್.
  • ಎರಡನೇ ಹಂತದಲ್ಲಿ ಉಳಿದ 21 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು.
  • ಆಹಾರವನ್ನು 80 ಮೊಬೈಲ್ ವ್ಯಾನ್ ಗಳ ಮೂಲಕ ಸೂಕ್ತ ಸ್ಥಳಗಳಲ್ಲಿ ವಿತರಿಸಲಾಗುವುದು.

Leave a Comment

This site uses Akismet to reduce spam. Learn how your comment data is processed.