ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,9,10, 2016

Question 1

1.2016 ಜಾಗತಿಕ ಭಯೋತ್ಪಾದನೆ ಸೂಚ್ಯಂಕ (Global Terrorism Index) ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
9
B
6
C
7
D
10
Question 1 Explanation: 
7:

2016 ಜಾಗತಿಕ ಭಯೋತ್ಪಾದನೆ ಸೂಚ್ಯಂಕದಲ್ಲಿ ಭಾರತ 163 ರಾಷ್ಟ್ರಗಳ ಪೈಕಿ 7ನೇ ಸ್ಥಾನದಲ್ಲಿದೆ. ಸಿಡ್ನಿ ಮೂಲದ “ಇನ್ಸ್ಟಿಟ್ಯೂಟ್ ಫಾರ್ ಎಕಾನಮಿಕ್ಸ್ ಅಂಡ್ ಪೀಸ್” ಜಾಗತಿಕ ಭಯೋತ್ಪಾದನೆ ಸೂಚ್ಯಂಕವನ್ನು ಬಿಡುಗಡೆಗೊಳಿಸುತ್ತಿದ್ದು, 2015 ರಲ್ಲಿ ನಡೆದ ಭಯೋತ್ಪಾದನೆ ಪ್ರಕರಣಗಳನ್ನು ಆಧರಿಸಿ ಸೂಚ್ಯಂಕವನ್ನು ಅಭಿವೃದ್ದಿಪಡಿಸಲಾಗಿದೆ. ಸೂಚ್ಯಂಕದಲ್ಲಿ ಇರಾಕ್ ಮೊದಲನೆ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ, ನೈಜೀರಿಯಾ, ಪಾಕಿಸ್ತಾನ ಮತ್ತು ಸಿರಿಯಾ ಕ್ರಮವಾಗಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

Question 2

2. “ದೀಪಾ ಕಮಾರ್ಕರ್: ದಿ ಸ್ಮಾಲ್ ವಂಡರ್ (Deepa Kamarkar: The Small Wonder)” ಪುಸ್ತಕದ ಲೇಖಕರು ಯಾರು?

A
ದೀಪಾ ಕಮಾರ್ಕರ್
B
ಬಿಬ್ವೇಶ್ವರ್ ನಂದಿ
C
ಆನಂದ್ ಚಂದ್ರಕಾಂತ್
D
ರಾಜ್ ಕುಮಾರ್ ಸಿಂಗ್
Question 2 Explanation: 
ದೀಪಾ ಕಮಾರ್ಕರ್:

ದಿ ಸ್ಮಾಲ್ ವಂಡರ್ ಪುಸ್ತಕವನ್ನು ಕ್ರೀಡಾ ಪತ್ರಕರ್ತ ವಿಮಲ್ ಮೋಹನ್, ದಿಗ್ವಿಜಯ್ ಸಿಂಗ್ ದಿಯೊ ಮತ್ತು ದೀಪಾ ಕಮಾರ್ಕರ್ ರವರ ಕೋಚ್ ಬಿಬೇಶ್ವರ್ ನಂದಿ ರವರು ಬರೆದಿದ್ದಾರೆ. ದೀಪಾ ಕಮಾರ್ಕರ್ ರವರನ್ನು ಕುರಿತಾದ ಹಲವಾರು ಮಹತ್ವದ ವಿಷಯಗಳನ್ನು ಪುಸ್ತಕ ಒಳಗೊಂಡಿದೆ.

Question 3

3. ಆನ್ ಲೈನ್ ಪೈರಸಿ ವಿರುದ್ದ ಹೋರಾಡಲು “ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI)” ಯಾವ ಸಮಿತಿಯನ್ನು ರಚಿಸಲಾಗಿದೆ?

A
ಅಜಿತ್ ಮೋಹನ್ ಸಮಿತಿ
B
ಭರತ್ ಕೃಷ್ಣನ್ ಸಮಿತಿ
C
ರಾಜೇಂದ್ರ ಸಿಂಗ್ ಸಮಿತಿ
D
ಸುರೇಶ್ ಚಂದ್ರ ಸಮಿತಿ
Question 3 Explanation: 
ಅಜಿತ್ ಮೋಹನ್ ಸಮಿತಿ:

ಆನ್ ಲೈನ್ ಪೈರಸಿ ವಿರುದ್ದ ಹೋರಾಡುವ ಸಲುವಾಗಿ “ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI)” ಸಮಿತಿಯನ್ನು ರಚಿಸಿದೆ. ಹಾಟ್ ಸ್ಟಾರ್ ಮುಖ್ಯಸ್ಥ ಅಜಿತ್ ಮೋಹನ್ ರವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಡಿಜಿಟಲ್ ಮನೋರಂಜನೆಯ ಹಿತಾಸಕ್ತಿಯನ್ನು ಕಾಪಾಡಲು ಶಿಫಾರಸ್ಸು ಮಾಡುವುದು ಸಮಿತಿಯ ಹೊಣೆಗಾರಿಕೆಯಾಗಿದೆ.

Question 4

4. ಇತ್ತೀಚೆಗೆ ಈ ಕೆಳಗಿನ ಯಾವ ಸಮಿತಿ ಡಿಜಿಟಲ್ ನಗದು ಪಾವತಿ ಕುರಿತಾದ ತನ್ನ ಅಂತಿಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು?

A
ರತನ್ ವಟಲ್ ಸಮಿತಿ
B
ಹೆಚ್ ಆರ್ ಖಾನ್ ಸಮಿತಿ
C
ಶೈಲಜಾ ಗೋಪಿನಾಥನ್ ಸಮಿತಿ
D
ಮಂಜು ಭಾರ್ಗವ ಸಮಿತಿ
Question 4 Explanation: 
ರತನ್ ವಟಲ್ ಸಮಿತಿ:

ಡಿಜಿಟಲ್ ನಗದು ಪಾವತಿ ಕುರಿತಾಗಿ ರಚಿಸಲಾಗಿದ್ದ ರತನ್ ಪಿ ವಟಲ್ ಸಮಿತಿ ತನ್ನ ವರದಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ರವರಿಗೆ ಸಲ್ಲಿಸಿದೆ. ಡಿಜಿಟಲ್ ನಗದು ಪಾವತಿ ಪ್ರೇರಣೆಗೆ ಮಧ್ಯಮ ಅವಧಿ ನೀತಿ ಜಾರಿಗೆ ತರಲು ಶಿಫಾರಸ್ಸು ಮಾಡಿದೆ. ಅಲ್ಲದೇ ನಗದು ರಹಿತ ಪಾವತಿಗೆ ಸ್ಪರ್ಧಾತ್ಮಕ ವಾತಾವರಣ ಸೃಜನೆ ಮಾಡುವಂತೆ ಸಮಿತಿ ತಿಳಿಸಿದೆ.

Question 5

5. ಈ ಕೆಳಗಿನ ಯಾವ ದೇಶ “ಫೆನ್ಗ್ಯೂನ್-4 (Fengyun-4)” ಸುಧಾರಿತ ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ?

A
ಚೀನಾ
B
ರಷ್ಯಾ
C
ಅಮೆರಿಕ
D
ಜಪಾನ್
Question 5 Explanation: 
ಚೀನಾ:

ಚೀನಾದ ಹೊಸ ಪೀಳಿಗೆಯ ಸುಧಾರಿತ ಹವಾಮಾನ ಉಪಗ್ರಹ “ಫೆನ್ಗ್ಯೂನ್-4” ಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಲಾಂಗ್ ಮಾರ್ಚ್-3ಬಿ ರಾಕೆಟ್ ಬಳಸಿ ಕ್ಸಿಚಾಂಗ್ ಉಪಗ್ರಹ ಉಡಾವಣ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಫೆನ್ಗ್ಯೂನ್-4 ಭೂಸ್ಥಿರ ಕಕ್ಷೆ ಉಪಗ್ರಹವಾಗಿದೆ.

Question 6

6. ಇತ್ತೀಚೆಗೆ ನಿಧನರಾದ ಗಗನಯಾತ್ರಿ “ಜಾನ್ ಗ್ಲೆನ್’ ಯಾವ ದೇಶದವರು?

A
ಅಮೆರಿಕ
B
ಫ್ರಾನ್ಸ್
C
ರಷ್ಯಾ
D
ಇಸ್ರೇಲ್
Question 6 Explanation: 
ಅಮೆರಿಕ:

ಅಮೆರಿಕದ ಗಗನಯಾತ್ರಿ “ಜಾನ್ ಗ್ಲೆನ್” ಅನಾರೋಗ್ಯದ ನಿಮಿತ್ತ ನಿಧನರಾದರು. ಗ್ಲೇನ್ ರವರು ಅಂತರಿಕ್ಷದಲ್ಲಿ ಭೂಮಿಯನ್ನು ಸುತ್ತು ಹಾಕಿದ ಅಮೆರಿಕದ ಮೊದಲ ವ್ಯಕ್ತಿ ಮತ್ತು ಬಾಹ್ಯಾಕಾಶ ಯಾತ್ರೆ ಕೈಗೊಂಡ ಅತಿ ಹಿರಿಯ ಗಗನಯಾತ್ರಿ ಎನಿಸಿದ್ದರು. ಗ್ಲೆನ್ 1962 ರಲ್ಲಿ ಅಟ್ಲಾಸ್ ಹೆಸರಿನ ರಾಕೆಟ್ನಲ್ಲಿ ಭೂಮಿಗೆ ಸುತ್ತು ಹಾಕಿದ್ದರು. ಈ ರಾಕೆಟ್ ನಿರ್ದಿಷ್ಟ ಕಕ್ಷೆಯಲ್ಲಿ ಐದು ಗಂಟೆ ಕಾಲ ಭೂಮಿಗೆ ಸುತ್ತುಹಾಕಿತ್ತು. ತಮ್ಮ 77ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಂಡು ಇತಿಹಾಸ ನಿರ್ಮಿಸಿದ್ದರು.

Question 7

7. “ಬಿಲ್ ಇಂಗ್ಲೀಷ್ (Bill English)” ರವರು ಯಾವ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

A
ಆಸ್ಟ್ರೇಲಿಯಾ
B
ನ್ಯೂಜಿಲ್ಯಾಂಡ್
C
ಫ್ರಾನ್ಸ್
D
ಜರ್ಮನಿ
Question 7 Explanation: 
ನ್ಯೂಜಿಲ್ಯಾಂಡ್:

ನ್ಯೂಜಿಲ್ಯಾಂಡ್ ನ ಆಡಳಿತ ಪಕ್ಷವಾದ ನ್ಯಾಷನಲ್ ಪಾರ್ಟಿ ಬಿಲ್ ಇಂಗ್ಲೀಷ್ ರವರನ್ನು ನೂತನ ಪ್ರಧಾನಿಯಾಗಿ ಆಯ್ಕೆಮಾಡಿದೆ. ಜಾನ್ ಕೀ ರವರು ವೈಯುಕ್ತಿಕ ಕಾರಣದಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಬಿಲ್ ಇಂಗ್ಲೀಷ್ ರವರನ್ನು ನೂತನ ಪ್ರಧಾನಿಯಾಗಿ ನೇಮಕಮಾಡಲಾಗಿದೆ. ಪಾಲ್ ಬೆನೆಟ್ ರವರನ್ನು ಉಪ ಪ್ರಧಾನಿಯಾಗಿ ನೇಮಕಮಾಡಲಾಗಿದೆ.

Question 8

8. ಈ ಕೆಳಗಿನ ಯಾವ ದೇಶದಲ್ಲಿ ಜಗತ್ತಿನಲ್ಲೆ ಮೊದಲ ಬಾರಿಗೆ ದೇಶ ಪ್ಲಾಸ್ಟಿಕ್ ನೋಟುಗಳನ್ನು ಬಳಕೆಗೆ ತರಲಾಗಿದೆ?

A
ಇಂಗ್ಲೆಂಡ್
B
ಆಸ್ಟ್ರೇಲಿಯಾ
C
ಅಮೆರಿಕ
D
ದಕ್ಷಿಣ ಆಫ್ರಿಕ
Question 8 Explanation: 
ಆಸ್ಟ್ರೇಲಿಯಾ:

ಪ್ಲಾಸ್ಟಿಕ್ ನೋಟುಗಳನ್ನು ಮೊದಲು ಬಳಕೆಗೆ ಬಂದದ್ದು ಆಸ್ಟ್ರೇಲಿಯಾದಲ್ಲಿ. ಅಲ್ಲಿ 1988ರಿಂದಲೇ ಬಳಕೆಯಲ್ಲಿದೆ. ಬ್ರೂನೆ, ನ್ಯೂಜಿಲೆಂಡ್, ಪಪುವಾ ನ್ಯೂಗಿನಿ, ರೊಮಾನಿಯ, ವಿಯೆಟ್ನಾಂ, ಕೆನಡಾಗಳಲ್ಲಿ ಪ್ಲಾಸ್ಟಿಕ್ ನೋಟುಗಳ ಬಳಕೆ ಇದೆ. ಬ್ರಿಟನ್ನಲ್ಲಿ ಈಗ ಭಾಗಶಃ ನೋಟುಗಳಷ್ಟೆ ಪ್ಲಾಸ್ಟಿಕ್ ನೊಟುಗಳಾಗಿದ್ದು, 2020ಕ್ಕೆ ಸಂಪೂರ್ಣವಾಗಿ ಬಳಕೆಗೆ ಬರಲಿದೆ ‘ಬೈಆಕ್ಸಿಯಲ್ ಓರಿಯೆಂಟೆಡ್ ಪಾಲಿಪ್ರೊಪೈಲೀನ್’ ಎಂಬ ಪಾರದರ್ಶಕ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಈ ನೋಟುಗಳನ್ನು ಮುದ್ರಿಸಲಾಗುತ್ತದೆ. ಭಾರತ ಸರ್ಕಾರ ಇದೀಗ ಪ್ರಾಯೋಗಿಕವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

Question 9

9. 2016 ಮಾನವ ಹಕ್ಕು ದಿನದ ಧ್ಯೇಯವಾಕ್ಯ ________?

A
Every Rights Deserves
B
Stand up for someone’s rights today
C
We are all one so protect rights
D
My voice counts
Question 9 Explanation: 
Stand up for someone’s rights today:

ವಿಶ್ವ ಮಾನವ ಹಕ್ಕು ದಿನವನ್ನು ಪ್ರತಿವರ್ಷ ಡಿಸೆಂಬರ್ 10 ರಂದು ಆಚರಿಸಲಾಗುತ್ತದೆ. ಸಾರ್ವತ್ರಿಕ ಮಾನವ ಹಕ್ಕು ಘೋಷಣೆ ಸ್ಮರಣಾರ್ಥ ಡಿಸೆಂಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1948ರಲ್ಲಿ ಸಾರ್ವತ್ರಿಕ ಮಾನವ ಹಕ್ಕು ಘೋಷಣೆಯನ್ನು ಅಂಗೀಕರಿಸಿತು. 2016 ಮಾನವ ಹಕ್ಕು ದಿನದ ಧ್ಯೇಯವಾಕ್ಯ Stand up for someone’s rights today.

Question 10

10. “2016 ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ ಲಾಂಗ್ ಅಪ್ ಟೈಟಲ್ (IBSF World Billiards Long Up title)” ಗೆದ್ದುಕೊಂಡವರು ಯಾರು?

A
ಪಂಕಜ್ ಅಡ್ವಾಣಿ
B
ಸೌರವ್ ಕೊತಾರಿ
C
ಪೀಟರ್ ಗಿಲ್ ಕ್ರಿಸ್ಟ್
D
ರೂಪೇಶ್ ಷಾ
Question 10 Explanation: 
ಪೀಟರ್ ಗಿಲ್ ಕ್ರಿಸ್ಟ್:

ಸಿಂಗಾಪುರದ ಪೀಟರ್ ಗಿಲ್ ಕ್ರಿಸ್ಟ್ ರವರು ಭಾರತದ ಸೌರವ್ ಕೊತಾರಿ ರವರನ್ನು ಮಣಿಸಿ “2016 ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ ಲಾಂಗ್ ಅಪ್ ಟೈಟಲ್ ಗೆದ್ದುಕೊಂಡರು. ಬೆಂಗಳೂರಿನಲ್ಲಿ ನಡೆದ ಈ ಚಾಂಪಿಯನ್ ಷಿಪ್ ನಲ್ಲಿ ಭಾರತದ ರೂಪೇಶ್ ಷಾ ಮತ್ತು ದ್ವಜ್ ಹರಿಯ ರವರು ಜಂಟಿಯಾಗಿ ಮೂರನೇ ಸ್ಥಾನ ಪಡೆದುಕೊಂಡರು.

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-910.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,9,10, 2016”

  1. lokigowda

    1st question answer wrong ede sir

Leave a Comment

This site uses Akismet to reduce spam. Learn how your comment data is processed.