ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,8, 2016

Question 1

1. ಈ ಕೆಳಗಿನ ರಾಷ್ಟ್ರಗಳನ್ನು ಗಮನಿಸಿ:

I) ಜಪಾನ್

II) ವಿಯೆಟ್ನಾಂ

III) ರಷ್ಯಾ

IV) ಮಂಗೋಲಿಯಾ

ಡಿಸೆಂಬರ್ 10, 2016ರ ಅಂತ್ಯಕ್ಕೆ ಭಾರತ ಮೇಲಿನ ಯಾವ ದೇಶಗಳೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ?

A
I & II
B
I, II & III
C
II, III & IV
D
I, II, III & IV
Question 1 Explanation: 
I, II, III & IV:

ಇತ್ತೀಚೆಗೆ ಭಾರತ ಮತ್ತು ವಿಯೆಟ್ನಾಂ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಕಳೆದ ತಿಂಗಳಲ್ಲಿ ಜಪಾನ್ ನೊಂದಿಗೆ ಈ ಒಪ್ಪಂದಕ್ಕೆ ಸಹಿಹಾಕಲಾಗಿತ್ತು. ಇಲ್ಲಿಯವರೆಗೆ ಅಮೆರಿಕ, ಫ್ರಾನ್ಸ್, ಮಂಗೋಲಿಯಾ, ನಮೀಬಿಯಾ, ಅರ್ಜೇಂಟೆನಾ, ಕೆನಡಾ, ಕಝಕಸ್ತಾನ ಮತ್ತು ದಕ್ಷಿಣ ಕೊರಿಯಾ ಹಾಗೂ ಇತ್ತೀಚೆಗೆ ಜಪಾನ್ ಮತ್ತು ವಿಯೆಟ್ನಾಂ ರಾಷ್ಟ್ರಗಳೊಂದಿಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Question 2

2. “ವೀಣಾ ಮಂಕರ್(Veena Mankar)” ರವರು ಯಾವ ಬ್ಯಾಂಕಿನ್ ಕಾರ್ಯನಿರ್ವಾಹಕೇರತ ಮುಖ್ಯಸ್ಥೆಯಾಗಿ (Non-Executive Chairman) ನೇಮಕಗೊಂಡಿದ್ದಾರೆ?

A
ಎಕ್ಸಿಸ್ ಬ್ಯಾಂಕ್
B
ಹೆಚ್ ಡಿ ಎಫ್ ಸಿ ಬ್ಯಾಂಕ್
C
ಐಸಿಐಸಿಐ ಬ್ಯಾಂಕ್
D
ಕಾರ್ಪೋರೇಷನ್ ಬ್ಯಾಂಕ್
Question 2 Explanation: 
ಹೆಚ್ ಡಿ ಎಫ್ ಸಿ ಬ್ಯಾಂಕ್:

ವೀಣಾ ಮಂಕರ್ ರವರನ್ನು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಕಾರ್ಯನಿರ್ವಾಹಕೇತರ ಮುಖ್ಯಸ್ಥರನ್ನಾಗಿ ನಿರ್ದೇಶಕ ಮಂಡಳಿ ನೇಮಕ ಮಾಡಿದೆ. ಡಿಸೆಂಬರ್ 9, 2016 ರಿಂದ ಜುಲೈ 26, 2018 ರವರೆಗೆ ಅವಧಿಗೆ ಮಂಕರ್ ನೇಮಕಗೊಂಡಿದ್ದಾರೆ.

Question 3

3. “ಭಾರತ ಸಶಸ್ತ್ರ ಪಡೆಗಳ ಧ್ವಜ ದಿನ (Armed Force Flag Day)” ಯಾವ ದಿನದಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 5
B
ಡಿಸೆಂಬರ್ 6
C
ಡಿಸೆಂಬರ್ 7
D
ಡಿಸೆಂಬರ್ 8
Question 3 Explanation: 
ಡಿಸೆಂಬರ್ 7:

ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ದೇಶಕ್ಕಾಗಿ ಪ್ರಾಣಬಿಟ್ಟ ಧೀರ ಯೋಧರನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಯೋಧರ ಕಲ್ಯಾಣಕ್ಕಾಗಿ ಬಳಸಲಾಗುವುದು.

Question 4

4. ವರ್ಧಾ ಚಂಡಮಾರುತ ಅಪ್ಪಳಿಸಲಿರುವ ದೇಶ __________?

A
ಶ್ರೀಲಂಕಾ
B
ಭಾರತ
C
ಬಾಂಗ್ಲದೇಶ
D
ಚೀನಾ
Question 4 Explanation: 
ಭಾರತ:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವರ್ಧಾ ಚಂಡಮಾರುತ ಡಿ.12ರ ವೇಳೆಗೆ ಆಂಧ್ರದ ನೆಲ್ಲೂರೆ ಮತ್ತು ಮಚಲೀಪಟ್ಟಣಂ ನಡುವೆ ಪ್ರವೇಶಿಸಲಿದೆ. ಕರಾವಳಿಗೆ ಸಮೀಪಿಸುತ್ತಿದ್ದಂತೆಯೇ 130 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸುವ ಎಚ್ಚರಿಕೆಯನ್ನು ನೀಡಲಾಗಿದೆ.

Question 5

5. ಈ ಕೆಳಗಿನ ಯಾವುದು ಭಾರತಕ್ಕೆ ಅತಿ ಹೆಚ್ಚು ನೈಸರ್ಗಿಕ ಅನಿಲ ಪೂರೈಸುವ ದೇಶವಾಗಿದೆ?

A
ಕತಾರ್
B
ಸೌಧಿ ಅರೇಬಿಯಾ
C
ಇರಾನ್
D
ಇರಾಕ್
Question 5 Explanation: 
ಕತಾರ್ :

ದೇಶ ಭಾರತಕ್ಕೆ ಅತಿ ಹೆಚ್ಚು ನೈಸರ್ಗಿಕ ಅನಿಲ ಪೂರೈಸುವ ದೇಶವಾಗಿದೆ. ಭಾರತ ಆಮದು ಮಾಡಿಕೊಳ್ಳುವ ನೈಸರ್ಗಿಕ ಅನಿಲದ ಶೇ 66% ರಷ್ಟನ್ನು ಕತಾರ್ ಪೂರೈಸುತ್ತದೆ.

Question 6

6. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?

A
ರಾಜಸ್ತಾನ
B
ಗುಜರಾತ್
C
ಮಧ್ಯ ಪ್ರದೇಶ
D
ಕರ್ನಾಟಕ
Question 6 Explanation: 
ಗುಜರಾತ್:

ಗುಜರಾತ್ ನ ಅಹ್ಮದಾಬಾದ್'ನ ಮೊಟೇರಾದಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂನ ಪುನರ್ನಿರ್ಮಾಣದ ಕಾರ್ಯ ನಡೆಯಲಿದ್ದು, ವಿಶ್ವದ ಅತಿದೊಡ್ಡ ಸ್ಟೇಡಿಯಂ ಆಗಿ ಪರಿವರ್ತನೆಯಾಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಗುಜರಾತ್ ಕ್ರಿಕೆಟ್ ಸಂಸ್ಥೆಯು ಈ ಕಾರ್ಯ ಕೈಗೆತ್ತಿಕೊಂಡಿದೆ. 1.1 ಲಕ್ಷ ಸೀಟು ಸಾಮರ್ಥ್ಯದ ಸ್ಟೇಡಿಯಂ ಇದಲಾಗಲಿದೆ. ಒಂದು ಲಕ್ಷ ಸೀಟು ಸಾಮರ್ಥ್ಯ ಇರುವ ಮೆಲ್ಬೋರ್ನ್'ನ ಎಂಸಿಜಿ ಮೈದಾನವು ಸದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿದೆ. ಕೋಲ್ಕತಾದ ಈಡೆನ್ ಗಾರ್ಡನ್ಸ್ ದಶಕಗಳ ಹಿಂದಿನವರೆಗೂ ಆ ಹೆಸರು ಗಳಿಸಿಕೊಂಡಿತ್ತು. ಆದರೆ, ಮೈದಾನವನ್ನು ಚಿಕ್ಕದು ಮಾಡಿದ್ದರಿಂದ ಆ ದಾಖಲೆಯು ಮೆಲ್ಬೋರ್ನ್ ಸ್ಟೇಡಿಯಂಗೆ ಹೋಗಿದೆ.

Question 7

7. 9ನೇ ಏಷ್ಯನ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಮೊದಲ ಸ್ಥಾನ ಪಡೆದ ದೇಶ ಯಾವುದು?

A
ಚೀನಾ
B
ಭಾರತ
C
ಶ್ರೀಲಂಕಾ
D
ಬಾಂಗ್ಲದೇಶ
Question 7 Explanation: 
ಚೀನಾ:

ಚೀನಾದ ಶೂಟರ್ಗಳ ತಂಡವು 9ನೇ ಏಷ್ಯನ್ ರೈಫಲ್ ಮತ್ತು ಫಿಸ್ತೂಲ್ ಶೂಟಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ಭಾರತ ಶೂಟರ್ ಗಳ ತಂಡ ಎರಡನೇ ಸ್ಥಾನ ಪಡೆಯಿತು. ಭಾರತ ತಂಡವು ಒಟ್ಟು 15 ಪದಕಗಳನ್ನು (ಆರು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚು) ಗೆದ್ದಿತು. ಚೀನಾ ದೇಶದ ತಂಡವು 32 ಪದಕಗಳನ್ನು (14 ಚಿನ್ನ, 10 ಬೆಳ್ಳಿ, ಎಂಟು ಕಂಚು) ಗೆದ್ದು ಮೊದಲ ಸ್ಥಾನ ಪಡೆಯಿತು.

Question 8

8. “ವರ್ಷದ ಮಕ್ಕಳ ಐಕಾನ್ (Kids Icon of the Year)” ಬಿರುದಿಗೆ ಪಾತ್ರರಾದ ಬಾಲಿವುಡ್ ನಟ ಯಾರು?

A
ಅಕ್ಷಯ್ ಕುಮಾರ್
B
ಶಾರೂಕ್ ಖಾನ್
C
ಸಲ್ಮಾನ್ ಖಾನ್
D
ರಣವೀರ್ ಸಿಂಗ್
Question 8 Explanation: 
ಶಾರೂಕ್ ಖಾನ್:

ಬಾಲಿವುಡ್ ನ ಪ್ರಖ್ಯಾತ ನಟ ಶಾರೂಕ್ ಖಾನ್ ರವರು ವರ್ಷದ ಮಕ್ಕಳ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಕೊಲೆಡನ್ ಕಿಡ್ಸ್ ಚಾಯ್ಸ್ ಆವಾರ್ಡ್ ನಲ್ಲಿ ಖಾನ್ ಅವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

Question 9

9. ಇತ್ತೀಚೆಗೆ ಸುದ್ದಿಯಲ್ಲಿರುವ ತ್ರಿ-ನೇತ್ರ (Terrain Imaging for Diesel Drivers, Infrared Enhanced Optical and Radar Assisted (Tri-Netra) system) ಯಾವುದಕ್ಕೆ ಸಂಬಂಧಿಸಿದೆ?

A
ರೈಲ್ವೆ ಇಲಾಖೆ
B
ಭಾರತೀಯ ನೌಕ ಪಡೆ
C
ಇಸ್ರೋ
D
ನಾಗರಿಕ ವಿಮಾನಯಾನ
Question 9 Explanation: 
ರೈಲ್ವೆ ಇಲಾಖೆ:

ರೈಲು ಅಪರಾಧಗಳನ್ನು ತಗ್ಗಿಸುವ ಸಲುವಾಗಿ ಭಾರತೀಯ ರೈಲ್ವೆ ತ್ರಿ-ನೇತ್ರ Terrain Imaging for Diesel Drivers, Infrared Enhanced Optical and Radar Assisted (Tri-Netra) ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

Question 10

10. ಸಂವಿಧಾನದ ಪ್ರಕಾರ ಅಟಾರ್ನಿ ಜನರಲ್ ಅವರನ್ನು ನೇಮಕ ಮಾಡುವವರು?

A
ಪ್ರಧಾನ ಮಂತ್ರಿ
B
ರಾಷ್ಟ್ರಪತಿ
C
ಸಂಸತ್ತು
D
ಲೋಕಸಭಾ ಸ್ಪೀಕರ್
Question 10 Explanation: 
ರಾಷ್ಟ್ರಪತಿ
There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-8.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,8, 2016”

Leave a Comment

This site uses Akismet to reduce spam. Learn how your comment data is processed.