ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-20, 2016

Question 1

1.ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಗೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?

A
ಆಗ್ರಾ
B
ವಾರಣಾಸಿ
C
ಲಕ್ನೋ
D
ಭೂಪಾಲ್
Question 1 Explanation: 
ಆಗ್ರಾ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಆಗ್ರಾದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯನ್ನು ಉದ್ಘಾಟಿಸಿದರು. ಕೇಂದ್ರ ಸರ್ಕಾರ ಆರಂಭಿಸಿರುವ ವಸತಿ ಯೋಜನೆಯೇ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 2022ರೊಳಗೆ ವಸತಿ ಕಲ್ಪಿಸಿಕೊಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆಂದು 1.5 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. 2022ರೊಳಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಲ್ಲದೆ ಗ್ರಾಮೀಣ ಪ್ರದೇಶದ 1 ಕೋಟಿ ಜನರಿಗೆ ಮುಂದಿನ ಮೂರು ವರ್ಷಗಳಲ್ಲಿ ಮನೆ ನಿರ್ಮಿಸಿ ಕೊಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

Question 2

2. 2016 ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸರಣಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದ “ಜನ್ ಒ ಜಾರ್ಗೆನ್ಸನ್” ಯಾವ ದೇಶದವರು?

A
ಇಂಡೋನೇಷಿಯಾ
B
ಡೆನಾರ್ಕ್
C
ಚೀನಾ
D
ಫಿಲಿಫೈನ್ಸ್
Question 2 Explanation: 
ಡೆನಾರ್ಕ್:

ಜನ್ ಒ ಜಾರ್ಗೆನ್ಸನ್ ರವರು ಡೆನಾರ್ಕ್ ನ ಪ್ರಸಿದ್ದ ಬ್ಯಾಡ್ಮಿಂಟನ್ ಆಟಗಾರ. ಚೀನಾದ ಒಲಂಪಿಕ್ ಚಾಂಪಿಯನ್ ಚೆನ್ ಲಾಂಗ್ ಅವರನ್ನು 22-30, 21-13 ಸೆಟ್ ಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಜಾರ್ಗೆನ್ಸನ್ ಗೆ ಇದು ಎರಡನೇ ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯಾಗಿದೆ.

Question 3

3. ಇಂಡೋನೇಷಿಯಾ ಓಪನ್ ಗಾಲ್ಫ್ ಪ್ರಶಸ್ತಿ ಗೆದ್ದುಕೊಂಡ ಭಾರತದ ಗಾಲ್ಫ್ ಆಟಗಾರ ಯಾರು?

A
ಗಗನ್ ಜೀತ್ ಬುಲ್ಲರ್
B
ಜೀವಾ ಮಿಲ್ಕ್ ಸಿಂಗ್
C
ಅಶೋಕ್ ಲಹಿರಿ
D
ಚಿಕ್ಕರಂಗಪ್ಪ
Question 3 Explanation: 
ಗಗನ್ ಜೀತ್ ಬುಲ್ಲರ್:

ಖ್ಯಾತ ಗಾಲ್ಫ್ ಆಟಗಾರ ಗಗನ್ ಜೀತ್ ಬುಲ್ಲರ್ ರವರು ಇಂಡೋನೇಷಿಯಾ ಓಪನ್ ಗಾಲ್ಫ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಬುಲ್ಲರ್ ಅವರು ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಋತುವಿನಲ್ಲಿ ಬುಲ್ಲರ್ ಗೆದ್ದ ಎರಡನೇ ಪ್ರಶಸ್ತಿ ಇದಾಗಿದೆ.

Question 4

4. ಇತ್ತೀಚೆಗೆ ನಿಧನರಾದ ರಾಮ್ ನರೇಶ್ ಯಾದವ್ ರವರು ಯಾವ ರಾಜ್ಯದ ಮಾಜಿ ರಾಜ್ಯಪಾಲ?

A
ಕೇರಳ
B
ಪಂಜಾಬ್
C
ಜಮ್ಮು ಮತ್ತು ಕಾಶ್ಮೀರ
D
ಮಧ್ಯ ಪ್ರದೇಶ
Question 4 Explanation: 
ಮಧ್ಯ ಪ್ರದೇಶ:

ಮಧ್ಯ ಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನರೇಶ್ ಯಾದವ್ ರವರು ಅನಾರೋಗ್ಯದಿಂದ ನಿಧನರಾದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಹ ಆಗಿದ್ದ ಯಾದವ್ ರವರು ಆಗಸ್ಟ್ 2011 ರಿಂದ ಸೆಪ್ಟೆಂಬರ್ 2016 ರವರೆಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ 1977 ರಿಂದ 79 ರವರೆಗೆ ಸೇವೆ ಸಲ್ಲಿಸಿದ್ದರು.

Question 5

5. “ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ (European Organisation for Nuclear Research)” ಕೇಂದ್ರ ಕಚೇರಿ ಎಲ್ಲಿದೆ?

A
ಜಿನೆವಾ, ಸ್ಟಿಟ್ಜರ್ಲ್ಯಾಂಡ್
B
ನ್ಯೂಯಾರ್ಕ್, ಅಮೆರಿಕ
C
ಲಂಡನ್, ಯುಕೆ
D
ಬರ್ಲಿನ್, ಜರ್ಮನಿ
Question 5 Explanation: 
ಜಿನೆವಾ, ಸ್ಟಿಟ್ಜರ್ಲ್ಯಾಂಡ್:

ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ಕೇಂದ್ರ ಕಚೇರಿ ಜಿನೆವಾ ಸ್ವಿಟ್ಜರ್ಲ್ಯಾಂಡ್ ನಲ್ಲಿದೆ. CERN ವಿಶ್ವದ ಅತಿ ದೊಡ್ಡ ಅಣು ಮತ್ತು ಭೌತಕಣ ಪ್ರಯೋಗಾಲಯವಾಗಿದ್ದು, 1954 ರಲ್ಲಿ ಸ್ಥಾಪಿಸಲಾಗಿದೆ. ಇತ್ತೀಚೆಗೆ ಭಾರತ CERNನ ಅಸೋಸಿಯೆಟ್ ಮೆಂಬರ್ ಆಗಿ ಸೇರ್ಪಡೆಗೊಂಡಿದೆ.

Question 6

6. ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (ಐಎಂಒ) ಶೌರ್ಯ ಪ್ರಶಸ್ತಿ ಪಡೆದ ಭಾರತದ ಮಹಿಳಾ ಕ್ಯಾಪ್ಟನ್ ಯಾರು?

A
ರಾಧಿಕಾ ಆಮ್ಟೆ
B
ಸುರೇಖಾ ಸಿಂಗ್
C
ರಾಧಿಕಾ ಮೆನನ್
D
ಚೇತನ ಚಂದ್ರ
Question 6 Explanation: 
ರಾಧಿಕಾ ಮೆನನ್:

ಭಾರತದ ಸರಕು ಸಾಗಾಣಿಕೆ ಹಡಗಿನ ಮೊದಲ ಮಹಿಳಾ ಕ್ಯಾಪ್ಟನ್, ಕೇರಳ ಮೂಲದ ರಾಧಿಕಾ ಮೆನನ್ ಅವರು, ಅಂತರರಾಷ್ಟ್ರೀಯ ಸಾಗರ ಸಂಸ್ಥೆಯ (ಐಎಂಒ) ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಳುಗುತ್ತಿದ್ದ ದೋಣಿಯಿಂದ ಏಳು ಮೀನುಗಾರರನ್ನು ರಕ್ಷಿಸಿ ಸಾಹಸ ಪ್ರದರ್ಶಿಸಿದರ ಫಲವಾಗಿ ಈ ಪ್ರಶಸ್ತಿಯನ್ನು ರಾಧಿಕಾ ಅವರಿಗೆ ನೀಡಲಾಗಿದೆ. ಐಎಂಒದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಧಿಕಾ ಮೆನನ್ ಅವರು ತಮ್ಮ ಶೌರ್ಯ ಸಾಧನೆಗಾಗಿ ಪದಕ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದರು. ಸಮುದ್ರದಲ್ಲಿ ಅಸಾಧಾರಣ ಸಾಹಸ ಪ್ರದರ್ಶಿಸಿದ್ದಕ್ಕಾಗಿ ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

Question 7

7. ಮುಂಬೈ ಮೂಲದ ಹಾರ್ಮೋನಿ ಫೌಂಡೇಷನ್ ನೀಡುವ ಮದರ್ ತೆರೆಸಾ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಶೇಕ್ ಅಬ್ದುಲ್ಲ ಬಿನ್ ಝಾಹೆದ್ ಅಲ್ ನಹಯಾನ್
B
ಶೇಕ್ ನಿಜಾಮ್ ಅಹಮ್ಮದ್
C
ಅಬ್ದುಲ್ ನಸೀರ್ ಖಾನ್
D
ಸರ್ತಾಜ್ ಅಬಿದ್ದುಲ್ಲಾ ಖಾನ್
Question 7 Explanation: 
ಶೇಕ್ ಅಬ್ದುಲ್ಲ ಬಿನ್ ಝಾಹೆದ್ ಅಲ್ ನಹಯಾನ್:

ಯುನೈಟೆಡ್ ಅರಬ್ ಎಮಿರೆಟ್ಸ್ ನ ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವ ಶೇಕ್ ಅಬ್ದುಲ್ಲ ಬಿನ್ ಝಾಹೆದ್ ಅಲ್ ನಹಯಾನ್ ರವರಿಗೆ ಮುಂಬೈ ಮೂಲದ ಹಾರ್ಮೋನಿ ಫೌಂಡೇಷನ್ ನೀಡುವ ಮದರ್ ತೆರೆಸಾ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪಶ್ವಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಪ್ರಚಾರಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ.

Question 8

8. ಈ ಕೆಳಗಿನವುಗಳಲ್ಲಿ ಏಷ್ಯಾದ ಅತ್ಯಂತ ಹಳೆಯ ಸಿನಿಮೋತ್ಸವ ಯಾವುದು?

A
ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ
B
ಹಾಂಕ್ ಕಾಂಗ್ ಫಿಲ್ಮ್ ಫೆಸ್ಟಿವಲ್
C
ಶಾಂಘೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್
D
ಟೊಕಿಯೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್
Question 8 Explanation: 
ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ:

ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಏಷ್ಯಾದ ಅತ್ಯಂತ ಹಳೆದ ಸಿನಿಮೋತ್ಸವವಾಗಿದೆ. 1952 ರಿಂದ ಈ ಸಿನಿಮೋತ್ಸವನ್ನು ಆಯೋಜಿಸಲಾಗುತ್ತಿದೆ. ಗೋವಾದಲ್ಲಿ ಪ್ರತಿ ವರ್ಷ ಈ ಸಿನಿಮೋತ್ಸವನ್ನು ಆಯೋಜಿಸುತ್ತಿದ್ದು, ಇತ್ತೀಚೆಗೆ 47ನೇ ಸಿನಿಮೋತ್ಸವ ಆರಂಭಗೊಂಡಿತು.

Question 9

9. ವಿಶ್ವಸಂಸ್ಥೆಯ ಸಾರ್ವತ್ರಿಕ ಮಕ್ಕಳ ದಿನ (Universal Children’s Day) ಯಾವ ದಿನದಂದು ಆಚರಿಸಲಾಗುತ್ತದೆ?

A
ನವೆಂಬರ್ 18
B
ನವೆಂಬರ್ 19
C
ನವೆಂಬರ್ 20
D
ನವೆಂಬರ್ 21
Question 9 Explanation: 
ನವೆಂಬರ್ 20:

ವಿಶ್ವಸಂಸ್ಥೆಯ ಸಾರ್ವತ್ರಿಕ ಮಕ್ಕಳ ದಿನವನ್ನು ಪ್ರತಿವರ್ಷ ನವೆಂಬರ್ 20 ರಂದು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಮಕ್ಕಳ ಕಲ್ಯಾಣವನ್ನು ಪ್ರೋತ್ಸಾಹಿಸಲು ಮತ್ತು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ವಿರುದ್ದ ಹಿಂಸೆ ನಿಲ್ಲಿಸಿ (Stop Violence against Children) ಇದು ಈ ವರ್ಷದ ಥೀಮ್.

Question 10

10. ವಿಶ್ವದ ಮೊದಲ ಬಾಲಿವುಡ್ ಥೀಮ್ ಪಾರ್ಕ್ ಎಲ್ಲಿ ಸ್ಥಾಪಿಸಲಾಗಿದೆ?

A
ಪ್ಯಾರಿಸ್
B
ದುಬೈ
C
ಟೊಕಿಯೊ
D
ಮುಂಬೈ
Question 10 Explanation: 
ದುಬೈ

ವಿಶ್ವದ ಮೊದಲ ಬಾಲಿವುಡ್ ಥೀಮ್ ಪಾರ್ಕ್ ದುಬೈನಲ್ಲಿ ಸ್ಥಾಪಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ನವೆಂಬರ್-ಕ್ವಿಜ್-20.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-20, 2016”

  1. Sir I thank full to karunadaexams bottom of my heart it is excellent website who prepare for compitativ exams

Leave a Comment

This site uses Akismet to reduce spam. Learn how your comment data is processed.