ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-17, 2016

Question 1

1. ಇತ್ತೀಚೆಗೆ “2016 ರಾದ್ ಉಲ್ ಬರ್ಕ್ (Raad ul Barq)” ಮಿಲಿಟರಿ ಸಮರಾಭ್ಯಾಸ ನಡೆಸಿದ ದೇಶ ಯಾವುದು?

A
ಪಾಕಿಸ್ತಾನ
B
ಆಫ್ಘಾನಿಸ್ತಾನ
C
ಬಾಂಗ್ಲದೇಶ
D
ಮ್ಯಾನ್ಮಾರ್
Question 1 Explanation: 
ಪಾಕಿಸ್ತಾನ:

ಭಾರತದ ಗಡಿಗೆ ತಾಗಿಕೊಂಡಿರುವ ಪಂಜಾಬ್ ಪ್ರಾಂತ್ಯದ ಸೇನಾ ನೆಲೆಯಲ್ಲಿ ಪಾಕಿಸ್ತಾನ ದೊಡ್ಡ ಪ್ರಮಾಣದ ಸಮರಾಭ್ಯಾಸ ನಡೆಸಿದೆ. ಬಹಾವಲ್ಪುರ ಪಟ್ಟಣದ ಖೈರ್ಪುರ ತಮೀವಾಲಿ ಎಂಬಲ್ಲಿ ನಡೆದ ಸಮರಾಭ್ಯಾಸಕ್ಕೆ ‘ರಾದ್ ಉಲ್ ಬರ್ಕ್’ ಎಂಬ ಹೆಸರಿಡಲಾಗಿತ್ತು. ಬಹಾವಲ್ಪುರ ಪಟ್ಟಣ ರಾಜಸ್ತಾನದ ಗಡಿ ಸಮೀಪದಲ್ಲಿದೆ. ಸಮರಾಭ್ಯಾಸದಲ್ಲಿ ಜೆಎಫ್–17 ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಮತ್ತು ಅಲ್ ಖಾಲಿದ್ ಟ್ಯಾಂಕ್ಗಳನ್ನು ಬಳಸಿ ನಿರ್ದಿಷ್ಟ ಗುರಿಗೆ ದಾಳಿಯಿಡುವ ಕಸರತ್ತು ನಡೆಸಲಾಗಿದೆ.

Question 2

2. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (National Legal Service Authority)ದ ನೂತನ ಅಧ್ಯಕ್ಷರು ಯಾರು?

A
ನ್ಯಾ. ಗೋಪಾಲ ಗೌಡ
B
ನ್ಯಾ. ಜೆ ಎಸ್ ಖೇಹರ್
C
ನ್ಯಾ. ದೀಪಕ್ ಮಿಶ್ರಾ
D
ನ್ಯಾ. ಉದಯ್ ಕುಮಾರ್
Question 2 Explanation: 
ನ್ಯಾ. ಜೆ ಎಸ್ ಖೇಹರ್ :

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ರವರನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಅನಿಲ್ ಆರ್ ಧಾವೆ ಅವರ ನಿವೃತ್ತಿಯಾದ ಕಾರಣ ಈ ಹುದ್ದೆ ತೆರವಾಗಿತ್ತು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವನ್ನು ಕಾನೂನು ಸೇವಾ ಪ್ರಾಧಿಕಾರ ಕಾಯಿದೆ-1997 ರಡಿ ಡಿಸೆಂಬರ್ 5, 1995 ರಂದು ಸ್ಥಾಪಿಸಲಾಗಿದೆ. ಅರ್ಹರಿಗೆ ಉಚಿತ ಕಾನೂನು ಸೇವೆಯನ್ನು ನೀಡುವುದು ಹಾಗೂ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಲೋಕಾದಲತ್ ನಡೆಸುವುದು ಈ ಪ್ರಾಧಿಕಾರದ ಕರ್ತವ್ಯ.

Question 3

3. “ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೊವ ರಿಗ್ಪ (National Institute of Sowa Rigpa)” ಯಾವ ರಾಜ್ಯದಲ್ಲಿ ಸ್ಥಾಪಿನೆಯಾಗಲಿದೆ?

A
ಸಿಕ್ಕಿಂ
B
ಜಮ್ಮು ಮತ್ತು ಕಾಶ್ಮೀರ
C
ಹರಿಯಾಣ
D
ಉತ್ತರಖಂಡ್
Question 3 Explanation: 
ಜಮ್ಮು ಮತ್ತು ಕಾಶ್ಮೀರ:

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಸೊವ ರಿಗ್ಪ ಜಮ್ಮು ಮತ್ತು ಕಾಶ್ಮೀರದ ಲೇಹ್ ನಲ್ಲಿ ಸ್ಥಾಪಿಸಲಾಗುವುದು. ಸೊವ ರಿಗ್ಪ ಎಂದರೆ ಟೆಬೆಟ್ ನ ಪ್ರಾಚೀನ ಕಾಲದ ಔಷಧಿ ಚಿಕಿತ್ಸೆ. ಈ ವಿಧಾನದ ಚಿಕಿತ್ಸೆಯನ್ನು ಗೌತಮ ಬುದ್ದ ಆರಂಭಿಸಿದ್ದಾಗಿ ಹೇಳಲಾಗಿದೆ. ಭಾರತದಲ್ಲಿ ಲೇಹ್, ಡಾರ್ಜಲಿಂಗ್, ಸಿಕ್ಕಿಂ, ಲಡಾಕ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಈ ಚಿಕಿತ್ಸಾ ಪದ್ದತಿ ಚಾಲ್ತಿಯಲ್ಲಿದೆ. ಭಾರತ ಸರ್ಕಾರ ಇಂಡಿಯನ್ ಮೆಡಿಸಿನ್ ಕೌನ್ಸಿಲ್ ಆಕ್ಟ್-2010 ತಿದ್ದುಪಡಿ ತರುವ ಮೂಲಕ ಸೊವ ರಿಗ್ಪ ಚಿಕಿತ್ಸೆಯನ್ನು ಮಾನ್ಯತೆಗೊಳಿಸಿದೆ.

Question 4

4. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಿಷ್ಣುತೆ ದಿನ (International Tolerance Day) ಯಾವ ದಿನದಂದು ಆಚರಿಸಲಾಗುತ್ತದೆ?

A
ನವೆಂಬರ್ 15
B
ನವೆಂಬರ್ 16
C
ನವೆಂಬರ್ 17
D
ನವೆಂಬರ್ 18
Question 4 Explanation: 
ನವೆಂಬರ್ 16:

ನವೆಂಬರ್ 16 ರಂದು ಪ್ರತಿ ವರ್ಷ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸಲಾಗುತ್ತದೆ. ವಿವಿಧ ಸಂಸ್ಕೃತಿಗಳು ಮತ್ತು ಜನರ ಮಧ್ಯೆ ಹೊಂದಾಣಿಕೆ ಮತ್ತು ಪರಸ್ಪರ ನಂಬಿಕೆಗಳು ಹೆಚ್ಚಬೇಕು. ಜಾತಿ, ಜನಾಂಗ, ಧರ್ಮದ ಕುರಿತು ಅಸಹಿಷ್ಣುತೆ ಧೋರಣೆ ತಾಳಬಾರದೆಂಬುದು ಈ ದಿನದ ಮಹತ್ವ. 1996 ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.

Question 5

5. ನೋಟು ಅಮಾನ್ಯ ತೀರ್ಮಾನವನ್ನು ನಿರ್ಣಯ ಮೂಲಕ ಅಂಗೀಕರಿಸಿದ ದೇಶದ ಮೊದಲ ರಾಜ್ಯ ಯಾವುದು?

A
ಚತ್ತೀಸಘರ್
B
ಜಾರ್ಖಂಡ್
C
ಅಸ್ಸಾಂ
D
ಗುಜರಾತ್
Question 5 Explanation: 
ಚತ್ತೀಸಘರ್:

ಅಧಿಕ ಮೌಲ್ಯದ ನೋಟು ಅಮಾನ್ಯ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಚತ್ತೀಸಘರ್ ರಾಜ್ಯ ಸರ್ಕಾರ ಅಮಾನ್ಯ ತೀರ್ಮಾನವನ್ನು ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಿದೆ. ಆ ಮೂಲಕ ನೋಟು ಅಮಾನ್ಯವನ್ನು ಅಂಗೀಕರಿಸಿದ ದೇಶದ ಮೊದಲ

Question 6

6. ಇತ್ತೀಚೆಗೆ ಪ್ರಧಾನಿ ಮೋದಿ ರವರು “ಮೋಪ ಹಸಿರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ” ಯಾವ ರಾಜ್ಯದಲ್ಲಿ ಶಂಕುಸ್ಥಾಪನೆ ನೇರವೇರಿಸಿದರು?

A
ಕೇರಳ
B
ಗೋವಾ
C
ಮಹಾರಾಷ್ಟ್ರ
D
ರಾಜಸ್ತಾನ
Question 6 Explanation: 
ಗೋವಾ:

ಪ್ರಧಾನ ನರೇಂದ್ರ ಮೋದಿ ಅವರು ಮೋಪ ಹಸಿರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೋವಾದಲ್ಲಿ ಶಂಕು ಸ್ಥಾಪನೆ ನೆರವೇರಿಸಿದರು. 2017 ರಿಂದ ಈ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಜಿಎಂಆರ್ ಕನ್ಸ್ಟ್ರಕಷನ್ ವಹಿಸಿಕೊಂಡಿದೆ. ವಿಮಾನ ನಿಲ್ದಾಣದ ಮೊದಲ ಹಂತ 2020 ರ ಅವಧಿಗೆ ಪೂರ್ಣಗೊಳ್ಳಲಿದೆ.

Question 7

7. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ರಾಜ್ಯ ಯಾವುದು?

A
ಹಿಮಾಚಲ ಪ್ರದೇಶ
B
ಕೇರಳ
C
ಮಹಾರಾಷ್ಟ್ರ
D
ಕರ್ನಾಟಕ
Question 7 Explanation: 
ಮಹಾರಾಷ್ಟ್ರ:

ದೇಶದಲ್ಲಿ ಅತಿ ಹೆಚ್ಚು ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2.9 ಕೋಟಿ ಜನ ಅಂತರ್ಜಾಲ ಬಳಸುತ್ತಿದ್ದಾರೆ. ನಂತರದ ಮೂರು ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿವೆ. ಹಿಮಾಚಲ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರದ ದತ್ತಾಂಶದ ಪ್ರಕಾರ, 2016ರ ಮಾರ್ಚ್ ಅಂತ್ಯಕ್ಕೆ ಭಾರತದಲ್ಲಿ 34.26 ಕೋಟಿ ಮಂದಿ ಅಂತರ್ಜಾಲವನ್ನು ಬಳಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 2.8 ಕೋಟಿ, ಆಂಧ್ರದಲ್ಲಿ 2.4 ಕೋಟಿ ಹಾಗೂ ಕರ್ನಾಟಕದಲ್ಲಿ 2.2 ಕೋಟಿ ಜನರು ಅಂತರ್ಜಾಲ ಬಳಸುತ್ತಿದ್ದಾರೆ. ಕೊನೆಯ ಸ್ಥಾನದಲ್ಲಿರುವ ಹಿಮಾಚಲಪ್ರದೇಶದಲ್ಲಿ ಕೇವಲ 30.2 ಲಕ್ಷ ಜನರು ಮಾತ್ರ ಅಂತರ್ಜಾಲ ಸೇವೆ ಬಳಸುತ್ತಿದ್ದಾರೆ. ಅಂತರ್ಜಾಲ ಬಳಸುವ ಒಟ್ಟು 34.2 ಕೋಟಿ ಜನರಲ್ಲಿ ಶೇ. 67ರಷ್ಟು ನಗರ ಪ್ರದೇಶದವರು. 2016 ಫೆಬ್ರುವರಿ ಅಂತ್ಯದವರೆಗಿನ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 11.2 ಕೋಟಿ ಜನರು ಅಂತರ್ಜಾಲ ಬಳಸುತ್ತಿದ್ದಾರೆ.

Question 8

8. ಡಾ. ನಾಗೇಂದ್ರ ಸಿಂಗ್ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಅಣ್ಣಾ ಹಜಾರೆ
B
ರವಿಶಂಕರ್ ಗುರೂಜಿ
C
ನರೇಂದ್ರ ಮೋದಿ
D
ಪ್ರಣಬ್ ಮುಖರ್ಜಿ
Question 8 Explanation: 
ರವಿಶಂಕರ್ ಗುರೂಜಿ:

ಆಧ್ಯಾತ್ಮಿಕ ಗುರು ಶ್ರೀ ರವಿ ಶಂಕರ್ ಗುರೂಜಿ ಅವರಿಗೆ ಡಾ. ನಾಗೇಂದ್ರ ಸಿಂಗ್ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿಯನ್ನು ರವಿಶಂಕರ್ ಗುರೂಜಿ ಅವರಿಗೆ ನೀಡಿದರು. ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ ಡಾ. ನಾಗೇಂದ್ರ ಸಿಂಗ್ ಅವರ ನೆನಪಿನಲ್ಲಿ ಸ್ಥಾಪಿಸಲಾಗಿದೆ.

Question 9

9. ಜಿಇ ಡಿಜಿಟಲ್ನ “2016 ಡಿಜಿಟಲ್ ಇನ್ನೊವೆಟರ್ ಆಫ್ ದಿ ಇಯರ್” ಗೌರವಕ್ಕೆ ಪಾತ್ರವಾದ ಸಂಸ್ಥೆ ಯಾವುದು?

A
ಅದಾನಿ ಗ್ರೂಫ್
B
ಇನ್ಪೋಸಿಸ್
C
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ಸ್
D
ಜೆಡಿ ಮಾರ್ಗನ್
Question 9 Explanation: 

ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ಸ್ ಸಂಸ್ಥೆಗೆ ಜಿಇ ಡಿಜಿಟಲ್ ನೀಡುವ 2016 ಡಿಜಿಟಲ್ ಇನ್ನೊವೆಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಸಾನ್ ಫ್ರಾನ್ಸಿಸ್ಕೊ, ಅಮೆರಿಕ ದಲ್ಲಿ ನೀಡಲಾಯಿತು. ಟಿಸಿಎಸ್ ಅಭಿವೃದ್ದಿ ಪಡಿಸಿರುವ ಟಿಸಿಎಸ್ ಡಿಜಿಟಲ್ ಸ್ಟೋರ್ ನಾವೀನ್ಯತೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Question 10

10. ಈ ಕೆಳಗಿನ ಯಾವ ರಾಜ್ಯದಲ್ಲಿ 2016 ಗ್ರೇಟ್ ಇಂಡಿಯನ್ ಫಿಲ್ಮ್ ಅಂಡ್ ಲಿಟರೇಚರ್ ಫೆಸ್ಟಿವಲ್ (Great Indian Film and Literature Festival) ನಡೆಯಲಿದೆ?

A
ಹರಿಯಾಣ
B
ರಾಜಸ್ತಾನ
C
ಪಂಜಾಬ್
D
ಪಶ್ಚಿಮ ಬಂಗಾಳ
Question 10 Explanation: 
ಹರಿಯಾಣ:

ಹರಿಯಾಣದ ಗುರುಗ್ರಾಮದಲ್ಲಿ 2016 ಗ್ರೇಟ್ ಇಂಡಿಯನ್ ಫಿಲ್ಮ್ ಅಂಡ್ ಲಿಟರೇಚರ್ ಫೆಸ್ಟಿವಲ್ ಡಿಸೆಂಬರ್ 2 ರಿಂದ ನಡೆಯಲಿದೆ. ಭಾರತೀಯ ಸಿನಿಮಾ ಮತ್ತು ಸಾಹಿತ್ಯ ಮಹತ್ವವನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುವುದು. ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಭಾರತೀಯ ಸಿನಿಮಾ ರಂಗ, ಡಿಜಿಟಲ್ ಮೀಡಿಯಾ, ಜಾಹೀರಾತು, ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-17-.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-17, 2016”

Leave a Comment

This site uses Akismet to reduce spam. Learn how your comment data is processed.