ಖ್ಯಾತ ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಶ್ರೀಹರಿಖೋಡೆ ನಿಧನ

ಖ್ಯಾತ ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರಾದ ಶ್ರೀಹರಿ ಖೋಡೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಖೋಡೆ ರವರು ಉದ್ಯಮವಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.

  • ಖೋಡೇಸ್ ಗ್ರೂಪ್ ಆಫ್ ಇಂಡಸ್ಟ್ರೀಸ್’ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕದ್ದರು.
  • ಖೋಡೆ ಯಜಮಾನ್ ಎಂಟರ್ ಪ್ರೈಸಸ್ ಬ್ಯಾನರ್’ನಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ ಹಾಗೂ ರಾಜ್ಯ ಪ್ರಶಸ್ತಿ ಪಡೆದ ನಾಗಮಂಡಲ ಚಿತ್ರವನ್ನು ನಿರ್ಮಿಸಿದ್ದರು.

ಇಬ್ಬರು ಯಜಿದಿ ಮಹಿಳೆಯರಿಗೆ ಕಾರ್ಯಕರ್ತರಿಗೆ ಪ್ರತಿಷ್ಠಿತ ಸಖರೋವ್ ಮಾನವ ಹಕ್ಕು ಪ್ರಶಸ್ತಿ

ಇಸ್ಮಾಮಿಕ್ ಸ್ಟೇಟ್ಸ್ ಉಗ್ರರ ಲೈಂಗಿಕ ಗುಲಾಮಗಿರಿಯಿಂದ ಪಾರಾಗಿ ಬದುಕುಳಿದ ಇಬ್ಬರು ಯಜಿದಿ ಮಹಿಳಾ ಕಾರ್ಯಕರ್ತರನ್ನು ಐರೋಪ್ಯ ಸಂಸತ್ತು ನೀಡುವ ಪ್ರತಿಷ್ಠಿತ ಸಖರೋವ್ ಮಾನವ ಹಕ್ಕು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನಾಡಿಯಾ ಮುರಾದ್ ಹಾಗೂ ಲಾಮಿಯಾ ಹಾಜಿ ಬಶರ್ ಅವರೇ ಪ್ರಶಸ್ತಿಗೆ ಆಯ್ಕೆಯಾದವರು. ಇಸ್ಲಾಮಿಕ್ ಸ್ಟೇಟ್ಸ್ ನಿಂದ ತಪ್ಪಿಸಿಕೊಂಡ ನಂತರ ಈ ಇಬ್ಬರು ಯಜಿದಿ ಸಮುದಾಯದ ರಕ್ಷಣೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಯ ಬಗ್ಗೆ:

  • ಸಖರೋವ್ ಮಾನವ ಹಕ್ಕು ಪ್ರಶಸ್ತಿಯನ್ನು ಐರೋಪ್ಯ ಒಕ್ಕೂಟ ಪ್ರತಿ ವರ್ಷ ನೀಡುತ್ತಿದೆ.
  • 1989ರಲ್ಲಿ ನಿಧನರಾದ ಸೋವಿಯತ್ನ ವಿಜ್ಞಾನಿ ಆಂಡ್ರೆ ಸಖರೋವ್ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
  • ಅಸಹಿಷ್ಣುತೆ, ಮತಾಂಧತೆ ಮತ್ತು ದಬ್ಭಾಳಿಕೆ ವಿರುದ್ದ ಹೋರಾಡುವ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ನಟಿ ರೇಖಾಗೆ ಡಿಐಎಫ್ಎಫ್ ಜೀವಮಾನ ಸಾಧನೆ ಪ್ರಶಸ್ತಿ

ಬಾಲಿವುಡ್ ಹಿರಿಯ ನಟಿ ಹಾಗೂ ರಾಜ್ಯ ಸಭಾ ಸದಸ್ಯೆ ರೇಖಾ ಅವರನ್ನು ಮುಂಬರುವ ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.  ನಾಲ್ಕು ದಶಕಗಳ ಕಾಲ 180 ಸಿನಿಮಾಗಳಲ್ಲಿ ನಟಿಸಿ ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವುದಕ್ಕಾಗಿ ರೇಖಾ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ, 2016 ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿಸೆಂಬರ್ 7, 2017 ರಂದು ಆರಂಭವಾಗಿ ಡಿಸೆಂಬರ್ 14 ರವರೆಗೆ ನಡೆಯಲಿದೆ.

ರೇಖಾ ಬಗ್ಗೆ:

  • ಭಾನು ರೇಖಾ ಗಣೇಶನ್ ಇವರು ಮೂಲ ಹೆಸರು. 10ನೇ ಅಕ್ಟೋಬರ್ 1954 ರಲ್ಲಿ ಚೆನ್ನೈನಲ್ಲಿ ಜನನ.
  • 1966 ರಲ್ಲಿ ಬಾಲ ನಟಿಯಾಗಿ ತೆಲುಗಿನ ರಂಗುಲಾ ರತ್ನಂ ಚಿತ್ರದ ಮೂಲಕ ಪಾದಾರ್ಪಣೆ
  • ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅಭಿನಯದ ಆಪರೇಷನ್ ಜಾಕ್ ಪಾಟ್ ನಲ್ಲಿ ಸಿಐಡಿ 999 ಚಿತ್ರ ರೇಖಾ ಅವರ ಮೊದಲ ಚಿತ್ರ.
  • ತಮ್ಮದೇ ಆದ ನಟನೆಯಿಂದ ಹಿಂದಿ ಸಿನಿಮಾದಲ್ಲಿ ಪ್ರಸಿದ್ದರಾದ ರೇಖಾ ಅವರು 180 ಚಿತ್ರಗಳಲ್ಲಿ ನಟಿಸಿದ್ದಾರೆ.
  • ರೇಖಾ ಅವರಿಗೆ ಮೂರು ಫೀಲ್ಮ್ ಫೇರ್ ಪ್ರಶಸ್ತಿಗಳು ದೊರೆತಿವೆ. 1981 ರಲ್ಲಿ ತೆರೆಕಂಡ ಉಮ್ರೊ ಜಾನ್ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. 2010 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

Leave a Comment

This site uses Akismet to reduce spam. Learn how your comment data is processed.