ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-1, 2016

Question 1

1.ಉದ್ದೇಶಿತ “ಸಿರುವಣಿ ನದಿ (Siruvani river) ಅಣೆಕಟ್ಟು ಯೋಜನೆ ಯಾವ ಎರಡು ರಾಜ್ಯಗಳ ನಡುವಿನ ವಿವಾದತ್ಮಕ ಯೋಜನೆಯಾಗಿದೆ?

A
ಕೇರಳ ಮತ್ತು ತಮಿಳುನಾಡು
B
ಮಹಾರಾಷ್ಟ್ರ ಮತ್ತು ಗೋವಾ
C
ಆಂಧ್ರಪ್ರದೇಶ ಮತ್ತು ತೆಲಂಗಣ
D
ತೆಲಂಗಣ ಮತ್ತು ಒಡಿಶಾ
Question 1 Explanation: 
ಕೇರಳ ಮತ್ತು ತಮಿಳುನಾಡು:

ಸಿರುವಣಿ ನದಿ ಕಾವೇರಿ ನದಿಯ ಉಪನದಿಯ ಉಪನದಿ. ಸಿರುವಣಿ ನದಿಯು ತಮಿಳುನಾಡಿನ ಕೊಯಮತ್ತೂರು ಜಿಲ್ಲೆ ಹಾಗೂ ಕೇರಳದ ಪಾಲಕ್ಕಡ್ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿ. ಕೇರಳ ಸರ್ಕಾರ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿದ್ದು, ತಮಿಳುನಾಡು ಸರ್ಕಾರ ಇದಕ್ಕೆ ತೀವ್ರವಾಗಿ ವಿರೋದಿಸುತ್ತಿದೆ. 1970ರ ದಶಕದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಕೇರಳ ಸರ್ಕಾರ ಮುಂದಾಗಿತ್ತಾದರೂ, ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಕಾರಣ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಕೇರಳ ಸರ್ಕಾರ ಯೋಜನೆಯನ್ನು ಪುನರ್ ನಿರ್ಮಿಸಲು ಮುಂದಾಗಿರುವುದು, ಉಭಯ ರಾಜ್ಯಗಳ ನಡುವೆ ವಿವಾದಕ್ಕೆ ಎಡೆಮಾಡಿದೆ.

Question 2

2. ಈ ಕೆಳಗಿನ ಯಾವ ರಾಜ್ಯಗಳನ್ನ ಗಮನಿಸಿ:

I) ಕರ್ನಾಟಕ

II) ಚತ್ತೀಸ ಘರ್

III) ಹರಿಯಾಣ

IV) ಕೇರಳ

ಮೇಲಿನ ಯಾವ ರಾಜ್ಯಗಳಲ್ಲಿ ನವೆಂಬರ್ 1 ರಂದು ರಾಜ್ಯ ಸಂಸ್ಥಾಪನ ದಿನವನ್ನು ಆಚರಿಸಲಾಗುತ್ತದೆ?

A
I & II
B
II, III & IV
C
I, II & III
D
I, II, III & IV
Question 2 Explanation: 
I, II, III & IV:

ಕರ್ನಾಟಕ, ಕೇರಳ, ಹರಿಯಾಣ, ಚತ್ತೀಸಘರ್ ಮತ್ತು ಮಧ್ಯ ಪ್ರದೇಶದಲ್ಲಿ ನವೆಂಬರ್ 1 ರಂದು ರಾಜ್ಯ ಸಂಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುವುದು. ಕೇರಳದಲ್ಲಿ ನವೆಂಬರ್ 1 ರಂದು ಕೇರಳ ಪಿರವಿ ದಿನವೆಂದು ಆಚರಿಸಲಾಗುವುದು. ಚತ್ತೀಸಘರ್ ರಾಜ್ಯವನ್ನು ನವೆಂಬರ್ 1, 2000 ರಲ್ಲಿ ಮಧ್ಯ ಪ್ರದೇಶ ರಾಜ್ಯದಿಂದ ಬೇರ್ಪಡಿಸಿ ಸ್ಥಾಪಿಸಲಾಗಿದೆ. ಹರಿಯಾಣ ರಾಜ್ಯ ನವೆಂಬರ್ 1, 1966 ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಪೂರ್ವ ಪಂಜಾಬ್ ನಿಂದ ವಿಭಜಿಸಿ ಹರಿಯಾಣ ರಾಜ್ಯವನ್ನು ಸ್ಥಾಪಿಸಲಾಗಿದೆ. ಮಧ್ಯ ಪ್ರದೇಶ ಭಾರತದ ಆರನೇ ಅತಿ ದೊಡ್ಡ ರಾಜ್ಯವಾಗಿದ್ದು, ನವೆಂಬರ್ 1, 1956 ರಲ್ಲಿ ಸ್ಥಾಪಿಸಲಾಗಿದೆ.

Question 3

3.2016ನೇ ಸಾಲಿನ ಐಎಫ್ಎಫ್ಐ ಶತಮಾನೋತ್ಸವ ಪ್ರಶಸ್ತಿಗೆ ಯಾರನ್ನುಆಯ್ಕೆಮಾಡಲಾಗಿದೆ?

A
ಅಮಿತಾಬ್ ಬಚ್ಚನ್
B
ಎಸ್.ಪಿ. ಬಾಲಸುಬ್ರಮಣ್ಯಂ
C
ಆರ್. ಎಸ್. ರಾಜಮೌಳಿ
D
ರೇಖಾ
Question 3 Explanation: 
ಎಸ್.ಪಿ. ಬಾಲಸುಬ್ರಮಣ್ಯಂ:

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂಅವರಿಗೆ ಕೇಂದ್ರ ಸರ್ಕಾರ 2016ನೇ ಸಾಲಿನ ಐಎಫ್ಎಫ್ಐ ಶತಮಾನೋತ್ಸವ ಪ್ರಶಸ್ತಿ ಘೋಷಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಎಂ. ವೆಂಕಯ್ಯನಾಯ್ಡು ಅವರು ಪತ್ರಿಕಾಗೋಷ್ಠಿಯಲ್ಲಿಈ ಘೋಷಣೆ ಮಾಡಿದ್ದಾರೆ. ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತರರಾಷ್ಟ್ರೀಯ 47ನೇ ಚಲನಚಿತ್ರೋತ್ಸವ (ಐಎಫ್ಎಫ್ಐ) ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Question 4

4. ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿಯನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?

A
ಅಬು ದಾಬಿ
B
ಬರ್ಲಿನ್
C
ಮಾಸ್ಕೋ
D
ಬೆಂಗಳೂರು
Question 4 Explanation: 
ಅಬು ದಾಬಿ:

ಮೊಟ್ಟ ಮೊದಲ ಬಾರಿಗೆ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿಯಲ್ಲಿ ಆಡಲಿರುವ ಅದಿತಿ ಅಶೋಕ್ ಇದೇ ವಾರ ಆರಂಭವಾಗುವ ಫಾತಿಮಾ ಮುಬಾರಕ್ ಲೇಡಿಸ್ ಓಪನ್ನಲ್ಲಿ ತಮ್ಮ ಸವಾಲು ಒಡ್ಡಲಿದ್ದಾರೆ. ‘ಪುರುಷ ಗಾಲ್ಫ್ ಆಟಗಾರರಿಗೇ ಹೆಚ್ಚು ಟೂರ್ನಿಗಳು ಆಯೋಜನೆ ಗೊಳ್ಳುತ್ತಿವೆ. ಆದರೆ ಇದೇ ಮೊದಲ ಬಾರಿಗೆ ಅಬು ದಬಿಯಲ್ಲಿ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಪಾಲ್ಗೊಂಡು ಉತ್ತಮವಾಗಿ ಆಡುವುದು ನನ್ನ ಮುಂದಿರುವ ಗುರ. ಅಲ್ಲಿ ಉತ್ತಮ ಫಲಿತಾಂಶ ನೀಡಲಿದ್ದೇನೆಿ’ ಎಂದು ಅದಿತಿ ಹೇಳಿದ್ದಾರೆ.

Question 5

5. “ಟೈಮ್ಸ್ ನೌ”ಇಂಗ್ಲಿಷ್ ಸುದ್ದಿ ವಾಹಿನಿಗೆ ರಾಜೀನಾಮೆ ನೀಡಿದ ಜನಪ್ರಿಯ ನಿರೂಪಕ ಮತ್ತು ಪತ್ರಕರ್ತ ____?

A
ಮಹೇಶ್ ಜೈನ್
B
ಕಾರ್ತಿಕ್ ಸುದರ್ಶನ್
C
ಅರ್ನಬ್ ಗೋಸ್ವಾಮಿ
D
ಮಧುಕರ್ ಭಂಡಾರಿ
Question 5 Explanation: 
ಅರ್ನಬ್ ಗೋಸ್ವಾಮಿ:

ಟೈಮ್ಸ್ ನೌ’ ಇಂಗ್ಲಿಷ್ ಸುದ್ದಿ ವಾಹಿನಿಯ ಜನಪ್ರಿಯ ನಿರೂಪಕ ಮತ್ತು ಪತ್ರಕರ್ತ ಆರ್ನಬ್ ಗೋಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ಮತ್ತು ಇಟಿ ನೌ ವಾಹಿನಿಗಳ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಹುದ್ದೆಯಲ್ಲಿದ್ದರು. 2006ರಲ್ಲಿ ಆರಂಭಗೊಂಡ ಟೈಮ್ಸ್ ನೌ ವಾಹಿನಿಯನ್ನು ಒಂದು ವರ್ಷದೊಳಗೆ ನಂಬರ್ ಒನ್ ಸ್ಥಾನಕ್ಕೆ ತಲುಪಿಸಿದ ಖ್ಯಾತಿ ಆರ್ನಬ್ ಅವರದ್ದಾಗಿದೆ. ಪ್ರತಿರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವ ‘ನ್ಯೂಸ್ ಅವರ್’ ಕಾರ್ಯಕ್ರಮದ ನಿರೂಪಣಾ ಶೈಲಿ ‘ಆರ್ನಬ್ ಶೈಲಿ’ಯೆಂದೇ ಹೆಸರಾಗಿದೆ. ಅವರ ಸಂದರ್ಶನ ಆಧಾರಿತ ಕಾರ್ಯಕ್ರಮ ‘ಫ್ರಾಂಕ್ಲಿ ಸ್ಪೀಕಿಂಗ್ ವಿದ್ ಆರ್ನಬ್’ ಕೂಡಾ ಭಾರತೀಯ ಇಂಗ್ಲಿಷ್ ವಾಹಿನಿಗಳಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು.

Question 6

6. ಇತ್ತೀಚೆಗೆ ಯಾವ ರಾಜ್ಯದಲ್ಲಿ ಪ್ರಧಾನಿ ಮೋದಿ ರವರು “ಸೌರ ಸುಲಭ್ ಯೋಜನೆ”ಗೆ ಚಾಲನೆ ನೀಡಿದರು?

A
ಮಧ್ಯ ಪ್ರದೇಶ
B
ಚತ್ತೀಸಘರ್
C
ಜಾರ್ಖಂಡ್
D
ಹರಿಯಾಣ
Question 6 Explanation: 
ಚತ್ತೀಸಘರ್:

ರೈತರಿಗೆ ಸಬ್ಸಿಡಿ ದರದಲ್ಲಿ ಸೌರ ವಿದ್ಯುತ್ ಚಾಲಿತ ಕೃಷಿ ಪಂಪ್ ವಿತರಿಸುವ ಚತ್ತೀಸಘರ್ ನ “ಸೌರ ಸುಲಭ್ ಯೋಜನೆಗೆ” ಚಾಲನೆ ನೀಡಿದರು. ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಚತ್ತೀಸಘರ್. ಯೋಜನೆಯಡಿ 3 ಹೆಚ್.ಪಿ ಮತ್ತು 5 ಹೆಚ್.ಪಿ ಸಾಮರ್ಥ್ಯದ ಸೌರ ವಿದ್ಯುತ್ ಚಾಲಿಯ ಪಂಪುಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು.

Question 7

7. ಪುಟ್ಬಾಲ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ “ಮಿರೋಸ್ಲವ್ ಕ್ಲೋಸ್” ರವರು ಯಾವ ದೇಶದವರು?

A
ಸ್ಪೇನ್
B
ಫ್ರಾನ್ಸ್
C
ಜರ್ಮನಿ
D
ಜಪಾನ್
Question 7 Explanation: 
ಜರ್ಮನಿ:

ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ , ಜರ್ಮನಿಯ ವಿಶ್ವಕಪ್ ಹೀರೋ ಮಿರೊಸ್ಲಾವ್ ಕ್ಲೋಸ್ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ವಿಶ್ವಕಪ್ನಲ್ಲಿ ಒಟ್ಟು 16 ಗೋಲುಗಳನ್ನು ಬಾರಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿರುವ ಕ್ಲೋಸ್ ಅವರು ಜರ್ಮನಿಯ ಪರ 137 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಒಟ್ಟು 71 ಗೋಲುಗಳನ್ನು ಬಾರಿಸಿದ್ದಾರೆ. ಇದು ಜರ್ಮನಿ ದೇಶದ ಪರ ಗರಿಷ್ಠ ಸ್ಕೋರ್ ದಾಖಲೆಯಾಗಿದೆ.38ರ ಹರೆಯದ ಕ್ಲೋಸ್(Klose) ಅವರು 2014ರಲ್ಲಿ ಜರ್ಮನಿ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ, ಕ್ಲಬ್ ಗಳಲ್ಲಿ ಆಡುತ್ತಿದ್ದರು.

Question 8

8. “2016 ಮಿಸ್ ಇಂಟರ್ನ್ಯಾಶನಲ್” ಕಿರೀಟ ಮುಡಿಗೇರಿಸಿಕೊಂಡ “ಕೈಲೀ ವೆರ್ಝೋಸ (Kylie Verzosa)” ಯಾವ ದೇಶದವರು?

A
ಫಿಲಿಫೈನ್ಸ್
B
ಜಪಾನ್
C
ವೆನೆಜುವೆಲ
D
ಆಸ್ಟ್ರೇಲಿಯಾ
Question 8 Explanation: 
ಫಿಲಿಫೈನ್ಸ್:

ಫಿಲಿಫೈನ್ಸ್ ನ ಕೈಲೀ ವೆರ್ಝೋಸ ರವರು 2016 ಮಿಸ್ ಇಂಟರ್ನ್ಯಾಶನಲ್ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಜಪಾನ್ ನ ಟೊಕಿಯೋದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವೆಝೋರ್ಸ ಅವರು ಮಿಸ್ ಇಂಟರ್ನ್ಯಾಶನಲ್ ಕಿರೀಟ ಗೆದ್ದ ಫಿಲಿಫೈನ್ಸ್ ನ ಆರನೇಯವರು.

Question 9

9. “ವಿಶ್ವ ನಗರಗಳ ದಿನ (World Cities Day)” ಈ ದಿನದಂದು ಆಚರಿಸಲಾಗುತ್ತದೆ ______?

A
ಅಕ್ಟೋಬರ್ 30
B
ಅಕ್ಟೋಬರ್ 31
C
ನವೆಂಬರ್ 1
D
ನವೆಂಬರ್ 2
Question 9 Explanation: 
ಅಕ್ಟೋಬರ್ 31:

ವಿಶ್ವ ನಗರಗಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ ಯೋಜಿತ ಮತ್ತು ಸುಸ್ಥಿರ ನಗರ ನಿರ್ಮಾಣಕ್ಕೆ ಕರೆ ನೀಡುವುದು ಈ ದಿನದ ಮಹತ್ವ. Inclusive Cities Shared Development ಇದು ಈ ವರ್ಷದ ಧ್ಯೇಯವಾಕ್ಯ.

Question 10

10. ಚೀನಾದಲ್ಲಿ ನಡೆದ ರೋಲರ್ ಸ್ಕೇಟಿಂಗ್ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಯಾವ ಪದಕವನ್ನು ಗೆದ್ದುಕೊಂಡಿತು?

A
ಚಿನ್ನ
B
ಬೆಳ್ಳಿ
C
ಕಂಚು
D
ಅ & ಇ
Question 10 Explanation: 
ಕಂಚು:

ಚೀನಾದಲ್ಲಿ ನಡೆದ ರೋಲರ್ ಸ್ಕೇಟಿಂಗ್ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಭಾರತ ಕಂಚಿನ ಪದಕ ಜಯಿಸಿದೆ. ಭಾರತದ ವಿಕ್ರಮ್ ಇಂಗಳೆ, ಟಿ. ನಿಖಿಲೇಶ್ ಮತ್ತು ಬೆಂಗಳೂರಿನ ಧನುಷ್ ಬಾಬು ಅವರನ್ನು ಒಳಗೊಂಡ ಪುರುಷರ ತಂಡ 3000 ಮೀಟರ್ಸ್ ರಿಲೇ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಕಂಚು ತನ್ನದಾಗಿಸಿಕೊಂಡಿತು. ಈ ಚಾಂಪಿಯನ್ಷಿಪ್ನ ಚೀನಾದ ಲಿಷುಯಿ ಎಂಬಲ್ಲಿ ನಡೆಯುತ್ತಿದೆ. ಈ ವಿಭಾಗದಲ್ಲಿ ದಕ್ಷಿಣ ಕೊರಿಯಾ ಚಿನ್ನ ಜಯಿಸಿದರೆ, ಆತಿಥೇಯ ಚೀನಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತು. ರೋಲರ್ ಸ್ಕೇಟಿಂಗ್ ವಿಭಾಗದಲ್ಲಿ ಭಾರತ ಪದಕ ಜಯಿಸಿದ್ದು ಇದೇ ಮೊದಲು. 2010ರ ಕೂಟದಲ್ಲಿ ಆರ್ಟಿಸ್ಟಿಕ್ ರೋಲರ್ ಸ್ಕೇಟಿಂಗ್ನಲ್ಲಿ ಅನೂಪ್ ಕುಮಾರ್ ಕಂಚು ಪಡೆದಿದ್ದರು.

There are 10 questions to complete.

[button link=”http://www.karunaduexams.com/wp-content/uploads/2016/11/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ನವೆಂಬರ್-1-2016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-1, 2016”

  1. so very nice questions…..

Leave a Comment

This site uses Akismet to reduce spam. Learn how your comment data is processed.