ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-26, 2016

Question 1

1.“ಗ್ಲೋಬಲ್ ಸಿಸ್ಟಂ ಮೊಬೈಲ್ ಅಸೋಸಿಯೇಷನ್ (GSMA)” ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ಸುನೀಲ್ ಭಾರ್ತಿ ಮಿತ್ತಲ್
B
ಆದಿತ್ಯಾ ಬಿರ್ಲಾ
C
ಮುಖೇಶ್ ಅಂಬಾನಿ
D
ಅನಿಲ್ ಅಂಬಾನಿ
Question 1 Explanation: 
ಸುನೀಲ್ ಭಾರ್ತಿ ಮಿತ್ತಲ್:

ಟೆಲಿಕಾಂ ದಿಗ್ಗಜ ಸುನೀಲ್ ಭಾರ್ತಿ ಮಿತ್ತಲ್ ಅವರು ಗ್ಲೋಬಲ್ ಸಿಸ್ಟಂ ಮೊಬೈಲ್ ಅಸೋಸಿಯೇಷನ್ (GSMA)ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಜಿಎಸ್ಎಂಎ ವಿಶ್ವದಾದ್ಯಂತ ಮೊಬೈಲ್ ನಿರ್ವಾಹಕ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಒಕ್ಕೂಟವಾಗಿದೆ. ಸುನೀಲ್ ಭಾರ್ತಿ ಅವರು ಜನವರಿ 2017 ರಿಂದ ಎರಡು ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಮಿತ್ತಲ್ ಜೊತೆಗೆ ಒಟ್ಟು 26 ಸದಸ್ಯರನ್ನು ಮಂಡಳಿಗೆ ಆಯ್ಕೆ ಮಾಡಲಾಗಿದೆ.

Question 2

2.ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ (Easy of Doing Business)ನಿರ್ವಹಿಸುವ ದೇಶಗಳ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
125
B
130
C
134
D
141
Question 2 Explanation: 
130:

ಉದ್ಯಮ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಿ ನಿರ್ವಹಿಸಲು ನೆರವಾಗುವ ವಿಷಯದಲ್ಲಿ ಭಾರತ, ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ 130ನೆ ಸ್ಥಾನದಲ್ಲಿದೆ. ಉದ್ದಿಮೆ ವಹಿವಾಟು ಆರಂಭಿಸಲು ಅನುಕೂಲತೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಮಾನದಂಡಗಳನ್ನು ಆಧರಿಸಿ ಸಿದ್ಧಪಡಿಸಿರುವ 190 ದೇಶಗಳ ಆರ್ಥಿಕತೆಗಳ ಸೂಚ್ಯಂಕದಲ್ಲಿ ಭಾರತ 130ನೆ ಸ್ಥಾನದಲ್ಲಿಯೇ ಇದೆ. ಸೂಚ್ಯಂಕದಲ್ಲಿ ನ್ಯೂಜಿಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಸಿಂಗಾಪುರ, ಡೆನ್ಮಾರ್ಕ್, ಹಾಂಕ್ ಕಾಂಗ್ ಮತ್ತು ದಕ್ಷಿಣ ಕೊರಿಯಾ ಟಾಪ್ ಐದರಲ್ಲಿರುವ ರಾಷ್ಟ್ರಗಳಾಗಿವೆ.

Question 3

3.ಇತ್ತೀಚೆಗೆ ನಿಧನರಾದ “ಕಾರ್ಲೊಸ್ ಆಲ್ಬರ್ಟೊ” ಯಾವ ದೇಶದ ಪ್ರಸಿದ್ದ ಪುಟ್ಬಾಲ್ ಆಟಗಾರ?

A
ಬ್ರೆಜಿಲ್
B
ಸ್ಪೇನ್
C
ಫ್ರಾನ್ಸ್
D
ಜರ್ಮನಿ
Question 3 Explanation: 
ಬ್ರೆಜಿಲ್:

ಸರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರ ಪೈಕಿ ಓರ್ವರಾಗಿದ್ದ ಬ್ರೆಝಿಲ್ನ ಮಾಜಿ ನಾಯಕ ಕಾರ್ಲೊಸ್ ಆಲ್ಬರ್ಟೊ(72 ವರ್ಷ) ನಿಧನರಾಗಿದ್ದಾರೆ. 1970ರ ವಿಶ್ವಕಪ್ ಟ್ರೋಫಿ ವಿಜೇತ ಬ್ರೆಝಿಲ್ ತಂಡದ ನಾಯಕರಾಗಿದ್ದ ಆಲ್ಬರ್ಟೊ 1970ರ ವಿಶ್ವಕಪ್ ಫೈನಲ್ನಲ್ಲಿ ಇಟಲಿ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸುವಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಆಲ್ಬರ್ಟೊಗೆ ಪೀಲೆ, ಟಾಸ್ತಾವೊ, ಜೈರ್ಝಿನೊಹೊ ಸಾಥ್ ನೀಡಿದ್ದರು. 1944ರಲ್ಲಿ ಕ್ಯಾಪಿಟಾವೊದಲ್ಲಿ ಜನಿಸಿರುವ ಆಲ್ಬರ್ಟೊ 1996 ರಿಂದ 1974ರ ತನಕ ಪೀಲೆ ಅವರೊಂದಿಗೆ ಸ್ಯಾಂಟೊಸ್ ತಂಡದಲ್ಲಿ ಆಡಿದ್ದರು. 1977 ರಿಂದ 1980ರ ತನಕ ನ್ಯೂಯಾರ್ಕ್ ಕಾಸ್ಮೊಸ್ ತಂಡವನ್ನು ಪ್ರತಿನಿಧಿಸಿದ್ದರು. ಬ್ರೆಝಿಲ್ನ ಪರ 50ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವ ಆಲ್ಬರ್ಟೊ ಗಾಯದ ಸಮಸ್ಯೆಯಿಂದಾಗಿ 1974ರ ವಿಶ್ವಕಪ್ನಿಂದ ವಂಚಿತರಾಗಿದ್ದರು. 2004ರಲ್ಲಿ ಫಿಫಾ ಬಿಡುಗಡೆ ಮಾಡಿರುವ ಶ್ರೇಷ್ಠ 100 ಆಟಗಾರರ ಪಟ್ಟಿಯಲ್ಲಿ ಆಲ್ಬರ್ಟೊ ಸ್ಥಾನ ಪಡೆದಿದ್ದರು.

Question 4

4.“ಮೌಂಟ್ ಸರಮತಿ” ಭಾರತ ಮತ್ತು ಯಾವ ದೇಶದ ನಡುವಿನ ನೈಸರ್ಗಿಕ ಗಡಿ ಭಾಗ ಎನಿಸಿದೆ?

A
ನೇಪಾಳ
B
ಭೂತಾನ್
C
ಮ್ಯಾನ್ಮಾರ್
D
ಬಾಂಗ್ಲದೇಶ
Question 4 Explanation: 

ಮೌಂಟ್ ಸರಮತಿ ನಾಗಲ್ಯಾಂಡ್ ರಾಜ್ಯ ಅತಿ ಎತ್ತರದ ಶಿಖರ. ಮೌಂಟ್ ಸರಮತಿ ಶಿಖರದ ಎತ್ತರ 3,8490 ಮೀ ಇದೆ. ಮೌಂಟ್ ಸರಮತಿಯು ನಾಗಲ್ಯಾಂಡ್ ಮತ್ತು ಮ್ಯಾನ್ಮಾರ್ ನಡುವೆ ನೈಸರ್ಗಿಕ ಗಡಿ ಭಾಗವಾಗಿದೆ.

Question 5

5.ಈ ಕೆಳಗಿನ ಯಾರನ್ನು ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮೀಷನರ್ ಆಗಿ ನೇಮಕ ಮಾಡಲಾಗಿದೆ?

A
ಎ.ಎಸ್.ರಾವ್
B
ಅಜಯ್ ಎಂ ಗೊಂಡಾನೆ
C
ಸುನೀಲ್ ಶೆಟ್ಟಿ
D
ಕರ್ನಲ್ ಸಿಂಗ್
Question 5 Explanation: 
ಅಜಯ್ ಎಂ ಗೊಂಡಾನೆ:

ಹಿರಿಯ ಐಎಫ್ಎಸ್ (1985ನೇ ಬ್ಯಾಚ್) ಅಧಿಕಾರಿ ಅಜಯ್ ಎಂ ಗೊಂಡಾನೆ ಅವರು ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮೀಷನರ್ ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮುಂಚೆ ಅವರು ಪಾಪ್ ನ್ಯೂ ಗಿನಿಯಾದ ಹೈಕಮೀಷನರ್ ಮತ್ತು ನ್ಯೂಯಾರ್ಕ್ ನಲ್ಲಿ ಭಾರತದ ಡೆಪ್ಯೂಟಿ ಕೌನ್ಸಲ್ ಆಫ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

Question 6

6. ಯಾವ ದೇಶದಲ್ಲಿ ಇತ್ತೀಚೆಗೆ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸಲು ಮಸೂದೆಯನ್ನು ಮಂಡಿಸಲಾಗಿದೆ?

A
ಅಮೆರಿಕ
B
ಕೆನಡಾ
C
ಆಸ್ಟ್ರೇಲಿಯಾ
D
ರಷ್ಯಾ
Question 6 Explanation: 
ಕೆನಡಾ:

ಕೆನಡಾ ದೇಶದ ಆಂಟಾರಿಯೋ ರಾಜ್ಯದದಲ್ಲಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸುವ ಮಸೂದೆಯನ್ನು ಮಂಡಿಸಲಾಗಿದೆ. ಪ್ರಾದೇಶಿಕ ಸಂಸತ್ ನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದ್ದು ವಾರ್ಷಿಕವಾಗಿ ಅಕ್ಟೊಬರ್ ತಿಂಗಳನ್ನು ಹಿಂದೂ ಪಾರಂಪರಿಕ ತಿಂಗಳನ್ನಾಗಿ ಆಚರಿಸಲಾಗುತ್ತದೆ. ಕೆನಡಾದ ಆಂಟಾರಿಯೋ ರಾಜ್ಯದಲ್ಲಿ 700,000 ಕ್ಕೂ ಹೆಚ್ಚು ಜನ ಭಾರತೀಯ ಮೂಲದ ಕೆನೆಡಿಯನ್ನರಿದ್ದು, ಈ ಮಸೂದೆಯನ್ನು ಕೆನಡಾದ ಅಭಿವೃದ್ಧಿಗೆ ಶ್ರಮಿಸಿರುವ ಭಾರತೀಯರಿಗೆ ಸಮರ್ಪಿಸಲಾಗಿದೆ ಎಂದು ಸಂಸತ್ ನ ಸದಸ್ಯ ಜೋ ಡಿಕ್ಸನ್ ತಿಳಿಸಿದ್ದಾರೆ.

Question 7

7. ಜಾರಿ ನಿರ್ದೇಶನಾಲಯ(Enforcement Directorate)ದ ನೂತನ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಕರ್ನಲ್ ಸಿಂಗ್
B
ನರೇಶ್ ಬಾಬು
C
ಹರಿಪ್ರಸಾದ್ ಚೌರಿಯ
D
ಜಗತ್ ಸಿಂಗ್ ಚೌವ್ಹಣ್
Question 7 Explanation: 
ಕರ್ನಲ್ ಸಿಂಗ್:

ಹಿರಿಯ ಐಪಿಎಸ್ ಅಧಿಕಾರಿ ಕರ್ನಲ್ ಸಿಂಗ್ ಅವರು ಜಾರಿ ನಿರ್ದೇಶನಾಲಯದ ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಇವರ ನೇಮಕಾತಿಯನ್ನು ಅನುಮೋದಿಸಿದೆ. ಸಿಂಗ್ ಅವರ ಅಧಿಕಾರವಧಿ ಆಗಸ್ಟ್ 31, 2017 ರವರೆಗೆ ಇರಲಿದೆ.

Question 8

8. “ಇಂಟರ್ನ್ಯಾಶನಲ್ ಮ್ಯಾಥಮೆಟಿಕಲ್ ಯೂನಿಯನ್” ನೂತನ ನಿರ್ದೇಶಕರಾಗಿ ಆಯ್ಕೆಯಾದ ಸಮೀರಾ ಅಝೀಝ್ ಯಾವ ದೇಶದವರು?

A
ಇರಾನ್
B
ಇರಾಕ್
C
ಸೌದಿ ಅರೇಬಿಯಾ
D
ಈಜಿಪ್ಟ್
Question 8 Explanation: 
ಸೌದಿ ಅರೇಬಿಯಾ:

ಗಣಿತ ಕ್ಷೇತ್ರದಲ್ಲಿ ಸಮನ್ವಯ ಸಾಧಿಸಲು ಮುಡುಪಾಗಿರುವ ಅಂತಾರಾಷ್ಟ್ರೀಯ ಸರಕಾರೇತರ ಸಂಘಟನೆ 'ಇಂಟರ್ನ್ಯಾಶನಲ್ ಮ್ಯಾಥಮೆಟಿಕಲ್ ಯೂನಿಯನ್ (ಐಎಂಯು)ನ ನೂತನ ನಿರ್ದೇಶಕರಾಗಿ ಸೌದಿ ಅರೇಬಿಯದ ಮಾಧ್ಯಮ ಕ್ಷೇತ್ರದ ಮಹಿಳೆ ಸಮೀರಾ ಅಝೀಝ್ ಆಯ್ಕೆಯಾಗಿದ್ದಾರೆ. 158 ದೇಶಗಳನ್ನು ಪ್ರತಿನಿಧಿಸುವ 158 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಸಮೀರಾರನ್ನು ಈ ಸಂಘಟನೆಗೆ ಆಯ್ಕೆ ಮಾಡಲಾಯಿತು. ಅವರ ಅಧಿಕಾರಾವಧಿ ಮೂರು ವರ್ಷಗಳು.

Question 9

9. ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 7500 ರನ್ ಪೂರೈಸಿ ಸಾಧನೆ ಮಾಡುವ ಮೂಲಕ ಯಾವ ಆಟಗಾರನ ದಾಖಲೆಯನ್ನು ಅಳಿಸಿ ಹಾಕಿದರು?

A
ಸಚಿನ್ ತೆಂಡುಲ್ಕರ್
B
ಎಬಿ ಡಿವಿಲಿಯರ್ಸ್
C
ಶಾಹಿದ್ ಅಫ್ರಿದಿ
D
ವಿರೇಂದ್ರ ಸೆಹ್ವಾಗ್
Question 9 Explanation: 
ಎಬಿ ಡಿವಿಲಿಯರ್ಸ್:

ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ 45 ರನ್ ಸಿಡಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 7500 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ 174 ಇನ್ನಿಂಗ್ಸ್ ನಲ್ಲಿ 7500 ರನ್ ಪೂರೈಸಿದ್ದರೆ, ವಿರಾಟ್ ಕೊಹ್ಲಿ ಕೇವಲ 167 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದು ವಿಲಿಯರ್ಸ್ ದಾಖಲೆಯನ್ನು ಅಳಿಸಿ ಹಾಕಿದರು.

Question 10

10. ಈ ಕೆಳಗಿನ ಯಾವುದು ನಾಗಲ್ಯಾಂಡ್ ನ ಅಧಿಕೃತ ಭಾಷೆಯಾಗಿದೆ?

A
ಚಾಂಗ್
B
ಇಂಗ್ಲೀಷ್
C
ಅಸ್ಸಾಮಿಸ್
D
ನಾಗಮಿಸ್
Question 10 Explanation: 
ಇಂಗ್ಲೀಷ್ ನಾಗಲ್ಯಾಂಡ್ನ ಅಧಿಕೃತ ಭಾಷೆಯಾಗಿದೆ.
There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-26.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-26, 2016”

Leave a Comment

This site uses Akismet to reduce spam. Learn how your comment data is processed.