ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-15, 2016

Question 1

1.ಪ್ರಸಿದ್ದ ಮಾನವ ಹಕ್ಕು ಹೋರಾಟ ಸಂಘಟನೆಗಳು ನೀಡುವ ಮಾನವ ಹಕ್ಕು ಪುರಸ್ಕಾರಕ್ಕೆ ಪ್ರಸ್ತಕ ಸಾಲಿನಲ್ಲಿ ಯಾರನ್ನು ಆಯ್ಕೆಮಾಡಲಾಗಿದೆ?

A
ಅಂಗ್ ಸನ್ ಸೂಕಿ
B
ಇಲ್ಹಾ ತೊಹ್ತಿ
C
ಮೇಧಾ ಪಾಟ್ಕರ್
D
ಮಲಾಲ ಯೂಸಫ್ ಝೈ
Question 1 Explanation: 
ಇಲ್ಹಾ ತೊಹ್ತಿ:

ಅಮ್ನೆಸ್ಟಿ ಇಂಟರ್ನ್ಯಾಶನಲ್, ಹ್ಯೂಮನ್ ರೈಟ್ಸ್ ವಾಚ್ ಮುಂತಾದ ಎಂಟು ಮಾನವ ಹಕ್ಕು ಸಂಘಟನೆಗಳು ಸೇರಿ ನೀಡುವ ಮಾರ್ಟಿನ್ ಎನ್ನಲ್ಸ್ ಅವಾರ್ಡ್ ಎಂಬ ಮಾನವ ಹಕ್ಕು ಪ್ರಶಸ್ತಿಯನ್ನು ಇಲ್ಹಾಂ ತೊಹ್ತಿ ಅವರಿಗೆ ನೀಡಲಾಗಿದೆ. ಮುಸ್ಲಿಂ ವಿದ್ವಾಂಸ ಮತ್ತು ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ಇಲ್ಹಾಂ ತೊಹ್ತಿ ಅವರನ್ನು ಚೀನಾದಲ್ಲಿ ಸೆರೆಮನೆಯಲ್ಲಿ ಇಡಲಾಗಿದೆ. ತೊಹ್ತಿ ಅವರ ಜೈಲುವಾಸದ ಅವಸ್ಥೆ ಆಮೂಲಕ ಅಂತಾರಾಷ್ಟ್ರೀಯವಾಗಿ ಗಮನಕ್ಕೆ ಬರುವಂತಾಗಿದೆ ಎಂದು ವರದಿಯೊಂದು ತಿಳಿಸಿದೆ. ಚೀನಾದ ಉಯುಗುರ್ ವಂಶೀಯರಾದ 46ವರ್ಷದ ತೋಹ್ತಿ ಬೀಜಿಂಗ್ನ ಮಿನ್ಸು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದಾರೆ. ಚೀನದ ಪಶ್ಚಿಮ ಪ್ರಾಂತ ಸಿನ್ಜುಂಗ್ನ ಉಯುಗುರ್ ವಂಶೀಯರೊಂದಿಗೆ ಚೀನ ತೋರಿಸುತ್ತಿರುವ ತಾರತಮ್ಯದ ವಿರುದ್ಧ ಇವರು ಧ್ವನಿಯೆತ್ತಿದ್ದರು. ಇದಕ್ಕಾಗಿ ಅವರನ್ನು ಚೀನಾ ಬಂಧಿಸಿ ಜೈಲಿಗಟ್ಟಿದೆ. ಎರಡುದಿವಸ ವಿಚಾರಣೆ ನಡೆಸಿ ಚೀನಾವನ್ನು ಛಿದ್ರಗೊಳಿಸಲು ಶ್ರಮಿಸುತ್ತಿದ್ದಾರೆಂದು ಆರೋಪಿಸಿ 2014ರ ಸೆಪ್ಟಂಬರ್ನಲ್ಲಿ ಜೀವಾವಧಿ ಜೈಲು ವಾಸ ವಿಧಿಸಲಾಗಿದೆ.

Question 2

2.ಈ ಕೆಳಗಿನ ಯಾರ ಜನ್ಮದಿನವನ್ನು “ರಾಷ್ಟ್ರೀಯ ಐಕ್ಯತಾ ದಿನ” ವೆಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ?

A
ದೀನ್ ದಯಾಳ್ ಉಪಾಧ್ಯಯ
B
ಸರ್ದಾರ್ ವಲ್ಲಭಬಾಯಿ ಪಟೇಲ್
C
ಭಗತ್ ಸಿಂಗ್
D
ಸುಭಾಷ್ ಚಂದ್ರ ಭೋಸ್
Question 2 Explanation: 
ಸರ್ದಾರ್ ವಲ್ಲಭಬಾಯಿ ಪಟೇಲ್:

ಶದ ಪ್ರಥಮ ಗೃಹಮಂತ್ರಿ ಮತ್ತು ಉಕ್ಕಿನ ಮನುಷ್ಯ ಎಂದು ಬಿರುದು ಇರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು `ರಾಷ್ಟ್ರೀಯ ಐಕ್ಯತಾ ದಿನ'ವಾಗಿ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅ.31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 141ನೇ ಜನ್ಮದಿನವನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಟೇಲರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪಟೇಲರ ಕುರಿತು ಡಿಜಿಟಲ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸದೃಢ ಭಾರತ ದೇಶವನ್ನಾಗಿ ಮಾಡುವಲ್ಲಿ ವಲ್ಲಭಭಾಯಿ ಪಟೇಲರು ಪ್ರಮುಖ ಪಾತ್ರ ವಹಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಸುಮಾರು 500ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟ ವ್ಯವಸ್ಥೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.

Question 3

3.ಇತ್ತೀಚೆಗೆ ದೇಶದ ಖಾಸಗಿ ವಲಯದ ಎರಡನೇ ಅತಿ ದೊಡ್ಡ ತೈಲ ಕಂಪನಿಯನ್ನು ಖರೀದಿಸಿದ ರೋಸ್ನೆಫ್ಟ್ ಯಾವ ದೇಶದ ಸಂಸ್ಥೆಯಾಗಿದೆ?

A
ರಷ್ಯಾ
B
ಇರಾನ್
C
ಇರಾಕ್
D
ಅಮೆರಿಕ
Question 3 Explanation: 
ರಷ್ಯಾ:

ರಷ್ಯಾದ ರೋಸ್ನೆಫ್ಟ್ ಮತ್ತು ಅದರ ಪಾಲುದಾರ ಕಂಪೆನಿಗಳು ಖಾಸಗಿ ವಲಯದಲ್ಲಿ ಭಾರತದ ಎರಡನೇ ಅತಿದೊಡ್ಡ ತೈಲ ಕಂಪೆನಿ ಎಸ್ಸಾರ್ ಆಯಿಲ್ ಅನ್ನು ಖರೀದಿ ಮಾಡಲು ಸಮ್ಮತಿಸಿವೆ. ಸಾಲವನ್ನೂ ಒಳಗೊಂಡು ಒಟ್ಟು ರೂ 87,100 ಕೋಟಿ ಮೊತ್ತದ ಸ್ವಾಧೀನ ಒಪ್ಪಂದ ನಡೆದಿದೆ. ರೋಸ್ನೆಫ್ಟ್ ಮತ್ತು ಇದರ ಪಾಲುದಾರಿಕೆ ಸಂಸ್ಥೆಗಳಾದ ನೆದರ್ಲ್ಯಾಂಡ್ ಮೂಲದ ಟ್ರಾಫಿಗುರ ಮತ್ತು ಖಾಸಗಿ ಬಂಡವಾಳ ಗ್ರೂಫ್ ಯುನೈಟೆಡ್ ಕ್ಯಾಪಿಟಲ್ ಪಾರ್ಟನರ್ಸ್ ಖರೀದಿಗೆ ಕೈಜೋಡಿಸಿವೆ. ಈ ಮೊತ್ತದಲ್ಲಿ ಎಸ್ಸಾರ್ ಆಯಿಲ್ ಹೊಂದಿರುವ ಒಟ್ಟು ರೂ 40,200 ಕೋಟಿ ಸಾಲವೂ ಸೇರಿಕೊಂಡಿದೆ.

Question 4

4.“ಬೆಡಕ್ವಿಲಿನ್ ಮತ್ತು ಡೆಲಮನಿಡ್ (Bedaquiline and Delamanid)” ಔಷಧಿಗಳನ್ನು ಈ ರೋಗಕ್ಕೆ ನೀಡುವ ಔಷಧ ____?

A
ಕ್ಷಯರೋಗ
B
ಮಲೇರಿಯಾ
C
ಡೆಂಗ್ಯೂ
D
ಎಚ್ಐವಿ/ಏಡ್ಸ್
Question 4 Explanation: 
ಕ್ಷಯರೋಗ:

“ಬೆಡಕ್ವಿಲಿನ್ ಮತ್ತು ಡೆಲಮನಿಡ್” ಕ್ಷಯರೋಗ ಚಿಕಿತ್ಸೆಗೆ ವಿಶ್ವದಾದ್ಯಂತ ಬಳಸಲಾಗುತ್ತಿರುವ ಔಷಧಗಳಾಗಿವೆ.

Question 5

5.ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 13
B
ಅಕ್ಟೋಬರ್ 14
C
ಅಕ್ಟೋಬರ್ 15
D
ಅಕ್ಟೋಬರ್ 16
Question 5 Explanation: 
ಅಕ್ಟೋಬರ್ 15:

ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುವುದು. ಗ್ರಾಮೀಣ ಮಹಿಳೆಯರ ಕೊಡುಗೆ ಮತ್ತು ಪಾತ್ರವನ್ನು ಗೌರವಿಸುವ ಸಲುವಾಗಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವನ್ನು ಆಚರಿಸಲಾಗುವುದು. ಗ್ರಾಮೀಣ ಮತ್ತು ಕೃಷಿ ಅಭಿವೃದ್ದಿ, ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಆಹಾರ ಭದ್ರತೆ ಉತ್ತಮಪಡಿಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಮತ್ತು ಕೊಡುಗೆಯನ್ನು ಎತ್ತಿಹಿಡಿಯುವುದು. 2016 ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನದ ಥೀಮ್: Climate is changing. Food and agriculture must too”.

Question 6

6.“ಎಸ್-400” ಟ್ರಯಂಪ್ ಅನ್ನು ಖರೀದಿಸುವ ಒಪ್ಪಂದಕ್ಕೆ ಭಾರತ-ರಷ್ಯಾ ಇತ್ತೀಚೆಗೆ ಸಹಿ ಹಾಕಿವೆ. ಅಂದಹಾಗೆ “ಎಸ್-400” ಎಂಬುದು _____?

A
ರಹಸ್ಯ ಯುದ್ದನೌಕೆ
B
ವಾಯು ರಕ್ಷಣಾ ವ್ಯವಸ್ಥೆ
C
ಜಲಂತರ್ಗಾಮಿ ಯುದ್ದನೌಕೆ
D
ಅತ್ಯಾಧುನಿಕ ಹೆಲಿಕಾಪ್ಟರ್
Question 6 Explanation: 
ವಾಯು ರಕ್ಷಣಾ ವ್ಯವಸ್ಥೆ:

ರಷ್ಯಾದಿಂದ ಐದು ಅತ್ಯಾಧುನಿಕ “ಎಸ್-400” ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದು ಸೇರಿದಂತೆ ಸುಮಾರು 39,000 ಕೋಟಿ ಮೊತ್ತದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಸಹಿಹಾಕಿದೆ. ಅಲ್ಲದೇ ನಾಲ್ಕು ರಹಸ್ಯ ಯುದ್ದನೌಕೆಗಳ ಅಭಿವೃದ್ದಿಗೆ ಕೈಜೋಡಿಸುವುದು ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಮಾವ್ 226ಟಿ ಹೆಲಿಕಾಪ್ಟರ್ ಅನ್ನು ಭಾರತದಲ್ಲಿ ತಯಾರಿಸುವುದು ಒಪ್ಪಂದಲ್ಲಿ ಸೇರಿವೆ. ಈ ಸಂಬಂಧ ಉಭಯ ದೇಶಗಳ ನಡುವೆ ಅಂತರ್ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಎಸ್–400 ಅಥವಾ ಟ್ರಯಂಫ ಇದು ಜಗತ್ತಿನ ಅತ್ಯಾಧುನಿಕ ಭಾರಿ ಸಾಮರ್ಥ್ಯದ ದೂರಗಾಮಿ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ. ನಾಟೋ ಇದನ್ನು ಎಸ್ಎ-21 ಎಂತಲೂ ಕರೆಯುತ್ತಿದೆ. ಇದು ಎಸ್-300 ವಾಯು ರಕ್ಷಣಾ ವ್ಯವಸ್ಥೆಯ ಮುಂದುವರೆದ ತಂತ್ರಜ್ಞಾನವಾಗಿದ್ದು, ಅಲ್ಮಝ್-ಅಂಟೇ ಅಭಿವೃದ್ದಿಪಡಿಸಿದೆ. 2007 ರಿಂದ ರಷ್ಯಾ ಮಿಲಿಟರಿ ಸೇವೆಯಲ್ಲಿ ಇದನ್ನು ಬಳಸಲಾಗುತ್ತಿದೆ.

Question 7

7.ಬಂಗಾಳಕೊಲ್ಲಿ ರಾಷ್ಟ್ರಗಳ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಕ್ಕೂಟ (Bay of Bengal Initiative for Multi-Sectoral Technical and Economic Cooperation) ಕೇಂದ್ರ ಕಚೇರಿ ಎಲ್ಲಿದೆ?

A
ಢಾಕಾ, ಬಾಂಗ್ಲದೇಶ
B
ನವದೆಹಲಿ, ಭಾರತ
C
ಥಿಂಪು, ಭೂತಾನ್
D
ಕೊಲೊಂಬೊ, ಶ್ರೀಲಂಕಾ
Question 7 Explanation: 
ಢಾಕಾ, ಬಾಂಗ್ಲದೇಶ:

ಬಂಗಾಳಕೊಲ್ಲಿ ರಾಷ್ಟ್ರಗಳ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಒಕ್ಕೂಟ ಅಥವಾ BIMSTEC ಕೇಂದ್ರ ಕಚೇರಿ ಢಾಕಾ, ಬಾಂಗ್ಲದೇಶದಲ್ಲಿದೆ. ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳ ನಡುವೆ ಪರಸ್ಪರ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಹಂಚಿಕೊಳ್ಳುವುದು ಈ ಒಕ್ಕೂಟದ ಧ್ಯೇಯವಾಗಿದೆ ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳ ಸದಸ್ಯ ರಾಷ್ಟ್ರಗಳಾಗಿವೆ.

Question 8

8. 2016 ಬ್ರಿಕ್ಸ್ ಶೃಂಗಸಭೆಯ ಧ್ಯೇಯವಾಕ್ಯ ______?

A
Building Responsive, Inclusive and Collective Solutions
B
Inclusive Growth: Sustainable Solutions
C
BRICS: Partnership for Development, Integration and Industrialisation
D
BRICS Partnership – a Powerful Factor of Global Development
Question 8 Explanation: 

Building Responsive, Inclusive and Collective Solutions ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ಶೃಂಗಸಭೆಯ ಧ್ಯೇಯವಾಕ್ಯವಾಗಿದೆ.

Question 9

9.ಕೇರಳದ “ಮಾತೃಭೂಮಿ ಸಾಹಿತ್ಯ ಪ್ರಶಸ್ತಿ-2016”ಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಎಂ ಮುಕುಂದನ್
B
ಸರಹ ಜೋಸೆಫ್
C
ಸಿ ರಾಧಕೃಷ್ಣನ್
D
ಪಿ ವಿ ಚಂದ್ರನ್
Question 9 Explanation: 
ಸಿ ರಾಧಕೃಷ್ಣನ್:

ಖ್ಯಾತ ಮಲೆಯಾಳಂ ಸಾಹಿತಿ ಸಿ.ರಾಧಕೃಷ್ಣನ್ ಅವರನ್ನು ಮಾತೃಭೂಮಿ ಸಾಹಿತ್ಯ ಪ್ರಶಸ್ತಿ-2016ಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 2 ಲಕ್ಷ ನಗದು, ಫಲಕ ಮತ್ತು ಮೂರ್ತಿಯನ್ನು ಒಳಗೊಂಡಿದೆ.

Question 10

10. ಈ ಕೆಳಗಿನ ಯಾರಿಗೆ ಉಗಾಂಡ ದೇಶದ ಪ್ರತಿಷ್ಠಿತ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಲಾಯಿತು?

A
ರಮೇಶ್ ಪೊಖ್ರಿಯಲ್ ನಿಶಾಂಕ್
B
ಪಿ ಚಿದಂಬರಂ
C
ವೀರಪ್ಪ ಮೊಯ್ಲಿ
D
ಚೇತನ್ ಭಗತ್
Question 10 Explanation: 
ರಮೇಶ್ ಪೊಖ್ರಿಯಲ್ ನಿಶಾಂಕ್:

ಉತ್ತರಖಂಡ ಮಾಜಿ ಮುಖ್ಯಮಂತ್ರಿ ರಮೇಶ್ ಪೊಖ್ರಿಯಲ್ ನಿಶಾಂಕ್ ಅವರಿಗೆ ಉಗಾಂಡ ದೇಶದ ಪ್ರಶಸ್ತಿಯನ್ನು ನೀಡಲಾಗಿದೆ. ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರೋತ್ಸಾಹಿಸಿದಕ್ಕೆ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಸ್ತುತ ರಮೇಶ್ ಅವರು 16ನೇ ಲೋಕಸಭಾದ ಸದಸ್ಯರಾಗಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-15.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-15, 2016”

Leave a Comment

This site uses Akismet to reduce spam. Learn how your comment data is processed.