ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-12, 2016

Question 1

1.ಪ್ರಪ್ರಥಮ “ವಿಶ್ವ ಸುನಾಮಿ ಜಾಗೃತಾ ದಿನ (World Tsunami Awareness Day)” ವನ್ನು ಯಾವ ದಿನದಂದು ಆಚರಿಸಲಾಗುವುದು?

A
ನವೆಂಬರ್ 5
B
ಅಕ್ಟೋಬರ್ 15
C
ಡಿಸೆಂಬರ್ 25
D
ನವೆಂಬರ್ 10
Question 1 Explanation: 
ನವೆಂಬರ್ 5:

ಪ್ರಪ್ರಥಮ ವಿಶ್ವ ಸುನಾಮಿ ಜಾಗೃತಾ ದಿನವನ್ನು ನವೆಂಬರ್ 5 ರಂದು ಆಚರಿಸಲಾಗುವುದು. ಸುನಾಮಿ ಅಪಾಯದ ಬಗ್ಗೆ ಅರಿವು ಮೂಡಿಸುವುದು ಮತ್ತು ಸುನಾಮಿಯಿಂದಾಗು ಅಪಾಯವನ್ನು ತಗ್ಗಿಸಲು ಮುನ್ನೆಚ್ಚರಿಕೆ ವ್ಯವಸ್ಥೆಯ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಡಿಸೆಂಬರ್ 2015 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ನವೆಂಬರ್ 5 ರಂದು ವಿಶ್ವ ಸುನಾಮಿ ಜಾಗೃತಾ ದಿನವನ್ನು ಆಚರಿಸಲು ತೀರ್ಮಾನಿಸಿತ್ತು.

Question 2

2.ವಿಶ್ವದ ಮೊದಲ “ಬಯೋನಿಕ್ ಒಲಂಪಿಕ್ಸ್ (Bionic Olympics)” ಯಾವ ದೇಶದಲ್ಲಿ ಆರಂಭಗೊಂಡಿತು?

A
ಸ್ವಿಟ್ಜರ್ಲ್ಯಾಂಡ್
B
ಚೀನಾ
C
ಬ್ರೆಜಿಲ್
D
ಅಮೆರಿಕ
Question 2 Explanation: 
ಸ್ವಿಟ್ಜರ್ಲ್ಯಾಂಡ್:

ವಿಕಲಚೇತನರು ಭಾಗವಹಿಸುವ ವಿಶ್ವದ ಮೊದಲ ಸೈಬ್ಲಾಥನ್ ಚಾಂಪಿಯನ್ ಷಿಪ್ ಸ್ವಿಟ್ಜರ್ಲ್ಯಾಂಡ್ನ ಜೂರಿಚ್ ನಲ್ಲಿ ಆರಂಭಗೊಂಡಿದೆ. ಈ ಚಾಂಪಿಯನ್ ಷಿಪ್ ಅನ್ನು ಬಯೋನಿಕ್ ಒಲಂಪಿಕ್ಸ್ ಎಂತಲೂ ಕರೆಯಲಾಗುತ್ತದೆ. ಬಯೋನಿಕ್ ಒಲಂಪಿಕ್ಸ್ ಪ್ಯಾರಾಲಿಂಪಿಕ್ ಗಿಂತ ಭಿನ್ನವಾಗಿದ್ದು, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿಕಲಚೇತನ ಸ್ಪರ್ಧಾರ್ಥಿಗಳು ವಿನೂತನ ತಂತ್ರಜ್ಞಾನಗಳಾದ ರೋಬೊಟಿಕ್ ಅಂಗಗಳು, ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಸೇರಿದಂತೆ ಇತರೆ ತಂತ್ರಜ್ಞಾನಗಳ ಸಹಾಯದೊಂದಿಗೆ ಆಡಲಿದ್ದಾರೆ.

Question 3

3.2016 ರಷ್ಯಾ ಬ್ಯಾಡ್ಮಿಂಟನ್ ಗ್ರಾಂಡ್ ಫ್ರಿಕ್ಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು _____?

A
ರುತ್ವಿಕ ಶಿವಾನಿ ಗದ್ದೆ
B
ಇಗೇನಿಯಾ ಕೊಸೆಟ್ಸ್ಕಯ
C
ಎನ್ ಸಿಕ್ಕಿ ರೆಡ್ಡಿ
D
ಪಿ ವಿ ಸಿಂಧು
Question 3 Explanation: 
ರುತ್ವಿಕ ಶಿವಾನಿ ಗದ್ದೆ:

ಭಾರತದ ರುತ್ವಿಕ ಶಿವಾನಿ ಗದ್ದೆ ಅವರು 2016 ರಷ್ಯಾ ಬ್ಯಾಡ್ಮಿಂಟನ್ ಗ್ರಾಂಡ್ ಫ್ರಿಕ್ಸ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದು ಭರವಸೆ ಮೂಡಿಸಿದ್ದಾರೆ. ಶಿವಾನಿ ರಷ್ಯಾದ ಇಗೇನಿಯಾ ಕೊಸೆಟ್ಸ್ಕಯ ಅವರನ್ನು 21-10, 21-13 ಸೆಟ್ ಗಳಿಂದ ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಶಿವಾನಿ ಅವರಿಗೆ ಇದು ಮೊದಲ ಸೀನಿಯರ್ ಪ್ರಶಸ್ತಿಯಾಗಿದೆ.

Question 4

4.“ಅಬ್ದೆಲಿಲಹ್ ಬೆಕಿರನೆ (Abdelilah Bekirane)” ರವರು ಯಾವ ದೇಶದ ಪ್ರಧಾನಿಯಾಗಿ ನೇಮಕಗೊಂಡರು?

A
ಮೊರಾಕೊ
B
ನಮೀಬಿಯಾ
C
ಜಿಂಬಾಬ್ವೆ
D
ಬ್ರೆಜಿಲ್
Question 4 Explanation: 
ಮೊರಾಕೊ:

ಅಬ್ದೆಲಿಲಹ್ ಬೆಕಿರನೆ ರವರು ಮೊರಾಕಾದ ಪ್ರಧಾನಿಯಾಗಿ ಎರಡನೇ ಅವಧಿಗೆ ನೇಮಕಗೊಂಡಿದ್ದಾರೆ. ನವೆಂಬರ್ 2011ರಿಂದ ಬೆಕಿರನೆ ಅವರು ಮೊರಾಕೊದ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಾರ್ವತಿಕ ಚುನಾವಣೆಯಲ್ಲಿ ಬೆಕಿರನೆ ನೇತೃತ್ವದ “ಇಸ್ಲಾಮಿಕ್ ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್” ಪಕ್ಷ ಜಯಭೇರಿಯಾದ ಹಿನ್ನಲೆಯಲ್ಲಿ ಮೊರಾಕೊದ ಅಧ್ಯಕ್ಷ ಮೊಹಮ್ಮದ್ V ರವರು ಬೆಕಿರನೆ ಅವರನ್ನು ಪ್ರಧಾನಿಯೆಂದು ಅಧಿಕೃತವಾಗಿ ಘೋಷಿಸಿದರು.

Question 5

5.ಪ್ರವಾಸಿಗರನ್ನು ಆಕರ್ಷಿಸಲು ಯಾವ ರಾಜ್ಯ ದೇಶದಲ್ಲಿ ಪ್ರಥಮ ಬಾರಿಗೆ “ಡಕ್ ಬೋಟ್ (Duck Boat)” ಆರಂಭಿಸಿದೆ?

A
ಕೇರಳ
B
ಗೋವಾ
C
ತೆಲಂಗಣ
D
ಕರ್ನಾಟಕ
Question 5 Explanation: 
ಗೋವಾ:

ದೇಶದಲ್ಲೇ ಮೊದಲ ಎನಿಸಿದ “ಡಕ್ ಬೋಟ್” ಸೌಲಭ್ಯವನ್ನು ಗೋವಾ ಪ್ರವಾಸೋದ್ಯಮ ಇಲಾಖೆ ಆರಂಭಿಸಿದೆ. ಈ ಬೋಟ್ ನೀರು ಹಾಗೂ ರಸ್ತೆಯ ಮೇಲೆ ಸರಾಗವಾಗಿ ಚಲಿಸುತ್ತದೆ. ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಆಗಮಿಸುವ ಹೆಚ್ಚಿನ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಒಂದು ಬೋಟ್ ನಲ್ಲಿ ಗರಿಷ್ಠ 32 ಜನರು ಪ್ರಯಾಣಿಸಬಹುದಾಗಿದ್ದು, ನವೆಂಬರ್ 2016ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ.

Question 6

6.“Ashoka in Ancient India” ಪುಸ್ತಕದ ಲೇಖಕರು _____?

A
ಉಮಾ ಮಹದೇವನ್
B
ನಯನ್ಜೋತ್ ಲಹಿರಿ
C
ಸುಧಾ ನರಸಿಂಹನ್
D
ಪ್ರತಿಭಾ ನಾರಾಯಣನ್
Question 6 Explanation: 
ನಯನ್ಜೋತ್ ಲಹಿರಿ:

“Ashoka in Ancient India” ಪುಸ್ತಕದ ಲೇಖಕರು ನಯನ್ಜೋತ್ ಲಹಿರಿ. ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಪಕರಾಗಿರುವ ನಯನ್ಜೋತ್ ಲಹಿರಿ ರವರ ಈ ಪುಸ್ತಕಕ್ಕೆ 2016 ಜಾನ್ ಎಫ್ ರಿಚರ್ಡ್ ಪ್ರಶಸ್ತಿ ಲಭಿಸಿದೆ. ತನ್ನ ಶಾಸನಗಳ ಸಾಮ್ರಾಜ್ಯವನ್ನು ಬಣ್ಣಿಸಿರುವ ಅಶೋಕ ಮಹಾರಾಜನ ಕುರಿತಾಗಿರುವ ಈ ಪುಸ್ತಕ ವಿಮರ್ಶಕರ ಪ್ರಶಂಸೆಗೆ ಒಳಗಾಗಿದೆ.

Question 7

7.ಭಾರತದ ಮೊದಲ “ಪರಿವರ್ತನ ಸ್ಟೇಡಿಯಂ (convertible stadium)” ಯಾವ ನಗರದಲ್ಲಿದೆ?

A
ಅಹಮದಾಬಾದ್
B
ಹೈದ್ರಾಬಾದ್
C
ಚೆನ್ನೈ
D
ಕೊಲ್ಕತ್ತಾ
Question 7 Explanation: 
ಅಹಮದಾಬಾದ್:

ಭಾರತದ ಮೊದಲ “ಪರಿವರ್ತನ ಸ್ಟೇಡಿಯಂ” ಅಹಮದಾಬಾದ್ ನಲ್ಲಿದೆ. ಅರೆನ ಬೈ ಟ್ರಾನ್ಸ್ಟಿಂಡಿಯಾ (Arena by TransStadia) ಹೆಸರಿನ ಈ ಕ್ರೀಡಾಂಗಣವನ್ನು ಕೇವಲ ಒಂದು ಬಟನ್ ಒತ್ತಿದರೆ ಆರು ನಿಮಿಷದಲ್ಲಿ ಈ ಕ್ರೀಡಾಂಗಣ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣವಾಗಿ ಪರಿವರ್ತನೆಯಾಗಲಿದೆ. 20,000 ಆಸನಗಳನ್ನು ಒಳಗೊಂಡಿರುವ ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಹೊರತುಪಡಿಸಿ 14 ಕ್ರೀಡೆಗಳನ್ನು ಆಡಬಹುದಾಗಿದೆ.

Question 8

8.“ಯುನೈಟೆಡ್ ನೇಷನ್ ಆಫೀಸ್ ಫಾರ್ ಡಿಸಸ್ಟರ್ ರಿಸ್ಕ್ ರೆಡಕ್ಷನ್ (United Nations Office for Disaster Risk Reduction)” ಕೇಂದ್ರ ಕಚೇರಿ ಎಲ್ಲಿದೆ?

A
ನ್ಯೂಯಾರ್ಕ್, ಅಮೆರಿಕ
B
ಜಿನೀವಾ, ಸ್ವಿಟ್ಜರ್ಲ್ಯಾಂಡ್
C
ಮಾಸ್ಕೋ, ರಷ್ಯಾ
D
ಬರ್ಲಿನ್, ಜರ್ಮನಿ
Question 8 Explanation: 
ಜಿನೀವಾ, ಸ್ವಿಟ್ಜರ್ಲ್ಯಾಂಡ್:

ಯುನೈಟೆಡ್ ನೇಷನ್ ಆಫೀಸ್ ಫಾರ್ ಡಿಸಸ್ಟರ್ ರಿಸ್ಕ್ ರೆಡಕ್ಷನ್ ಕೇಂದ್ರ ಕಚೇರಿ ಜಿನೀವಾ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ.

Question 9

9.ಇತ್ತೀಚೆಗೆ 4ನೇ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಕುರಿತಾದ ಅಧಿಕಾರಿಗಳ ಸಭೆ ಯಾವ ನಗರದಲ್ಲಿ ನಡೆಯಿತು?

A
ಬೆಂಗಳೂರು
B
ಜೈಪುರ
C
ನವದೆಹಲಿ
D
ಪಣಜಿ
Question 9 Explanation: 
ಜೈಪುರ:

ಬ್ರಿಕ್ಸ್ ರಾಷ್ಟ್ರಗಳ 4ನೇ ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಕುರಿತಾದ ಅಧಿಕಾರಿಗಳ ಸಭೆ ರಾಜಸ್ತಾನದ ಜೈಪುರದಲ್ಲಿ ನಡೆಯಿತು. ವಿಜ್ಞಾನ, ತಂತ್ರಜ್ಞಾನ ಮತ್ತು ಅನುಶೋಧನಾ ಕ್ಷೇತ್ರಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು.

Question 10

10.“ಹೈ ಸ್ಪೀಡ್ ರೈಲು” ಆರಂಭಿಸಲು ಭಾರತ ಇತ್ತೀಚೆಗೆ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಸಹಿ ಹಾಕಿತು?

A
ರಷ್ಯಾ
B
ಜರ್ಮನಿ
C
ಚೀನಾ
D
ಜಪಾನ್
Question 10 Explanation: 
ಜರ್ಮನಿ:

ಹೈ ಸ್ಪೀಡ್ ರೈಲು ಆರಂಭಿಸುವ ಸಲುವಾಗಿ ಭಾರತ ಇತ್ತೀಚೆಗೆ ಜರ್ಮನಿಯೊಂದಿಗೆ ಸಹಿ ಹಾಕಿದೆ. ಈ ಒಪ್ಪಂದದಿಂದ ಉಭಯ ದೇಶಗಳ ನಡುವೆ ರೈಲ್ವೆ ವಲಯದಲ್ಲಿ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-12.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-12, 2016”

  1. Siddalinga

    Thank you Karunadu Exams
    I’m learning many things

Leave a Comment

This site uses Akismet to reduce spam. Learn how your comment data is processed.