ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-6, 2016

Question 1

1.2016 ವಿಶ್ವ ಆರ್ಥಿಕ ವೇದಿಕೆ ಭಾರತ ಆರ್ಥಿಕ ಶೃಂಗಸಭೆ (World Economic Forum (WEF) India Economic Summit) ಯಾವ ನಗರದಲ್ಲಿ ನಡೆಯಲಿದೆ?

A
ಹೈದ್ರಾಬಾದ್
B
ಚೆನ್ನೈ
C
ನವ ದೆಹಲಿ
D
ಬೆಂಗಳೂರು
Question 1 Explanation: 
ನವ ದೆಹಲಿ:

2016 ವಿಶ್ವ ಆರ್ಥಿಕ ವೇದಿಕೆ ಭಾರತ ಆರ್ಥಿಕ ಶೃಂಗಸಭೆ ನವದೆಹಲಿಯಲ್ಲಿ ಅಕ್ಟೋಬರ್ 6 ರಂದು ಆರಂಭಗೊಂಡಿತು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ಶೃಂಗಸಭೆಗೆ ಚಾಲನೆ ನೀಡಿದರು. ಎರಡು ದಿನದ ಶೃಂಗಸಭೆಯಲ್ಲಿ ಡಿಜಿಟಲ್ ಟ್ರಾನ್ಸಫರ್ ಮತ್ತು ಪ್ರಾದೇಶಿಕ ಆರ್ಥಿಕ ಏಕೀಕರಣದ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುವುದು. 30 ದೇಶಗಳಿಂದ ಸುಮಾರು 600 ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Question 2

2.ಯುರೋಪ್ ನ ಪ್ರಮುಖ ಮೀನುಗಾರಿಕೆ ತಾಣವಾಗಿರುವ “ಡಾಗರ್ ಬ್ಯಾಂಕ್ (Dogger Bank)” ಯಾವ ಸಮುದ್ರದಲ್ಲಿದೆ?

A
ಬಾಲ್ಟಿಕ್ ಸಮುದ್ರ
B
ನಾರ್ವಿಯನ್ ಸಮುದ್ರ
C
ನಾರ್ಥ್ ಸಮುದ್ರ
D
ಮೆಡಿಟೇರಿಯನ್ ಸಮುದ್ರ
Question 2 Explanation: 
ನಾರ್ಥ್ ಸಮುದ್ರ:

ಡಾಗರ್ ಬ್ಯಾಂಕ್ ನಾರ್ಥ್ ಸಮುದ್ರ (North Sea)ದಲ್ಲಿದೆ. ಇದು ಯುರೋಪ್ ನ ಪ್ರಮುಖ ಮೀನುಗಾರಿಕೆ ಪ್ರಮುಖ ತಾಣ.

Question 3

3.ಔಟ್ಲುಕ್ ಸಂಸ್ಥೆ ನೀಡುವ ‘ಔಟ್ಸ್ಟ್ಯಾಂಡಿಂಗ್ ಸೆಲೆಬ್ರಿಟಿ ವುಮನ್ ಆಫ್ ದ ಈಯರ್’ ಪ್ರಶಸ್ತಿಗೆ ಭಾಜನರಾಗಿರುವ ಬಾಲಿವುಡ್ ನಟಿ ಯಾರು?

A
ವಿದ್ಯಾ ಬಾಲನ್
B
ಸೋನಾಕ್ಷಿ ಸಿನ್ಹಾ
C
ಶಿಲ್ಪಾ ಶೆಟ್ಟಿ
D
ಐಶ್ವರ್ಯಾ ರೈ
Question 3 Explanation: 
ಐಶ್ವರ್ಯಾ ರೈ:

ನಟಿ ಐಶ್ವರ್ಯಾ ರೈ ಅವರು ಔಟ್ಲುಕ್ ಸಂಸ್ಥೆ ನೀಡುವ ‘ಔಟ್ಸ್ಟ್ಯಾಂಡಿಂಗ್ ಸೆಲೆಬ್ರಿಟಿ ವುಮನ್ ಆಫ್ ದ ಈಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಔಟ್ಲುಕ್ ಬಿಜಿನೆಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 19 ಮಹಿಳಾ ಉದ್ಯಮಿಗಳು ತಮ್ಮ ಔದ್ಯಮಿಕ ಜೀವನ ಹಾಗೂ ಯಶಸ್ಸಿನ ಪ್ರಯಾಣದ ಕುರಿತು ವಿಚಾರಗಳನ್ನು ಮಂಡಿಸಿದರು. ಆ ಪೈಕಿ ಬಾಲಿವುಡ್ ಬೆಡಗಿ ಐಶ್ಗೆ ಈ ಪ್ರಶಸ್ತಿ ಒಲಿದಿದೆ.

Question 4

4.ಯಾವ ಕೇಂದ್ರ ಸಚಿವಾಲಯ ಇತ್ತೀಚೆಗೆ “ಸಾರ್ವಜನಿಕ ಸಾಲ ನಿರ್ವಹಣೆ ಕೋಶ (Public Debt Management Cell (PDMC)” ಸ್ಥಾಪಿಸಿದೆ?

A
ಹಣಕಾಸು ಸಚಿವಾಲಯ
B
ಗೃಹ ಸಚಿವಾಲಯ
C
ವಿದೇಶಾಂಗ ವ್ಯವಹಾರ ಸಚಿವಾಲಯ
D
ಕೃಷಿ ಸಚಿವಾಲಯ
Question 4 Explanation: 

ಕೇಂದ್ರ ಹಣಕಾಸು ಸಚಿವಾಲಯ ಸಾರ್ವಜನಿಕ ಸಾಲ ನಿರ್ವಹಣೆ ಕೋಶವನ್ನು ಆರಂಭಿಸಿದೆ. ಸರ್ಕಾರಿ ಸಾಲಗಳು ಮತ್ತು ಉತ್ತಮ ನಗದು ನಿರ್ವಹಣೆ ಸುಗಮಗೊಳಿಸಲು ಹಾಗೂ ಒಟ್ಟಾರೆಯಾಗಿ ಬಾಂಡ್ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸುವ ಸಲುವಾಗಿ ಈ ಕೋಶವನ್ನು ಸ್ಥಾಪಿಸಲಾಗಿದೆ. ಸದ್ಯ ಇದನ್ನು ದೆಹಲಿಯ ಆರ್ಬಿಐ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಶಾಸನಬದ್ದ ಸ್ಥಾನಮಾನ ನೀಡುವ ಮೂಲಕ ಸಾರ್ವಜನಿಕ ಸಾಲ ನಿರ್ವಹಣೆ ಪ್ರಾಧಿಕಾರವನ್ನಾಗಿ ಉನ್ನತೀಕರಿಸಲಾಗುವುದು. ಬಂಡವಾಳ, ಬಂಡವಾಳ ಮಾರುಕಟ್ಟೆ ಕಾರ್ಯಾಚರಣೆ ಹಾಗೂ ಸಣ್ಣ ಉಳಿತಾಯ ಮೇಲಿನ ಬಡ್ಡಿದರವನ್ನು ನಿರ್ಧರಿಸುವ

Question 5

5.ಇತ್ತೀಚೆಗೆ ಸ್ಪೇನಿನ “ಲಾ ಲೀಗ ಪುಟ್ಬಾಲ್ ಕ್ಲಬ್” ಸೇರಿದ ಮೊಟ್ಟ ಮೊದಲ ಭಾರತೀಯ ಯಾರು?

A
ಇಷಾನ್ ಪಂಡಿತ
B
ರವೀಂದ್ರ ಚೇತನ್
C
ನವೀನ್ ಸಿಂಗ್
D
ಶರತ್ ರಾಮನ್
Question 5 Explanation: 
ಇಷಾನ್ ಪಂಡಿತ:

ಬೆಂಗಳೂರಿನ ಯುವಕ ಇಷಾನ್ ಪಂಡಿತ ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಸ್ಪೇನಿನ ಲಾ ಲೀಗಾ ಸೇರಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರು ಮೂಲದ 18 ವರ್ಷ ವಯಸ್ಸಿನ ಯುವಕ ಇಷಾನ್ ಅವರು ಒಂದು ವರ್ಷದ ಒಪ್ಪಂದಕ್ಕೆ ಸಿಡಿ ಲಾಗೆನಸ್ ತಂಡದೊಡನೆ ಸಹಿ ಮಾಡಿದ್ದಾನೆ. ಪಂಡಿತಗೆ 50ನೇ ನಂಬರಿನ ನೀಲಿ ಹಾಗೂ ಬಿಳಿ ಪಟ್ಟಿಯ ಜರ್ಸಿ ನೀಡಲಾಗಿದೆ. ಕ್ಲಬಿನ ಉಪಾಧ್ಯಕ್ಷ ಹಾಗೂ ಮಾಲಕ ಫಿಲಿಫ್ ಮೊರೇನೊ, ಈಸ್ಟಾಡಿಯೊ ಮುನ್ಸಿಪಲ್ ಡೆ ಬುಟ್ರಕ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಜರ್ಸಿ ಪ್ರದಾನ ಮಾಡಿ, ತಂಡಕ್ಕೆ ಸ್ವಾಗತಿಸಿದರು. ಪಂಡಿತ ಈಗ ಮುಖ್ಯ ಕ್ಲಬ್ಗೆ ಸಹಿ ಮಾಡಿದ್ದರೂ, ಅಂಡರ್ 19 ತಂಡಕ್ಕಾಗಿ ಆಡಲಿದ್ದಾರೆ.

Question 6

6.ಯುವ ಮತದಾರರನ್ನು ನೋಂದಾಯಿಸಲು ಭಾರತ ಚುನಾವಣಾ ಆಯೋಗವು ಯಾವ ಸಾಮಾಜಿಕ ತಾಣದೊಂದಿಗೆ ಕೈಜೋಡಿಸಿದೆ?

A
ಫೇಸ್ ಬುಕ್
B
ಟ್ವಿಟರ್
C
ವಾಟ್ಸ್ ಆಪ್
D
ಯೂಟ್ಯೂಬ್
Question 6 Explanation: 
ಫೇಸ್ ಬುಕ್:

ಯುವ ಮತದಾರರನ್ನು ಮತದಾನಕ್ಕೆ ನೋಂದಾಯಿಸುವ ಸಲುವಾಗಿ ಭಾರತ ಚುನಾವಣಾ ಆಯೋಗವು ಸಾಮಾಜಿಕ ತಾಣ ಫೇಸ್ ಬುಕ್ ನೊಂದಿಗೆ ಕೈಜೋಡಿಸಿದೆ. 2017 ರಲ್ಲಿ ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲ್ಲಿದ್ದು, ಈ ಐದು ರಾಜ್ಯಗಳ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಫೇಸ್ ಬುಕ್ ಮೊರೆ ಹೋಗಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಖಂಡ್ ನಲ್ಲಿ ವಿಧಾನ ಸಭಾ ಚುನಾವಣೆ 2017 ರಲ್ಲಿ ನಡೆಯಲಿದೆ. ಈ ವಿನೂತನ ಕಾರ್ಯಕ್ರಮದ ಮೂಲಕ ಯುವಕರಲ್ಲಿ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೆಪಿಸಲಾಗುವುದು.

Question 7

7.ವಿಶ್ವದಲ್ಲೇ ಅತಿ ಹೆಚ್ಚು ಉದ್ದದ ಕರಾವಳಿ ತೀರಾವನ್ನು ಹೊಂದಿರುವ ರಾಷ್ಟ್ರ ______?

A
ಆಸ್ಟ್ರೇಲಿಯಾ
B
ಕೆನಡಾ
C
ನ್ಯೂಜಿಲ್ಯಾಂಡ್
D
ಭಾರತ
Question 7 Explanation: 
ಕೆನಡಾ:

ಕೆನಡಾ ವಿಶ್ವದಲ್ಲೇ ಅತಿ ಹೆಚ್ಚು ಉದ್ದದ ಕರಾವಳಿ ತೀರಾವನ್ನು ಹೊಂದಿರುವ ರಾಷ್ಟ್ರ. ಕೆನಡಾ 1,25,560 ಮೈಲಿ ಉದ್ದದ ಕರಾವಳಿ ತೀರಾವನ್ನು ಹೊಂದಿದೆ. ಕೆನಡಾ ನಂತರ ಅತಿ ಹೆಚ್ಚು ಉದ್ದದ ಕರಾವಳಿ ತೀರಾವನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಇಂಡೋನೇಷಿಯ ಮತ್ತು ರಷ್ಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

Question 8

8.ಇತ್ತೀಚೆಗೆ ನಿಧನರಾದ “ಹಿಸ್ನಮ್ ಕನ್ಹೈಲಾಲ್ (Heisnam Kanhailal)” ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ರಂಗಭೂಮಿ
B
ಸಿನಿಮಾ
C
ಸಂಗೀತ
D
ಕ್ರೀಡೆ
Question 8 Explanation: 
ರಂಗಭೂಮಿ:

ಮಣಿಪುರಿ ರಂಗಭೂಮಿ ಕಲಾವಿದ ಹಿಸ್ನಮ್ ಕನ್ಹೈಲಾಲ್ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ನಾಟಕ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಟನಾಗಿ ಸುಮಾರು 40 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕನ್ಹೈಲಾಲ್ ಮಣಿಪುರದ ರಂಗಭೂಮಿ ಪ್ರಯೋಗಾಲಯ “ಕಲಾಕ್ಷೇತ್ರ”ದ ಸಂಸ್ಥಾಪಕ ನಿರ್ದೇಶಕರು. ಮಣಿಪುರಿ ಜಾನಪದ ಶೈಲಿಯಲ್ಲಿನ ಅವರ ರಾಜಕೀಯ ನಾಟಕ “ಪೆಬೆಟ್” ಅವರಿಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತ್ತು.

Question 9

9.ಇಸ್ರೋ ಇತ್ತೀಚೆಗೆ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಯಾವ ರಾಕೆಟ್ ಬಳಸಿ ಯಶಸ್ವಿಯಾಗಿ ಉಡಾಯಿಸಿತು?

A
GSLV-18
B
PSLV-34
C
Ariane-5 VA-231
D
Ariane-8 VA-231
Question 9 Explanation: 
Ariane-5 VA-231:

ಭಾರತದ ಅತ್ಯಾಧುನಿಕ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಫ್ರೆಂಚ್ ಗಯಾನಾದ ಕೊವುರುನಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಏರಿಯಾನ್-5 ವಿಎ-231 (Ariane-5 VA-231) ರಾಕೆಟ್ ಬಳಸಿ ಈ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ರವಾನಿಸಲಾಯಿತು. ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಜಿಸ್ಯಾಟ್-18 ಅನ್ನು ಸೇರಿಸಲಾಗಿದೆ. ಯುರೋಪ್ ಬಾಹ್ಯಕಾಶ ಸಂಸ್ಥೆಯಿಂದ ಇಸ್ರೋ ಯಶಸ್ವಿಯಾಗಿ ಉಡಾಯಿಸಿದ 20ನೇ ಉಪಗ್ರಹವಾಗಿದೆ.

Question 10

10. ಈ ಕೆಳಗಿನ ಯಾವ ಎರಡು ರಾಜ್ಯಗಳ ನಗರ ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ?

A
ಗುಜರಾತ್, ಕೇರಳ
B
ಕೇರಳ, ಆಂಧ್ರ ಪ್ರದೇಶ
C
ಗುಜರಾತ್, ಆಂಧ್ರ ಪ್ರದೇಶ
D
ಪಂಜಾಬ್, ಹರಿಯಾಣ
Question 10 Explanation: 
ಗುಜರಾತ್, ಆಂಧ್ರ ಪ್ರದೇಶ:

ಆಂಧ್ರಪ್ರದೇಶ ಮತ್ತು ಗುಜರಾತಿನ ನಗರ ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತವೆಂದು ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಘೋಷಿಸಿದೆ. ಸ್ವಚ್ಚ ಭಾರತ ಅಭಿಯಾನಕ್ಕೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳು ನಗರ ಪ್ರದೇಶಗಳನ್ನು ಬಯಲು ಬಹಿರ್ದೆಸೆಯಿಂದ ಮುಕ್ತ ಮಾಡಿದ ದೇಶದ ಮೊದಲ ರಾಜ್ಯಗಳೆನಿಸಿವೆ. ಎರಡು ರಾಜ್ಯಗಳ 180 ನಗರಗಳು ಮತ್ತು 110 ಪಟ್ಟಣಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳೆಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇವರಗೆ ದೇಶದ 4041 ನಗರ ಪ್ರದೇಶಗಳ ಪೈಕಿ 405 ಪ್ರದೇಶಗಳನ್ನು ಬಯಲು ಬಹಿರ್ದೆಸೆ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-6, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. nagaraja.m

    update madodu thumba late agtide sir pls adastu bega update madi thanks

  3. krishna

    Good information…

Leave a Comment

This site uses Akismet to reduce spam. Learn how your comment data is processed.