ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-4, 2016

Question 1

1.ಇತ್ತೀಚೆಗೆ ಮ್ಯಾನ್ಮಾರ್ ನ ಯಾಂಗೋನ್ ನಲ್ಲಿ ಬ್ಯಾಂಕ್ ಶಾಖೆ ತೆರೆದ ಭಾರತದ ಮೊದಲ ದೇಶಿಯ ಬ್ಯಾಂಕ್ ಯಾವುದು?

A
ಭಾರತೀಯ ಸ್ಟೇಟ್ ಬ್ಯಾಂಕ್
B
ಕೆನರ ಬ್ಯಾಂಕ್
C
ಸಿಂಡಿಕೇಟ್ ಬ್ಯಾಂಕ್
D
ವಿಜಯಾ ಬ್ಯಾಂಕ್
Question 1 Explanation: 
ಭಾರತೀಯ ಸ್ಟೇಟ್ ಬ್ಯಾಂಕ್:

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮ್ಯಾನ್ಮಾರ್ ರಾಜಧಾನಿ ಯಾಂಗೋನ್ ನಲ್ಲಿ ಬ್ಯಾಂಕ್ ಶಾಖೆಯನ್ನು ತೆರೆದಿದ್ದು, ಇಲ್ಲಿ ಬ್ಯಾಂಕ್ ಶಾಖೆ ತೆರೆದ ಮೊದಲ ದೇಶಿಯ ಬ್ಯಾಂಕ್ ಎನಿಸಿದೆ. ಜ್ಞಾನಶ್ಯಾಮ್ ಶ್ರೀವತ್ಸವ ಅವರನ್ನು ಯಾಂಗೋನ್ ಶಾಖೆಯ ಸಿಇಓ ಆಗಿ ನೇಮಿಸಲಾಗಿದೆ. ವಿದೇಶಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ತೆರೆಯುತ್ತಿರುವ 54ನೇ ಶಾಖೆ ಇದಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ 37 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.

Question 2

2.“ಕೆರ್ಸ್ಟಿ ಕಜುಲೈದ್” ಯಾವ ದೇಶದ ಮೊದಲ ಮಹಿಳಾ ರಾಷ್ಟ್ರಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ?

A
ಉಗಾಂಡ
B
ಬ್ರೆಜಿಲ್
C
ಇಸ್ಟೋನಿಯಾ
D
ಅಲ್ಜೀರಿಯಾ
Question 2 Explanation: 
ಇಸ್ಟೋನಿಯಾ:

ಇಸ್ಟೋನಿಯಾದ ಸಂಸತ್ತು ಕೆರ್ಸ್ಟಿ ಕಜುಲೈದ್ (Kersti Kaljulaid) ಅವರನ್ನು ಇಸ್ಟೋನಿಯಾದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಕೆರ್ಸ್ಟಿ ಕಜುಲೈದ್ ಅವರು ಇಸ್ಟೋನಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 20 ಸದಸ್ಯರ ಗೈರು ಹಾಜರಿ ಹೊರತಾಗಿಯೂ ಕೆರ್ಸ್ಟಿ ಅವರ ಪರವಾಗಿ 81-0 ಮತಗಳು ದಾಖಲಾದವು. ಕೆರ್ಸ್ಟಿ ಕಜುಲೈದ್ ಇಸ್ಟೋನಿಯಾದ ಐದನೇ ರಾಷ್ಟ್ರಧ್ಯಕ್ಷರಾಗಿದ್ದು, ಅಕ್ಟೋಬರ್ 10, 2016 ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ. ಕೆರ್ಸ್ಟಿ ಅವರು ಇಸ್ಟೋನಿಯಾದ ರಾಷ್ಟ್ರಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಕಿರಿಯ ವ್ಯಕ್ತಿ ಸಹ ಆಗಿದ್ದಾರೆ.

Question 3

3._______ ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ?

A
ಅಕ್ಟೋಬರ್ 3
B
ಅಕ್ಟೋಬರ್ 4
C
ಅಕ್ಟೋಬರ್ 5
D
ಅಕ್ಟೋಬರ್ 6
Question 3 Explanation: 
ಅಕ್ಟೋಬರ್ 5:

ವಿಶ್ವ ಶಿಕ್ಷಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ. Valuing Teachers, Improving their Status ಈ ವರ್ಷದ ವಿಶ್ವ ಶಿಕ್ಷಕರ ದಿನದ ಥೀಮ್.

Question 4

4.ಇತ್ತೀಚೆಗೆ “ಮೌಂಟ್ ಚೊ ಒಯು (Mount Cho Oyu)” ಪರ್ವತವನ್ನು ಹತ್ತುವ ಮೂಲಕ ಈ ಸಾಧನೆ ಮಾಡಿದೆ ವಿಶ್ವದ ಕಿರಿಯ ಎನಿಸಿದ ಭಾರತದ ಪರ್ವತರೋಹಿ ಯಾರು?

A
ಮಸ್ತನ್ ಬಾಬು ಮಲ್ಲಿ
B
ಅರ್ಜುನ್ ವಾಜಪೇಯಿ
C
ಬೈಚುಂಗ್ ವಾಗ
D
ಸುಬ್ರಮಣ್ಯಂ ರಾವ್
Question 4 Explanation: 
ಅರ್ಜುನ್ ವಾಜಪೇಯಿ:

ಭಾರತ ವೃತ್ತಿಪರ ಪರ್ವತರೋಹಿ ಅರ್ಜುನ್ ವಾಜಪೇಯಿ ಅವರು ವಿಶ್ವದ 6ನೇ ಅತಿದೊಡ್ಡ ಪರ್ವತ ಎನಿಸಿರುವ “ಮೌಂಟ್ ಚೊ ಒಯು” ಯಶಸ್ವಿಯಾಗಿ ಹತ್ತಿದ್ದರು. ಮೌಂಟ್ ಚೊ ಒಯು ಪರ್ವತ ಚೀನಾ ಮತ್ತು ಟಿಬೆಟ್ ನಡುವೆ, ಮೌಂಟ್ ಎವರೆಸ್ಟ್ ನಿಂದ ಪಶ್ಚಿಮಕ್ಕೆ 20 ಕಿ.ಮೀ ದೂರದಲ್ಲಿದೆ. ಅಜುರ್ನ್ ಅವರು ಈ ಪರ್ವತವನ್ನು ಹತ್ತುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಕಿರಿಯ ಪರ್ವತರೋಹಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಅತಿ ಎತ್ತರದ 14 ಪರ್ವತಗಳ ಪೈಕಿ ಈಗಾಗಲೇ ಐದು ಪರ್ವತಗಳನ್ನು ಅರ್ಜುನ್ ಅವರು ಯಶಸ್ವಿಯಾಗಿ ಹತ್ತಿದ್ದಾರೆ.

Question 5

5. ಈ ಕೆಳಗಿನ ದೇಶಗಳನ್ನು ಗಮನಿಸಿ:

I) ತಾಂಜಾನಿಯಾ

II) ಕೀನ್ಯಾ

III) ಉಗಾಂಡ

ಪ್ರಸಿದ್ದ ವಿಕ್ಟೋರಿಯಾ ಸರೋವರ ಅನ್ನು ಹಂಚಿಕೊಂಡಿರುವ ರಾಷ್ಟ್ರಗಳು ಯಾವುವು?

A
I & II
B
II & III
C
I & III
D
I, II & III
Question 5 Explanation: 
I, II & III:

ಲೇಕ್ ವಿಕ್ಟೋರಿಯಾ ಆಫ್ರಿಕಾದ ಪ್ರಸಿದ್ದ ಸರೋವರ. ವಿಕ್ಟೋರಿಯಾ ಸರೋವರವು ಕೀನ್ಯಾ, ತಾಂಜಾನಿಯಾ ಮತ್ತು ಉಗಾಂಡ ರಾಷ್ಟ್ರಗಳು ಹಂಚಿಕೊಂಡಿವೆ. ಸರೋವರದ ಒಟ್ಟು ಭಾಗದಲ್ಲಿ ತಂಜಾನಿಯಾ ಶೇ 49%, ಉಗಾಂಡ ಶೇ 45% ಹಾಗೂ ಕೀನ್ಯಾ ಶೇ 6% ಹೊಂದಿವೆ.

Question 6

6.“2016 ಕಾಮನ್ ವೆಲ್ತ್ ಹಣಕಾಸು ಸಚಿವರ ಸಭೆ” ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ನವದೆಹಲಿ
B
ವಾಷಿಂಗ್ ಟನ್
C
ನ್ಯೂಯಾರ್ಕ್
D
ಬ್ರಸೆಲ್
Question 6 Explanation: 
ವಾಷಿಂಗ್ ಟನ್:

2016 ಕಾಮನ್ ವೆಲ್ತ್ ಹಣಕಾಸು ಸಚಿವರ ಸಭೆಯನ್ನು ಅಮೆರಿಕಾದ ವಾಷಿಂಗ್ ಟನ್ ನಲ್ಲಿ ಆಯೋಜಿಸಲಾಗಿತ್ತು. ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಹವಾಮಾನ ಬದಲಾವಣೆ ಮತ್ತು ಹಣಕಾಸು ಹವಾಮಾನಕ್ಕೆ ಹೊಂದಿಕೊಳ್ಳುವಿಕೆ ಹಾಗೂ ಅಂತಾರಾಷ್ಟ್ರೀಯ ತೆರಿಗೆ ಪನಾಮ ಪೇಪರ್ ಕುರಿತಾದ ಎರಡು ಅಂಶಗಳ ಮೇಲೆ ಸಭೆಯಲ್ಲಿ ಚರ್ಚಿಸಲಾಯಿತು.

Question 7

7.ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಸಂಗ್ರಹ, ಸದ್ಯದ ಪರಿಸ್ಥಿತಿ ಅಧ್ಯಯನ ಮಾಡಲು ರಚಿಸಲಾಗಿರುವ ಉನ್ನತ ತಾಂತ್ರಿಕ ಸಮಿತಿಯ ಅಧ್ಯಕ್ಷರು ಯಾರು?

A
ಜಿ. ಎಸ್. ಝಾ
B
ರಾಕೇಶ್ ಸಿಂಗ್
C
ಮಸೂದ್ ಹುಸೇನ್
D
ಆರ್.ಕೆ. ಗುಪ್ತಾ
Question 7 Explanation: 
ಜಿ. ಎಸ್. ಝಾ:

ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಸಂಗ್ರಹ, ಸದ್ಯದ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ಜಲ ಆಯೋಗದ ಅಧ್ಯಕ್ಷರಾದ ಜಿ.ಎಸ್ ಝಾ ಅವರ ನೇತೃತ್ವದಲ್ಲಿ ಉನ್ನತ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಈ ಸಮಿತಿಯನ್ನು ರಚಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಸಿ.ಎಸ್‌. ಝಾ ನೇತೃತ್ವದ ಸಮಿತಿಯಲ್ಲಿ ಆಯೋಗದ ಸದಸ್ಯ ಎಸ್‌. ಮಸೂದ್‌ ಹುಸೇನ್‌, ಗೋಧಾವರಿ ಮತ್ತು ಕೃಷ್ಣ ಕೊಳ್ಳದ ಸಂಘಟನೆಯ ಮುಖ್ಯ ಎಂಜಿನಿಯರ್‌ ಆರ್‌.ಕೆ. ಗುಪ್ತ, ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಅಥವಾ ಅವರಿಂದ ನಿಯೋಜಿತರಾದ ಹಿರಿಯ ಅಧಿಕಾರಿ, ಕಾವೇರಿಕೊಳ್ಳದ ನಾಲ್ಕು ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ಗಳು ಸದಸ್ಯರಾಗಿರಲಿದ್ದಾರೆ.

Question 8

8.ಈ ಕೆಳಗಿನ ಯಾರು ಕೇಂದ್ರ ನೇರ ತೆರಿಗೆ ಮಂಡಳಿ (CBDT)ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಸುಶೀಲ್ ಚಂದ್ರ
B
ಕಿರಣ್ ರಾಜ್
C
ಅನಿಲ್ ಗೋಸ್ವಾಮಿ
D
ನವೀನ್ ಚಂದ್ರಪಾಲ್
Question 8 Explanation: 
ಸುಶೀಲ್ ಚಂದ್ರ:

ಹಿರಿಯ IRS ಅಧಿಕಾರಿ ಸುಶೀಲ್ ಚಂದ್ರ ಅವರು ಕೇಂದ್ರ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಣಿ ಸಿಂಗ್ ನಾಯರ್ ಅವರು ಅಕ್ಟೋಬರ್ 31, 2016 ರಂದು ನಿವೃತ್ತಿ ಹೊಂದಿದ್ದ ಕಾರಣ ಈ ಸ್ಥಾನ ತೆರವಾಗಿತ್ತು. ನೇಮಕಾತಿಗೆ ಮುಂಚೆ ಸುಶೀಲ್ ಚಂದ್ರ ಅವರು ಕೇಂದ್ರ ನೇರ ತೆರಿಗೆ ಮಂಡಳಿಯ ಸದಸ್ಯರಾಗಿದ್ದರು.

Question 9

9.ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ನ 50ಮೀ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತದ ಶೂಟರ್ ಯಾರು?

A
ರಂಜನ್ ಸೋದಿ
B
ಗಗನ್ ನಾರಂಗ್
C
ಜಿತು ರಾಯ್
D
ಅಶೋಕ್ ವಾದ್ರ
Question 9 Explanation: 
ಜಿತು ರಾಯ್:

ಭಾರತದ ಶೂಟರ್‌ ಜಿತು ರಾಯ್‌ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. 50 ಮೀಟರ್‌ ಪಿಸ್ತೂಲ್‌ ವಿಭಾಗದಲ್ಲಿ ಜಿತು 188.8 ಸ್ಕೋರ್‌ ಕಲೆಹಾಕಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. 190.6 ಸ್ಕೋರ್‌ ಸಂಗ್ರಹಿಸಿದ ಚೀನಾದ ವೀ ಪಾಂಗ್‌ ಚಿನ್ನಕ್ಕೆ ಕೊರಳೊಡ್ಡಿದರೆ, ಈ ವಿಭಾಗದ ಕಂಚು ಇಟಲಿಯ ಜಿಯುಸೆಪ್ಪೆ ಜಿಯಾರ್ಡನೊ (170.3) ಅವರ ಪಾಲಾಯಿತು.

Question 10

10.ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ “T6X” ಅನ್ನು ಹೊರತಂದಿರುವ ಸಂಸ್ಥೆ ಯಾವುದು?

A
ಬಜಾಜ್
B
ಟಿವಿಎಸ್
C
ಟೊರ್ಕ್ ಮೋಟಾರ್
D
ಮಹೀಂದ್ರ
Question 10 Explanation: 
ಟೊರ್ಕ್ ಮೋಟಾರ್:

ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ “T6X” ಅನ್ನು ಪುಣೆ ಮೂಲಕ ಟೊರ್ಕ್ ಮೋಟಾರ್ ಹೊರತಂದಿದೆ. ಟೊರ್ಕ್ ಮೋಟಾರ್ ಸ್ವದೇಶಿ ಸ್ಟಾರ್ಟ್ ಆಫ್ ಆಗಿದೆ. ಮೊದಲ ಹಂತದಲ್ಲಿ ಈ ಬೈಕ್ ಗಳು ಬೆಂಗಳೂರು, ಪುಣೆ ಮತ್ತು ದೆಹಲಿಯಲ್ಲಿ ಲಭ್ಯವಿರಲಿವೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-4.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-4, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.