ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-3, 2016

Question 1

1.ಕೇರಳ ಸರ್ಕಾರದ “ಹರಿಥ ಕೇರಳಂ (ಹಸಿರು ಕೇರಳ)” ಯೋಜನೆಯ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಸಚಿನ್ ತೆಂಡೂಲ್ಕರ್
B
ಕೆ ಜೆ ಜೇಸುದಾಸ್
C
ಅನಿಲ್ ಕುಂಬ್ಳೆ
D
ಎ ಆರ್ ರೆಹಮಾನ್
Question 1 Explanation: 
ಕೆ ಜೆ ಜೇಸುದಾಸ್:

ಖ್ಯಾತ ಹಿನ್ನಲೆ ಗಾಯಕ ಕೆ ಜೆ ಜೇಸುದಾಸ್ ಅವರನ್ನು ಕೇರಳ ಸರ್ಕಾರದ “ಹಸಿರು ಕೇರಳ” ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ಯೋಜನೆಯಡಿ ಕೇರಳದ ನಗರಗಳನ್ನು ಕಸ ಮುಕ್ತ ಮತ್ತು ಸ್ವಚ್ಚ ನಗರವನ್ನಾಗಿ ಮಾಡಲು ಪಣ ತೊಡಲಾಗಿದೆ.

Question 2

2.ಇತ್ತೀಚೆಗೆ ಯಾವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಥಲೀಕರಣ ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸುವ ಮೂಲಕ, ಶೀಥಲೀಕರಣ ಘಟಕ ಹೊಂದಿರುವ ದೇಶದ ಮೊದಲ ವಿಮಾನಿಲ್ದಾಣ ಎನಿಸಿದೆ?

A
ಇಂದಿರಾ ಗಾಂಧಿ ವಿಮಾನ ನಿಲ್ದಾಣ
B
ಕೆಂಪೇಗೌಡ ವಿಮಾನ ನಿಲ್ದಾಣ
C
ರಾಜೀವ್ ಗಾಂಧಿ ವಿಮಾನ ನಿಲ್ದಾಣ
D
ಜವಹರಲಾಲ್ ನೆಹರು ವಿಮಾನ ನಿಲ್ದಾಣ
Question 2 Explanation: 
ಕೆಂಪೇಗೌಡ ವಿಮಾನ ನಿಲ್ದಾಣ:

ಶೀಘ್ರವಾಗಿ ಕೊಳೆಯಬಲ್ಲ ಪದಾರ್ಥಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಥಲೀಕರಣ ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಎಐಸ್ಯಾಟ್ಸ್ ಕೂಲ್ ಪೋರ್ಟ್ (AISATS COOLPORT) ಹೆಸರನ ಘಟಕವನ್ನು ಏರ್ ಇಂಡಿಯಾ ಸ್ಯಾಟ್ಸ್ ಏರ್ ಪೋರ್ಟ್ ಸರ್ವೀಸ್ ಕಂಪನಿ ನಿರ್ವಹಿಸುತ್ತಿದ್ದು, ಇಂತಹ ಘಟಕ ಏರ್ ಪೋರ್ಟ್ ನಲ್ಲಿ ನಿರ್ಮಾಣಗೊಂಡಿರುವುದು ದೇಶದಲ್ಲೇ ಮೊದಲು. ವಾರ್ಷಿಕವಾಗಿ 40,000 ಟನ್ ಉತ್ಪನ್ನಗಳ ನಿರ್ವಹಣೆ ಈ ಘಟಕದಿಂದ ಸಾಧ್ಯವಾಗಲಿದೆ. ಹಣ್ಣು, ತರಕಾರಿ, ಹೂವು, ಫೌಲ್ಟ್ರಿ, ಸಾಗರ ಆಹಾರ ಉತ್ಪನ್ನಗಳು ಇದರಲ್ಲಿ ಶೇಖರಿಸಿಡಬಹುದು.

Question 3

3.“ಸಾಡೇಲ್ ಪೀಕ್ (Saddle Peak)” ಈ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಎತ್ತರದ ಶಿಖರ?

A
ಕೇರಳ
B
ಅಂಡಮಾನ್ ನಿಕೋಬರ್
C
ಲಕ್ಷದ್ವೀಪ
D
ಪಶ್ಚಿಮ ಬಂಗಾಳ
Question 3 Explanation: 
ಅಂಡಮಾನ್ ನಿಕೋಬರ್:

ಸಾಡೇಲ್ ಪೀಕ್ ಶಿಖರ ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶದಲ್ಲಿದೆ. 732 ಮೀ ಎತ್ತರವಿರುವ ಸಾಡೇಲ್ ಪೀಕ್ ಶಿಖರ ಬಂಗಾಳ ಕೊಲ್ಲಿಯ ಅತ್ಯಂತ ಎತ್ತರದ ದ್ವೀಪ ಪ್ರದೇಶ ಹಾಗೂ ಅಂಡಮಾನ್ ನಿಕೋಬರ್ ನ ಎತ್ತರದ ಪ್ರದೇಶ. ಈ ಶಿಖರವು ಸಾಡೇಲ್ ಪೀಕ್ ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದಿದೆ.

Question 4

4.ಪ್ರಪ್ರಥಮ “ಬ್ರಿಕ್ಸ್-ವ್ಯಾಪಾರ ಮೇಳ ಮತ್ತು ಪ್ರದರ್ಶನ (first-ever BRICS trade fair & exhibition)” ಯಾವ ನಗರದಲ್ಲಿ ನಡೆಯಲಿದೆ?

A
ಕೊಲ್ಕತ್ತ
B
ಭೂಪಾಲ್
C
ನವದೆಹಲಿ
D
ಪುಣೆ
Question 4 Explanation: 
ನವದೆಹಲಿ:

ಪ್ರಥಮ ಬ್ರಿಕ್ಸ್-ವ್ಯಾಪಾರ ಮೇಳ ಮತ್ತು ಪ್ರದರ್ಶನ ನವದೆಹಲಿಯ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 12-14ವರೆಗೆ ನಡೆಯಲಿದೆ. ಬ್ರಿಕ್ಸ್ ರಾಷ್ಟ್ರಗಳ ನಡುವೆ ವ್ಯಾಪಾರ ವ್ಯವಹಾರ ವೃದ್ದಿಸಲು ಇದು ವೇದಿಕೆ ಆಗಲಿದೆ. “ಬಿಲ್ಡಿಂಗ್ ಬ್ರಿಕ್ಸ್-ಇನೋವೇಶನ್ ಫಾರ್ ಕೊಲಬ್ರೇಷನ್ (Building BRICS – Innovation for Collaboration)” ಈ ಮೇಳದ ಥೀಮ್. ಏರೋಸ್ಪೇಸ್, ಕೃಷಿ ಸಂಸ್ಕರಣೆ, ಜವಳಿ, ರೈಲ್ವೆ, ಆರೋಗ್ಯ ಸೇವೆ, ಮೂಲಭೂತ ಸೌಕರ್ಯ, ಐಟಿ, ಪ್ರವಾಸೋದ್ಯಮ, ಆಭರಣ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಪ್ರದರ್ಶನವಿರಲಿದೆ.

Question 5

5.ಸಾಗರೋತ್ತರ ಭಾರತೀಯರಿಗೆ ಮೀಸಲಾದ “ಪ್ರವಾಸಿ ಭಾರತೀಯ ಕೇಂದ್ರ”ವನ್ನು ಎಲ್ಲಿ ಉದ್ಘಾಟಿಸಲಾಯಿತು?

A
ಮುಂಬೈ
B
ನವದೆಹಲಿ
C
ಹೈದ್ರಾಬಾದ್
D
ಬೆಂಗಳೂರು
Question 5 Explanation: 

ನೂತನವಾಗಿ ನಿರ್ಮಿಸಿರುವ “ಪ್ರವಾಸಿ ಭಾರತೀಯ ಕೇಂದ್ರ”ವನ್ನು ಪ್ರಧಾನಿ ಮೋದಿರವರು ನವದೆಹಲಿಯಲ್ಲಿ ಉದ್ಘಾಟಿಸಿದರು.

Question 6

6.“2016 ವಿಶ್ವ ಆವಾಸ ದಿನ (World Habitat Day)”ದ ಧ್ಯೇಯವಾಕ್ಯ _______?

A
ಹೌಸಿಂಗ್ ಫಾರ್ ಆಲ್
B
ಹೌಸಿಂಗ್ ಅಟ್ ದಿ ಸೆಂಟರ್
C
ನ್ಯೂ ಸ್ಪೇಸ್, ನ್ಯೂ ಹೋಪ್
D
ವರ್ಲ್ಡ್ ವಿತ್ ನೊ ಹೌಸ್ ಲೆಸ್
Question 6 Explanation: 
ಹೌಸಿಂಗ್ ಅಟ್ ದಿ ಸೆಂಟರ್:

ವಿಶ್ವ ಆವಾಸ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 3 ರಂದು ವಿಶ್ವ ಆವಾಸ ದಿನವನ್ನು ಆಚರಿಸಲಾಯಿತು. ನಗರ ಪ್ರದೇಶಗಳು, ನಗರ ಮತ್ತು ಪಟ್ಟಣಗಳಲ್ಲಿ ಕೈಗೆಟುವ ವಸತಿ ಅಗತ್ಯದ ಬಗ್ಗೆ ಅರಿವು ಮೂಡಿಸುವುದು ವಿಶ್ವ ಆವಾಸ ದಿನದ ಉದ್ದೇಶ. “ಹೌಸಿಂಗ್ ಅಟ್ ದಿ ಸೆಂಟರ್ (Housing at the Cetre)” ಇದು ಈ ವರ್ಷದ ವಿಶ್ವ ಆವಾಸ ದಿನದ ಥೀಮ್.

Question 7

7.“ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ (Indian Institute of Pulses Research)” ಎಲ್ಲಿದೆ?

A
ಹೈದ್ರಾಬಾದ್, ತೆಲಂಗಣ
B
ಕಾನ್ಪುರ, ಉತ್ತರ ಪ್ರದೇಶ
C
ಭೂಪಾಲ್, ಮಧ್ಯ ಪ್ರದೇಶ
D
ಗುಂಟೂರು, ಆಂಧ್ರ ಪ್ರದೇಶ
Question 7 Explanation: 
ಕಾನ್ಪುರ, ಉತ್ತರ ಪ್ರದೇಶ:

ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಉತ್ತರ ಪ್ರದೇಶದ ಕಾನ್ಪುರದಲ್ಲಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಈ ಸಂಸ್ಥೆಯನ್ನು 1983ರಲ್ಲಿ ಸ್ಥಾಪಿಸಿದ್ದು, ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಇಲ್ಲಿ ನಡೆಸಲಾಗುತ್ತಿದೆ.

Question 8

8.ರಫೆಲ್ ಜೆಟ್ ತಯಾರಿಕೆ ಸಂಬಂಧ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಭಾರತದ ಯಾವ ಸಂಸ್ಥೆಯೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ?

A
ರಿಲಯನ್ಸ್
B
ಟಾಟಾ
C
ಮಹೀಂದ್ರ
D
ಎಲ್ & ಟಿ
Question 8 Explanation: 
ರಿಲಯನ್ಸ್:

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಮತ್ತು ಫ್ರಾನ್ಸ್ ನ ಡಸಾಲ್ಟ್ ಏವೀಯೇಷನ್ ನಡುವೆ ರಫೆಲ್ ಯುದ್ದ ವಿಮಾನ ತಯಾರಿಕೆ ಸಂಬಂಧ ಒಪ್ಪಂದ ಏರ್ಪಟ್ಟಿದೆ. ಈ ಜಂಟಿ ಉದ್ದಿಮೆಯನ್ನು ಇನ್ನು ಮುಂದೆ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಎನ್ನಲಾಗುವುದು. ಫ್ರಾನ್ಸ್ ನಿಂದ ಭಾರತ ಖರೀದಿಸಲಿರುವ 36 ರಫೆಲ್ ಜೆಟ್ಗಳ ತಯಾರಿಕೆಗೆ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಅಗತ್ಯ ಸೇವೆಯನ್ನು ಒದಗಿಸಲಿದೆ. ಸುಮಾರು ರೂ 30,000 ಕೋಟಿ ಒಪ್ಪಂದ ಇದಾಗಿದ್ದು, ಭಾರತದ ರಕ್ಷಣಾ ತಯಾರಿಕ ಸಂಸ್ಥೆಯೊಂದು ಇಷ್ಟು ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿಹಾಕಿರುವುದು ಇದೇ ಮೊದಲು.

Question 9

9.ಪನಾಮ ಕಾಲುವೆಯು ಈ ಕೆಳಗಿನ ಯಾವ ಎರಡು ಸಾಗರಗಳನ್ನು ಸಂಪರ್ಕಿಸುತ್ತದೆ?

A
ಅಟ್ಲಾಂಟಿಕ್ ಮತ್ತು ಫೆಸಿಫಿಕ್
B
ಫೆಸಿಫಿಕ್ ಮತ್ತು ಅರ್ಕಟಿಕ್
C
ಅಟ್ಲಾಂಟಿಕ್ ಮತ್ತು ಮೆಡಿಟೇರಿಯನ್
D
ಮೆಡಿಟೇರಿಯನ್ ಮತ್ತು ಕೆಂಪು ಸಮುದ್ರ
Question 9 Explanation: 
ಅಟ್ಲಾಂಟಿಕ್ ಮತ್ತು ಫೆಸಿಫಿಕ್:

ಪನಾಮ ಕಾಲುವೆ ಮಾನವ ನಿರ್ಮಿತ ಕಾಲುವೆಯಾಗಿದ್ದು, ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಂಧಿಸುತ್ತದೆ. ಈ ಕಾಲುವೆಯು 77 ಕಿ.ಮೀ ಉದ್ದವಿದೆ.

Question 10

10.ಇತ್ತೀಚೆಗೆ ಬಿಡುಗಡೆಗೊಂಡ “Modi’s Midas Touch in Foreign Policy” ಪುಸ್ತಕದ ಲೇಖಕರು _______?

A
ಸುರೇಂದ್ರ ಕುಮಾರ್
B
ವಿಕಾಸ್ ಸ್ವರೂಪ್
C
ವಿಶಾಲ್ ಭಟ್
D
ಸುಷ್ಮಾ ಸ್ವರಾಜ್
Question 10 Explanation: 
ಸುರೇಂದ್ರ ಕುಮಾರ್:

ಮಾಜಿ ರಾಯಭಾರಿ ಸುರೇಂದ್ರ ಕುಮಾರ್ “Modi’s Midas Touch in Foreign Policy” ಪುಸ್ತಕದ ಲೇಖಕರು. ಕೇಂದ್ರ ನಗರಾಭಿವೃದ್ದಿ ಸಚಿವ ವೆಂಕಯ್ಯನಾಯ್ಡು ರವರು ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿರವರ ಎರಡುವರೆ ವರ್ಷ ಆಡಳಿತದಲ್ಲಿ ಆಗಿರುವ ಪ್ರಗತಿ ಮತ್ತು ಅಳವಡಿಸಿಕೊಂಡಿರಲಾಗಿರುವ ವಿದೇಶಾಂಗ ನೀತಿಗಳ ಬಗ್ಗೆ ಪುಸ್ತಕದಲ್ಲಿ ಹೇಳಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-3.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-3, 2016”

  1. CHANDRASHEKAR KA

    Good

Leave a Comment

This site uses Akismet to reduce spam. Learn how your comment data is processed.