ತೈಲ ಉತ್ಪಾದನೆ ತಗ್ಗಿಸಲು ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (OPEC) ನಿರ್ಧಾರ

ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಒಕ್ಕೂಟವು (ಒಪೆಕ್) ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬಂದಿವೆ. ಅಲ್ಜೀರಿಯಾದಲ್ಲಿ ನಡೆದ ಅಲ್ಜೀರಿಸ್ ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಒಪೆಕ್ ರಾಷ್ಟ್ರಗಳು ಪ್ರಸ್ತುತ ಪ್ರತಿದಿನ 33.24 ಮಿಲಿಯನ್ ಬ್ಯಾರೆಲ್ ತೈಲವನ್ನು ಪ್ರತಿದಿನ ಉತ್ಪಾದಿಸುತ್ತಿದ್ದು, ಈ ಪ್ರಮಾಣವನ್ನು 32.5 ರಿಂದ 33.0 ಮಿಲಿಯನ್ ಬ್ಯಾರೆಲ್ ಗೆ ತಗ್ಗಿಸಲು ತೀರ್ಮಾನಿಸಲಾಗಿದೆ. ಆದರೆ ಯಾವ ರಾಷ್ಟ್ರಗಳು ಎಷ್ಟು ತೈಲ ಉತ್ಪಾದನೆಯನ್ನು ತಗ್ಗಿಸಲಿವೆ ಎಂಬುದನ್ನು ನವೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಒಮ್ಮತಕ್ಕೆ ಬರಲಿವೆ.

ಭಾರತದ ಮೇಲಾಗುವ ಪರಿಣಾಮ:

  • ಒಪೆಕ್ ರಾಷ್ಟ್ರಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೆ ಸ್ಥಾನದಲ್ಲಿದೆ. ಭಾರತ ಶೇ 85% ರಷ್ಟ ಕಚ್ಚಾ ತೈಲ ಹಾಗೂ ಶೇ 95% ನೈಸರ್ಗಿಕ ಅನಿಲವನ್ನು ಒಪೆಕ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ.
  • ಇತ್ತೀಚಿನ ದಿನಗಳಲ್ಲಿ ಒಪೆಕ್ ರಾಷ್ಟ್ರಗಳು ಅಧಿಕ ಪ್ರಮಾಣದಲ್ಲಿ ತೈಲವನ್ನು ಉತ್ಪಾದಿಸುತ್ತಿದ್ದ ಕಾರಣ ಹಾಗೂ ಒಪೆಕ್ ರಾಷ್ಟ್ರಗಳ ನಡುವೆ ಸಹಕಾರದ ಕೊರತೆಯಿಂದಾಗಿ ಕಚ್ಚಾ ತೈಲದ ಬೆಲೆ ಕುಸಿದಿದ್ದ ಕಾರಣ ಭಾರತದ ಆರ್ಥಿಕತೆಗೆ ಆಗಾಧವಾಗಿ ಪ್ರಯೋಜನವಾಗಿತ್ತು.
  • ಆದರೆ ಒಪೆಕ್ ರಾಷ್ಟ್ರಗಳ ಈ ನಿರ್ಧಾರದಿಂಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಲಿದ್ದು ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತದ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ.

ಪೆಟ್ರೋಲಿಯಂರಫ್ತು ದೇಶಗಳ ಒಕ್ಕೂಟ (ಒಪೆಕ್):

  • ಒಪೆಕ್ 14 ತೈಲ ರಪ್ತು ಮಾಡುವ ರಾಷ್ಟ್ರಗಳ ಒಕ್ಕೂಟವಾಗಿದೆ. ತನ್ನ ಸದಸ್ಯ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ನೀತಿಯನ್ನು ಜಾರಿಗೊಳಿಸುವುದು ಒಕ್ಕೂಟದ ಪ್ರಮುಖ ಕಾರ್ಯ.
  • ಒಪೆಕ್ ಅನ್ನು 1960 ರಲ್ಲಿ ಇರಾನ್ ನ ಬಾಗ್ದಾದ್ ನಲ್ಲಿ ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ಆಸ್ಟ್ರೀಯಾದ ವಿಯೆನ್ನಾದಲ್ಲಿದೆ.
  • ಒಪೆಕ್ ಸದಸ್ಯ ರಾಷ್ಟ್ರಗಳು: ಅಲ್ಜೀರಿಯಾ, ಅಂಗೋಲಾ, ಲಿಬಿಯಾ, ನೈಜೀರಿಯಾ, ಗಾಬನ್, ಇಂಡೋನೇಷಿಯಾ, ಇರಾನ್, ಇರಾಕ್, ಸೌಧಿ ಅರೇಬಿಯಾ, ಕುವೈತ್, ಕತಾರ್, ಯುಎಇ, ಈಕ್ವೆಡರ್ ಮತ್ತು ವೆನೆಜುವೆಲಾ.
  • 2015 ಅಂತ್ಯಕ್ಕೆ ಒಪೆಕ್ ರಾಷ್ಟ್ರಗಳು ಜಾಗತಿಕ ತೈಲ ಉತ್ಪಾದನೆ ಪೈಕಿ ಶೇ 43% ರಷ್ಟು ಪಾಲು ಹೊಂದಿದ್ದು, ವಿಶ್ವದ ಶೇ 73% ತೈಲ ನಿಕ್ಷೇಪಗಳನ್ನು ಹೊಂದಿವೆ.

ಇಸ್ರೇಲ್ ಮಾಜಿ ಅಧ್ಯಕ್ಷ ಮತ್ತು ನೊಬೆಲ್ ಪುರಸ್ಕೃತ ಶಿಮಾನ್ ಪೆರೆಸ್ ನಿಧನ

ಇಸ್ರೇಲ್ ಮಾಜಿ ಅಧ್ಯಕ್ಷ ಶಿಮಾನ್ ಪೆರೆಸ್ ಅವರು ಇಸ್ರೇಲ್ನ ರಮತ್ ಗನ್ ನಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಪೆರೆಸ್ ಅವರು ಇಸ್ರೇಲ್ ನ ಹಿರಿಯ ಮುತ್ಸದ್ದಿ ಮತ್ತು ಇಸ್ರೇಲ್ ಸ್ಥಾಪಕರ ಪೈಕಿ ಉಳಿದಿರುವ ಕೆಲವರಲ್ಲಿ ಒಬ್ಬರಾಗಿದ್ದರು.

  • ಪೆರೆಸ್ ಅವರು ಆಗಸ್ಟ್ 16, 1923 ರಲ್ಲಿ ಪೊಲೆಂಡ್ ನ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು.
  • 1948 ರಲ್ಲಿ ಇಸ್ರೇಲ್ ಸ್ಥಾಪನೆಯಾದಗಿಂದಲೂ ಎಲ್ಲಾ ಅಭಿವೃದ್ದಿ ಕಾರ್ಯಗಳಲ್ಲಿ ಪೆರೆಸ್ ಪ್ರಮುಖ ಪಾತ್ರವಹಿಸಿದ್ದರು.
  • ಇಸ್ರೇಲ್ ನಲ್ಲಿ ಅಸಾಧಾರಣ ಮಿಲಿಟರಿ ನಿರ್ಮಾಣ ಹಾಗೂ ಅಣ್ವಸ್ತ್ರ ಅಭಿವೃದ್ದಿಯಲ್ಲಿ ಪೆರೆಸ್ ಅವರ ಶ್ರಮ ಪ್ರಮುಖವೆನಿಸಿತ್ತು.
  • ಪೆರೆಸ್ ಅವರು ಇಸ್ರೇಲ್ ಪ್ರಧಾನಿಯಾಗಿ ಎರಡು ಭಾರಿ ನೇಮಕಗೊಂಡಿದ್ದರು. ಅಲ್ಲದೇ ರಕ್ಷಣಾ ಸಚಿವರಾಗಿ, ಹಣಕಾಸು ಸಚಿವರಾಗಿ ಮತ್ತು ಸಾರಿಗೆ ಸಚಿವರಾಗಿ ಸಹ ಸೇವೆ ಸಲ್ಲಿಸಿದ್ದರು. ಪೆರೆಸ್ ಅವರು 2007ರಿಂದ 2014ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
  • 1994ರಲ್ಲಿ ಓಸ್ಲೋ ಒಪ್ಪಂದ ಹಾಗೂ ಸ್ವತಂತ್ರ್ಯ ಪ್ಯಾಲೆಸ್ತೀನ್ ಸಂಧಾನದಲ್ಲಿ ಮಹತ್ತರ ಪಾತ್ರವಹಿಸಿದ್ದರು.
  • ಇದಕ್ಕಾಗಿ 1994 ರಲ್ಲಿ ನೊಬೆಲ್ ಪ್ರಶಸ್ತಿಗೆ ಪೆರೆಸ್ ಭಾಜನರಾಗಿದ್ದರು. ಪೆರೆಸ್ ರೊಂದಿಗೆ ಪ್ರಧಾನಿ ಯಿಟ್ಜಾಕ್ ರಬಿನ್ ಹಾಗೂ ಪ್ಯಾಲೆಸ್ತೀನಿ ನಾಯಕ ಯಾಸರ್ ಅರಾಫತ್ ಕೂಡ ಜಂಟಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಸಿದ್ದ ಬಾಂಗ್ಲ ಲೇಖಕ ಸೈಯದ್ ಶಾಂಸುಲ್ ಹಕ್ (Syed Shamsul Haq) ವಿಧಿವಶ

ಬಾಂಗ್ಲದೇಶದ ಪ್ರಮುಖ ಲೇಖಕರುಗಳಲ್ಲಿ ಒಬ್ಬರಾಗಿದ್ದ ಸೈಯದ್ ಶಾಂಸುಲ್ ಹಕ್ ಬಾಂಗ್ಲದ ಡಾಕಾದಲ್ಲಿ ನಿಧನರಾದರು. ಹಕ್ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಾದಂಬರಿ, ಕಾವ್ಯ, ಪ್ರಬಂಧಗಳು ಮತ್ತು ನಾಟಕಗಳ ಮೇಲೆ ಸಮಾನ ಪಾಂಡಿತ್ಯ ಹೊಂದುವ ಮೂಲಕ ಹಕ್ ಹೆಸರುವಾಸಿಯಾಗಿದ್ದರು. ಅಲ್ಲದೇ ಧಾರ್ಮಿಕ ಮೂಲಭೂತವಾದ ವಿರುದ್ದ ಧ್ವನಿ ಎತ್ತುವ ಮೂಲಕವು ಗುರುತಿಸಿಕೊಂಡಿದ್ದರು.

ಸೈಯದ್ ಶಾಂಸುಲ್ ಹಕ್ ಬಗ್ಗೆ:

  • ಬ್ರಿಟಿಷ್ ಭಾರತದ ಬಂಗಾಳ ಪ್ರೆಸಿಡೆನ್ಸಿಯ ಕುರಿಗ್ರಾಮ್ ನಲ್ಲಿ ಡಿಸೆಂಬರ್ 27, 1935ರಲ್ಲಿ ಜನಿಸಿದರು.
  • ಬೊಯಿಶಖೆ ರೊಚಿತೊ ಪೊನ್ಕತಿಮಾಲ (Boishakhey Rochito Ponktimala), ಇಕೊಡ ಎಕ್ ರಜ್ಜೆ ( Ekoda Ek Rajjey), ಬಿರೊತಿಹಿನ್ ಉಸ್ತದ್ (Birotihin Utsab), ಪ್ರೊತಿದ್ವೊನಿಗಾನ್ (Protidhwonigon) ಇವರ ಪ್ರಮುಖ ಪುಸ್ತಕಗಳಾಗಿವೆ.
  • ಅಪಾರ ದೇಶಭಕ್ತಿ ಗೀತೆಗಳನ್ನು ಬರೆದಿರುವ ಹಕ್ ಅವರು 1971 ಬಾಂಗ್ಲ ವಿಮೋಚನಾ ಯುದ್ದಕ್ಕೆ ತಮ್ಮ ದೇಶಭಕ್ತಿ ಗೀತೆಗಳಿಂದ ಸ್ಪೂರ್ತಿ ತುಂಬಿದ್ದರು.

ಪ್ರಶಸ್ತಿಗಳು:

  • 1966 ರಲ್ಲಿ ಬಾಂಗ್ಲ ಅಕಾಡೆಮಿ ಸಾಹಿತ್ಯ ಪ್ರಶಸ್ತಿ, ಬಂಗಾಳಿ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದವರಿಗೆ ನೀಡುವ ಬಾಂಗ್ಲದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಸ್ವಾಧಿನಾಥ ಪದಕ (2000) ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ಭಯೋತ್ಪಾದಕರ ವಿರುದ್ದ ಸರ್ಜಿಕಲ್ ಕಾರ್ಯಾಚರಣೆ ನಡೆಸಿದ ಭಾರತ ಸೇನೆ

ಪಾಕಿಸ್ತಾನ ಆಕ್ರಮಿತಿ ಕಾಶ್ಮೀರದಲ್ಲಿ ಭಾರತದ ಮೇಲೆ ದಾಳಿ ನಡೆಸಲು ಸಮಯ ಕಾಯುತ್ತಿದ್ದ ಭಯೋತ್ಪಾದಕರ ವಿರುದ್ದ ಭಾರತ ಸೇನಾ ಪಡೆ ಸರ್ಜಿಕಲ್ ಕಾರ್ಯಾಚರಣೆಯನ್ನು ನಡೆಸಿ ಯಶಸ್ವಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರತದ ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 18 ಸೈನಿಕರನ್ನು ಕೊಂದಿದಕ್ಕೆ ಪ್ರತ್ಯುತ್ತರವಾಗಿ ಭಾರತ ಸೇನೆ ಸರ್ಜಿಕಲ್ ಕಾರ್ಯಾಚರಣೆ ನಡೆಸಿದೆ.

ಸರ್ಜಿಕಲ್ ಕಾರ್ಯಾಚರಣೆ ಅಥವಾ ಆಪರೇಷನ್ ಎಂದರೇನು?

ಸರ್ಜಿಕಲ್ ಆಪರೇಷನ್ ಇದು ತುಂಬಾ ನಾಜೂಕಿನಿಂದ ಮಾಡುವ ಆಪರೇಷನ್ ಆಗಿದ್ದು ತುಂಬಾ ವಿರಳ ಸಂದರ್ಭದಲ್ಲಿ ಮಾತ್ರ ಈ ರೀತಿಯ ದಾಳಿಯನ್ನು ಮಾಡಲಾಗುವುದು. ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಜನರನ್ನು ಒತ್ತೆಯಾಗಿ ಇಟ್ಟುಕೊಂಡಾಗ ಸಾಮಾನ್ಯ ಜನರನ್ನು ಬಿಡುಗಡೆ ಮಾಡಲು ಬಹಳ ಗುಪ್ತವಾಗಿ ಸೇನೆ ಸರ್ಜಿಕಲ್ ಆಪರೇಷನ್ ನಡೆಸುತ್ತದೆ. ಇಂತಹ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವಿರೋಧಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾಗಿರುವುದರಿಂದ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಹಾಗೂ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ. ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ನೈಜೀರಿಯಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಆಪರೇಷನ್‌ಗೆ ಉತ್ತಮ ಉದಾಹರಣೆ. ಸರ್ಜಿಕಲ್ ಅಥವಾ ಪ್ರಿಸಿಷನ್ ಕಾರ್ಯಾಚಾರಣೆಯು ಒಂದು ದೇಶದ ಮಿಲಿಟರಿ ಬಲ, ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಬುದ್ಧಿವಂತಿಕೆ ತೋರುವ ಟ್ಯಾಕ್ಟಿಕಲ್ ಯುದ್ಧತಂತ್ರವೂ ಹೌದು.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-1, 2016”

  1. please sir this current affairs daily notes need to help to download

Leave a Comment

This site uses Akismet to reduce spam. Learn how your comment data is processed.