ಸುಧಾರಿತ ಕುಟುಂಬ ಯೋಜನೆ ಸೇವೆಗಳಿಗೆ ಕೇಂದ್ರ ಸರ್ಕಾರದಿಂದ “ಮಿಷನ್ ಪರಿವಾರ್ ವಿಕಾಸ್”

ದೇಶದ ಏಳು ರಾಜ್ಯಗಳ 145 ಜಿಲ್ಲೆಗಳಲ್ಲಿ ಸುಧಾರಿತ ಕುಟುಂಬ ಯೋಜನೆ ಸೇವೆಗಳನ್ನು ಪರಿಚಯಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ಮಿಷನ್ ಪರಿವಾರ್ ವಿಕಾಸ್” ಅಭಿಯಾನವನ್ನು ಶೀಘ್ರದಲ್ಲಿ ಜಾರಿಗೆ ತರಲಿದೆ. ಮಾಹಿತಿ ಆಧಾರದ ಮೇಲೆ ಉತ್ತಮ ಗುಣಮಟ್ಟದ ಕುಟುಂಬ ಯೋಜನೆಗಳನ್ನು ಮತ್ತು ವಿಶ್ವಾಸರ್ಹ ಸೇವೆಗಳನ್ನು ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಮಿಷನ್ ಪರಿವಾರ್ ವಿಕಾಸ್” ಪ್ರಮುಖಾಂಶಗಳು:

  • ಮಿಷನ್ ಪರಿವಾರ್ ವಿಕಾಸ್ ಅಭಿಯಾನವನ್ನು ಏಳು ರಾಜ್ಯಗಳಲ್ಲಿ ಅಂದರೆ ಉತ್ತರ ಪ್ರದೇಶ, ಬಿಹಾರ್, ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಚ್ ಗರ್, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳ 145 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು.
  • ಈ ಏಳು ರಾಜ್ಯಗಳು ದೇಶದಲ್ಲೇ ಅತಿ ಹೆಚ್ಚು ಫಲವತತ್ತೆ ದರ (Fertility Rate) ಹೊಂದಿದ್ದು, ದೇಶದ ಶೇ 44% ಜನಸಂಖ್ಯೆ ಹೊಂದಿವೆ.
  • ಅಲ್ಲದೇ, ತಾಯಿ ಮತ್ತು ಮಕ್ಕಳ ಆರೋಗ್ಯ ಸೂಚಕಗಳ ಮೇಲೆ ಪ್ರಬಲ ಪರಿಣಾಮ ರಾಜ್ಯಗಳು ಇವಾಗಿವೆ. ದೇಶದ ಶೇ 25-30% ತಾಯಿ ಮರಣ ಪ್ರಕರಣ ಮತ್ತು ಶೇ 50% ಶಿಶು ಮರಣ ಪ್ರಕರಣಗಳು ಈ ಜಿಲ್ಲೆಗಳಿಂದ ವರದಿಯಾಗುತ್ತಿವೆ.
  • ಗರ್ಭ ನಿರೋಧಕ ವಿಧಾನಗಳ ಬಗ್ಗೆ ಸೂಕ್ತ ಮಾಹಿತಿ ನೀಡುವುದು ಹಾಗೂ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುವುದು ಮಿಷನ್ ಪರಿವಾರ್ ವಿಕಾಸ್ ನ ಮುಖ್ಯ ಉದ್ದೇಶವಾಗಿದೆ.

ವಿನಾಯ್ತಿ ಗರಿಷ್ಠ ಮಿತಿಯನ್ನು ರೂ 20 ಲಕ್ಷಕ್ಕೆ ನಿಗದಿಪಡಿಸಿದ ಸರಕು ಮತ್ತು ಸೇವಾ ತೆರಿಗೆ ಮಂಡಳಿ

ನವದೆಹಲಿಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಮೊದಲ ಸಭೆಯಲ್ಲಿ ವಾರ್ಷಿಕ ರೂ 20 ಲಕ್ಷದಷ್ಟು ವಹಿವಾಟು ನಡೆಸುವ ವರ್ತಕರನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಯಿಂದ ಹೊರಗೆ ಇಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿವೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರುಗಳು ಭಾಗವಹಿಸಿದ್ದರು.

ಸಭೆಯ ಪ್ರಮುಖ ನಿರ್ಣಯಗಳು:

  • ವರ್ತಕರ ವಹಿವಾಟಿನ ಗರಿಷ್ಠ ವಿನಾಯ್ತಿ ಮಿತಿಯನ್ನು ರೂ 20 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೆ ಇದು ಅನ್ವಯವಾಗಲಿದೆ.
  • ಈಶಾನ್ಯ ರಾಜ್ಯಗಳಿಗೆ ಈ ಮಿತಿ ರೂ 10 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನಿಯಂತ್ರಣ ಅಧಿಕಾರ:

  • ಸಣ್ಣ ವರ್ತಕರ ಮೇಲಿನ ಕೇಂದ್ರ ಮತ್ತು ರಾಜ್ಯಗಳ ನಿಯಂತ್ರಣ ವಿವಾದವನ್ನೂ ಬಗೆಹರಿಸಿಕೊಳ್ಳಲಾಗಿದೆ. ವಾರ್ಷಿಕ ರೂ 5 ಕೋಟಿಗಳಷ್ಟು ವಹಿವಾಟು ನಡೆಸುವ ಎಲ್ಲ ವರ್ತಕರ ಮೇಲೆ ರಾಜ್ಯಗಳೇ ನಿಯಂತ್ರಣ ಹೊಂದಿರಲಿವೆ. ಒಂದು ವೇಳೆ ವಹಿವಾಟಿನ ಮಿತಿ 1.5 ಕೋಟಿ ಮೀರಿದರೆ ಕೇಂದ್ರ ಮತ್ತು ರಾಜ್ಯ ಜಂಟಿಯಾಗಿ ನಿಯಂತ್ರಣ ಹೊಂದಿರಲಿವೆ.

ಆಧಾರ ವರ್ಷ:

  • ಜಿಎಸ್ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟ ಭರ್ತಿ ಮಾಡಿಕೊಡಲು ನೀಡುವ ಪರಿಹಾರಕ್ಕೆ 2015-16ನೆ ವರ್ಷವನ್ನು ಆಧಾರ ವರ್ಷ ಎಂದು ಪರಿಗಣಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ.

ಅಮೆರಿಕದ ಗಾಲ್ಫ್ ದಂತಕತೆ “ಅರ್ನಾಲ್ಡ್ ಪಾಮರ್” ವಿಧಿವಶ

ಅಮೆರಿಕಾದ ಗಾಲ್ಫ್ ದಂತಕತೆ ಎನಿಸಿದ್ದ “ಅರ್ನಾಲ್ಡ್ ಪಾಮರ್” ನಿಧನರಾದರು. 87 ವರ್ಷದ ಪಾಮರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸಾರ್ವಕಾಲಿಕ ಶ್ರೇಷ್ಠ ಗಾಲ್ಫರ್ ಎನಿಸಿದ್ದ ಪಾವರ್ ಏಳು ಪ್ರಮುಖ ಚಾಂಪಿಯನ್ಷಿಪ್ಗಳು ಹಾಗೂ 62 ಪಿಜಿಎ ಟೂರ್ಗಳಲ್ಲಿ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ.

  • ಅರ್ನಾಲ್ಡ್ ಪಾಮರ್ ಸೆಪ್ಟೆಂಬರ್ 10, 1929 ರಂದು ಲ್ಯಾಟ್ರೋಬ್, ಪೆನ್ ಸಿಲ್ವೇನಿಯದಲ್ಲಿ ಜನಿಸಿದರು.
  • ಪಾಮರ್ ಚಿಕ್ಕವಯಸ್ಸಿನಿಂದಲೇ ಗಾಲ್ಫ್ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆರಂಭದಲ್ಲಿ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಆಟದ ಪಾಠಗಳನ್ನು ಕಲಿತ ಅವರು 1954ರಲ್ಲಿ ಅಮೆರಿಕ ಅಮೆಚೂರ್ ಗಾಲ್ಫ್ನಲ್ಲಿ ಪ್ರಶಸ್ತಿ ಗೆದ್ದರು. ಅದೇ ವರ್ಷ ವೃತ್ತಿಪರ ಗಾಲ್ಫ್ಗೆ ಪದಾರ್ಪಣೆ ಮಾಡಿದ ಅವರು ಹಲವು ಚಾಂಪಿಯನ್ಷಿಪ್ಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
  • ‘ದಿ ಗಾಲ್ಫ್ ಕಿಂಗ್’ ಎಂದೇ ಖ್ಯಾತಿ ಹೊಂದಿದ್ದ ಅವರು 1958, 1960, 1962 ಮತ್ತು 1964ರಲ್ಲಿ ಮಾಸ್ಟರ್ಸ್ ಟೂರ್ನಿ, 1961 ಮತ್ತು 1962ರಲ್ಲಿ ಬ್ರಿಟಿಷ್ ಓಪನ್ ಹಾಗೂ 1960ರಲ್ಲಿ ಅಮೆರಿಕ ಓಪನ್ ಗಾಲ್ಫ್ ಚಾಂಪಿಯನ್ ಷಿಪ್ಗಳಲ್ಲಿ ಪ್ರಶಸ್ತಿ ಜಯಿಸಿದ್ದರು. 1950ರ ದಶಕದಲ್ಲಿ ಗಾಲ್ಫ್ ಕ್ರೀಡೆ ಮೊದಲ ಬಾರಿಗೆ ಟಿ.ವಿಯಲ್ಲಿ ಪ್ರಸಾರವಾಗಿತ್ತು. ಆ ಕಾಲದಲ್ಲಿ ಪಾಮರ್ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು.

ಪ್ರಶಸ್ತಿಗಳು:

  • 1974 ರಲ್ಲಿ ವಿಶ್ವ ಹಾಲ್ ಆಫ್ ಫೇಮ್ ಗೌರವ.
  • 1960 ಮತ್ತು 62 ರಲ್ಲಿ ಪಿಜಿಎ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ.
  • 1998 ರಲ್ಲಿ ಪಿಜಿಎ ಟೂರ್ ಜೀವಮಾನ ಸಾಧನೆ ಪ್ರಶಸ್ತಿ.
  • 2004 ರಲ್ಲಿ ಫ್ರೆಸಿಡೆನ್ಸಿಯಲ್ ಮೆಡಲ್ ಆಫ್ ಫ್ರಿಡಂ ಪದಕ

 ಸರಕು ಮತ್ತು ಸೇವಾ ಮಂಡಳಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಅರುಣ್ ಗೋಯಲ್ ನೇಮಕ

ಹಿರಿಯ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರನ್ನು ಸರಕು ಮತ್ತು ಸೇವಾ ಮಂಡಳಿಯ (GST) ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಗೋಯಲ್ ಅವರು ಈ ಮಂಡಳಿಯ ಮೊದಲ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ. ಗೋಯಲ್ ರವರು 1985 ನೇ ತಂಡದ ಕೇಂದ್ರಾಡಳಿತ ಪ್ರದೇಶ ಕ್ಯಾಡ್ರೆಯ ಐಎಎಸ್ ಅಧಿಕಾರಿಯಾಗಿದ್ದಾರೆ. ನೇಮಕಾತಿಗೆ ಮುಂಚೆ ಇವರು ಕೇಂದ್ರ ಸಂಪುಟ ಸಚಿವಾಲಯದ ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ನ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

  • ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಹಿನ್ನಲೆ:

ಸಂವಿಧಾನ 122ನೇ ತಿದ್ದುಪಡಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದೆ ಆದರೆ ಇದನ್ನು ರಾಷ್ಟ್ರಪತಿಗಳ ಅಂಕಿತ ಪಡೆದ ಮೇಲೆ 101ನೇ ತಿದ್ದುಪಡಿ ಕಾನೂನು ಆಗಿ ಅಧಿಸೂಚನೆ ಹೊರಡಿಸಲಾಗಿದೆ. ಇದರ್ಥ ಇನ್ನು 21 ಮಸೂದೆಗಳು ಕಾನೂನು ಆಗಿ ರೂಪುಗೊಳ್ಳಲು ಬಾಕಿ ಇವೆ.

ಮಂಡಳಿಯ ಸ್ವರೂಪ:

ಸಂವಿಧಾನದ ಪ್ರಕರಣ 279ಎ ರಂತೆ ಮಂಡಳಿಯು ಕೇಂದ್ರ ಮತ್ತು ರಾಜ್ಯಗಳ ಜಂಟಿ ವೇದಿಕೆಯಾಗಿದ್ದು, ಈ ಕೆಳಗಿನವರುಗಳನ್ನು ಒಳಗೊಂಡಿದೆ.

  • ಕೇಂದ್ರ ಹಣಕಾಸು ಸಚಿವರು (ಅಧ್ಯಕ್ಷರು)
  • ಕಂದಾಯ ಇಲಾಖೆ ಹೊಣೆಗಾರಿಕೆಯ ರಾಜ್ಯ ಸಚಿವ
  • ರಾಜ್ಯ ಹಣಕಾಸು ಸಚಿವರು

ಮಂಡಳಿಯ ಕರ್ತವ್ಯಗಳು:

  • ಜಿಎಸ್‌ಟಿ ವ್ಯಾಪ್ತಿಗೆ ತರಬೇಕಾದ ಅಥವಾ ವಿನಾಯಿತಿ ನೀಡಬೇಕಾದ ಸರಕು ಮತ್ತು ಸೇವೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯಗಳಿಗೆ ಶಿಫಾರಸು
  • ಜಿಎಸ್‌ಟಿ ಮಾದರಿ ಕಾನೂನು ರಚನೆ
  • ರಾಜ್ಯಗಳಿಗೆ ತೆರಿಗೆ ವರಮಾನ ಹಂಚಿಕೆ ತತ್ವ ರೂಪಿಸುವಿಕೆ
  • ಕನಿಷ್ಠ ಮಿತಿ ನಿಗದಿ
  • ಸಾಮಾನ್ಯ ದರ ಮತ್ತು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಕ್ಕೆ ವಿಶೇಷ ದರ ನಿಗದಿ.

7 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 26, 2016”

  1. its not enough for IAS and KAS candidates….we want more sir plssssssssssssssssss

  2. sunil

    plz give download option…

    1. karunadu

      Hi Sunil,

      We will be providing by next month 1st week for entire month of September 2016

  3. Nagaraj

    Good summary.. give download option

  4. Karunadu balagakke danyavad

  5. which is best book for PDO
    exams

  6. Shivanand Teggelli

    sir really hatsoff to you thank you for such a great job you are doing it ll really helpful thank you once again for your priceless job

Leave a Comment

This site uses Akismet to reduce spam. Learn how your comment data is processed.