ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 23, 2016

Question 1

1.ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಬಂಗ ಬಿಭೂಷಣ್ (Banga Bibhushan)” ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?

A
ಅಮಿತಾಬ್ ಬಚ್ಚನ್
B
ಲತಾ ಮಂಗೇಶ್ಕರ್
C
ಸೌರವ್ ಗಂಗೂಲಿ
D
ಶಾರುಖ್ ಖಾನ್
Question 1 Explanation: 
ಲತಾ ಮಂಗೇಶ್ಕರ್:

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಪಶ್ಚಿಮ ಬಂಗಾಳದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಬಂಗ ಬಿಭೂಷಣ್” ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಬಂಗಾಳಿ ಸಂಗೀತಕ್ಕೆ ಲತಾ ಅವರು ನೀಡಿರುವ ಅಪಾರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಮುಂದಿನ ತಿಂಗಳು ಸ್ವತಃ ಮಮತಾ ಬ್ಯಾನರ್ಜಿ ಅವರೇ ಲತಾ ಮಂಗೇಶ್ಕರ್ ಅವರ ಮನೆಗೆ ತೆರಳಿ ನೀಡಲಿದ್ದಾರೆ ಎಂದು ವರದಿಯಾಗಿದೆ.

Question 2

2. ಇತ್ತೀಚೆಗೆ ಬಿಡುಗಡೆಗೊಂಡ “ಸಿಟಿಜೆನ್ ಅಂಡ್ ಸೊಸೈಟಿ (Citizen and Society)” ಪುಸ್ತಕದ ಲೇಖಕರು_____?

A
ಮನಮೋಹನ್ ಸಿಂಗ್
B
ಜೈರಾಮ್ ರಮೇಶ್
C
ಹಮೀದ್ ಅನ್ಸಾರಿ
D
ಪ್ರಣಬ್ ಮುಖರ್ಜಿ
Question 2 Explanation: 
ಹಮೀದ್ ಅನ್ಸಾರಿ:

ಉಪರಾಷ್ಟ್ರಪತಿ ಮೊಹಮ್ದದ್ ಹಮೀದ್ ಅನ್ಸಾರಿ ಅವರು 'ಸಿಟಿಜೆನ್ ಅಂಡ್ ಸೊಸೈಟಿ' ಪುಸ್ತಕದ ಲೇಖಕರು. ಈ ಪುಸ್ತಕವನ್ನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ರವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. ಉಪರಾಷ್ಟರಪತಿ ಹಮೀದ್ ಅನ್ಸಾರಿ ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿ ನೀಡಿದ ಉಪನ್ಯಾಸಗಳ ಸಂಗ್ರಹಿಸಿ ಸಿಟಿಜೆನ್ ಅಂಡ್ ಸೊಸೈಟಿ ಪುಸ್ತಕವನ್ನು ಹೊರತಂದಿದ್ದಾರೆ.

Question 3

3. “2016 ಕ್ಲಿಂಟನ್ ಜಾಗತಿಕ ನಾಗರೀಕ ಪ್ರಶಸ್ತಿ (Clinton Global Citizen Award)” ಯಾರಿಗೆ ನೀಡಲಾಗಿದೆ?

A
ಆದಿ ಗೋದ್ರೆಜ್
B
ಸುಧಾ ಮೂರ್ತಿ
C
ಅಜೀಂ ಪ್ರೇಮ್ಜಿ
D
ರತನ್ ಟಾಟಾ
Question 3 Explanation: 
ಆದಿ ಗೋದ್ರೆಜ್:

ಗೋದ್ರೆಜ್ ಗ್ರೂಫ್ ನ ಮುಖ್ಯಸ್ಥ ಆದಿ ಗೋದ್ರೆಜ್ ಅವರಿಗೆ 2016 ಕ್ಲಿಂಟನ್ ಜಾಗತಿಕ ನಾಗರೀಕ ಪ್ರಶಸ್ತಿಯನ್ನು ನೀಡಲಾಗಿದೆ. ವ್ಯವಹಾರ ಮತ್ತು ಜನಪೋಕಾರಿ ಕ್ಷೇತ್ರದಲ್ಲಿ ಗೋದ್ರೆಜ್ ಅವರ ನಾಯಕತ್ವದ ಗುಣವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Question 4

4. “ಇಂದ್ರ-2016 (INDRA-2016)” ಮಿಲಿಟರಿ ಸಮರಾಭ್ಯಾಸ ಇತ್ತೀಚೆಗೆ ಭಾರತ ಮತ್ತು ಯಾವ ದೇಶದ ನಡುವೆ ಆರಂಭಗೊಂಡಿತು?

A
ಇಸ್ರೇಲ್
B
ಜಪಾನ್
C
ರಷ್ಯಾ
D
ಆಸ್ಟ್ರೇಲಿಯಾ
Question 4 Explanation: 
ರಷ್ಯಾ:

ಭಾರತ ಮತ್ತು ರಷ್ಯಾ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ “ಇಂದ್ರ-2016” ರಷ್ಯಾದ ವ್ಲಾಡಿವೋಸ್ಟಾಕ್ ನಲ್ಲಿ ಆರಂಭಗೊಂಡಿದೆ. ಈ ಜಂಟಿ ಸಮರಾಭ್ಯಾಸದಲ್ಲಿ ಉಭಯ ದೇಶಗಳು ಅರೆ ಪರ್ವತ ಮತ್ತು ಜಂಗಲ್ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ದ ಕಾರ್ಯಾಚರಣೆ ಅಭ್ಯಾಸ ನಡೆಸಲಿವೆ.

Question 5

5. “ಭಾರತೀಯ ಅಂಕಿ-ಅಂಶ ಸಂಸ್ಥೆಯ(Indian Statistical Institute (ISI)) ಅಧ್ಯಕ್ಷರಾಗಿ ಯಾರು ಚುನಾಯಿತಗೊಂಡಿದ್ದಾರೆ?

A
ವಿಜಯ್ ಕೇಳ್ಕರ್
B
ಕೌಶಿಕ್ ಬಸು
C
ವೆಂಕಟ್ ರಮಣ್
D
ಸಂತೋಷ್ ಮೌದ್ಗಿಲ್
Question 5 Explanation: 
ವಿಜಯ್ ಕೇಳ್ಕರ್:

ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ವಿಜಯ್ ಕೇಳ್ಕರ್ ಪ್ರತಿಷ್ಠಿತ ಭಾರತೀಯ ಅಂಕಿ-ಅಂಶ ಸಂಸ್ಥೆಯ(ಐಎಸ್ಐ) ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಕೇಳ್ಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಸಿ. ರಂಗರಾಜನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಭಾರತೀಯ ಅಂಕಿ-ಅಂಶ ಸಂಸ್ಥೆಯು ಅಂಕಿ-ಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತಿದೆ.

Question 6

6. ಭಾರತೀಯ ವಾಯುಪಡೆ ಇತ್ತೀಚೆಗೆ “MICA” ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. MICA ಕ್ಷಿಪಣಿ ______?

A
ಗಾಳಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ
B
ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ
C
ನೀರಿನಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ
D
ಮೇಲಿನ ಯಾವುದು ಅಲ್ಲ
Question 6 Explanation: 
ಗಾಳಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ:

ಭಾರತೀಯ ವಾಯುಪಡೆಯ ಟೈಗರ್ ಸ್ಕ್ವಾಡ್ರನ್ ಗಾಳಿಯಿಂದ ಗಾಳಿಗೆ ಚಿಮ್ಮುವ MICA ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. MICA ಕ್ಷಿಪಣಿಯನ್ನು ಭಾರತ ಯುರೋಪ್ ನ ಪ್ರಮುಖ ಕ್ಷಿಪಣಿ ತಯಾರಿಕೆ ಸಂಸ್ಥೆ MBDA ಯಿಂದ ಖರೀದಿಸಿದೆ. ಈ ಕ್ಷಿಪಣಿಗಳನ್ನು ಭಾರತ ಫ್ರಾನ್ಸ್ ನಿಂದ ಖರೀದಿಸಲಿರುವ ರಫೆಲ್ ಜೆಟ್ ಗಳಲ್ಲಿ ಅಳವಡಿಸಲಾಗುವುದು.

Question 7

7. ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ ನೊಂದಿಗೆ ವಿಲೀನಗೊಳಿಸಲು ಒಪ್ಪಿಗೆ ನೀಡಿದೆ. ಈ ಕೆಳಗಿನ ಯಾವ ಸಮಿತಿಯು ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲು ಶಿಫಾರಸ್ಸು ಮಾಡಿತ್ತು?

A
ಕಮಲೇಶ್ ಚಂದ್ರ ಸಮಿತಿ
B
ಬಿಬೇಕ್ ದೇಬ್ ರಾಯ್ ಸಮಿತಿ
C
ಅರವಿಂದ್ ಪನಗರಿಯ ಸಮಿತಿ
D
ಅರವಿಂದ್ ಸುಬ್ರಮಣಿಯನ್ ಸಮಿತಿ
Question 7 Explanation: 
ಬಿಬೇಕ್ ದೇಬ್ ರಾಯ್ ಸಮಿತಿ:

ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಿದೆ ಹಣಕಾಸು ಬಜೆಟ್ ನೊಂದಿಗೆ ವಿಲೀನಗೊಳಿಸುವ ಹಣಕಾಸು ಇಲಾಖೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಂತೆ ಮುಂದಿನ ಹಣಕಾಸು ಬಜೆಟ್ ನಲ್ಲಿ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಗುವುದು. ಆ ಮೂಲಕ 92 ವರ್ಷಗಳ ಚರಿತ್ರೆ ಹೊಂದಿರುವ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗುವುದು. ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ ರಾಯ್ ನೇತೃತ್ವದ ಸಮಿತಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ನಲ್ಲಿ ವಿಲೀನಗೊಳಿಸುವಂತೆ ಶಿಫಾರಸ್ಸು ಮಾಡಿತ್ತು.

Question 8

8. ಈ ಕೆಳಗಿನ ನದಿಗಳನ್ನು ಗಮನಿಸಿ:

I) ರಾವಿ

II) ಜೀಲಂ

III) ಚೀನಾಬ್

ಇಂಡಸ್ ಜಲ ಒಪ್ಪಂದದ ಪ್ರಕಾರ ಈ ಮೇಲಿನ ಯಾವ ನದಿಗಳ ನೀರನ್ನು ಪಾಕಿಸ್ತಾನ ಬಳಸಿಕೊಳ್ಳಬಹುದಾಗಿದೆ?

A
I & II
B
II & III
C
I & III
D
I, II & III
Question 8 Explanation: 
II & III:

ಭಾರತ ಮತ್ತು ಪಾಕಿಸ್ತಾನ 1960 ರಲ್ಲಿ ಇಂಡಸ್ ಜಲ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳ ನೀರನ್ನ ಭಾರತ ಬಳಸಿಕೊಳ್ಳಬಹುದಾಗಿದೆ. ಇಂಡಸ್, ಜೀಲಂ ಮತ್ತು ಚೀನಾಬ್ ನದಿಯ ನೀರನ್ನ ಪಾಕ್ ಬಳಕೆ

Question 9

9. “ಕರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ (Karbi People's Liberation Tiger)” ಬಂಡಕೋರ ಪಡೆ ಯಾವ ರಾಜ್ಯದಲ್ಲಿ ಸಕ್ರಿಯವಾಗಿದೆ?

A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಸಿಕ್ಕಿಂ
D
ಮಣಿಪುರ
Question 9 Explanation: 

ಕರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ ಬಂಡುಕೋರ ಪಡೆ ಅಸ್ಸಾಂನಲ್ಲಿ ಸಕ್ರಿಯವಾಗಿರುವ ಬಂಡುಕೋರ ಗುಂಪು. ಜನವರಿ 8, 2011 ರಲ್ಲಿ ಇದು ಸ್ಥಾಪಿತಗೊಂಡಿದೆ. ಅಸ್ಸಾಂನಿಂದ ಕರ್ಬಿ ಪ್ರಾಂತ್ಯವನ್ನು ಬೇರ್ಪಡಿಸಿ ಪ್ರತ್ಯೇಕ ಸ್ವಾಯತತ ರಾಜ್ಯವನ್ನು ಸ್ಥಾಪಿಸುವ ಉದ್ಧೇಶದೊಂದಿಗೆ ಇದು ಸಂಘರ್ಷಕ್ಕೆ ಇಳಿದಿದೆ.

Question 10

10. ಈ ಕೆಳಗಿನ ಯಾವುದು ಪಾಕಿಸ್ತಾನ ಮತ್ತು ರಷ್ಯಾ ನಡುವೆ ಇತ್ತೀಚೆಗೆ ಆರಂಭಗೊಂಡ ಜಂಟಿ ಸಮರಾಭ್ಯಾಸವಾಗಿದೆ?

A
ಫ್ರೆಂಡ್ ಶಿಪ್-2016
B
ಈಗಲ್ ಐ-2016
C
ಕೋಬ್ರಾ-2016
D
ಸ್ಟೆಪ್ ಇನ್-2016
Question 10 Explanation: 
ಫ್ರೆಂಡ್ ಶಿಪ್-2016:

ಪಾಕಿಸ್ತಾನ ಮತ್ತು ರಷ್ಯಾ ನಡುವೆ “ಫ್ರೆಂಡ್ ಶಿಪ್-2016” ಜಂಟಿ ಸಮರಾಭ್ಯಾಸ ಪ್ರಾರಂಭವಾಗಿದೆ. ಉತ್ತರ ಪಾಕಿಸ್ತಾನದ ಪ್ರದೇಶದಲ್ಲಿ ಈ ಸಮರಾಭ್ಯಾಸ ಸೆ.24 ರಿಂದ ಅಕ್ಟೊಬರ್ 7 ವರೆಗೆ ನಡೆಯಲಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಜ-ಜ್ಞಾನ-ಸೆಪ್ಟೆಂಬರ್-ಕ್ವಿಜ್-23.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 23, 2016”

Leave a Comment

This site uses Akismet to reduce spam. Learn how your comment data is processed.