ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 22, 2016

Question 1

1.ಭಾರತದ ಮೊದಲ ಕರಾವಳಿ ಕೈಗಾರಿಕಾ ಕಾರಿಡಾರ್ (Coastal Industrial Corridor) ಈ ಕೆಳಗಿನ ಯಾವ ಎರಡು ನಗರಗಳ ನಡುವೆ ಸ್ಥಾಪನೆಯಾಗಲಿದೆ?

A
ಮಂಗಳೂರು ಮತ್ತು ಮುಂಬೈ
B
ಪಣಜಿ ಮತ್ತು ಕಾರವಾರ
C
ವಿಶಾಖಪಟ್ಟಣ ಮತ್ತು ಚೆನ್ನೈ
D
ಕೊಚ್ಚಿ ಮತ್ತು ಮಂಗಳೂರು
Question 1 Explanation: 
ವಿಶಾಖಪಟ್ಟಣ ಮತ್ತು ಚೆನ್ನೈ:

ದೇಶದ ಮೊದಲ ಕರಾವಳಿ ಕೈಗಾರಿಕಾ ಕಾರಿಡಾರ್ ವಿಶಾಖಪಟ್ಟಣ ಮತ್ತು ಚೆನ್ನೈ ನಡುವೆ ಅಭಿವೃದ್ದಿಪಡಿಸಲಾಗುತ್ತಿದೆ. ಸುಮಾರು 2,500 ಕಿ.ಮೀ ಉದ್ದದ ಕಾರಿಡಾರ್ ಇದಾಗಿದ್ದು, ದೇಶದ ಪೂರ್ವ ಕರಾವಳಿ ಅಭಿವೃದ್ದಿಗೆ ಇದು ಮಹತ್ವದ ಪಾತ್ರವಹಿಸಲಿದೆ. ಇತ್ತೀಚೆಗೆ ಈ ಯೋಜನೆಯ 800 ಕಿ.ಮೀ ಕಾರಿಡಾರ್ ಅಭಿವೃದ್ದಿಗೆ ಏಷ್ಯಾ ಅಭಿವೃದ್ದಿ ಬ್ಯಾಂಕ್ ರೂ 4228.9 ಕೋಟಿ ನೆರವು ನೀಡಲು ಒಪ್ಪಿಗೆ ಸೂಚಿಸಿದೆ. ಈ ಯೋಜನೆಯ ಒಟ್ಟು ವೆಚ್ಚ ರೂ 5669.75 ಕೋಟಿ ಎಂದು ಅಂದಾಜಿಸಲಾಗಿದ್ದು, ಉಳಿದ ಮೊತ್ತವನ್ನು ಆಂಧ್ರಪ್ರದೇಶ ಸರ್ಕಾರ ಭರಿಸಲಿದೆ. ಈ ಯೋಜನೆ 2031ಕ್ಕೆ ಪೂರ್ಣಗೊಳ್ಳಲಿದೆ. ಪೂರ್ಣಗೊಂಡ ನಂತರ ಈ ಕಾರಿಡಾರ್ ಅನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ತಮಿಳುನಾಡಿನ ಟ್ಯೂಟಿಕುರಿನ್ ವರೆಗೂ ವಿಸ್ತರಿಸಲಾಗುವುದು.

Question 2

2. “ಮಲಕಸ್ (Malakas) ಚಂಡಮಾರುತ” ದಿಂದ ಇತ್ತೀಚೆಗೆ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ದೇಶ______?

A
ಚೀನಾ
B
ಜಪಾನ್
C
ಫಿಲಿಫೈನ್ಸ್
D
ಇಂಡೋನೇಷಿಯಾ
Question 2 Explanation: 
ಜಪಾನ್ :

ಪ್ರಬಲ ಚಂಡಮಾರುತ “ಮಲಕಸ್” ಜಪಾನ್ನ ದಕ್ಷಿಣ ಭಾಗಕ್ಕೆ ಅಪ್ಪಳಿಸಿದ್ದು ಅಪಾರ ಹಾನಿ ಉಂಟುಮಾಡಿದೆ. ಮಲಕಸ್ ಚಂಡಮಾರುತ ಹಿನ್ನಲೆಯಲ್ಲಿ ಸುಮಾರು 5,00,000 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

Question 3

3. ವಿಶ್ವ ಬ್ಯಾಂಕ್ ನ ಭಾರತ ದೇಶದ ನಿರ್ದೇಶಕ (World Bank’s new Country Director for India)ರಾಗಿ ಯಾರು ನೇಮಕಗೊಂಡಿದ್ದಾರೆ?

A
ಒನ್ನೊ ರುಹಲ್
B
ಜುನೈದ್ ಅಹಮ್ಮದ್
C
ಅನ್ನೆಟೆ ಡಿಕ್ಸನ್
D
ಡೇವಿಡ್ ಜೇಮ್ಸ್
Question 3 Explanation: 

ಬಾಂಗ್ಲದೇಶ ಮೂಲದ ಜುನೈದ್ ಅಹಮ್ಮದ್ ಅವರನ್ನು ವಿಶ್ವಬ್ಯಾಂಕ್ ನ ಭಾರತ ದೇಶದ ನಿರ್ದೇಶಕರಾಗಿ ನೇಮಕಮಾಡಲಾಗಿದೆ. ಜುನೈದ್ ಅವರು ಒನ್ನೊ ರುಹಲ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಇದಕ್ಕೂ ಮುಂಚೆ ಇವರು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ರವರ ಸಿಬ್ಬಂದಿಗೆ ಮುಖ್ಯಸ್ಥರಾಗಿದ್ದರು.

Question 4

4. 2015-16ನೇ ಹಣಕಾಸು ವರ್ಷದಲ್ಲಿ ಯಾವ ರಾಜ್ಯ ದೇಶದಲ್ಲೇ ಅತ್ಯಧಿಕ ಕೈಗಾರಿಕಾ ಬಂಡವಾಳ ಆಕರ್ಷಿಸಿದ ರಾಜ್ಯವೆನಿಸಿದೆ?

A
ತೆಲಂಗಣ
B
ಮಹಾರಾಷ್ಟ್ರ
C
ಆಂಧ್ರಪ್ರದೇಶ
D
ಕರ್ನಾಟಕ
Question 4 Explanation: 
ಆಂಧ್ರಪ್ರದೇಶ:

ಆಂಧ್ರಪ್ರದೇಶ 2015-16ನೇ ಹಣಕಾಸು ವರ್ಷದಲ್ಲಿ ದೇಶದಲ್ಲೇ ಅತ್ಯಧಿಕ ಕೈಗಾರಿಕಾ ಬಂಡವಾಳ ಆಕರ್ಷಿಸಿದ ರಾಜ್ಯವೆಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ ವರ್ಷ ಅಗ್ರಸ್ಥಾನದಲ್ಲಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕೆ ಆಂಧ್ರಪ್ರದೇಶ ಈ ಸಾಧನೆ ಮಾಡಿದೆ. ಕಳೆದ ವರ್ಷದ ದೇಶದಲ್ಲಿ ರೂ 1,38,700 ಕೋಟಿ ಬಂಡವಾಳ ಆಕರ್ಷಿಸಲಾಗಿದೆ, ಇದರಲ್ಲಿ ಆಂಧ್ರಪ್ರದೇಶ ರೂ 21914 ಕೋಟಿ ಆಕರ್ಷಿಸುವ ಮೂಲಕ ಅಗ್ರಸ್ಥಾನವನ್ನು ಗಳಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕರ್ನಾಟಕ ಐದನೇ ಸ್ಥಾನದಲ್ಲಿದೆ ಗುರುತಿಸಿಕೊಂಡಿದೆ.

Question 5

5. “ರೇಖಾ: ದಿ ಅನ್ಟೊಲ್ಡ್ ಸ್ಟೋರಿ (Rekha: The Untold Story)” ಪುಸ್ತಕದ ಲೇಖಕರು _____?

A
ಅರ್ಪಿತ್ ಸಿಂಗ್
B
ಯಾಸಿರ್ ಉಸ್ಮಾನ್
C
ದೇವೆಂದ್ರ ಭಾಟಿಯಾ
D
ಮೈಥಿಲಿ ಗುಪ್ತಾ
Question 5 Explanation: 
ಯಾಸಿರ್ ಉಸ್ಮಾನ್:

ಯಾಸಿರ್ ಉಸ್ಮಾನ್ ಅವರು “ರೇಖಾ: ದಿ ಅನ್ಟೊಲ್ಡ್ ಸ್ಟೋರಿ” ಪುಸ್ತಕದ ಲೇಖಕರು. ಇದು ಖ್ಯಾತ ಬಾಲಿವುಡ್ ನಟಿ ರೇಖಾ ಅವರ ಜೀವನ ಚರಿತ್ರೆ. ರೇಖಾ ಅವರ ಸಿನಿಮಾ ಹೊರತಾದ ಜೀವನದ ಬಗ್ಗೆ ಪುಸ್ತಕದಲ್ಲಿ ಬಣ್ಣಿಸಲಾಗಿದೆ.

Question 6

6. ಮೊಟ್ಟಮೊದಲ ಭಾರತೀಯ ಸಂಗೀತ ಮತ್ತು ನೃತ್ಯ ಉತ್ಸವ “ಸಂಗಮ: ಭಾರತದ ಉತ್ಸವ (Confluence: Festival of India)” ಯಾವ ದೇಶದಲ್ಲಿ ಆರಂಭಗೊಂಡಿತು?

A
ಆಸ್ಟ್ರೇಲಿಯಾ
B
ಟರ್ಕಿ
C
ಇಸ್ರೇಲ್
D
ಫ್ರಾನ್ಸ್
Question 6 Explanation: 
ಆಸ್ಟ್ರೇಲಿಯಾ:

ಚೊಚ್ಚಲ ಭಾರತೀಯ ಸಂಗೀತ ಮತ್ತು ನೃತ್ಯ ಉತ್ಸವ “ಸಂಗಮ: ಭಾರತದ ಉತ್ಸವ” ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಆರಂಭಗೊಂಡಿತು. ಕೇಂದ್ರ ಪ್ರವಾಸ ಮತ್ತು ಸಂಸ್ಕೃತಿ ಖಾತೆ ಸಚಿವ ಮಹೇಶ್ ಶರ್ಮಾ ಅವರು ಈ ಹಬ್ಬವನ್ನು ಉದ್ಘಾಟಿಸಿದರು. 10 ವಾರಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯ ಸಂಸ್ಕೃತಿಯನ್ನು ಪ್ರದರ್ಶಿಸಲಾಗುವುದು. ಸಿಡ್ನಿ ಹೊರತುಪಡಿಸಿ ಆಸ್ಟ್ರೇಲಿಯಾದ ಏಳು ನಗರಗಳಲ್ಲಿ ಈ ಉತ್ಸವ ನಡೆಯಲಿದೆ.

Question 7

7. ಇತ್ತೀಚೆಗೆ ಈ ಕೆಳಗಿನ ಯಾವ ಷೇರು ವಿನಿಮಯ ಸಂಸ್ಥೆ ಷೇರು ಮಾರುಕಟ್ಟೆ ಬಗ್ಗೆ ನೇರ ಮಾಹಿತಿ ಒದಗಿಸುವ ಸಲುವಾಗಿ ಟ್ಟಿಟರ್ ಜೊತೆ ಕೈಜೋಡಿಸಿದೆ?

A
ಬಾಂಬೆ ಸ್ಟಾಕ್ ಎಕ್ಸಚೇಂಜ್
B
ನ್ಯಾಷನಲ್ ಸ್ಟಾಕ್ ಎಕ್ಸಚೇಂಜ್
C
ಕೊಲ್ಕತ್ತ ಸ್ಟಾಕ್ ಎಕ್ಸಚೇಂಜ್
D
ಮಲ್ಟಿ ಕಮಡಿಟಿ ಎಕ್ಸಚೇಂಜ್ ಆಫ್ ಇಂಡಿಯಾ
Question 7 Explanation: 
ಬಾಂಬೆ ಸ್ಟಾಕ್ ಎಕ್ಸಚೇಂಜ್:

ಬಂಡವಾಳ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯ ನೇರ ಮಾಹಿತಿ ಒದಗಿಸುವ ಸಲುವಾಗಿ ಬಾಂಬೆ ಸ್ಟಾಕ್ ಎಕ್ಸಚೇಂಜ್ (BSE) ಸಾಮಾಜಿಕ ತಾಣ ಟ್ವಿಟರ್ ನೊಂದಿಗೆ ಕೈಜೋಡಿಸಿದೆ. ಅದರಂತೆ ಟ್ವಿಟರ್ ಸೆನ್ಸೆಕ್ಸ್ ಮಟ್ಟ, ಷೇರು ದರ, ಷೇರು ಮಾರುಕಟ್ಟೆಯ ಆರಂಭ ಮತ್ತು ಮುಕ್ತಾಯ ಅಂಕಿಅಂಶಗಳ ನೇರ ಮಾಹಿತಿಯನ್ನು ಮಿಲಿಯನ್ ಬಂಡವಾಳ ಹೂಡಿಕೆದಾರರಿಗೆ ಒದಗಿಸಲಿದೆ. ಷೇರು ವಿನಿಮಯ ಸಂಸ್ಥೆ ಮತ್ತು ಸಾಮಾಜಿಕ ತಾಣ ಮಧ್ಯೆ ಇಂತಹ ಒಪ್ಪಂದ ಏರ್ಪಟ್ಟಿರುವದು ಏಷ್ಯಾದಲ್ಲೇ ಮೊಟ್ಟ ಮೊದಲನೇಯದಾಗಿದೆ.

Question 8

8. ಕೊಲ್ಕತ್ತಾ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರಾಗಿ ಈ ಕೆಳಗಿನ ಯಾರು ಪ್ರಮಾಣ ವಚನ ಸ್ವೀಕರಿಸಿದರು?

A
ಗಿರೀಶ್ ಚಂದ್ರ ಗುಪ್ತಾ
B
ಮೋಹನ್ ಶಾಂತನಗೌಡರ್
C
ಕಿರಣ್ ಚಂದ್ರ
D
ನಾಗಮೂರ್ತಿ ಶೇಖರ್
Question 8 Explanation: 
ಗಿರೀಶ್ ಚಂದ್ರ ಗುಪ್ತಾ:

ಗಿರೀಶ್ ಚಂದ್ರ ಗುಪ್ತಾ ಕೊಲ್ಕತ್ತಾ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಡಿಸೆಂಬರ್ 2016 ರಲ್ಲಿ ಇವರು ನಿವೃತ್ತಿ ಹೊಂದಲಿದ್ದು, ಅಲ್ಪ ಅವಧಿಯ ಕಾಲ ಹುದ್ದೆಯಲ್ಲಿ ಇರಲಿದ್ದಾರೆ.

Question 9

9. ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ನವತೇಜ್ ಸರನಾ
B
ಗೌತಮ್ ವರ್ಮಾ
C
ಕೌಶಿಕ್ ಮುಖರ್ಜಿ
D
ಸುಜಾತ ಗೊಯೆಲ್
Question 9 Explanation: 
ನವತೇಜ್ ಸರನಾ:

ಭಾರತ ವಿದೇಶಾಂಗ ಸೇವೆಯ 1980ನೇ ತಂಡದ ಅಧಿಕಾರಿ ನವತೇಜ್ ಸರನಾ ಅವರು ಅಮೆರಿಕಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರು ಇಂಗ್ಲೆಂಡ್ ನಲ್ಲಿ ಭಾರತದ ಹೈಕಮೀಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Question 10

10. ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಮೊದಲ ಸಭೆಯನ್ನು ಈ ಕೆಳಗಿನ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ಮುಂಬೈ
B
ನವದೆಹಲಿ
C
ಪುಣೆ
D
ಹೈದ್ರಾಬಾದ್
Question 10 Explanation: 
ನವದೆಹಲಿ:

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಮೊಟ್ಟ ಮೊದಲ ಸಭೆ ನವದೆಹಲಿಯಲ್ಲಿ ನಡೆಯಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎರಡು ದಿನಗಳ ಸಭೆಯಲ್ಲಿ ಜಿಎಸ್ಟಿ ಮುಂದಿನ ಹಣಕಾಸು ವರ್ಷದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರುವುದಕ್ಕೆ ಪೂರಕವಾಗಿ ವೇಳಾಪಟ್ಟಿಗೆ ಅನುಗುಣವಾಗಿ ತೆರಿಗೆ ದರ ನಿಗದಿಪಡಿಸಲು, ಶಾಸನಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ್ಮತಿಸಿವೆ. ಆದರೆ, ಹೊಸ ತೆರಿಗೆಯಿಂದ ವಿನಾಯ್ತಿ ನೀಡುವ ವಹಿವಾಟಿನ ಮಿತಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವಲ್ಲಿ ಜಿಎಸ್‌ಟಿ ಮಂಡಳಿ ಸಭೆ ವಿಫಲಗೊಂಡಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-22.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 22, 2016”

  1. karibasappa g

    super website thank you sir

Leave a Comment

This site uses Akismet to reduce spam. Learn how your comment data is processed.