ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಅಲಕಾ ಸಿರೋಹಿ ನೇಮಕ

ನಿವೃತ್ತ ಐಎಎಸ್ ಅಧಿಕಾರಿ ಅಲಕಾ ಸಿರೋಹಿ ಅವರನ್ನು ಕೇಂದ್ರ ಲೋಕಸೇವಾ (ಯುಪಿಎಸ್ಸಿ) ಆಯೋಗದ ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇಮಕಮಾಡಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದು ದೀಪಕ್ ಗುಪ್ತಾ ರವರು ರಾಜೀನಾಮೆ ನೀಡಿದ ಕಾರಣ ಸೆಪ್ಟೆಂಬರ್ 20 ರಂದು ಈ ಹುದ್ದೆ ತೆರವಾಗಲಿರುವ ಕಾರಣ ಅಲಕಾ ಅವರನ್ನು ನೇಮಕಮಾಡಲಾಗಿದೆ. ಅಲಕಾ ಅವರ ಅಧ್ಯಕ್ಷ ಅವಧಿ 2017 ಜನವರಿ 3 ರವರೆಗೂ ಇದೆ.

ಅಲಕಾ ಸಿರೋಹಿ ಬಗ್ಗೆ:

  • ಸಿರೋಹಿ ರವರು ಮಧ್ಯಪ್ರದೇಶದ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ.
  • ಪ್ರಸ್ತುತ ಇವರು ಯುಪಿಎಸ್ಸಿ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಸದಸ್ಯರಾಗಿ ನೇಮಕವಾಗುವುದಕ್ಕಿಂತ ಮೊದಲು ಅಲಕಾ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಯಾಗಿದ್ದರು.

ಕೇಂದ್ರ ಲೋಕಸೇವಾ ಆಯೋಗ:

  • ಕೇಂದ್ರ ಲೋಕಸೇವಾ ಆಯೋಗ ಒಂದು ಸಂವಿಧಾನಕವಾಗಿ ರಚಿಸಲಾದ ಸಂಸ್ಥೆಯಾಗಿದ್ದು, ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳಾದ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಮತ್ತಿತರ ಪರೀಕ್ಷೆಗಳನ್ನು ನಡೆಸುವ ಹೊಣೆ ಹೊತ್ತಿದೆ.
  • ಸಂವಿಧಾನದ 315ನೇ ಅನುಚ್ಛೇದದಡಿ ಆಯೋಗವನ್ನು ಸ್ಥಾಪಿಸಲಾಗಿದ್ದು, ಒಬ್ಬ ಅಧ್ಯಕ್ಷ ಮತ್ತು ಹತ್ತು ಜನ ಸದಸ್ಯರನ್ನ ಒಳಗೊಂಡಿದೆ.
  • ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡುವ ಮತ್ತು ತೆಗೆದುಹಾಕುವ ಅಧಿಕಾರ ರಾಷ್ಟ್ರಪತಿಯವರದಾಗಿದೆ.
  • ಆಯೋಗದ ಅಧ್ಯಕ್ಷ ಮತ್ತು ಸದಸ್ಯರುಗಳ ಅಧಿಕಾರ ಅವಧಿ ಆರು ವರ್ಷ ಅಥವಾ 65 ವರ್ಷ ವಯಸ್ಸು ತುಂಬುವವರೆಗು, ಇದರಲ್ಲಿ ಯಾವುದು ಬೇಗವೂ ಅದು ಅನ್ವಯಿಸಲಿದೆ.

2016 ಸಿಂಗಪುರ ಗ್ರಾಂಡ್ ಪ್ರಿಕ್ಸ್ ಫಾರ್ಮೂಲಾ-1 ರೇಸ್ ನಿಕೊ ರೋಸ್ಬರ್ಗ್ ಚಾಂಪಿಯನ್

2016ರ ಸಿಂಗಪುರ ಗ್ರಾಂಡ್ ಪ್ರಿಕ್ಸ್ ಫಾರ್ಮೂಲಾ-1 ರೇಸ್ ನಲ್ಲಿ ಮರ್ಸಿಡೀಸ್ ನ ಜರ್ಮನಿಯ ಚಾಲಕ ನಿಕೊ ರೋಸ್ಬರ್ಗ್ ಅವರು ವಿಜೇತರಾದರು. ಈ ರೇಸ್ ನಲ್ಲಿ ಗೆಲ್ಲುವ ಮೂಲಕ ಫಾರ್ಮ್ಯೂಲಾ ಒನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೊನೆ ಕ್ಷಣದವರೆಗೂ ರೋಚಕವಾಗಿ ನಡೆದ ರೇಸ್ ನಲ್ಲಿ ರೆಡ್ ಬುಲ್ ನ ಆಸ್ಟ್ರೇಲಿಯಾದ ಚಾಲಕ ಡೇನಿಯಲ್ ರಿಕಿಯಾರ್ಡೊ ಅವರನ್ನು ಹಿಂದಿಕ್ಕಿ ನಿಕೊ ರೋಸ್ ಬರ್ಗ್ ಮೊದಲಿಗರಾಗಿ ಬಂದರು. ಕೇವಲ 0.488 ಸೆಕೆಂಡುಗಳ ಅಂತರದಲ್ಲಿ ಡೇನಿಯಲ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಪ್ರಮುಖಾಂಶಗಳು:

ಪ್ರಥಮ ಸ್ಥಾನ: ನಿಕೊ ರೋಸ್ಬರ್ಗ್

ದ್ವಿತೀಯ ಸ್ಥಾನ: ಡೇನಿಯಲ್ ರಿಕಿಯಾರ್ಡೊ

ತೃತೀಯ ಸ್ಥಾನ: ಲೆವಿಸ್ ಹ್ಯಾಮಿಲ್ಟನ್

ಮೊದಲ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಪ್ರಿಯೇಷ ದೇಶ್ಮುಖ್

ಭಾರತದ ಪ್ರಿಯೇಷ ದೇಶ್ಮುಖ್ ರವರು ಚೊಚ್ಚಲ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಮೊದಲ ವಿಶ್ವ ಕಿವುಡರ ಶೂಟಿಂಗ್ (World’s Deaf Shooting) ಚಾಂಪಿಯನ್ ಷಿಪ್ ಅನ್ನು ರಷ್ಯಾದ ಕಝಕ್ ನಲ್ಲಿ ಆಯೋಜಿಸಲಾಗಿತ್ತು. 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ದೇಶ್ಮುಖ್ ಅವರು 180.4 ಅಂಕಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡರು.

ಪ್ರಮುಖಾಂಶಗಳು:

  • ಪ್ರಥಮ ಸ್ಥಾನ: ಉಕ್ರೇನ್ನ ಸ್ವಿಟ್ಲಾನ ಯಾಟ್ಸೆಂಕೊ(Svitlana Yatsenko) 201.6 ಅಂಕಗಳೊಂದಿಗೆ ಪ್ರಥಮ ಸ್ಥಾನಗಳಿಸಿದರು
  • ದ್ವಿತೀಯ ಸ್ಥಾನ: ಸೆರ್ಬಿಯಾದ ಗೊರ್ಡನಾ ಮಿಕೊವಿಕ್ (Gordana Mikovic) 200.3 ಅಂಕದೊಂದಿಗೆ ಎರಡನೇ ಸ್ಥಾನವನ್ನು ಗಳಿಸಿದರು.
  • ತೃತೀಯ ಸ್ಥಾನ: ಭಾರತದ ಪ್ರಿಯೇಷ ದೇಶ್ಮುಖ್ ರವರು 180.4 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡರು.

ಚರ್ಖಿ ದಾದ್ರಿ (Charki Dhadri)ಹರಿಯಾಣದ 22ನೇ ಜಿಲ್ಲೆಯಾಗಿ ಘೋಷಣೆ

ಹರಿಯಾಣ ಸರ್ಕಾರ ಚರ್ಖಿ ದಾದ್ರಿಯನ್ನು ರಾಜ್ಯದ 22 ನೇ ಜಿಲ್ಲೆಯನ್ನಾಗಿ ಘೋಷಿಸಿದೆ. ಪ್ರಸ್ತುತ ಇದು ರಾಜ್ಯದ ಅತಿ ದೊಡ್ಡ ಜಿಲ್ಲೆಯೆನಿಸಿರುವ “ಭಿವಾನಿ”ಯ ಭಾಗವಾಗಿದೆ. ಭಿವಾನಿ ಜಿಲ್ಲೆಯನ್ನ ಡಿಸೆಂಬರ್ 22, 1972 ರಲ್ಲಿ ರಚಿಸಲಾಗಿದೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಅವರು ಭಿವಾನಿ ಜಿಲ್ಲೆಯಲ್ಲಿ ನಡೆಸಿದ ಸಾರ್ವಜನಿಕ ರ್ಯಾಲಿ ವೇಳೆ ಚರ್ಖಿ ದಾದ್ರಿಯನ್ನು ಜಿಲ್ಲೆಯನ್ನಾಗಿ ಘೋಷಿಸಿದ್ದಾರೆ.

  • ಹೊಸ ಜಿಲ್ಲೆಯು ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರಲಿದೆ. ದಾದ್ರಿ ಮತ್ತು ಭದ್ರ ಇವೆ ಆ ಎರಡು ವಿಧಾನಸಭಾ ಕ್ಷೇತ್ರಗಳು.
  • ಇದೇ ವೇಳೆ ಹೊಸ ಜಿಲ್ಲೆಗೆ ಸುಮಾರು ರೂ 150 ಕೋಟಿ ಹೊಸ ಯೋಜನೆಗಳ ಅನುಷ್ಟಾನಕ್ಕೆ ಮುಖ್ಯಮಂತ್ರಿಗ ಲಾಲ್ ಖತ್ತರ್ ಚಾಲನೆ ನೀಡಿದರು.

One Thought to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 17, 2016”

  1. Sir January to August current affairs upload madi sir plz

Leave a Comment

This site uses Akismet to reduce spam. Learn how your comment data is processed.