ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-23

Question 1

1. ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಟಂಗ್ ಸ್ಟನ್ ಹೊಂದಿರುವ (ಬುರುಡೆ ಬಲ್ಬ್) ವಿದ್ಯುತ್ ದೀಪಗಳು ಪ್ಲೋರಸೆಂಟ್ ದೀಪಗಳಿಗಿಂತ ಕಡಿಮೆ ಜೀವಾವಧಿಯನ್ನು ಹೊಂದಿರಲು ಕಾರಣವೇನೆಂದರೆ

1. ಟಂಗ್ ಸ್ಟನ್ ತಂತಿಯ ಎಳೆಯಲ್ಲಿ (ಫಿಲಮೆಂಟ್ ವೈರ್ ನಲ್ಲಿ) ಏಕರೂಪತೆ ಇರುವುದಿಲ್ಲ

2. ಬಲ್ಬ್ ನ ಒಳಗಡೆ ಸಂಪೂರ್ಣ ನಿರ್ವಾತ ಮಾಡಲು ಸಾಧ್ಯವಿಲ್ಲ

3. ಟಂಗ್ ಸ್ಟನ್ ಹಿಡಿದಿರುವ ತಂತಿಗಳು ಅಧಿಕ ತಾಪಮಾನದಲ್ಲಿ ಕರಗಿ ಹೋಗುತ್ತದೆ

ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ:-

A
1 ಮತ್ತು 2
B
1 ಮತ್ತು 3
C
2 ಮತ್ತು 3
D
ಮೇಲಿನ ಎಲ್ಲವೂ
Question 1 Explanation: 
ಮೇಲಿನ ಎಲ್ಲವೂ
Question 2

2.ನೇತ್ರದಾನಕ್ಕೆ ಸಂಬಂಧಿಸಿದಂತೆ, ಕಣ್ಣುಗಳನ್ನು ವ್ಯಕ್ತಿಯು ಮೃತಪಟ್ಟ 4 ರಿಂದ 6 ಗಂಟೆಗಳೊಳಗಾಗಿ ದಾನ ಮಾಡಬೇಕಾಗುತ್ತದೆ. ನೇತ್ರದಾನದ ಸಂದರ್ಭದಲ್ಲಿ ಕಣ್ಣಿನ ಈ ಕೆಳಕಂಡ ಯಾವ ಭಾಗವನ್ನು ಸಂರಕ್ಷಿಸಿಡುತ್ತಾರೆ.

A
ಪಾರದರ್ಶಕ ಪಟಲ (ಕಾರ್ನಿಯಾ)
B
ಕಣ್ಣು ಗುಡ್ಡೆಯ ಸುತ್ತಲಿರುವ ವೃತ್ತಾಕಾರದ ಪೊರೆ (ಐರಿಸ್)
C
ಮಸೂರ (ಲೆನ್ಸ್)
D
ಅಕ್ಷಿ ಪಟಲ (ರೆಟಿನಾ)
Question 2 Explanation: 
ಪಾರದರ್ಶಕ ಪಟಲ (ಕಾರ್ನಿಯಾ)
Question 3

3. ಯೂರೋಪಿನ ಒಕ್ಕೂಟಕ್ಕೆ ಸಂಬಂಧಿಸಿದಂತೆ (European Union) ಈ ಹೇಳಿಕೆಗಳನ್ನು ಗಮನಿಸಿ

1. ಯೂರೋಪಿನ ಒಕ್ಕೂಟದಲ್ಲಿ ಒಟ್ಟು 27 ಸದಸ್ಯ ರಾಷ್ಟ್ರಗಳಿವೆ

2. ಯೂರೋಪಿನ ಒಕ್ಕೂಟದ ರಾಷ್ಟ್ರಗಳ ಪೌರರು ದ್ವಿಪೌರತ್ವವನ್ನು ಹೊಂದಿರುತ್ತಾರೆ

3. ಸ್ವಿಟ್ಜರ್ ಲ್ಯಾಂಡ್ ಯೂರೋಪಿನ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ

4. 1999 ರಲ್ಲಿ ಯೂರೋ ವಲಯ ಅಸ್ತಿತ್ವಕ್ಕೆ ಬಂತು

ಈ ಹೇಳಿಕೆಗಳಲ್ಲಿ ಸರಿಯಾದವು ಯಾವುವು

A
1, 2 ಮತ್ತು 3
B
2, 3 ಮತ್ತು 4
C
1, 2 ಮತ್ತು 4
D
ಮೇಲಿನ ಎಲ್ಲವೂ
Question 3 Explanation: 
1, 2 ಮತ್ತು 4
Question 4

4.ಭಾರತದಲ್ಲಿ ಬ್ರಿಟನ್ನಿನ ಸಂವಿಧಾನಾತ್ಮಕ ಪ್ರಯೋಗಗಳಲ್ಲಿ ಅತ್ಯಂತ ಅಲ್ಪಾವಧಿಯದ್ದೆಂದರೆ

A
1861 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ
B
1892 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ
C
1909 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ
D
1919 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ
Question 4 Explanation: 
1909 ರ ಭಾರತೀಯ ಕೌನ್ಸಿಲ್ ಗಳ ಕಾಯಿದೆ
Question 5

5. ಟೆನ್ನಿಸ್ ನಲ್ಲಿ ಒಬ್ಬ ಆಟಗಾರನು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಿಸಲು ಈ ಕೆಳಗಿನ ಯಾವ ಪಂದ್ಯಾವಳಿಗಳಲ್ಲಿ ವಿಜಯಿಯಾಗಬೇಕಾಗುತ್ತದೆ

1. ಆಸ್ಟ್ರೇಲಿಯನ್ ಓಪನ್

2. ಫ್ರೆಂಚ್ ಓಪನ್

3. ಜಪಾನ್ ಓಪನ್

4. ವಿಂಬಲ್ಡನ್ ಓಪನ್

5. ಯು.ಎಸ್.ಓಪನ್

6. ಡೇವಿಸ್ ಕಪ್ ಓಪನ್

A
1, 2, 5 ಮತ್ತು 6
B
1, 2, 4 ಮತ್ತು 5
C
1, 2, 3, 4 ಮತ್ತು 5
D
ಮೇಲಿನ ಎಲ್ಲವೂ
Question 5 Explanation: 
1, 2, 4 ಮತ್ತು 5:

(ಟೆನ್ನಿಸ್ ನಲ್ಲಿ ಆಟಗಾರನೊಬ್ಬ “ಗ್ರ್ಯಾಂಡ್ ಸ್ಲಾಮ್ “ ಪ್ರಶಸ್ತಿಗಳಿಸಲು ಒಂದೇ ವರ್ಷದಲ್ಲಿ ನಾಲ್ಕು ಪ್ರಮುಖ ಪಂದ್ಯಾವಳಿಗಳಾದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಓಪನ್ ಮತ್ತು ಯು.ಎಸ್.ಓಪನ್ ಪಂದ್ಯಗಳಲ್ಲಿ ಚಾಂಪಿಯನ್ ಪಟ್ಟ ಪಡೆಯಬೇಕಾಗುತ್ತದೆ.)

Question 6

6. ಭಾರತದಲ್ಲಿ ವಾಸವಿರುವ ಈ ಕೆಳಗಿನ ಯಾರಿಗೆ ಸಂವಿಧಾನದಲ್ಲಿ ಮೀಸಲಾತಿ ಮತ್ತು ಇತರೆ ಸೌಲಭ್ಯ ನೀಡಲು ಮಾನ್ಯ ಮಾಡಿದೆ.

A
ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ
B
ಭಾಷಾ ಅಲ್ಪಸಂಖ್ಯಾತರನ್ನು ಮಾತ್ರ
C
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು
D
ಭಾಷಾ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು
Question 6 Explanation: 
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರನ್ನು
Question 7

7. ಪಟ್ಟಿ I ರಲ್ಲಿ ಕೊಟ್ಟಿರುವ ಹಾರ್ಮೋನ್ ಗಳನ್ನು ಪಟ್ಟಿ II ರಲ್ಲಿರುವ ಅದರ ಅಂಶಗಳೊಂದಿಗೆ ಹೊಂದಿಸಿ, ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

ಪಟ್ಟಿ I ಪಟ್ಟಿ II

A. ಅಡ್ರಿನಲಿನ್ 1. ವಾಸನಾಯುಕ್ತ ಪ್ರಜ್ಞಾವಾಹಿಯ ಮೂಲಕ ಸಂಗಾತಿಗಳನ್ನು ಆಕರ್ಷಿಸುವುದು

B. ಈಸ್ಟ್ರೋಜನ್ 2. ಕೋಪ, ಭಯ, ಅಪಾಯ

C. ಇನ್ಸುಲಿನ್ 3. ಸ್ತ್ರೀಯರು

D. ಫರ್ಮೋನ್ಸ್ 4. ಗ್ಲೂಕೋಸ್

ಸಂಕೇತಗಳು:

A
A-2, B-3, C-4, D-1
B
A-4, B-3, C-1, D-2
C
A-1, B-4, C-3, D-2
D
A-3, B-1, C-2, D-4
Question 7 Explanation: 
A-2, B-3, C-4, D-1
Question 8

8. ಭಾರತ ಸಂವಿಧಾನಕ್ಕೆ ತಿದ್ದುಪಡಿ ಕಾರ್ಯವಿಧಾನವನ್ನು ಇವರು ಆರಂಭಿಸಬಹುದಾಗಿದೆ

1. ರಾಷ್ಟ್ರಪತಿ

2. ಲೋಕಸಭೆ

3. ರಾಜ್ಯಸಭೆ

4. ರಾಜ್ಯ ಶಾಸಕಾಂಗಗಳು

ಈ ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿ

A
2 ಮಾತ್ರ
B
1 ಮತ್ತು 2
C
1, 2 ಮತ್ತು 4
D
2 ಮತ್ತು 3
Question 8 Explanation: 
2 ಮತ್ತು 3
Question 9

9.ಆದಾಯ ತೆರಿಗೆ ವಿಧಿಸುವಿಕೆ, ಸಂಗ್ರಹಣೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ

A

ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಬಂದ ವರಮಾನವನ್ನು ತನ್ನ ಮತ್ತು ರಾಜ್ಯಗಳ ನಡುವೆ ಹಂಚುತ್ತದೆ

B

ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಹಾಗೂ ಎಲ್ಲಾ ವರಮಾನವನ್ನು ತಾನೆ ಇಟ್ಟುಕೊಳ್ಳುತ್ತದೆ

C

ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ ಮತ್ತು ವಸೂಲಿ ಮಾಡುತ್ತದೆ, ಆದರೆ ಬಂದ ಎಲ್ಲಾ ವರಮಾನವು ರಾಜ್ಯಗಳ ನಡುವೆ ಹಂಚಲ್ಪಡುತ್ತದೆ

D

ಆದಾಯ ತೆರಿಗೆಯ ಮೇಲೆ ವಿಧಿಸುವ ಸರ್ಚಾರ್ಜ್ ಮಾತ್ರ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುತ್ತದೆ

Question 9 Explanation: 

ಕೇಂದ್ರವು ಆದಾಯ ತೆರಿಗೆಯನ್ನು ವಿಧಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಬಂದ ವರಮಾನವನ್ನು ತನ್ನ ಮತ್ತು ರಾಜ್ಯಗಳ ನಡುವೆ ಹಂಚುತ್ತದೆ

Question 10

10.ಭಾರತದಲ್ಲಿ ನೆಲೆಸಿರುವ ಯಾವುದೇ ಒಬ್ಬ ವಿದೇಶಿ ಪೌರನು ಭಾರತ ಸಂವಿಧಾನದಲ್ಲಿ ನೀಡಿರುವ ಯಾವ ಹಕ್ಕನ್ನು ಚಲಾಯಿಸುವಂತಿಲ್ಲ

A
ವ್ಯಾಪಾರ ಮತ್ತು ವೃತ್ತಿ ಸ್ವಾತಂತ್ರ್ಯ ಹಕ್ಕು
B
ಕಾನೂನಿನ ಮುಂದೆ ಸಮಾನತೆ ಹಕ್ಕು
C
ಪ್ರಾಣ ಮತ್ತು ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಹಕ್ಕು
D
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
Question 10 Explanation: 
ವ್ಯಾಪಾರ ಮತ್ತು ವೃತ್ತಿ ಸ್ವಾತಂತ್ರ್ಯ ಹಕ್ಕು
There are 10 questions to complete.

4 Thoughts to “ಸಾಮಾನ್ಯ ಜ್ಞಾನ ಕ್ವೀಜ್ 22”

  1. anjaneya

    Good. Questions sir

  2. subhas.jogi

    Sir , super. pls paste daily current affairs affairs qstns r vimp fr exam purpose purpose. Thanku sir namasthe

Leave a Comment

This site uses Akismet to reduce spam. Learn how your comment data is processed.