ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 5, 2016

Question 1

1.ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ನೀಡುವ ಹೇರಿಟೇಜ್ ಹೀರೋಸ್ (Heritage Heroes) ಪ್ರಶಸ್ತಿ ಪಡೆದ ಭಾರತದ ಪರಿಸರಶಾಸ್ತ್ರಜ್ಞ ಮತ್ತು ಸಂರಕ್ಷಣಗಾರ ಯಾರು?

A
ನಿಖಿಲ್ ಚೋಪ್ರಾ
B
ಬಿಭೂತಿ ಲಹ್ಕರ್
C
ಅನಿಲ್ ಗೋಸ್ವಾಮಿ
D
ಸುರೇಶ್ ಚಂದ್ರ
Question 1 Explanation: 
ಬಿಭೂತಿ ಲಹ್ಕರ್:

ಭಾರತದ ಪರಿಸರಶಾಸ್ತ್ರಜ್ಞ ಮತ್ತು ಸಂರಕ್ಷಣಗಾರ ಬಿಭೂತಿ ಲಹ್ಕರ್ ಅವರು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ನೀಡುವ ಪ್ರತಿಷ್ಠಿತ ಹೇರಿಟೇಜ್ ಹೀರೋಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಪ್ರಸಿದ್ದ ಪ್ರಶಸ್ತಿಯನ್ನು ಪಡೆದ ಏಷ್ಯಾದ ಹಾಗೂ ಭಾರತದ ಮೊದಲಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ಗಣನೀಯ ಸೇವೆ ನೀಡಿದವರಿಗೆ ನೀಡಲಾಗುವ ಈ ಪ್ರಶಸ್ತಿಗೆ ವಿಶ್ವದ ಐದು ಜನರನ್ನು ನಾಮನಿರ್ದೇನ ಮಾಡಲಾಗಿತ್ತು. ಅಸ್ಸಾಂನ ಮಾನಸ್ ಮತ್ತು ಕಾಜೀರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲ್ಲುಗಾವಲ ಬಗ್ಗೆ ಆಳವಾಗಿ ಸಂಶೋಧನೆ ಮಾಡಿರುವ ಲಹ್ಕರ್ ಪರಿಸರ ಸಂರಕ್ಷಣೆಗೆ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ.

Question 2

2. ಈ ಕೆಳಗಿನ ಯಾವ ಸಸ್ತನಿ/ಸಸ್ತನಿಗಳನ್ನು ಐಯುಸಿನ್ ಅಪಾಯದ ಅಂಚಿನಲ್ಲಿರುವ ಗುಂಪಿಗೆ ಸೇರಿಸಲಾಗಿದೆ?

I) ಈಸ್ಟರ್ನ್ ಗೊರಿಲ್ಲಾ

II) ವೆಸ್ಟರ್ನ್ ಗೊರಿಲ್ಲಾ

III) ಬೊರ್ನಿಯನ್ ಒರಾಂಗುಟನ್

IV) ಸುಮಾತ್ರನ್ ಒರಾಂಗುಟನ್

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I & II
B
II & III
C
III & IV
D
I, II, III & IV
Question 2 Explanation: 
I, II, III & IV:

ಇತ್ತೀಚೆಗೆ ಹವಾಯಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ಕಾಂಗ್ರೆಸ್ನಲ್ಲಿ ಸದ್ಯ ಬದುಕಿರುವ ದೊಡ್ಡ ಸಸ್ತನಿ ಎನಿಸಿರುವ ಈಸ್ಟರ್ನ್ ಗೊರಿಲ್ಲಾವನ್ನು ತೀರಾ ಅಪಾಯದ ಅಂಚಿನಲ್ಲಿರುವ ಪ್ರಭೇದದ ಗುಂಪಿಗೆ ಸೇರಿಸಲಾಗಿದೆ. ಆರು ದೊಡ್ಡ ಮಂಗಗಳ ಪ್ರಭೇದಗಳ ಪೈಕಿ ನಾಲ್ಕು ಪ್ರಬೇಧಗಳಾದ ಈಸ್ಟರ್ನ್ ಗೊರಿಲ್ಲಾ, ವೆಸ್ಟರ್ನ್ ಗೊರಿಲ್ಲಾ, ಬೊರ್ನಿಯನ್ ಒರಾಂಗುಟನ್ ಮತ್ತು ಸುಮಾತ್ರನ್ ಒರಾಂಗುಟನ್ ಪ್ರಭೇದಗಳು ಅಪಾಯದ ಅಂಚಿನಲ್ಲಿರುವ ಪ್ರಭೇದಗಳೆಂದು ಗುರುತಿಸಲಾಗಿದೆ. ಮಿತಿಮೀರಿದ ಭೇಟೆಯಿಂದಾಗಿ ಈಸ್ಟರ್ನ್ ಗೊರಿಲ್ಲಾದ ಪ್ರಭೇದ ಕಳೆದ 20 ವರ್ಷಗಳಲ್ಲಿ ಶೇ 70 ರಷ್ಟು ಕುಸಿದಿದೆ.

Question 3
3. ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ದೇಶದಲ್ಲಿ ಕುಷ್ಠರೋಗವನ್ನು ನಿರ್ಮೂಲನ ಮಾಡುವ ಸಲುವಾಗಿ LCDC ಅಭಿಯಾನವನ್ನು ಆರಂಭಿಸಿದೆ. LCDC ಯ ವಿಸ್ತೃತ ರೂಪ_________?
A
Leprosy Case Detection Campaign
B
Leprosy Case Destruction Campaign
C
Leprosy Cover Detection Campaign
D
Leprosy Cover Destruction Campaign
Question 3 Explanation: 
Leprosy Case Detection Campaign:

ಕೇಂದ್ರ ಆರೋಗ್ಯ ಸಚಿವಾಲಯ ದೇಶದಲ್ಲಿ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಲುವಾಗಿ Leprosy Case Detection Campaign (LCDC) ಅಭಿಯಾನವನ್ನು ಆರಂಭಿಸಿದೆ. ಎರಡು ವಾರಗಳ ಈ ಅಭಿಯಾನವನ್ನು ದೇಶದ 20 ರಾಜ್ಯಗಳ 149 ಜಿಲ್ಲೆಗಳ 1600 ಬ್ಲಾಕ್ ಗಳಲ್ಲಿ ಚಾಲನೆ ನೀಡಲಾಗಿದೆ. ಈ ಅಭಿಯಾನದಡಿ 3 ಲಕ್ಷಕ್ಕೂ ಹೆಚ್ಚು ಆರೋಗ್ಯ ತಂಡಗಳು ಪ್ರತಿ ಮನೆಗೂ ತೆರಳಿ ಕುಷ್ಠರೋಗ ಪ್ರಕರಣವನ್ನು ಪತ್ತೆಹಚ್ಚಲಿವೆ. ಸುಮಾರು 32.18 ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ. 2019 ರ ವೇಳೆಗೆ ಭಾರತದಲ್ಲಿ ಕುಷ್ಠರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಲಾಗಿದೆ. 2019 ಮಹಾತ್ಮ ಗಾಂಧಿ ಅವರ 150 ನೇ ಜನ್ಮ ವಾರ್ಷಿಕೋತ್ಸವವಾಗಿದೆ.

Question 4

4.ಈ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ “ಇಂಟರ್ವಿವ್ ಐಲ್ಯಾಂಡ್ ವನ್ಯಜೀವಿ ಅಭಯಾರಣ್ಯ(Interview Island Wildlife Sanctuary (IIWS))” ವಿದೆ?

A
ಲಕ್ಷದ್ವೀಪ
B
ಗೋವಾ
C
ಅಂಡಮಾನ್ ಮತ್ತು ನಿಕೋಬಾರ್
D
ಕೇರಳ
Question 4 Explanation: 
ಅಂಡಮಾನ್ ಮತ್ತು ನಿಕೋಬಾರ್:

ಇಂಟರ್ವಿವ್ ಐಲ್ಯಾಂಡ್ ವನ್ಯಜೀವಿ ಅಭಯಾರಣ್ಯ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿದೆ. 99 ಚದರ ಕಿ.ಮೀ ವಿಸ್ತೀರ್ಣತೆ ಹೊಂದಿರುವ ಈ ಅಭಯಾರಣ್ಯ ಆಸ್ಟೆನ್ ಸ್ಟೈಟ್ ಪೂರ್ವದಲ್ಲಿದೆ. ಆಸ್ಟೆನ್ ಸ್ಟೈಟ್ ಉತ್ತರ ಅಂಡಮಾನ್ ದ್ವೀಪ ಮತ್ತು ಮಧ್ಯ ಅಂಡಮಾನ್ ದ್ವೀಪ ಪ್ರದೇಶವನ್ನು ವಿಭಜಿಸಿದೆ.

Question 5

5.ಈ ಕೆಳಗಿನ ಯಾವ ಸಂಸ್ಥೆಯನ್ನು 2016 ಯುನೆಸ್ಕೋ ಕನ್ಫ್ಯೂಷಿಯಸ್ ಸಾಕ್ಷರತೆ ಪ್ರಶಸ್ತಿ (UNESCO Confucius Prize for Literacy)ಗೆ ಆಯ್ಕೆಮಾಡಲಾಗಿದೆ?

A
ನ್ಯಾಷನಲ್ ಲೈಬ್ರರಿ
B
ಜನ್ ಶಿಕ್ಷಣ್ ಸಂಸ್ಥಾನ್
C
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್
D
ಡೈರೇಕ್ಟರ್ ಆಪ್ ಲಿಟರಸಿ ಅಂಡ್ ನ್ಯಾಷನಲ್ ಲಾಂಗ್ವೇಜಸ್
Question 5 Explanation: 
ಜನ್ ಶಿಕ್ಷಣ್ ಸಂಸ್ಥಾನ್:

ಕೇರಳ ಮೂಲದ ಮಲ್ಲಾಪ್ಪುರಂನ ಜನ್ ಶಿಕ್ಷಣ್ ಸಂಸ್ಥಾನ್ ಸಂಸ್ಥೆಯನ್ನು 2016ನೇ ಸಾಲಿನ ಪ್ರತಿಷ್ಠಿತ ಯುನೆಸ್ಕೋ ಕನ್ಫ್ಯೂಷಿಯಸ್ ಸಾಕ್ಷರತೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಗ್ರಾಮೀಣ ಭಾಗದ ಬಡವರಿಗೆ ಸಾಕ್ಷರತೆ ಸಂಯೋಜಿತ ಕೌಶಲ್ಯ ಅಭಿವೃದ್ದಿ ಚಟುವಟಿಕೆಗಳ ಮೂಲಕ ಜನ್ ಶಿಕ್ಷಣ್ ಸಂಸ್ಥಾನ್ ಸಂಸ್ಥೆ ನೀಡುತ್ತಿರುವ ಸೇವೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸಾಕ್ಷರತೆ ಸೇವೆಗಾಗಿ ಈ ಸಂಸ್ಥೆ ಅನೇಕ ನಾವೀನ್ಯ ತಂತ್ರಜ್ಞಾನಗಳಾದ ಬ್ರೆಲಿ ಅಪ್ಲೀಕೇಷನ್ ಮತ್ತು ಟಾಕಿಂಗ್ ಪೆನ್ ಗಳನ್ನು ಅಳವಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಸಾಕ್ಷರತಾ ದಿನವಾದ ಸೆಪ್ಟೆಂಬರ್ 8 ರಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ. $20000 ಡಾಲರ್ ಮೊತ್ತದ ಪ್ರಶಸ್ತೀಯನ್ನು ಚೀನಾ ಪ್ರಾಯೋಜಿಸಿದೆ. ಚೀನಾದ ತತ್ವಜ್ಞಾನಿ ಕನ್ಫ್ಯೂಷಿಯಸ್ ಸ್ಮರಣಾರ್ಥ ಪ್ರಶಸ್ತಿಗೆ ಕನ್ಫ್ಯೂಷಿಯಸ್ ಹೆಸರಿಡಲಾಗಿದೆ.

Question 6

6.ಇತ್ತೀಚೆಗೆ ಪೆಸಿಫಿಕ್ ಸಮುದ್ರದ ಕುರ್ ಹವಳ ದ್ವೀಪದ ಬಳಿ ಪತ್ತೆಯಾದ ಟೊಸನಾಯಿಡ್ಸ್ ಜಾತಿಗೆ ಸೇರಿದ ಮೀನಿನ ಹೊಸ ಪ್ರಭೇದಕ್ಕೆ ಯಾವ ಗಣ್ಯವ್ಯಕ್ತಿಯ ಹೆಸರಿಡಲಾಗಿದೆ?

A
ನರೇಂದ್ರ ಮೋದಿ
B
ಬರಾಕ್ ಒಬಾಮ
C
ಪೋಪ್ ಬೆನೆಡಿಕ್ಟ್
D
ವಿನ್ ಡಿಸೇಲ್
Question 6 Explanation: 
ಬರಾಕ್ ಒಬಾಮ:

ಪೆಸಿಫಿಕ್ ಸಮುದ್ರದ ಕುರ್ ಹವಳ ದ್ವೀಪದ ಬಳಿ ಪತ್ತೆಯಾದ ಮೀನಿನ ಹೊಸ ಪ್ರಭೇದಕ್ಕೆ ವಿಜ್ಞಾನಿಗಳು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರು ಇರಿಸಿದ್ದಾರೆ.ಟೊಸನಾಯಿಡ್ಸ್ ಜಾತಿಗೆ ಸೇರಿದ, ಕಡುಗೆಂಪು ಮತ್ತು ಚಿನ್ನದ ಬಣ್ಣ ಹೊಂದಿರುವ ಈ ಮೀನುಗಳು ದ್ವೀಪದ ಕರಾವಳಿಯಲ್ಲಿ 300 ಅಡಿ ಆಳದಲ್ಲಿ ಪತ್ತೆಯಾಗಿವೆ.ಪಪಹಾನೌಮೊಕಕಿ ಕಡಲ ರಾಷ್ಟ್ರೀಯ ಸ್ಮಾರಕವನ್ನು ವಿಸ್ತರಿಸುವ ಮೂಲಕ ಪ್ರಕೃತಿ ರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಿರುವ ಬರಾಕ್ ಒಬಾಮ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮೀನಿಗೆ ಅವರ ಹೆಸರನ್ನು ಇರಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹವಾಯಿ ದ್ವೀಪಗಳ ಉತ್ತರಭಾಗದಲ್ಲಿರುವ ಕುರ್ ಪ್ರದೇಶದ ಹವಳ ದಿಬ್ಬದ ಬಳಿ ಜೂನ್ ತಿಂಗಳಲ್ಲಿ ಈ ಮೀನಿನ ಪ್ರಭೇದ ಪತ್ತೆಯಾಗಿತ್ತು.

Question 7

7.2016 ASEAN-INDIA (ಅಸಿಯಾನ್-ಭಾರತ) ಶೃಂಗಸಭೆ ಯಾವ ದೇಶದಲ್ಲಿ ನಡೆಯಲಿದೆ?

A
ಚೀನಾ
B
ಲಾವೋಸ್
C
ಮಯನ್ಮಾರ್
D
ಇಂಡೋನೇಷಿಯಾ
Question 7 Explanation: 

14ನೇ ಅಸಿಯಾನ್-ಭಾರತ ಶೃಂಗಸಭೆ ಮತ್ತು 11ನೇ ಪೂರ್ವ ಏಷ್ಯಾ ಶೃಂಗಸಭೆ ಲಾವೋಸ್ ನ ವಿಯೆಂಟಿಯಾನ್ ನಲ್ಲಿ ಸೆಪ್ಟೆಂಬರ್ 8 ರಂದು ನಡೆಯಲಿದೆ. ಅಸಿಯಾನ್ ನ ಹತ್ತು ರಾಷ್ಟ್ರಗಳ ಮುಖಂಡರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತದಿಂದ ಪ್ರಧಾನಿ ಮೋದಿ ರವರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Question 8

8.ಇತ್ತೀಚೆಗೆ ಆರಂಭಗೊಂಡ ಮೊದಲ ಬ್ರಿಕ್ಸ್ ಸಿನಿಮಾ ಉತ್ಸವದಲ್ಲಿ ಈ ಕೆಳಗಿನ ಯಾರನ್ನು ಸನ್ಮಾನಿಸಲಾಯಿತು?

A
ಅಮಿತಾಬ್ ಬಚ್ಚನ್
B
ರಿಶಿ ಕಪೂರ್
C
ಸಲ್ಮಾನ್ ಖಾನ್
D
ಸಂಜಯ್ ದತ್
Question 8 Explanation: 
ರಿಶಿ ಕಪೂರ್:

ಬಾಲಿವುಡ್ ನ ಹಿರಿಯ ನಟ ರಿಶಿ ಕಪೂರ್ ಅವರನ್ನು ಮೊದಲ ಬ್ರಿಕ್ಸ್ ಸಿನಿಮಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪ್ರಪ್ರಥಮ ಬ್ರಿಕ್ಸ್ ಸಿನಿಮಾ ಉತ್ಸವ ದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂ ಆಯೋಜಿಸಲಾಗಿದೆ.

Question 9

9.ಯಾವ ರಾಜ್ಯ “ದೀನದಯಾಳ್ ಸ್ವಾಸ್ಥ್ಯ ಸೇವಾ ಯೋಜನೆ” ಹೆಸರಿನ ನಗದು ರಹಿತ ವಿಮಾ ಯೋಜನೆ ಜಾರಿಗೊಳಿಸಿದೆ?

A
ಗೋವಾ
B
ಮಹಾರಾಷ್ಟ್ರ
C
ತೆಲಂಗಣ
D
ಮಧ್ಯ ಪ್ರದೇಶ
Question 9 Explanation: 
ಗೋವಾ:

ಗೋವಾ ಸರ್ಕಾರ ದೀನದಯಾಳ್ ಸ್ವಾಸ್ಥ್ಯ ಸೇವಾ ಯೋಜನೆ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಉಪಯೋಗ ಪಡೆಯಲು ಯಾವುದೇ ಆರ್ಥಿಕ ಇತಿಮಿತಿ ಮಾನದಂಡವನ್ನು ನಿಗದಿಪಡಿಸಲ್ಲ. ಆಗಾಗಿ ಪ್ರತಿಯೊಬ್ಬರು ಇದರ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಗೋವಾದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿರುವ ಪ್ರತಿಯೊಬ್ಬರು ಇದರಡಿ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿ ಮೂರು ಸದಸ್ಯರನ್ನು ಹೊಂದಿರುವ ಕುಟಂಬಕ್ಕೆ ರೂ 2.5 ಲಕ್ಷ ವಿಮೆಯನ್ನು ನೀಡಲಾಗುವುದು. ನಾಲ್ಕು ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ ನಾಲ್ಕು ಲಕ್ಷ ವಿಮೆ ಸೌಲಭ್ಯ ನೀಡಲಾಗುವುದು.

Question 10

10.ಇತ್ತೀಚೆಗೆ ಬಿಡುಗಡೆಗೊಂಡ “QS ವಿಶ್ವ ವಿಶ್ವವಿದ್ಯಾಲಯ (World University)” ಶ್ರೇಯಾಂಕದಲ್ಲಿ ಪ್ರಥಮಸ್ಥಾನ ಪಡೆದುಕೊಂಡ ವಿಶ್ವವಿದ್ಯಾಲಯ ಯಾವುದು?

A
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
B
ಮಸ್ಸಚುಸೆಟ್ಸ್ ವಿಶ್ವವಿದ್ಯಾಲಯ
C
ಹಾರ್ವಡ್ ವಿಶ್ವವಿದ್ಯಾಲಯ
D
ಸ್ಟಾನ್ ಫೊರ್ಡ್ ವಿಶ್ವವಿದ್ಯಾಲಯ
Question 10 Explanation: 
ಮಸ್ಸಚುಸೆಟ್ಸ್ ವಿಶ್ವವಿದ್ಯಾಲಯ:

ಕೇಂಬ್ರಿಡ್ಸ್ ನ ಮಸ್ಸಚುಸೆಟ್ಸ್ ವಿಶ್ವವಿದ್ಯಾಲಯ ಸತತ ಐದನೇ ಬಾರಿ QS ವಿಶ್ವ ವಿಶ್ವವಿದ್ಯಾಲಯ (World University)” ಶ್ರೇಯಾಂಕದಲ್ಲಿ ಪ್ರಥಮಸ್ಥಾನ ಪಡೆದುಕೊಂಡಿದೆ. ಸ್ಟಾನ್ ಫೋರ್ಡ್ ವಿವಿ ಎರಡನೇ ಸ್ಥಾನ ಮತ್ತು ಹಾರ್ವಡ್ ವಿವಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ. ಭಾರತದ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು ಸ್ಥಾನ ಕಾಯ್ದುಕೊಂಡಿದ್ದರು, ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಹಿಂದಕ್ಕೆ ಹೋಗಿದೆ. ಜೆಮ್ ಶೆಡ್ ಜಿ ಟಾಟಾ, ಮೈಸೂರು ಮಹಾರಾಜ ಮತ್ತು ಭಾರತೀಯ ಸರ್ಕಾರದ ಜಂಟಿ ಸಹಯೋಗದೊಂದಿದೆ 1909 ರಲ್ಲಿ ನಿರ್ಮಾಣವಾದ ಐ ಐ ಎಸ್ ಸಿ ಜಾಗತಿಕ ಶ್ರೇಯಾಂಕದಲ್ಲಿ ಕಳೆದ ವರ್ಷ 147 ನೇ ಸ್ಥಾನದಲ್ಲಿದ್ದರೆ, ಈ ವರ್ಷ 152 ನೇ ಸ್ಥಾನಕ್ಕೆ ಕುಸಿದಿದೆ. 400 ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಇತರ ಸಂಸ್ಥಗಳೆಂದರೆ ಐಐಟಿ ದೆಹಲಿ (185), ಐಐಟಿ ಬಾಂಬೆ (219), ಐಐಟಿ ಮದ್ರಾಸ್ (249), ಐಐಟಿ ಕಾನ್ಪುರ್ (302), ಐಐಟಿ ಖರಗ್ಪುರ್ (313) ಮತ್ತು ಐಐಟಿ ರೂರ್ಕೆ (399).

There are 10 questions to complete.

Leave a Comment

This site uses Akismet to reduce spam. Learn how your comment data is processed.