ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 17 (ಭೂಗೋಳ)

Question 1

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1) ಗ್ಯಾಲಕ್ಸಿಗಳು ಅನಿಲ, ವಿಶ್ವಧೂಳಿ ಮತ್ತು ನಕ್ಷತ್ರಗಳನ್ನೊಳಗೊಂಡಿದೆ

2) ಸುರುಳಿಯಾಕಾರ, ಅಂಡಾಕಾರ ಮತ್ತು ಅನಿಯಮಿತ ಗ್ಯಾಲಕ್ಸಿ ಎಂಬ ಮೂರು ವಿಧಗಳಿವೆ

3) ಮಹಾಸ್ಪೋಟದ ನಂತರ ಗ್ಯಾಲಕ್ಸಿಗಳು, ನಕ್ಷತ್ರಗಳು, ಧೂಮಕೇತುಗಳು ರೂಪಗೊಂಡಿವೆ

ಈ ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?

A
3 ಮಾತ್ರ
B
1 ಮತ್ತು 3
C
2 ಮಾತ್ರ
D
ಯಾವುದೂ ಇಲ್ಲ
Question 1 Explanation: 
ಯಾವುದೂ ಇಲ್ಲ
Question 2

2. ಕೆಳಗಿನ ವಿವರಣೆಯನ್ನು ಗಮನಿಸಿ:

1) ಆಕಾಶಗಂಗೆ- ಇದಕ್ಕೆ ಕ್ಷೀರಪಥ ಎಂದೂ ಕರೆಯುತ್ತಾರೆ

2) ಆಂಡ್ರೊಮಿಡಾ- ಆಕಾಶಗಂಗೆಗೆ ಅತ್ಯಂತ ಸಮೀಪದ ಗ್ಯಾಲಕ್ಸಿ

3) ಸೂರ್ಯ- ಅನಿಯಮಿತ ಗ್ಯಾಲಕ್ಸಿಯಲ್ಲಿದೆ

ಮೇಲ್ಕಂಡ ಹೇಳಿಕೆಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ?

A
2 ಮಾತ್ರ
B
1 ಮತ್ತು 3
C
3 ಮಾತ್ರ
D
ಯಾವುದೂ ಇಲ್ಲ
Question 2 Explanation: 
3 ಮಾತ್ರ
Question 3

3. ಸೌರಮಂಡಲವು ಇವುಗಳನ್ನು ಒಳಗೊಂಡಿದೆ

1) ಸೂರ್ಯ

2) ಗ್ರಹಗಳು

3) ಕ್ಷುದ್ರಗ್ರಹಗಳು

4) ಉಲ್ಕೆಗಳು

5) ಧೂಮಕೇತುಗಳು

6) ಕೈಪರಪಟ್ಟಿ

A
2, 3, 5, 6
B
1, 2, 5
C
1, 2, 3, 6
D
ಮೇಲಿನ ಎಲ್ಲವೂ
Question 3 Explanation: 
ಮೇಲಿನ ಎಲ್ಲವೂ
Question 4

4.ಸೂರ್ಯನಲ್ಲಿ ಉಂಟಾಗುವ ಶಕ್ತಿಯು ಉಷ್ಣತೆ ಮತ್ತು ಬೆಳಕಿನ ರೂಪದಲ್ಲಿ ನಮಗೆ ಕಾಣಿಸುತ್ತದೆ- ಸೂರ್ಯನಲ್ಲಿ ಈ ಶಕ್ತಿಯ ಉಗಮಕ್ಕೆ ಕಾರಣವಾದ ಅಂಶ ಯಾವುದು?

A

ಹೀಲಿಯಂನ ಅಣುಗಳ ನಡುವೆ ವಿಭಜಕ ಕ್ರಿಯೆ ನಡೆದು ಜಲಜನಕ ವಸ್ತುವಾಗಿ ರೂಪಗೊಳ್ಳುತ್ತದೆ

B

ಜಲಜನಕ ಪರಮಾಣುಗಳ ನಡುವೆ ವಿಭಜಕ ಕ್ರಿಯೆ ನಡೆದು ಹೀಲಿಯಂ ವಸ್ತುವಾಗಿ ರೂಪಗೊಳ್ಳುತ್ತದೆ

C

ಹೀಲಿಯಂ ಪರಮಾಣುಗಳ ನಡುವೆ ಸಂಯೋಜಕ ಕ್ರಿಯೆ ನಡೆದು ಆಮ್ಲಜನಕ ವಸ್ತುವಾಗಿ ರೂಪಗೊಳ್ಳುತ್ತವೆ

D

ಜಲಜನಕ ಪರಮಾಣುಗಳ ನಡುವೆ ಸಂಯೋಜಕ ಕ್ರಿಯೆ ನಡೆದು ಹೀಲಿಯಂ ವಸ್ತುವಾಗಿ ರೂಪಗೊಳ್ಳುತ್ತವೆ

Question 4 Explanation: 

ಜಲಜನಕ ಪರಮಾಣುಗಳ ನಡುವೆ ಸಂಯೋಜಕ ಕ್ರಿಯೆ ನಡೆದು ಹೀಲಿಯಂ ವಸ್ತುವಾಗಿ ರೂಪಗೊಳ್ಳುತ್ತವೆ

Question 5

5. ಸೂರ್ಯನಲ್ಲಿ ಇರುವ ಐದು ವಲಯಗಳನ್ನು ಸೂರ್ಯನ ಕೇಂದ್ರ ಭಾಗದಿಂದ ಹೊರಭಾಗಕ್ಕೆ ಅನುಕ್ರಮವಾಗಿ ಜೋಡಿಸಿ

1) ಪ್ರಚಲನ ವಲಯ (Convection Zone)

2) ಪ್ರಭಾವಲಯ (Chromosphere)

3) ಕೇಂದ್ರ ವಲಯ(Core)

4) ಛಾಯಾ ವಲಯ (Photo Sphere)

5) ವಿಕಿರಣ ವಲಯ (Radio Active)

A
3, 1, 4, 2, 5
B
5, 1, 2, 4, 3
C
3, 5, 1, 4, 2
D
1, 5, 2, 4, 3
Question 5 Explanation: 
3, 5, 1, 4, 2
Question 6

6. ಸರಿಯಾದ ಹೇಳಿಕೆಗಳನ್ನು ಗುರುತಿಸಿ:

1) ಗ್ರಹಗಳು ಸೂರ್ಯನ ಸುತ್ತಲೂ ವೃತ್ತಾಕಾರದಲ್ಲಿ ಸುತ್ತುತ್ತವೆ

2) ಉಪಗ್ರಹಗಳು ಗ್ರಹಗಳ ಸುತ್ತ ಸುತ್ತುತ್ತವೆ

3) ಗ್ರಹಗಳು ನಕ್ಷತ್ರಗಳ ಸುತ್ತಲೂ ಮೊಟ್ಟೆಯಾಕಾರದಲ್ಲಿ ಸುತ್ತುತ್ತವೆ

A
2 ಮತ್ತು 3
B
1 ಮತ್ತು 2
C
ಮೇಲಿನ ಎಲ್ಲವೂ
D
ಯಾವುದೂ ಇಲ್ಲ
Question 6 Explanation: 
2 ಮತ್ತು 3
Question 7

7. ಹೊಂದಿಸಿ ಬರೆಯಿರಿ:

1) ಬೆಳಕಿನ ವೇಗ A. ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ

2) ಬೆಳಕಿನ ವರ್ಷ B. ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ದೂರ

3) ಖಗೋಳೀಯಮಾನ C. ಬೆಳಕು ಒಂದು ಸೆಕೆಂಡಿಗೆ ಕ್ರಮಿಸುವ ವೇಗ

A
1- B, 2-C , 3-A
B
1- C, 2-A , 3-B
C
1- C, 2-B , 3-A
D
1- A, 2-B , 3-C
Question 7 Explanation: 
1- C, 2-A , 3-B
Question 8

8. ಈ ಕೆಳಗಿನವುಗಳಲ್ಲಿ ಯಾವುದು/ವು ಗ್ರಹಗಳ ಪ್ರಮುಖ ಅಂಶಗಳಾಗಿವೆ

1) ಇವು ವಕ್ರೀಭವನಕ್ಕೊಳಗಾಗಿ ಹೊಳೆಯುತ್ತವೆ

2) ಅನಿಲ ಮತ್ತು ಶಿಲಾಮಯಗಳಾಗಿವೆ

3) ತೇಜೋರಾಶಿಗಳ ಸುತ್ತ ಸುತ್ತುತ್ತವೆ

4) ನಕ್ಷತ್ರಗಳ ಸುತ್ತ ತಿರುಗುತ್ತವೆ

A
1, 3, 4
B
2 ಮತ್ತು 3
C
2 ಮತ್ತು 4
D
1, 2, 3
Question 8 Explanation: 
2 ಮತ್ತು 4
Question 9

9. ಈ ಕೆಳಗೆ ಕೊಟ್ಟಿರುವ ಆಕಾಶಕಾಯಗಳನ್ನು ಶ್ರೇಣಿಕೃತ ವ್ಯವಸ್ಥೆಯಲ್ಲಿ ಅವರೋಹಣ ಕ್ರಮದಲ್ಲಿ ಬರೆಯಿರಿ

1) ಉಪಗ್ರಹಗಳು

2) ಸಣ್ಣ ಗ್ರಹಗಳು

3) ವಿಶ್ವ

4) ಗ್ಯಾಲಕ್ಸಿ

5) ಗ್ರಹಗಳು

6) ಕ್ಷುದ್ರ ಗ್ರಹಗಳು

A
3, 4, 5, 1, 2, 6
B
3, 5, 4, 2, 6, 1
C
4, 3, 6, 1, 3, 2
D
6, 3, 4, 1, 3, 2
Question 9 Explanation: 
3, 4, 5, 1, 2, 6
Question 10
10.ಸೂರ್ಯನಿಗೆ ಹತ್ತಿರವಿರುವ ನಕ್ಷತ್ರವೆಂದರೆ
A
ಆಂಡ್ರೋಮೆಡ
B
ಕ್ಯಾಲಿಸ್ಟೋ
C
ಟೈಟಾನ್
D
ಪ್ರಾಕ್ಸಿಮಾ ಸೆಂಚರಿ
Question 10 Explanation: 
ಪ್ರಾಕ್ಸಿಮಾ ಸೆಂಚರಿ
There are 10 questions to complete.

11 Thoughts to “ಸಾಮಾನ್ಯ ಜ್ಞಾನ ಕ್ವೀಜ್ 16”

  1. Supper congratulate young starsigi tumba use aithu

  2. Basavaraj

    Super questions

  3. Anonymous

    Answer e questions ge

    1. Basavaraj ib

      Super sir

  4. ಮಹಂತೇಶ್

    super

  5. Nagaraja D

    Super thanks

Leave a Comment

This site uses Akismet to reduce spam. Learn how your comment data is processed.