ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 16

Question 1

1.‘ಲಾಹೋರ್ ಪಿತೂರಿ’ಯಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಆಂಗ್ಲರಿಂದ ಬಂಧನಕ್ಕೊಳಗಾಗಿ, ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು ಯಾರು?

A

ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರನಾಥ ತಿಲಕ್

B

ಗೋಪಾಲಕೃಷ್ಣ ಗೋಖಲೆ, ಎಂ.ಜಿ.ರಾನಡೆ, ಜಯಪ್ರಕಾಶ್ ನಾರಾಯಣ್

C

ಬಿಪಿನ್ ಚಂದ್ರಪಾಲ್, ಸುಖದೇವ್, ಈಶ್ವರಚಂದ್ರ ಖಂಡ್ರೆ

D

ಜೈಗೋಪಾಲ್, ರಾಜ್ ಗುರು, ಭಗತ್ ಸಿಂಗ್

Question 1 Explanation: 
ಜೈಗೋಪಾಲ್, ರಾಜ್ ಗುರು, ಭಗತ್ ಸಿಂಗ್
Question 2
2.ಅಮೆರಿಕಾದ ‘ಮೋಟರ್ ಸಿಟಿ’ ಎಂದು ಕರೆಯಲ್ಪಡುವ ಡೆಟ್ರಾಯ್ಟ್ ನಗರ ತನ್ನ ಅಟೋಮೊಬೈಲ್ ಉದ್ಯಮಕ್ಕೆ ಹೆಸರುವಾಸಿಯಾಗಿದೆ, ಹಾಗೆಯೇ ‘ ಭಾರತದ ಡೆಟ್ರಾಯ್ಟ್’ ಎಂದು ಯಾವ ನಗರವನ್ನು ಕರೆಯಲಾಗುತ್ತದೆ?
A
ಪೂಣೆ
B
ಚೆನ್ನೈ
C
ಕಾನ್ಪುರ
D
ಜೆಮ್ ಷೆಡ್ ಪುರ
Question 2 Explanation: 
ಚೆನ್ನೈ
Question 3

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

1. ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆದಿರುವ ಕಾಲ್ಪನಿಕ ರೇಖೆಗಳಿಗೆ ರೇಖಾಂಶ ಎನ್ನುತ್ತಾರೆ

2. ಭಾರತದ ಮೂಲಕ ಸುಮಾರು 29-30 ರೇಖಾಂಶಗಳು ಹಾದು ಹೋಗುತ್ತವೆ

3. 15 ಡಿಗ್ರಿ ರೇಖಾಂಶವನ್ನು ಹಾದು ಹೋಗಲು 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ

4. ಭೂಗೋಳದ ಮೇಲೆ ಒಟ್ಟು 180 ರೇಖಾಂಶಗಳನ್ನು ಎಳೆಯಲಾಗಿದೆ

ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು/ವು ತಪ್ಪಾಗಿದೆ?

A
2 ಮತ್ತು 4
B
4 ಮಾತ್ರ
C
1 ಮತ್ತು 3
D
3 ಮಾತ್ರ
Question 3 Explanation: 
4 ಮಾತ್ರ
Question 4

4 ಈ ಕೆಳಗೆ ಕಬ್ಬಿಣದ ಅದಿರುಗಳ ಹೆಸರನ್ನು ಗಮನಿಸಿ”

1. ಲೆಮೊನೈಟ್

2. ಮ್ಯಾಗ್ನಟೈಟ್

3. ಸಿಡರೈಟ್

4. ಹೆಮಟೈಟ್

ಇವುಗಳಲ್ಲಿ ಅತೀ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುವ ಅದಿರಿನಿಂದ ಇಳಿಕೆ ಕ್ರಮದಲ್ಲಿ ಜೋಡಿಸಿ

A
2, 4, 3, 1
B
4, 2, 1, 3
C
2, 4, 1, 3
D
4, 1, 3, 2
Question 4 Explanation: 
2, 4, 1, 3
Question 5

5 ಕಾವೇರಿ ನದಿಯ ಉಪನದಿಗಳನ್ನು ಗುರುತಿಸಿ:

1. ಅಮರಾವತಿ

2. ಭವಾನಿ

3. ಹೊನ್ನುಹೊಳೆ

4. ಚಿನಾರ್

5. ಕಬಿನಿ

A
1, 3 ಮತ್ತು 5
B
2, 3, 4 ಮತ್ತು 5
C
1, 2, 4 ಮತ್ತು 5
D
ಮೇಲಿನ ಎಲ್ಲವೂ
Question 5 Explanation: 
ಮೇಲಿನ ಎಲ್ಲವೂ
Question 6

6. ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಹೇಳಿಕೆ 1: ಬಾಂಗ್ಲಾದೇಶ ಮತ್ತು ಭಾರತ ಎರಡರಲ್ಲೂ ಗಂಗಾ ನದಿ ಹರಿಯುತ್ತದೆ

ಹೇಳಿಕೆ 2: ಬಾಂಗ್ಲಾದೇಶ ಮತ್ತು ಭಾರತದ ನಡುವೆ ಗಂಗಾ ನದಿ ನೀರಿನ ಹಂಚಿಕೆ ವಿವಾದವಿದೆ

ಹೇಳಿಕೆ 3: ಗಂಗಾ ನದಿಗೆ ಅಡ್ಡಲಾಗಿ ಭಾರತದಲ್ಲಿ ಫರಕ್ಕಾ ಅಣೆಕಟ್ಟು ನಿರ್ಮಿಸಲಾಗಿದೆ

ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ?

A
1 ಮತ್ತು 2
B
1 ಮತ್ತು 3
C
2 ಮಾತ್ರ
D
ಮೇಲಿನ ಎಲ್ಲವೂ
Question 6 Explanation: 
ಮೇಲಿನ ಎಲ್ಲವೂ
Question 7

7. ಪ್ರೊಟೀನ್ಜೇಡ ತನ್ನ ದೇಹದಲ್ಲಿ ಉತ್ಪಾದನೆಯಾಗುವ ಒಂದು ರೀತಿಯ ದ್ರವವನ್ನು ಸ್ರವಿಸಿ ತನ್ನ ರಕ್ಷಣೆಗಾಗಿ ಬಲೆಯನ್ನು ಹಣೆಯುತ್ತದೆ, ಈ ಬಲೆಯಲ್ಲಿ ಇರುವ ಅಂಶ ಯಾವುದು?

A
ಪ್ರೊಟೀನ್
B
ಪಾಲಿಸ್ಯಾಕರೈಡ್
C
ಕಾರ್ಬೊಹೈಡ್ರೇಟ್
D
ಲಿಪಿಡ್
Question 7 Explanation: 
ಪ್ರೊಟೀನ್
Question 8

8.ದೇಹದ ಯಾವುದೇ ಭಾಗದಲ್ಲಿ ರಕ್ತ ಸ್ರವಿಸಿದಾಗ ಕೆಲವೇ ನಿಮಿಷಗಳಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಸೋರಿಕೆ ನಿಂತುಹೋಗುತ್ತದೆ, ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ವಿಟಮಿನ್ ಯಾವುದು?

A
ವಿಟಮಿನ್ ಇ
B
ವಿಟಮಿನ್ ಸಿ
C
ವಿಟಮಿನ್ ಕೆ
D
ವಿಟಮಿನ್ ಡಿ
Question 8 Explanation: 
ವಿಟಮಿನ್ ಕೆ
Question 9

9.1896 ರಲ್ಲಿ ಜರುಗಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಈ ಕೆಳಕಂಡ ಯಾವುದರಿಂದ ಹೆಚ್ಚು ಗಮನ ಸೆಳೆಯಿತು?

A
ಪ್ರಪ್ರಥಮವಾಗಿ ತ್ರಿವರ್ಣ ಧ್ವಜ ಹಾರಿಸಲಾಯಿತು
B
ಪ್ರಪ್ರಥಮವಾಗಿ ರಾಷ್ಟ್ರಗೀತೆ ಹಾಡಲಾಯಿತು
C
ಪ್ರಪ್ರಥಮವಾಗಿ ಸ್ವತಂತ್ರ ಭಾರತದ ಘೋಷಣೆ ಮಾಡಲಾಯಿತು
D
ಪ್ರಪ್ರಥಮವಾಗಿ ವಂದೇ ಮಾತರಂ ಹಾಡಲಾಯಿತು
Question 9 Explanation: 
ಪ್ರಪ್ರಥಮವಾಗಿ ವಂದೇ ಮಾತರಂ ಹಾಡಲಾಯಿತು
Question 10
10.ಭಾರತೀಯ ರಿಸರ್ವ್ ಬ್ಯಾಂಕ್ ಈ ಕೆಳಕಂಡ ಯಾವ ಬಡ್ಡಿ ಆಧಾರದ ಮೇಲೆ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಗೆ ಸಾಲವನ್ನು ನೀಡುತ್ತದೆ?
A
ಬ್ಯಾಂಕ್ ದರ
B
ರೆಪೋ ದರ
C
ರಿಸರ್ವ್ ದರ
D
ಠೇವಣಿ ದರ
Question 10 Explanation: 
ಬ್ಯಾಂಕ್ ದರ
There are 10 questions to complete.

6 Thoughts to “ಸಾಮಾನ್ಯ ಜ್ಞಾನ ಕ್ವೀಜ್ 15”

  1. NARASIMHAMURTHY B K

    Too Good Question Pls

  2. Tammanna sahukar

    Thanks sir

  3. Lokesh

    Thanks to creat like this site

Leave a Comment

This site uses Akismet to reduce spam. Learn how your comment data is processed.