ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 25, 2016

Question 1

1. ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿಯನ್ನು ಯಾವ ದೇಶದಲ್ಲಿ ಆರಂಭಿಸಲಾಯಿತು?

A
ಸ್ವಿಟ್ಜರ್ಲ್ಯಾಂಡ್
B
ಅಮೆರಿಕಾ
C
ಸಿಂಗಾಪುರ
D
ನಾರ್ವೆ
Question 1 Explanation: 
ಸಿಂಗಾಪುರ:

ಸಿಂಗಾಪುರದಲ್ಲಿ ವಿಶ್ವದ ಮೊದಲ ವಿನೂತನ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿಲಾಗಿದೆ. ಸಿಂಗಾಪುರ ಮೂಲದ ಸ್ಟಾರ್ಟಪ್ ಸಂಸ್ಥೆ ನುಟುನೋಮಿ ಈ ಚಾಲಕ ರಹಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಿದೆ. ನುಟನೋಮಿ ಮೂಲತಃ ಅಮೆರಿಕದ ಎಂಐಟಿಯ ಪದವೀಧರರಾದ ಲ್ಯಾಗ್ನೆಮ್ಮಾ ಮತ್ತು ಎಮಿಲಿಯೋ ಎಂಬ ತಂತ್ರಜ್ಞರು 2013ರಲ್ಲಿ ಹುಟ್ಟುಹಾಕಿದ್ದ ಸಂಸ್ಥೆಯಾಗಿದೆ. ಈ ಸಂಸ್ಥೆ ಕಾರುಗಳನ್ನು ನಿರ್ಮಿಸುವುದಿಲ್ಲವಾದರೂ ಸಾಮಾನ್ಯ ಕಾರುಗಳಿಗೆ ಸೆನ್ಸರ್ ಮತ್ತು ಕ್ಯಾಮೆರಾ ಅಳವಡಿಸಿ, ಅದು ಸ್ವಯಂಚಾಲಿತವಾಗಿ ಚಲಿಸುವಂಥ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿ ಕಾರಿಗೆ ಅಳವಡಿಸಿದೆ. ಈ ವಿನೂತನ ಪರಿಕಲ್ಪನೆಯ ಟ್ಯಾಕ್ಸಿ ಸೇವೆಗೆ ಕಳೆದ ತಿಂಗಳಷ್ಟೇ ಸಿಂಗಾಪುರ ಸರ್ಕಾರ ಅನುಮತಿ ನೀಡಿತ್ತು.

Question 2

2. ಯಾವ ರಾಜ್ಯ ಇತ್ತೀಚೆಗೆ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರನ್ನು “ಬೇಟಿ ಬಚವೊ ಬೇಟಿ ಪಡಾವೊ”ದ ರಾಯಭಾರಿಯಾಗಿ ನೇಮಿಸಿದೆ?

A
ಹರಿಯಾಣ
B
ಗುಜರಾತ್
C
ಹಿಮಾಚಲ್ ಪ್ರದೇಶ
D
ಉತ್ತರಖಂಡ
Question 2 Explanation: 
ಹರಿಯಾಣ:

ಹರಿಯಾಣ ಸರ್ಕಾರ ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರನ್ನು ಬಚವೊ ಬೇಟಿ ಪಡಾವೊ”ದ ರಾಯಭಾರಿಯಾಗಿ ನೇಮಿಸಿದೆ.

Question 3

3.ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೊರೇಷನ್(NPCI) ಇತ್ತೀಚೆಗೆ ಮೊಬೈಲ್ ಮೂಲಕ ಪಾವತಿ ಮಾಡಲು UPI ಆಪ್ ಬಿಡುಗಡೆಗೊಳಿಸಿದೆ. UPI ಅಂದರೆ___________?

A
Unified Payments Identity
B
Unified Payments Interface
C
Uniform Payments Identity
D
Unified Partial Identity
Question 3 Explanation: 
Unified Payments Interface:

ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೊರೇಷನ್ (National Payment Corporation of India) UPI ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದ್ದು, ಈ ಆಪ್ ಮೂಲಕ ನಗದು ರಹಿತ ಹಣ ವರ್ಗಾವಣೆ ಸುಲಭವಾಗಲಿದೆ. UPI ಅಂದರೆ Unified Payments Interface ಎಂದರ್ಥ. ಇದು ರಿಸರ್ವ್ ಬ್ಯಾಂಕಿನ ಅಭಿಯಾನದ ಒಂದು ಭಾಗವಾಗಿದೆ. ಪ್ರಸ್ತುತ 21 ಬ್ಯಾಂಕುಗಳ ಗ್ರಾಹಕರು ಈ ಹೊಸ ಹಣ ಪಾವತಿ ಮಾರ್ಗವನ್ನು ಬಳಸಿಕೊಳ್ಳಬಹುದು. ಇನ್ನಷ್ಟು ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಯುಪಿಐ ಸೇರುವ ನಿರೀಕ್ಷೆಯಿದೆ. ಯುಪಿಐ ಯೋಜನೆಗೆ ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನೀಲೇಕಣಿ ಸಲಹಗಾರರಾಗಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಘುರಾಮ್ ರಾಜನ್ ಈ ಹೊಸ ಪಾವತಿ ತಂತ್ರಜ್ಞಾನವನ್ನು ಕಳೆದ ಏಪ್ರಿಲ್ ನಲ್ಲಿ ಆರಂಭಿಸಿದ್ದು, ಅದರ ನಂತರ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.

Question 4

4.ಇತ್ತೀಚೆಗೆ ನಿಧನರಾದ ಎ.ಆರ್.ಕಿದ್ವಾಯಿ ರವರು ______?

A
ರಾಜಕಾರಣಿ
B
ಛಾಯಾಚಿತ್ರಗಾರ
C
ಸಾಹಿತಿ
D
ಶಾಸ್ತ್ರೀಯ ಸಂಗೀತಗಾರ
Question 4 Explanation: 
ರಾಜಕಾರಣಿ:

ಸ್ವಾತಂತ್ರ ಹೋರಾಟಗಾರ, ಹಿರಿಯ ರಾಜಕಾರಣಿ ಡಾ.ಅಖ್ಲಕ್ ಉರ್ ರಹಮಾನ್ ಕಿದ್ವಾಯಿ ನಿಧನರಾದರು. ಕಿದ್ವಾಯಿ ಅವರು ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಸುದೀರ್ಘ 17 ವರ್ಷಗಳ ಕಾಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ ಹಿರಿಮೆ ಅವರದು. ಇವರಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Question 5

5.ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ ಎಲ್ಲಿದೆ?

A
ಬೆಂಗಳೂರು
B
ಮುಂಬೈ
C
ಲಕ್ನೋ
D
ನವದೆಹಲಿ
Question 5 Explanation: 
ಲಕ್ನೋ:

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ ಲಕ್ನೋ, ಉತ್ತರಪ್ರದೇಶದಲ್ಲಿದೆ.

Question 6

6.ಎಂಜಿನಿಯರಿಂಗ್ ನಲ್ಲಿ ವೈಶಿಷ್ಠ್ಯ ಸಾಧನೆ ತೋರಿದ್ದಕ್ಕಾಗಿ ಮೊದಲ IEE-IEEE ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಮಾಧವನ್ ನಾಯರ್
B
ಕಿರಣ್ ಕುಮಾರ್
C
ಸತೀಶ್ ರೆಡ್ಡಿ
D
ಅರವಿಂದ್ ಸರಸ್ವತ್
Question 6 Explanation: 
ಸತೀಶ್ ರೆಡ್ಡಿ:

ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO)ದ ಡೈರೆಕ್ಟರ್ ಜನರಲ್ ಆಗಿರುವ ಡಾ.ಜಿ.ಸತೀಶ್ ರೆಡ್ಡಿ ಅವರನ್ನು ಮೊದಲ IEE-IEEE (Institution of Engineers (India) and the Institute of Electrical and Electronics Engineers) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕ್ಷಿಪಣೆ ಮತ್ತು ಅಂತರಿಕ್ಷಯಾನ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಇವರು ನೀಡಿರುವ ಕೊಡುಗೆಯನ್ನು ಗಮನಿಸಿ ಇವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಮಧ್ಯಮ ಶ್ರೇಣಿಯ ಭೂಮಿಯಿಂದ ಗಾಳಿಗೆ ಚಿಮ್ಮುವ ಕ್ಷಿಪಣೆ ವ್ಯವಸ್ಥೆ (Medium Range Surface-to-Air Weapon System) ಸೇರಿದಂತೆ ಗೈಡೆಡ್ ಬಾಂಬ್ ಅಭಿವೃದ್ದಿಯಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.

Question 7

7.ಯಾವ ದೇಶ ಇತ್ತೀಚೆಗೆ FARC ಬಂಡುಕೋರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಐವತ್ತು ವರ್ಷಗಳ ಅಶಾಂತಿ ಮತ್ತು ಹಿಂಸೆಯನ್ನು ಅಂತ್ಯಗೊಳಿಸಿತು?

A
ದಕ್ಷಿಣ ಕೊರಿಯಾ
B
ಕೊಲೊಂಬಿಯಾ
C
ಕ್ಯೂಬಾ
D
ನೈಜೀರಿಯಾ
Question 7 Explanation: 
ಕೊಲೊಂಬಿಯಾ:

ಕೊಲೊಂಬಿಯಾ ಸರ್ಕಾರ ಮತ್ತು ಕೊಲೊಂಬಿಯಾದ ಪ್ರಮುಖ ಬಂಡುಕೋರ ದಳ FARC (Revolutionary Armed Forces of Colombia) ನಡುವೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಆ ಮೂಲಕ ಕೊಲೊಂಬಿಯಾದಲ್ಲಿ ಸುಮಾರು 50 ವರ್ಷಗಳಿಂದ ಸರ್ಕಾರ ಮತ್ತು FARC ನಡುವಿನ ಸಂಘರ್ಷಕ್ಕೆ ಅಂತಿಮ ತೆರೆ ಬಿದ್ದಿದೆ. FARC ದಂಗೆಯಿಂದ ಕಳೆದ ಐದು ದಶಕಗಳಲ್ಲಿ ಸುಮಾರು 1.5 ಲಕ್ಷ ಜನರು ಸಾವನ್ನಪ್ಪಿದ್ದರು.

Question 8

8.ಒಲಂಪಿಕ್ಸ್ ನಲ್ಲಿ ಕ್ರೀಡಾಸ್ಪೂರ್ತಿಗಾಗಿ ನೀಡಲಾಗುವ ಪ್ರತಿಷ್ಠಿತ “ಪೈರೆ ಡಿ ಕೋಬರ್ಟಿಯನ್” ಪ್ರಶಸ್ತಿ ಪಡೆದ ನಿಕ್ಕಿ ಹಾಂಬ್ಲಿನ್ ಯಾವ ದೇಶದವರು?

A
ಅಮೆರಿಕಾ
B
ನ್ಯೂಜಿಲ್ಯಾಂಡ್
C
ಜಪಾನ್
D
ನಾರ್ವೆ
Question 8 Explanation: 
ನ್ಯೂಜಿಲ್ಯಾಂಡ್:

ನ್ಯೂಜಿಲೆಂಡ್ನ ನಿಕ್ಕಿ ಹಾಂಬ್ಲಿನ್ ಹಾಗೂ ಅಮೆರಿಕದ ಅಬ್ಬೇ ಡಿ ಅಗೋಸ್ಟಿನೋ ಅವರಿಗೆ ಕ್ರೀಡಾಸ್ಪೂರ್ತಿಗಾಗಿ ನೀಡಲಾಗುವ ಪ್ರತಿಷ್ಠಿತ “ಪೈರೆ ಡಿ ಕೋಬರ್ಟಿಯನ್” ಪ್ರಶಸ್ತಿಯನ್ನು ನೀಡಲಾಗಿದೆ .ಈ ಇಬ್ಬರು ಅಥ್ಲೀಟ್ ಗಳು 5 ಸಾವಿರ ಮೀ. ಓಟದ ವೇಳೆ ಡಿಕ್ಕಿಯಾದ ಬಳಿಕ ಪರಸ್ಪರರ ಸಹಾಯದಿಂದ ಮತ್ತೆ ಓಟ ಮುಂದುವರಿಸಿ ಸ್ಪರ್ಧೆ ಮುಗಿಸಿದ ಒಲಿಂಪಿಕ್ಸ್ನಲ್ಲಿ ಕ್ರೀಡಾಸ್ಪೂರ್ತಿ ಮೆರೆದಿದ್ದರು. ಆಧುನಿಕ ಒಲಿಂಪಿಕ್ಸ್ನ ಪಿತಾಮಹಾ ಫ್ರಾನ್ಸ್ನ ಪೈರೆ ಡಿ ಕೋಬರ್ಟಿನ್ ಸ್ಮರಣಾರ್ಥ ನೀಡಲಾಗುವ ಪದಕ, ಈ ಹಿಂದೆ ಕೇವಲ 17 ಬಾರಿ ಪ್ರದಾನವಾಗಿದೆ.

Question 9

9.ಬಾಂಗ್ಲದೇಶದ ಬಂಗಾಳಿ ಕೇಳುಗರಿಗಾಗಿ ಇತ್ತೀಚೆಗೆ ಭಾರತ ಯಾವ ಹೆಸರಿನ ಆಕಾಶವಾಣಿ ಚಾನೆಲ್ ಅನ್ನು ಆರಂಭಿಸಿದೆ?

A
ಸ್ವರ ಚಾನೆಲ್
B
ಮೈತ್ರಿ ಚಾನೆಲ್
C
ಜನನಿ ಚಾನೆಲ್
D
ಬಂಗಾ ಚಾನೆಲ್
Question 9 Explanation: 
ಮೈತ್ರಿ ಚಾನೆಲ್:

ಬಂಗಾಳಿ ಕೇಳುಗರಿಗಾಗಿ ಆಕಾಶವಾಣಿ ಮೈತ್ರಿ ಚಾನೆಲ್‌ ಮತ್ತು ಅದರ ವೆಬ್‌ಸೈಟ್‌ ಅನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಕೋಲ್ಕತ್ತಾದಲ್ಲಿ ಉದ್ಘಾಟಿಸಿದರು. ಈ ಚಾನೆಲ್ ಉಭಯ ದೇಶಗಳ ನಡುವೆ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಂಬಂಧವನ್ನು ಉತ್ತಮಪಡಿಸಲಿದೆ. 1000kw DRM ಟ್ರಾನ್ಸ್ಮಿಟರ್ ಮೂಲಕ ಮೈತ್ರಿ ಚಾನೆಲ್ ಪ್ರಸಾರಗೊಳ್ಳಲಿದ್ದು, ಸಂಪೂರ್ಣ ಬಾಂಗ್ಲಾ ದೇಶವನ್ನು ತಲುಪಲಿದೆ. ವೆಬ್‌ಸೈಟ್‌ ಮತ್ತು ಮೊಬೈಲ್‌ ಆ್ಯಪ್‌ ಮೂಲಕ ಜಗತ್ತಿನ ಎಲ್ಲ ಕೇಳುಗರನ್ನು ತಲುಪಲು ಯೋಜಿಸಲಾಗಿದೆ.

Question 10

10. ರಿಯೋ ಒಲಂಪಿಕ್ಸ್ ಶೂಟಿಂಗ್ ನಲ್ಲಿ ಕಳಪೆ ಸಾಧನೆ ಕುರಿತು ರಚಿಸಲಾಗಿರುವ “ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ” ಸಮಿತಿಯ ಅಧ್ಯಕ್ಷರು ಯಾರು?

A
ಜಿತು ರಾಯ್
B
ಅಭಿನವ್ ಬಿಂದ್ರಾ
C
ಗಗನ್ ನಾರಂಗ್
D
ರಾಜ್ಯವರ್ಧನ್ ಸಿಂಗ್ ರಾಥೋಡ್
Question 10 Explanation: 
ಅಭಿನವ್ ಬಿಂದ್ರಾ:

ರಿಯೋ ಒಲಂಪಿಕ್ಸ್ ಶೂಟಿಂಗ್ ನಲ್ಲಿ ಕಳಪೆ ಸಾಧನೆ ಕುರಿತು ಐದು ಜನ ಸದಸ್ಯರ ಸಮಿತಿಯನ್ನು “ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ” ರಚಿಸಿದ್ದು, ಅಭಿನವ್ ಬಿಂದ್ರಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ರಿಯೋ ಒಲಂಪಿಕ್ಸ್ ನಲ್ಲಿ ಶೂಟರ್ ಗಳು ಪದಕ ಗೆಲ್ಲದೆ ನಿರಾಸೆ ಮೂಡಿಸಿದ ವೈಫಲ್ಯತೆಯ ಬಗ್ಗೆ ಅಧ್ಯಯನ ನಡೆಸಲಿದೆ. ಅಲ್ಲದೇ, ಮುಂದಿನ ಒಲಂಪಿಕ್ಸ್ ಗಳಲ್ಲಿ ಮತ್ತೊಮ್ಮೆ ವೈಫಲ್ಯ ಆಗದಿರುವಂತೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸಮಿತಿ ಶಿಫಾರಸ್ಸು ಮಾಡಲಿದೆ.

There are 10 questions to complete.

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 25, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗೆ ಶುಭವಾಗಲಿ

  2. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.