ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -8

Question 1

1.ರಾಜ್ಯ ಸಚಿವ ಸಂಪಟು ಇತ್ತೀಚೆಗೆ ಅನುಮೋದನೆ ನೀಡಿದ “ಚಡಚಣ ಏತ ನೀರಾವರಿ” ಯೋಜನೆಯನ್ನು ಯಾವ ನದಿ ಮೇಲೆ ನಿರ್ಮಿಸಲಾಗುವುದು?

A
ಮಲಫ್ರಭಾ
B
ಘಟಪ್ರಭಾ
C
ಭೀಮಾ
D
ಕಾಳಿ
Question 1 Explanation: 
ಭೀಮಾ :

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂ 413.20 ಕೋಟಿ ಅಂದಾಜು ಮೊತ್ತದ ಚಡಚಣ ಏತ ನೀರಾವರಿಗೆ ರಾಜ್ಯ ಸಚಿವ ಸಂಪಟು ಅನುಮೋದನೆ ನೀಡಿದೆ. ಚಡಚಣ, ಬರಡೋಲ, ಗೋಡಿಹಾಳ, ಹಾವಿನಹಾಳ, ಹಾಲಹಳ್ಳಿ, ಶಿರಡೋಣ, ರೇವತಗಾಂವ್, ನಿವರಗಿ ಹಾಗೂ ಇತರ ಗ್ರಾಮಗಳು ಬರಪೀಡಿತವಾಗಿದ್ದು, ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಭೀಮಾ ನದಿಗೆ ಅಡ್ಡಲಾಗಿ ಈಗಾಗಲೇ ನಿರ್ಮಾಣ ಮಾಡಲಾಗುತ್ತಿರುವ ಸಂಖ್ ಬ್ಯಾರೇಜ್ನ ಮೇಲ್ಭಾಗದಲ್ಲಿ ಚಡಚಣ ಏತ ನೀರಾವರಿ ಯೋಜನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಭೀಮಾ ನದಿಯಿಂದ 1.72 ಟಿಎಂಸಿ ಅಡಿ ನೀರನ್ನು ಪಡೆಯಲಾಗುವುದು. 9,215 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ, ಜನ, ಜಾನುವಾರುಗಳ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ.

Question 2

2.ಇತ್ತೀಚೆಗೆ ನಿಧನರಾದ “ಪ್ರಮೀಳಾ ಗುಡೂರು” ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದಿದ್ದರು?

A
ಶಾಸ್ತ್ರೀಯ ಸಂಗೀತ
B
ರಂಗಭೂಮಿ
C
ಸಾಹಿತ್ಯ
D
ಜಾನಪದ
Question 2 Explanation: 
ರಂಗಭೂಮಿ:

ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರು ಅವರು ಶುಕ್ರವಾರ ನಿಧನರಾದರು. ಐದು ದಶಕಗಳ ಕಾಲ ಕರ್ನಾಟಕದ ಹೆಸರಾಂತ ನಾಟಕ ಕಂಪನಿಗಳಲ್ಲಿ ಬಣ್ಣ ಹಚ್ಚಿದ್ದ ಅವರು ವೃತ್ತಿ ರಂಗಭೂಮಿಯಲ್ಲಿ ಹೆಸರಾಗಿದ್ದರು. ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ- ಪುರಸ್ಕಾರಗಳು ಅವರಿಗೆ ಸಂದಿವೆ.

Question 3

3.ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಉಪಗ್ರಹ ಆಧಾರಿತ ನಗರ ಆಸ್ತಿ ಮಾಲಕತ್ವದ ಯೋಜನೆ' (ಯುಪಿಒಆರ್) ಯನ್ನು ಯಾವ ನಗರದಲ್ಲಿ ಅನುಷ್ಟಾನಗೊಳಿಸಲಾಗಿದೆ?

A
ಬೆಂಗಳೂರು
B
ಧಾರವಾಡ
C
ಶಿವಮೊಗ್ಗ
D
ತುಮಕೂರು
Question 3 Explanation: 
ಶಿವಮೊಗ್ಗ:

ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ 'ಉಪಗ್ರಹ ಆಧಾರಿತ ನಗರ ಆಸ್ತಿ ಮಾಲಕತ್ವದ ಯೋಜನೆ' (ಯುಪಿಒಆರ್) ಯನ್ನು ಕಂದಾಯ ಇಲಾಖೆ ಅನುಷ್ಠಾನಗೊಳಿಸಿದೆ. ಇದೀಗ ಶಿವಮೊಗ್ಗ ನಗರದಲ್ಲಿ ಯಾವುದೇ ಸ್ಥಿರಾಸ್ತಿಯ ನೋಂದಣೆ-ಪರಬಾರೆ ಮಾಡಲು ಪ್ರಾಪರ್ಟಿ ರೆಕಾರ್ಡ್ (ಪಿ.ಆರ್)ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಇದಕ್ಕಾಗಿಯೇ ಶಿವಮೊಗ್ಗ ನಗರದ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಸುಸಜ್ಜಿತ ಯುಪಿಒಆರ್ ಕಚೇರಿಯನ್ನೂ ತೆರೆಯಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಈ ಕಚೇರಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಸರ್ವೇ ಇಲಾಖೆ ಈ ಕಚೇರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಖಾಸಗಿ ಸಂಸ್ಥೆಯ ಹಲವು ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.

Question 4

4.ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ಕರ್ನಾಟಕದ ನಗರ ಪ್ರದೇಶದ ಬಡ ಜನರಿಗೆ ನಿರ್ಮಿಸಲು ಎಷ್ಟು ವಸತಿ ಘಟಕಗಳನ್ನು ಮಂಜೂರು ಮಾಡಿದೆ?

A
36,254
B
40,200
C
35,312
D
28,700
Question 4 Explanation: 
36,254:

ಕರ್ನಾಟಕ 468 ಕೋಟಿ ರೂ.ವೆಚ್ಚದಲ್ಲಿ 36,254 ಮನೆಗಳನ್ನು ನಗರ ಪ್ರದೇಶದ ಬಡ ಜನರಿಗೆ ನಿರ್ಮಿಸಲು ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ಅನುಮೋದನೆ ನೀಡಿದೆ. ಹೂಪಾ(HUPA) ಕಾರ್ಯದರ್ಶಿ ಡಾ.ನಂದಿತಾ ಮುಖರ್ಜಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಅಂತರ ಸಚಿವಾಲಯಗಳ ಮಂಜೂರಾತಿ ಮತ್ತು ನಿಗಾ ಸಮಿತಿಯು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿದೆ.

Question 5

5.ಕರ್ನಾಟಕ ಕೃಷಿ ಬೆಲೆ ಆಯೋಗದ ಈಗಿನ ಅಧ್ಯಕ್ಷರು ಯಾರು?

A
ಹನುಮನಗೌಡ ಬೆಳಗುರ್ಕಿ
B
ಪ್ರಕಾಶ್ ಕಮ್ಮರಡಿ
C
ನರಸಿಂಹ ರೆಡ್ಡಿ
D
ಕುರುಬೂರು ಚಂದ್ರಶೇಖರ್
Question 5 Explanation: 
ಪ್ರಕಾಶ್ ಕಮ್ಮರಡಿ:

ಡಾ.ಟಿ.ಎಸ್.ಪ್ರಕಾಶ್ ಕಮ್ಮರಡಿ ಅವರು ಕರ್ನಾಟಕ ಕೃಷಿ ಬೆಲೆ ಆಯೋಗದ ಈಗಿನ ಅಧ್ಯಕ್ಷರು. ಅತ್ಯುತ್ತಮ ಶೈಕ್ಷಣಿಕ ಹಿನ್ನಲೆ ಮತ್ತು ಕೃಷಿ ಮಾರುಕಟ್ಟೆ ಸೇರಿದಂತೆ ಕೃಷಿ ಅರ್ಥಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕೃಷಿ ತಜ್ಞರವರ ಅಧ್ಯಕ್ಷತೆಯ ನೇತೃತ್ವದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ ಕಾರ್ಯ ನಿರ್ವಹಿಸುತ್ತದೆ. ಅಧ್ಯಕ್ಷರಿಗೆ ಸಹಾಯಕರಾಗಿ ಐವರು ಸದಸ್ಯರಿದ್ದು, ಇದರಲ್ಲಿ ಸರ್ಕಾರದಿಂದ ಒಬ್ಬರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವರು. ಐದು ಸದಸ್ಯರುಗಳಲ್ಲಿ ಕೃಷಿ ಅರ್ಥಶಾಸ್ತ್ರ, ಕೃಷಿ ಮಾರಾಟ, ಕೃಷಿ ನಿರ್ವಹಣೆ ಇತ್ಯಾದಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಇಬ್ಬರು ಅಧಿಕಾರಿ ಸದಸ್ಯರು. ಇಬ್ಬರು ಅಧಿಕಾರೇತರ ಸದಸ್ಯರು - ಪ್ರಗತಿಪರ ದೃಷ್ಟಿಕೋನವನ್ನು ಹೊಂದಿರುವ ರೈತರು ಮತ್ತು ಕೃಷಿ ಉತ್ಪನ್ನಗಳ ಮಾರಟದ ಬಗ್ಗೆ ಅನುಭವ ಹೊಂದಿರುವವರು.

Question 6

6.ಈ ಕೆಳಗಿನ ಯಾವ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಎರಡು ರಾಸಾಯನಿಕ ಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಲು ಸಮ್ಮತಿಸಿದೆ?

A
ದಾವಣಗೆರೆ ಮತ್ತು ರಾಯಚೂರು
B
ರಾಯಚೂರು ಮತ್ತು ಕೋಲಾರ
C
ಧಾರವಾಡ ಮತ್ತು ಬೆಳಗಾವಿ
D
ಮೈಸೂರು ಮತ್ತು ತುಮಕೂರು
Question 6 Explanation: 
ದಾವಣಗೆರೆ ಮತ್ತು ರಾಯಚೂರು:

ಬಹುದಿನಗಳ ಬೇಡಿಕೆಯಂತೆ ರಾಜ್ಯದಲ್ಲಿ ಕೇಂದ್ರ ಸರ್ಕಾರ ಎರಡು ರಾಸಯನಿಕ ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಉತ್ತರ ಕರ್ನಾಟಕದ ಮಧ್ಯಭಾಗವಾದ ರಾಯಚೂರು ಮತ್ತು ರಾಜ್ಯದ ಎರಡನೇ ರಾಜದಾನಿ ಎನಿಸಿಕೊಂಡಿರುವ ಮ್ಯಾಚೆಂಸ್ಟಾರ್ ಖ್ಯಾತಿಯ ದಾವಣಗೆರೆಯಲ್ಲಿ ಈ ಎರಡೂ ಕಾರ್ಖಾನೆಗಳು ಆರಂಭವಾಗಲಿವೆ. ಸುಮಾರು 10ಸಾವಿರ ಕೋಟಿ ಬಂಡವಾಳ ಹೂಡಿಕೆಯಲ್ಲಿ ವಾರ್ಷಿಕ ನೂರು ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗಳಿಗೆ ದಾಬೋಲ್ನಿಂದ ಬಿಡದಿಗೆ ಸರಬರಾಜಾಗುವ ಗ್ಯಾಸ್ ಪಡೆಯಲು ತೀರ್ಮಾನಿಸಲಾಗಿದೆ. ಸಮತೋಲವನ್ನು ಸರಿದೂಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮೊದಲ ಹಂತದಲ್ಲೇ ರಾಯಚೂರು ಹಾಗೂ ದಾವಣಗೆರೆ ಕಾರ್ಖಾನೆಗಳನ್ನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಹಾಗೂ ಮೈಸೂರು ಇಲ್ಲವೇ ಚಾಮರಾಜನಗರದಲ್ಲಿ ಈ ಕಾರ್ಖಾನೆಗಳು ಪ್ರಾರಂಭವಾಗಲಿವೆ.

Question 7

7.ಈ ಕೆಳಗಿನ ಯಾವ ಬಂದರನ್ನು ಪೂರ್ಣ ಪ್ರಮಾಣದ ಬಂದರನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ?

A
ತದ್ರಿ ಬಂದರು
B
ಬೇಲೆಕೇರಿ ಬಂದರು
C
ಭಟ್ಕಳ ಬಂದರು
D
ಮಲ್ಪೆ ಬಂದರು
Question 7 Explanation: 
ಬೇಲೆಕೇರಿ ಬಂದರು:

ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರನ್ನು ಪೂರ್ಣ ಪ್ರಮಾಣದ ಬಂದರನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಕೇಂದ್ರ ಭೂ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ಭೌಗೋಳಿಕವಾಗಿ, ನೈಸರ್ಗಿಕವಾಗಿ ಪೂರಕ ವಾತಾವರಣ ಹೊಂದಿರುವ ಬೇಲೆಕೇರಿ ಉತ್ತಮ ಬಂದರಾಗುವ ಅರ್ಹತೆ ಹೊಂದಿದೆ. ಅದನ್ನು ಅಭಿವೃದ್ಧಿಪಡಿಸಿದಲ್ಲಿ ಆ ಭಾಗದ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದರು.ಕರ್ನಾಟಕ ಸರ್ಕಾರವು ಬಂದರಿನ ಅಭಿವೃದ್ಧಿ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಪರವಾನಗಿ ಪಡೆದು ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರವು ರೂ 6000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಿದ್ಧವಿದೆ ಎಂದಿದ್ದಾರೆ.

Question 8

8.ಇತ್ತೀಚೆಗೆ ಸುದ್ದಿಯಲ್ಲಿದ್ದ ರಾಜ್ಯದ “ಕಲ್ಯಾಣ ಗ್ರಾಮ ಯೋಜನೆ”ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?

I) ಈ ಯೋಜನೆಯನ್ನು ಆರಂಭಿಕ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ ಎರಡು ಗ್ರಾಮಗಳನ್ನು ಪ್ರಾಯೋಗಿಕವಾಗಿ ನಡೆಸಲು ಉದ್ದೇಶಿಸಲಾಗಿದೆ

II) ರಾಜ್ಯ ಕೃಷಿ ಇಲಾಖೆಯು ಈ ಯೋಜನೆಯನ್ನು ಅನುಷ್ಟಾನಗೊಳಿಸುತ್ತದೆ

ಈ ಕೆಳಗಿನ ಕೋಡ್ ಗಳಿಂದ ಸರಿಯಾದ ಉತ್ತರವನ್ನು ಆರಿಸಿ:

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿಯಾಗಿವೆ
D
ಎರಡು ಹೇಳಿಕೆ ತಪ್ಪಾಗಿವೆ
Question 8 Explanation: 
ಹೇಳಿಕೆ ಒಂದು ಮಾತ್ರ:

ರೈತರು ಕೃಷಿಯಿಂದ ವಿಮುಖರಾಗುತ್ತಿರುವುದನ್ನು ಮನಗಂಡಿರುವ ಕರ್ನಾಟಕ ಕೃಷಿ ಬೆಲೆ ಆಯೋಗ, ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ತಾನೇ ಸ್ವಯಂಕೃಷಿ ನಡೆಸಿ ಆದಾಯವೃದ್ಧಿಗೆ ಮಾರ್ಗ ಹುಡುಕುವ ಸಲುವಾಗಿ ದೇಶದಲ್ಲೇ ಮೊದಲ ಬಾರಿ "ಕಲ್ಯಾಣ ಗ್ರಾಮ ಯೋಜನೆ'ಯನ್ನು ಜಾರಿಗೊಳಿಸಿದೆ. ಯೋಜನೆಗೆ ಆರಂಭಿಕ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ ಎರಡು ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲು ಉದ್ದೇಶಿಸಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆದಿದೆ. ಹಿರಿಯೂರು ತಾಲೂಕಿನ ಒಂದು ಗ್ರಾಮ ಹಾಗೂ ಬುಡಕಟ್ಟು ಸಮುದಾಯದವರೇ ಹೆಚ್ಚಿರುವ ಚಳ್ಳಕೆರೆ ತಾಲೂಕಿನ ಒಂದು ಗ್ರಾಮವನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಕಲ್ಯಾಣ ಗ್ರಾಮಯೋಜನೆಯಡಿ ಹಿರಿಯೂರು ತಾಲೂಕಿನ ಬಬ್ಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಕಚೇರಿ ತೆರೆಯಲಾಗುತ್ತದೆ.

Question 9

9.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) ರಾಜ್ಯ ಸರ್ಕಾರ ಪಾವಗಡದಲ್ಲಿ ಸ್ಥಾಪಿಸಲಿರುವ ಸೌರ ವಿದ್ಯುತ್ ಘಟಕ ದೇಶದ ಅತಿ ದೊಡ್ಡ ವಿದ್ಯುತ್ ಘಟಕ ಆಗಲಿದೆ.

II) ಉದ್ದೇಶಿತ ಈ ವಿದ್ಯುತ್ ಘಟಕದ ಸಾಮರ್ಥ್ಯ 2000 ಮೆ.ವ್ಯಾ

III) ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಇದರಲ್ಲಿ 1500 ಮೆ.ವ್ಯಾ ಉತ್ಪಾದಿಸಲಿದೆ.

ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

A
I & II ಮಾತ್ರ
B
I & III ಮಾತ್ರ
C
II & III ಮಾತ್ರ
D
ಮೇಲಿನ ಎಲ್ಲವೂ
Question 9 Explanation: 
ಮೇಲಿನ ಎಲ್ಲವೂ:

ಕರ್ನಾಟಕ ರಾಜ್ಯ ಸರ್ಕಾರ ತುಮಕೂರು ಜಿಲ್ಲೆಯ ಪಾವಗಡದ ಬಳಿ 2000 ಮೆ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲಿದ್ದು, ಇದು ದೇಶದಲ್ಲಿಯೇ ದೊಡ್ಡ ಸೌರ ವಿದ್ಯುತ್ ಘಟಕ ಎನಿಸಲಿದೆ. ಆಂಧ್ರಪ್ರದೇಶದಲ್ಲಿ ತಲೆಯತ್ತಲಿರುವ 1000 ಮೆ.ವ್ಯಾ ಸೌರ ವಿದ್ಯುತ್ ಘಟಕ ಇದುವರೆಗೂ ದೇಶದ ಅತಿ ದೊಡ್ಡ ವಿದ್ಯುತ್ ಘಟಕ ಆಗಿತ್ತು. 2000 ಮೆ.ವ್ಯಾಟ್ ನಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಇದರಲ್ಲಿ 1500 ಮೆ.ವ್ಯಾ ಉತ್ಪಾದಿಸಲಿದೆ.

Question 10

10.ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಅಭಿವೃದ್ದಿಪಡಿಸಿರುವ “ಆರ್ಕಾರಕ್ಷಕ” ಯಾವುದರ ತಳಿ ಆಗಿದೆ?

A
ಬದನೆ ಕಾಯಿ
B
ಟೊಮೊಟೊ
C
ಕುಂಬಳಕಾಯಿ
D
ಈರುಳ್ಳಿ
Question 10 Explanation: 
ಟೊಮೊಟೊ:

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಆರ್ಕಾರಕ್ಷಕ್ ಎಂಬ ಟೊಮೊಟೊ ತಳಿಯನ್ನು ಅಭಿವೃದ್ದಿಪಡಿಸಿದೆ. ಅರ್ಕಾರಕ್ಷಕ್ ಟೊಮೊಟೊ ತಳಿಯು ಬೇರೆಲ್ಲಾ ತಳಿಗಳಿಗಿಂತ ವಿಶಿಷ್ಟವಾಗಿದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ, ಅಧಿಕ ಇಳುವರಿ ಹಾಗೂ ಅಧಿಕ ಬಾಳಿಕೆ ಹಾಗೂ ಸಾಗಾಣಿಕೆಗೆ ಸಹಕಾರಿಯಾಗಿದೆ. ಹಾಗಾಗಿ ರೈತರು ಹೆಚ್ಚಿನ ಆದಾಯ ಪಡೆಯಬಹುದು. ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಎ.ಟಿ.ಸದಾಶಿವ ಮತ್ತು ತಂಡದವರು ಅಭಿವೃದ್ದಿಪಡಿಸಿದ್ದು ಈ ತಳಿಯಿಂದ ಸಹಸ್ರಾರು ರೈತರಿಗೆ ಉಪಯುಕ್ತವಾಗಿದೆ. ಹಣ್ಣು ಗಟ್ಟಿಯಾಗಿದ್ದು ರಫ್ತಿಗೆ ಸಹಕಾರಿಯಾಗಿದೆ. ಉತ್ತಮ ಬಣ್ಣ ಮತ್ತು ರುಚಿಯನ್ನು ಹೊಂದಿದೆ.

There are 10 questions to complete.

4 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -8”

  1. mahesh

    Lot of thanks good questions

Leave a Comment

This site uses Akismet to reduce spam. Learn how your comment data is processed.