ಪ್ರೋ ಸಿ.ಎನ್.ಆರ್ ರಾವ್ ಗೆ ಗಣಿತತಜ್ಞ “ಭಾಸ್ಕರ” ಪ್ರಶಸ್ತಿ

ಹಿರಿಯ ವಿಜ್ಞಾನಿ, ಭಾರತ ರತ್ನ ಪುರಸ್ಕೃತ ಪ್ರೋ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ರವರನ್ನು ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ನೀಡುತ್ತಿರುವ ಮೊದಲ ‘ಭಾಸ್ಕರ’ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಗಣಿತತಜ್ಞ, ಖಗೋಳವಿಜ್ಞಾನಿ ಭಾಸ್ಕರಾಚಾರ್ಯರ (ಭಾಸ್ಕರ-2) ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲಾಗುವುದೆಂದು ಪ್ರತಿಷ್ಠಾನ ತಿಳಿಸಿದೆ.

ಸಿ.ಎನ್.ಆರ್. ರಾವ್ ಬಗ್ಗೆ:

  • ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ರವರು ಜೂನ್ 30, 1934 ರಲ್ಲಿ ಜನಸಿದ್ದಾರೆ. ರಾವ್ ರವರು ವಿಶ್ವ ಪ್ರಸಿದ್ದ ವಿಜ್ಞಾನಿಯಾಗಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇವರು ಮುಖ್ಯವಾಗಿ ಸಾಲಿಡ್ ಸ್ಟೇಟ್ ಮತ್ತು ಸ್ಟ್ರಕ್ಚರಲ್ ಕೆಮಿಸ್ಟ್ರಿಯಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.
  • ಪ್ರಸ್ತುತ ಇವರು ಪ್ರಧಾನಿ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ.
  • ಸುಮಾರು 60 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಇವರು, 1500 ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ಹಾಗೂ 60 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
  • ವಿಜ್ಞಾನ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಗಮನಿಸಿ ಭಾರತ ಸರ್ಕಾರ ಇವರಿಗೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು 2014 ರಲ್ಲಿ ನೀಡಿ ಗೌರವಿಸಿದೆ. ಸರ್ ಸಿ ವಿ ರಾಮನ್ ಹಾಗೂ ಎ.ಪಿ.ಜೆ ಅಬ್ದುಲ್ ಕಲಂ ನಂತರ ಭಾರತ ರತ್ನ ಪ್ರಶಸ್ತಿ ಪಡೆದ ಮೂರನೇ ವಿಜ್ಞಾನಿ ಇವರು.
  • ಅನೇಕ ವಿದೇಶಿ ಪ್ರಶಸ್ತಿಗಳಿಗೂ ಭಾಜನರಾಗಿರುವ ಇವರಿಗೆ 1974 ರಲ್ಲಿ ಪದ್ಮ ಪ್ರಶಸ್ತಿ, 1985 ರಲ್ಲಿ ಪದ್ಮ ವಿಭೂಷಣ ಸಹ ದೊರೆತಿದೆ. ಕರ್ನಾಟಕ ರಾಜ್ಯ ಸರ್ಕಾರ ನೀಡುವ ಕರ್ನಾಟಕ ರತ್ನ ಪ್ರಶಸ್ತಿಯನ್ನು 2001 ರಲ್ಲಿ ಇವರಿಗೆ ನೀಡಲಾಗಿದೆ.

ನವಜಾತ ಶಿಶು, ಬಾಣಂತಿಯರ ಸಾವು ತಡೆಯುವ ಯೋಜನೆ ರಾಜ್ಯದಲ್ಲಿ ಜಾರಿಗೆ

ನವಜಾತ ಶಿಶು ಹಾಗೂ ಬಾಣಂತಿಯರ ಸಾವನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿಂಗಾಪುರ ಅಂತಾರಾಷ್ಟ್ರೀಯ ಫೌಂಡೇಷನ್ ಸಹಭಾಗಿತ್ವದಡಿ ಈ ಯೋಜನೆಗೆ ಚಾಲನೆ ನೀಡಲಾಯಿತು.

  • ಈ ಯೋಜನೆಯಡಿ ಮುಂದಿನ ಮೂರು ವರ್ಷ ಸಿಂಗಾಪುರ್ ಜನರಲ್ ಆಸ್ಪತ್ರೆಪ್ರಸೂತಿ ತಜ್ಞರು, ಶಿಶು ತಜ್ಞರು ಹಾಗೂ ಹಿರಿಯ ಶುಶ್ರೂಷಕಿ ಯರನ್ನು ಒಳಗೊಂಡ ತಜ್ಞರ ತಂಡ ರಾಜ್ಯದಲ್ಲಿನ ವಿವಿಧ ಆಸ್ಪತ್ರೆಗಳ ಆಯ್ದ 200 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ.
  • ತರಬೇತಿ ಪಡೆದ ಸಿಬ್ಬಂದಿ ರಾಜ್ಯದ ಇತರ ಆರೋಗ್ಯ ವೃಂದದ ಸಿಬ್ಬಂದಿಗೆ ತರಬೇತಿ ನೀಡಲಿದ್ದು, ಆ ಮೂಲಕ ನವಜಾತ ಶಿಶು ಮತ್ತು ಗರ್ಭಿಣಿಯರ ಸಮರ್ಪಕ ಆರೈಕೆಗೆ ತರಬೇತಿ ಪಡೆದ ಸಿಬ್ಬಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗುವುದು, ಇವರು ತಾಯಿ ಮತ್ತು ಮಗುವಿನ ಆರೈಕೆಗೆ ತರಬೇತಿ ನೀಡಲಿದ್ದಾರೆ.
  • ಸಿಂಗಾಪುರದ ಆರೋಗ್ಯ ಸೇವೆಯ ಪ್ರಸೂತಿ ತಜ್ಞರು, ನವಜಾತ ಶಿಶುತಜ್ಞರು, ಹಿರಿಯ ಶುಶ್ರೂಷಕರು ದಾದಿಗಳನ್ನೊಳಗೊಂಡ ತಂಡ ಕರ್ನಾಟಕದ ವಿವಿಧ 2ನೆ ಮತ್ತು 3ನೆ ಹಂತದ ಆಸ್ಪತ್ರೆಗಳ ಸುಮಾರು 200 ಆರೋಗ್ಯ ಸಿಬ್ಬಂದಿ ತರಬೇತಿ ನೀಡಲಿದ್ದಾರೆ. ಈ ತಜ್ಞರ ತಂಡ ಶಿಶು ಮತ್ತು ತಾಯಿ ಮರಣಕ್ಕೆ ಕಾರಣವಾ ಗಿರುವ ಅಂಶಗಳನ್ನು ನಿವಾರಿಸಲು ಬೇಕಾಗಿರುವ ಜ್ಞಾನಾಭಿವೃದ್ಧಿ, ಕೌಶಲ್ಯಗಳನ್ನು ಕಲಿಕೆಯ ಮುಖಾಂತರ ತರಬೇತುದಾರರ ಕಾರ್ಯಾಗಾರದಲ್ಲಿ (ಟಿಒಟಿ) ಮೂಲಕ ಅಣಿಗೊಳಿಸುತ್ತಾರೆ.
  • ಪ್ರತೀ ತಂಡದಿಂದ ಆಯ್ಕೆಯಾದ 40 ಯಶಸ್ವಿ ತರಬೇತುದಾರರು, ರಾಜ್ಯದ 200 ಆರೋಗ್ಯ ಸಿಬ್ಬಂದಿ ವರ್ಗದವರು ತರುವಾಯ ತಮ್ಮ ಆಸ್ಪತ್ರೆಗಳನ್ನು ಇದೇ ರೀತಿ ಕೆಲ ಹಂತದ ತರಬೇತಿ ನೀಡಿ ಜ್ಞಾನ, ಕೌಶಲ್ಯ ಕಲಿಕೆಗೆ ಒತ್ತು ನೀಡಲಿದ್ದಾರೆ. ಆ ಮೂಲಕ ಶಿಶು ಮತ್ತು ಬಾಣಂತಿಯರ ಮರಣ ತಡೆಯುವ ಉದ್ದೇಶವನ್ನು ಯೋಜನೆ ಹೊಂದಿದೆ.
  • ಪ್ರಸ್ತುತ ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 31 (1000 ಜನನಕ್ಕೆ) ಇದೆ. ತಾಯಂದಿರ ಮರಣ ಪ್ರಮಾಣ 131 (100000) ಇದೆ.

ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪ ಕುಮಲ್ ದಹಲ್ ಆಯ್ಕೆ

ಮಾವೋವಾದಿ ಬಂಡುಕೋರ (Communist Party of Nepal-Maoist Chairperson (CPN-MC)) ಮುಖ್ಯಸ್ಥ ಪುಷ್ಪ ಕಮಲ್ ದಹಲ್ ಅವರು ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಬುಧವಾರ ಆಯ್ಕೆಯಾಗಿದ್ದಾರೆ. ರಾಜಕೀಯ ಪ್ರಕ್ಷುಬ್ಧತೆ ಹಿನ್ನಲೆಯಲ್ಲಿ ಜುಲೈ 2016 ರಂದು ಪ್ರಧಾನಿ ಕೆ ಪಿ ಓಲಿ ರವರು ರಾಜೀನಾಮೆ ನೀಡಿದ ನಂತರ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಏಕೈಕ ವ್ಯಕ್ತಿ ದಹಲ್ ಆಗಿದ್ದರು. ದಹಲ್ ರವರು ನೇಪಾಳದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದ ನಂತರ ಈ ಹುದ್ದೆಯನ್ನು ಅಲಂಕರಿಸಿದ ಎರಡನೇಯವರು. ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ದಹಲ್ ರವರು ಈ ಹಿಂದೆ 2008 ರಿಂದ 2009 ರವರೆಗೆ ಪ್ರಧಾನಿಯಾಗಿ ಸೇವೆ ನಿರ್ವಹಿಸಿದ್ದರು.

  • ನೇಪಾಳಿ ಸಂಸತ್ತಿನಲ್ಲಿ ನೂತನ ಪ್ರಧಾನಮಂತ್ರಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಶೇ 50ಕ್ಕಿಂತ ಅಧಿಕ ಮತವನ್ನು ಪುಷ್ಪ ಕಮಲ್ ಪಡೆದುಕೊಂಡ್ದರು. 573 ಜನಪ್ರತಿನಿಧಿಗಳ ಪೈಕಿ 363 ಮಂದಿ ದಹಲ್ ಪರ ಮತ ಹಾಕಿದರು. ಪ್ರಧಾನಿ ಪಟ್ಟಕ್ಕೇರಲು ದಹಲ್ ಅವರಿಎಗ್ ಒಟ್ಟಾರೆ 595 ಸಂಸತ್ ಸದಸ್ಯರ ಪೈಕಿ 298 ಮತಗಳು ಅಗತ್ಯವಿತ್ತು.

ಹಿನ್ನಲೆ:

ನೇಪಾಳದ ಪ್ರಧಾನಿಯಾಗಿದ್ದ ಕೆ.ಪಿ.ಓಲಿ ರವರು ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮಾದೇಸಿ ಪ್ಯೂಪಲ್ಸ್ ರೈಟ್ಸ್ ಪೋರಂ ಡೆಮೊಕ್ರೆಟಿಕ್ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಹಿಂಪಡೆದ ಕಾರಣ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ ಸಾಧ್ಯತೆಯಿಂದ ಪಾರಾಗಲು ಕೆ.ಪಿ. ಒಲಿ ಅವರು ಇತ್ತೀಚೆಗೆ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದರು.

2020 ಟೊಕಿಯೋ ಒಲಂಪಿಕ್ಸ್ ಗೆ 5 ಹೊಸ ಕ್ರೀಡೆಗಳ ಸೇರ್ಪಡೆಗೆ ಸಮ್ಮತಿ

ಜಪಾನ್ ನ ಟೊಕಿಯೋದಲ್ಲಿ 2020 ರಲ್ಲಿ ನಡೆಯಲಿರುವ ಒಲಂಪಿಕ್ಸ್ ಗೆ 5 ಹೊಸ ಕ್ರೀಡೆಗಳನ್ನು ಸೇರಿಸಲು ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಒಪ್ಪಿಗೆ ಸೂಚಿಸಿದೆ. ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ 129ನೇ ಅಧಿವೇಶನದಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು.

ಹೊಸದಾಗಿ ಸೇರ್ಪಡೆಗೊಳ್ಳಿರುವ ಆಟಗಳು:

  • ಬೇಸ್‍ಬಾಲ್/ಸಾಪ್ಟ್ ಬಾಲ್, ಕರಾಟೆ, ಸ್ಕೇಟ್ಬೋರ್ಡ್ (Skateboard), ಕ್ಲೈಂಬಿಂಗ್ (Climbing) ಹಾಗೂ ಸರ್ಫಿಂಗ್ (Surfing).
  • ಈ 5 ಆಟಗಳು ಬ್ರೆಜಿಲ್‍ನ ರಿಯೋ ಡಿ ಜನೈರೊ ದಲ್ಲಿ ನಡೆಯುತ್ತಿರುವ ರಿಯೋ ಒಲಿಂಪಿಕ್ಸ್ ಗೆ ಅನ್ವಯವಾಗುವುದಿಲ್ಲ. ಮುಂದಿನ 32ನೇ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಟೊಕಿಯೋದಲ್ಲಿ ಅಂದರೆ 2020ರಲ್ಲಿ. ಸೇರ್ಪಡೆಯಾಗಲಿವೆ.
  • ಐದು ಆಟಗಳನ್ನು ಆರಂಭಿಸಲು ಐಒಸಿಗೆ 2015 ಸೆಪ್ಟಂಬರ್‍ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
  • ಯುವಕರನ್ನು ಹುರಿದುಂಬಿಸಲು ಈ ಹೊಸ ಆಟಗಳನ್ನು ಆರಂಭಿಸಲಾಗಿದ್ದು, ಇದರಿಂದ ಯುವ ಜನರಿಗೆ ಹೆಚ್ಚು ಅವಕಾಶ ಸಿಗಲಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ ತಿಳಿಸಿದ್ದಾರೆ.
  • ನೂತನ 5 ಕ್ರೀಡೆಗಳಿಂದ ವಿಶ್ವದಾದ್ಯಂತ 474 ಕ್ರೀಡಾಳುಗಳಿಗೆ ಅವಕಾಶ ಸಿಗಲಿದೆ.

ಶುಭಾ ಮುದ್ಗಲ್ ಗೆ ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಬಾವನ ಪ್ರಶಸ್ತಿ

ಪ್ರಸಿದ್ದ ಗಾಯಕಿ ಶುಭಾ ಮುದ್ಗಲ್ ರವರನ್ನು ಪ್ರತಿಷ್ಠಿತ 23ನೇ ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕೋಮು ಸೌಹರ್ದತೆ, ಶಾಂತಿ ಮತ್ತು ಅಭಿಮಾನ ಪ್ರಚಾರಕ್ಕಾಗಿ ಶುಭಾ ರವರು ನೀಡಿದ ಮಹೋನ್ನತ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

 ಶುಭಾ ಮುದ್ಗಲ್ ಬಗ್ಗೆ:

  • ಶುಭಾ ಮುದ್ಗಲ್ ರವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಾದಲ್ಲಿ ಪರಿಣಿತಿ ಹೊಂದಿರುವ ಪ್ರಸಿದ್ದ ಗಾಯಕಿ. ಅಲ್ಲದೇ ತುಮ್ರಿ, ಖಾಯಲ್, ದಾದ್ರ ಮತ್ತು ಭಾರತೀಯ ಪಾಪ್ ಸಂಗೀತದಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ.
  • ಸಂಗೀತಾ ಕ್ಷೇತ್ರಕ್ಕೆ ಇವರ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು 2000 ವರ್ಷದಲ್ಲಿ ನೀಡಿ ಗೌರವಿಸಿದೆ. ಅಮೃತ್ ಬೀಜ್ ಚಿತ್ರಕ್ಕಾಗಿ ನೀಡಿದ ಇವರ ಸಂಗೀತಾ ನಿರ್ದೇಶನಕ್ಕಾಗಿ 1996 ರಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ನೀಡಲಾಗಿದೆ.

ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಬಗ್ಗೆ:

  • ರಾಜೀವ್ ಗಾಂಧೀ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಯನ್ನು ಪ್ರತಿ ವರ್ಷ ಆಗಸ್ಟ್ 20 ರಂದು ಭಾರತದ ಮಾಜಿ ಪ್ರಧಾನಿಯಾದ ದಿವಂಗತ ರಾಜೀವ್ ಗಾಂಧೀ ರವರ ಹುಟ್ಟುಹಬ್ಬದ ಸ್ಮರಣಾರ್ಥ ನೀಡಲಾಗುತ್ತಿದೆ.
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಲ್ ಇಂಡಿಯಾ ಕಾಂಗ್ರೆಸ್ ಸಮಿತಿ ಈ ಪ್ರಶಸ್ತಿಯನ್ನು 1992 ರಲ್ಲಿ ಸ್ಥಾಪಿಸಿದೆ. ಪ್ರಶಸ್ತಿಯು 10 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
  • ಕೋಮು ಸೌಹರ್ದತೆ, ಶಾಂತಿ ಮತ್ತು ಅಹಿಂಸೆಗೆ ರಾಜೀವ್ ಗಾಂಧೀ ರವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
  • ಮದರ್ ಥೆರೆಸಾ, ಮಹಮದ್ ಯೂನಸ್, ಲತಾ ಮಂಗೇಶ್ಕರ್, ಉಸ್ತದ್ ಬಿಸ್ಮಿಲ್ಲಾ ಖಾನ್ ಮತ್ತು ಉಸ್ತದ್ ಅಮ್ಜದ್ ಅಲಿ ಖಾನ್ ಈ ಪ್ರಶಸ್ತಿಯನ್ನು ಪಡೆದ ಪ್ರಮುಖರು.

Leave a Comment

This site uses Akismet to reduce spam. Learn how your comment data is processed.