ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜುಲೈ ,2016

Question 1
1.ರೈಲಿನಲ್ಲಿ ಆಸ್ಪತ್ರೆಯನ್ನು ಹೊಂದಿರುವಂತಹ ಜಗತ್ತಿನ ಮೊಟ್ಟಮೊದಲ ರೈಲು ಯಾವುದು?
A
ಜೀವನ ಜ್ಯೋತಿ ಎಕ್ಸ್ ಪ್ರೆಸ್
B
ರಾಜಧಾನಿ ಎಕ್ಸ್ ಪ್ರೆಸ್
C
ಗತಿಮಾನ್ ಎಕ್ಸ್ ಪ್ರೆಸ್
D
ಲೈಫ್ ಲೈನ್ ಎಕ್ಸ್ ಪ್ರೆಸ್
Question 1 Explanation: 
ಲೈಫ್ ಲೈನ್ ಎಕ್ಸ್ ಪ್ರೆಸ್: ಲೈಫ್ ಲೈನ್ ಎಕ್ಸ್ ಪ್ರೆಸ್ (ಅಥವಾ ಜೀವನ್ ರೇಖಾ ಎಕ್ಸ್ ಪ್ರೆಸ್) ಎಂಬುದು ಜಗತ್ತಿನ ಮೊಟ್ಟಮೊದಲ ಆಸ್ಪತ್ರೆ ರೈಲು, ಇದು ಸತತ 25 ವರ್ಷಗಳ ಕಾಲ ಬಡವರಿಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿ ನಿರಂತರ ಶ್ರಮಿಸಿದೆ. ಸರಿ ಸುಮಾರು 173 ಯೋಜನೆಗಳಲ್ಲಿ 18 ರಾಜ್ಯಗಳ 2 ಲಕ್ಷಕ್ಕೂ ಹೆಚ್ಚು ಬಡ ಜನರಿಗೆ ಸಾಮಾನ್ಯ ವೈದ್ಯಕೀಯ ಸೇವೆ ಸೇರಿದಂತೆ ಅಂಧತ್ವ ನಿವಾರಣೆ, ಅಂಗ ವೈಕಲ್ಯ, ಶ್ರವಣ ದೋಷ ಮುಂತಾದ ಕಾಯಿಲೆಗಳಿಗೆ ಉಚಿತ ಸೇವೆ ನೀಡಿದೆ. ಇತ್ತೀಚೆಗೆ ಈ ರೈಲು 25 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಸಂಭ್ರಮಿಸಿಕೊಂಡಿತು.
Question 2
2.ದಕ್ಷಿಣ ಸೂಡಾನ್ ನ ಯುದ್ಧಿ ಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ಸು ಕರೆಸಿಕೊಳ್ಳಲು ಕಾರ್ಯಾಚರಣೆಯನ್ನು ನಡೆಸಲಾಯಿತು, ಈ ಕಾರ್ಯಾಚರಣೆಯ ಹೆಸರೇನು?
A
ಆಪರೇಷನ್ ರಾಹತ್
B
ಆಪರೇಷನ್ ಸುರಕ್ಷಿತ್
C
ಆಪರೇಷನ್ ಸಂಕಟ್ ಮೋಚನ್
D
ಆಪರೇಷನ್ ವಿಮೋಚನ್
Question 2 Explanation: 
ಆಪರೇಷನ್ ಸಂಕಟ್ ಮೋಚನ್: ಆಫ್ರಿಕ ದೇಶದ ದಕ್ಷಿಣ ಸೂಡಾನ್ ನ ಯುದ್ಧಿ ಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ಸು ಕರೆಸಿಕೊಳ್ಳಲು ಭಾರತ ಸರ್ಕಾರವು ಆಪರೇಷನ್ ಸಂಕಟ್ ಮೋಚನ್ ಎಂಬ ಕಾರ್ಯಾಚರಣೆ ಕೈಗೊಂಡಿತ್ತು. ಸುಮಾರು 600 ಭಾರತೀಯರನ್ನು ಈ ಕಾರ್ಯಾಚರಣೆಯ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರತರಲಾಯಿತು.
Question 3
3.ಭಾರತದಲ್ಲಿ ದ್ವಿದಳ ಧಾನ್ಯಗಳ ಕೊರತೆಯನ್ನು ನೀಗಿಸುವ ಸಲುವಾಗಿ ಅಧ್ಯಯನ ಮಾಡಲು ಈ ಕೆಳಕಂಡ ಯಾವ ಸಮಿತಿಯನ್ನು ರಚಿಸಲಾಗಿದೆ?
A
ಅರವಿಂದ ಸುಬ್ರಮಣ್ಯನ್ ಸಮಿತಿ
B
ರಂಗರಾಜನ್ ಸಮಿತಿ
C
ಸಂಜಯ್ ಪಗಾರಿಯಾ ಸಮಿತಿ
D
ಎನ್ ಕೆ ಸಿಂಗ್ ಸಮಿತಿ
Question 3 Explanation: 
ಅರವಿಂದ ಸುಬ್ರಮಣ್ಯನ್ ಸಮಿತಿ: ದೇಶದಲ್ಲಿ ಎದುರಾಗಿರುವ ಬೇಳೆಕಾಳುಗಳ ಕೊರತೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಉನ್ನತಮಟ್ಟದ ಸಮಿತಿಯನ್ನು ರಚಿಸಿದೆ. ವಿತ್ತ ಸಚಿವ ಅರುಣ್ ಜೆಟ್ಲಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣ್ಯನ್ ರವರು ಈ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾಗಿದ್ದಾರೆ.
Question 4
4.ನೇಪಾಳದ ಪ್ರಥಮ ಮಹಿಳಾ ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆಯಾದ ವ್ಯಕ್ತಿ ಯಾರು?
A
ಕಲ್ಯಾಣಿ ಶ್ರೇಷ್ಠ
B
ಮೃದುಲ ಉಪಾಧ್ಯಾಯ
C
ಸುಶೀಲ ಕರ್ಕಿ
D
ನಿರ್ಜಲ ನಾಗೇಂದ್ರ
Question 4 Explanation: 
ಸುಶೀಲ ಕರ್ಕಿ: ಸುಶೀಲ ಕರ್ಕಿರವರು ನೇಪಾಳದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರ ವಹಿಸಿಕೊಂಡರು. ನೇಪಾಳದ ರಾಷ್ಟ್ರಪತಿ ನಿಲಯವಾದ ಶೀತಲ್ ನಿವಾಸ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸುಶೀಲ ರವರಿಗೆ ರಾಷ್ಟ್ರಪತಿ ಬಿದ್ಯ ದೇವಿ ಭಂಡಾರಿ ರವರು ಪ್ರಮಾಣ ವಚನ ಬೋಧಿಸಿದರು. ಸುಶೀಲ ರವರು ಜೂನ್ 6, 2017 ರ ತನಕ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Question 5
5.ಗಂಗಾಜಲವನ್ನು ಮನೆಗಳಿಗೆ ತಲುಪಿಸುವ ಸೇವೆಯನ್ನು ಭಾರತದ ಈ ಕೆಳಕಂಡ ಯಾವ ನಗರದಿಂದ ಆರಂಭಿಸಲಾಗಿದೆ?
A
ವಾರಣಾಸಿ
B
ಅಲಹಾಬಾದ್
C
ಪಾಟ್ನಾ
D
ಡೆಹ್ರಾಡೂನ್
Question 5 Explanation: 
ಪಾಟ್ನಾ: ಗಂಗಾಜಲವನ್ನು ಮನೆಗಳಿಗೆ ತಲುಪಿಸುವ ಸೇವೆಯನ್ನು ಬಿಹಾರ ರಾಜ್ಯದ ಪಾಟ್ನ ಅಂಚೆ ಕಚೇರಿಯಿಂದ ಆರಂಭಿಸಲಾಯಿತು. ಪವಿತ್ರ ಗಂಗಾ ನದಿಯ ನೀರನ್ನು ಜನರಿಗೆ ಅಂಚೆ ಇಲಾಖೆ ಮೂಲಕ ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯಲ್ಲಿ ಗಂಗೋತ್ರಿ ಮತ್ತು ರಿಷಿಕೇಷದಿಂದ ಸಂಗ್ರಹಿಸಿದ ಗಂಗಾಜಲವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಭಾರತೀಯ ಅಂಚೆ ಇಲಾಖೆ ತಲುಪಿಸಲಿದೆ.
Question 6
6.“ಸೆಂಟರ್ ಆಫ್ ಎಕ್ಸಲೆನ್ಸ್ ಆನ್ ಇಂಟರ್ನೆಟ್ ಆಫ್ ತಿಂಗ್ಸ್ (Centre of Excellence on Internet of Things CoE-IoT) ನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು?
A
ಚೆನ್ನೈ
B
ಗುರುಗ್ರಾಮ
C
ಹೈದರಾಬಾದ್
D
ಬೆಂಗಳೂರು
Question 6 Explanation: 
ಬೆಂಗಳೂರು: ದೇಶದ ಮೊದಲ ಸೆಂಟರ್ ಆಫ್ ಎಕ್ಸಲೆನ್ಸ್ ಆನ್ ಇಂಟರ್ನೆಟ್ ಆಫ್ ತಿಂಗ್ಸ್ ಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಇದಕ್ಕೆ ಚಾಲನೆ ನೀಡಿದರು. ಸೆಂಟರ್ ಆಫ್ ಎಕ್ಸಲೆನ್ಸ್ ಆನ್ ಇಂಟರ್ನೆಟ್ ಆಫ್ ತಿಂಗ್ಸ್ ಅನ್ನು ನಾಸ್ಕಂ (NASSCOM) ಮತ್ತು ಡಯಟಿ (DEITY) ಸಹಯೋಗದಲ್ಲಿ ಆರಂಭಿಸಲಾಗಿದೆ. ನವೋದ್ಯಮಿಗಳಿಗೆ ತಾಂತ್ರಿಕ ಸಲಹೆಯನ್ನು ನೀಡುವ ಉದ್ದೇಶದೊಂದಿಗೆ ಇದನ್ನು ಆರಂಭಿಸಲಾಗಿದೆ.
Question 7
7.ಇತ್ತೀಚೆಗೆ “ತೆರೆಸಾ ಮೇ” ಯಾವ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು?
A
ಬ್ರಿಟನ್
B
ನ್ಯೂಜಿಲ್ಯಾಂಡ್
C
ಆಸ್ಟ್ರೇಲಿಯಾ
D
ಇಟಲಿ
Question 7 Explanation: 
ಬ್ರಿಟನ್: ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಕನ್ಸರ್ವೇಟಿವ್ ಪಕ್ಷದ ನಾಯಕಿ ತೆರೆಸಾ ಮೇ ರವರು ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಬ್ರಿಟನ್ ನ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬ್ರಿಟನ್ ನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಬ್ರೆಕ್ಸಿಟ್ ಗಾಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಪ್ರಧಾನಿ ಹುದ್ದೆಯನ್ನು ತೆರೆಸಾ ವಹಿಸಿಕೊಂಡಿದ್ದಾರೆ. ಡೇವಿಡ್ ಕ್ಯಾಮರೂನ್ ರವರು ಆರು ವರ್ಗಳ ಕಾಲ ಬ್ರಿಟನ್ ಪ್ರಧಾನಿ ಆಗಿದ್ದರು. ಮಾರ್ಗರೇಟ್ ಥ್ಯಾಚರ್ ಬ್ರಿಟನ್ ನ ಮೊದಲ ಮಹಿಳಾ ಪ್ರಧಾನಿ ಆಗಿದ್ದರು. ಥ್ಯಾಚರ್ ರವರು 1979-90ರ ತನಕ ಅಧಿಕಾರದಲ್ಲಿದ್ದರು
Question 8
8.ಅಂತರರಾಷ್ಟ್ರೀಯ ಸಾಗರಯಾನ ಸಂಸ್ಥೆಯ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
A
ರಮ್ಯಾ ಕುಲಕರ್ಣಿ
B
ಜಾಸ್ಮಿನ್ ಹಡ್ಸನ್
C
ರಾಧಿಕ ಮೆನನ್
D
ಪ್ರಮೀಳಾ ಜೆಸ್ಸಿ
Question 8 Explanation: 
ರಾಧಿಕ ಮೆನನ್: ಕ್ಯಾಪ್ಟನ್ ರಾಧಿಕಾ ಮೆನನ್ ರವರು ಸಾಗರದಲ್ಲಿ ತೋರಿದ ಅನ್ಯನ ಸಾಧನೆಗಾಗಿ ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ರಾಧಿಕಾ ಮೆನನ್ ರವರು ಈ ಪ್ರಶಸ್ತಿ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Question 9
9.ತಾಯಿಯಿಂದ ಮಗುವಿಗೆ ಏಡ್ಸ್ ರೋಗ ಬಾರದಂತೆ ನಿಯಂತ್ರಿಸಿದ ಏಷ್ಯಾದ ಮೊದಲ ರಾಷ್ಟ್ರ ಯಾವುದು?
A
ಚೀನಾ
B
ಭಾರತ
C
ಥಾಯ್ಲೆಂಡ್
D
ಜಪಾನ್
Question 9 Explanation: 
ಥಾಯ್ಲೆಂಡ್: ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಹರಡುವುದನ್ನು ತಡೆಗಟ್ಟುವ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್ ಹೊರಹೊಮ್ಮಿದೆ. ಥಾಯ್ಲೆಂಡ್ ನ ಈ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಈ ಸಂಬಂಧ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಥಾಯ್ಲೆಂಡ್ ನ ಆರೋಗ್ಯ ಸಚಿಚರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
Question 10
10.ಇತ್ತೀಚೆಗೆ ಬಿಡುಗಡೆಗೊಳಿಸಲಾದ “ಉತ್ತಮ ದೇಶ ಸೂಚ್ಯಂಕ” ದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದುಕೊಂಡಿದೆ?
A
56
B
70
C
87
D
90
Question 10 Explanation: 
70: ದೇಶದ ಜನರ ಬೇಡಿಕೆಗಳನ್ನು ಈಡೇರಿಸುವ ಮಾನದಂಡಗಳನ್ನು ಇಟ್ಟುಕೊಂಡು ನಡೆಸಲಾದ ಉತ್ತಮ ದೇಶ ಸಮೀಕ್ಷೆಯ ಸೂಚ್ಯಂಕದಲ್ಲಿ ಸ್ವೀಡನ್ ಜಗತ್ತಿನಲ್ಲಿ ಅತ್ಯುತ್ತಮ ದೇಶವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಭಾರತ 70ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯನ್ನು ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್ ನೀಡಿದ ವಿವಿಧ ಮಾಹಿತಿ ಆಧಾರದ ಮೇಲೆ ಕೈಗೊಳ್ಳಲಾಗಿದೆ. ಸಮೀಕ್ಷೆಗೆ ವಿಶ್ವದ 163 ರಾಷ್ಟ್ರಗಳನ್ನು ಒಳಪಡಿಸಲಾಗಿ, ವಿಜ್ಞಾನ, ಸಂಸ್ಕೃತಿ, ಶಾಂತಿ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಸಮಾನತೆ ಆಧಾರದಲ್ಲಿ ದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.
There are 10 questions to complete.

Leave a Comment

This site uses Akismet to reduce spam. Learn how your comment data is processed.