ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಪ್ರಚಲಿತ ವಿದ್ಯಮಾನ ಕ್ವಿಜ್ - ಆಗಸ್ಟ್ 1, 2016

Question 1
1.ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (AAI) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿ ಯಾರು?
A
ಗುರುದಾಸ್
B
ಗುರುಪ್ರಸಾದ್ ಮೊಹಪಾತ್ರ
C
ರಘುರಾಂ ರಾಜನ್
D
ಸ್ಮೃತಿ ಇರಾನಿ
Question 1 Explanation: 
ಗುರುಪ್ರಸಾದ್ ಮೊಹಪಾತ್ರ: ಹಿರಿಯ ಐಎಎಸ್ ಅಧಿಕಾರಿ ಗುರುಪ್ರಸಾದ್ ಮೊಹಪಾತ್ರ ರವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡರು. ಗುರುಪ್ರಸಾದ್ ರವರು ಈ ಹಿಂದೆ ವಾಣಿಜ್ಯ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
Question 2
2.‘Who Moved My Interest Rate’ ಎಂಬ ಪುಸ್ತಕವನ್ನು ಬರೆದವರು ಯಾರು?
A
ರಘುರಾಂ ರಾಜನ್
B
ಅರುಣ್ ಜೇಟ್ಲಿ
C
ಬಿಮಲ್ ಜಲನ್
D
ಡಿ.ಸುಬ್ಬಾರಾವ್
Question 2 Explanation: 
ಡಿ.ಸುಬ್ಬಾರಾವ್: ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನ್ ರ್ ಡಿ. ಸುಬ್ಬಾರಾವ್ ‘Who Moved My Interest Rate’ ಪುಸ್ತಕವನ್ನು ಬರೆದವರು. ತಮ್ಮ ಅಧಿಕಾರಾವಧಿಯಲ್ಲಿ ಅವರು ಎದುರಿಸಿದ ಆರ್ಥಿಕ ಮತ್ತು ರಾಜಕೀಯ ಸವಾಲುಗಳ ಮಾಹಿತಿಯನ್ನು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಬಹುದಾದ ಹಲವಾರು ಮಾಹಿತಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ .
Question 3
3.“ಮಿಸ್ಟರ್ ವರ್ಲ್ಡ್” ಕಿರೀಟ ಗಳಿಸಿದ ಪ್ರಪ್ರಥಮ ಭಾರತೀಯ ಯಾರು?
A
ಬಲವಿಂದರ್ ಸಿಂಗ್
B
ವಿಜೇಂದರ್ ಕುಮಾರ್
C
ರೋಹಿತ್ ಖಂಡೇಲವಾಲ್
D
ಪ್ರದೀಪ್ ಶೆಟ್ಟಿ
Question 3 Explanation: 
ರೋಹಿತ್ ಖಂಡೇಲವಾಲ್: ಹೈದರಾಬಾದಿನ ರೋಹಿತ್ ಖಂಡೇಲ್ವಾಲಾ ಅವರು ಸೌತ್ ಪೋರ್ಟ್ನ ದಿ ಪ್ರೋಮನೇಡ್ ನಲ್ಲಿನ ಫ್ಲೋರಲ್ ಹಾಲ್ನ ಸೌತ್ ಪೋರ್ಟ್ ಥಿಯೇಟರ್ನಲ್ಲಿ ಪ್ರತಿಷ್ಠಿತ ಮಿಸ್ಟರ್ ವರ್ಲ್ಡ್ 2016 ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಮೂಲಕ ಮಿಸ್ಟರ್ ವರ್ಲ್ಡ್ ಟೈಟಲ್ ಪಡೆದ ಮೊದಲ ಭಾರತೀಯ ಆಗಿದ್ದಾರೆ. ಪ್ರಶಸ್ತಿಯನ್ನು ಗೆದ್ದುಕೊಂಡ ರೋಹಿತ್
Question 4
4. “ಅಟಲ್ ಟಿಂಕರಿಂಗ್ ಲ್ಯಾಬ್ಸ್” ಅನ್ನು NITI ಆಯೋಗವು ಈ ಕೆಳಕಂಡ ಯಾವ ಭಾರತದ ಕಂಪನಿಯ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ
A
ಇನ್ಫೋಸಿಸ್
B
ವಿಪ್ರೋ
C
ಇಂಟೆಲ್ ಇಂಡಿಯಾ
D
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
Question 4 Explanation: 
ಇಂಟೆಲ್ ಇಂಡಿಯಾ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಅಟಲ್ ಇನೋವೇಷನ್ ಮಿಷನ್” ಕಾರ್ಯಕ್ರಮದಡಿಯಲ್ಲಿ NITI ಆಯೋಗವು ಇಂಟೆಲ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ಭಾರತದಲ್ಲಿ 10 “ಅಟಲ್ ಟಿಂಕರಿಂಗ್ ಲ್ಯಾಬ್ಸ್” ಅನ್ನು ಪ್ರಾರಂಭಿಸಿದೆ. ಸುಮಾರು 250000 ಯುವ ಸಮೂಹಕ್ಕೆ ತಾಂತ್ರಿಕ ಕೌಶಲ್ಯ ವೃದ್ಧಿ ತರಬೇತಿ, ಕಲಿಕಾ ಆಸಕ್ತಿ, ಕ್ರಿಯಾಶೀಲತೆ ಮತ್ತು ಆಲೋಚನಾ ಶಕ್ತಿ ವೃದ್ಧಿ ಸಂಬಂಧಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಿದೆ.
Question 5
5.ದೇಶದ ಮೊದಲ ಹಸಿರು ರೈಲ್ವೆ ಕಾರಿಡಾರ್ ಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು?
A
ತೆಲಂಗಾಣ
B
ತಮಿಳುನಾಡು
C
ಪಶ್ಚಿಮ ಬಂಗಾಳ
D
ಕೇರಳ
Question 5 Explanation: 
ತಮಿಳುನಾಡು: ದೇಶದ ಮೊದಲ ಹಸಿರು ರೈಲು ಮಾರ್ಗಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಲಾಯಿತು. ತಮಿಳುನಾಡಿನ ರಾಮೇಶ್ವರಂ-ಮನಮಧುರೈ ನಡುವಿನ 114 ಕಿ.ಮೀ ಅಂತರದ ಹಸಿರು ರೈಲು ಮಾರ್ಗಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ರವರು ವಿಡಿಯೋ ಕಾನ್ಪರೆನ್ಸ್ ಮುಂಖಾತರ ಉದ್ಘಾಟಿಸಿದರು. ಈ ರೈಲು ಮಾರ್ಗದಲ್ಲಿ ಚಲಿಸುವ ರೈಲುಗಳ ಶೌಚಾಲಯದಿಂದ ಮಲ ಮೂತ್ರ ರೈಲು ಹಳಿಗಳ ಮೇಲೆ ಬೀಳದೆ ಸ್ವಚ್ಚತೆ ಕಾಪಾಡುವ ಸಲುವಾಗಿ ಹಸಿರು ಕಾರಿಡಾರ್ನ ಉದ್ದೇಶ. ಸ್ವಚ್ಛ ರೈಲು-ಸ್ವಚ್ಛ ಭಾರತ ಅಭಿಯಾನದಡಿ ಅಂಗವಾಗಿ ಈ ಕಾರಿಡರ್ ಅನ್ನು ಅಭಿವೃದ್ದಿಪಡಿಸಿದ್ದು, ಸ್ವಚ್ಛ ವಾತಾವರಣ ಸೃಷ್ಠಿಸುವುದು ಗುರಿಯಾಗಿದೆ.
Question 6
6.ಭಾರತದ ಲೋಕಸಭೆಯನ್ನು ಕಾಗದ ಮುಕ್ತ ಕಚೇರಿಯನ್ನಾಗಿ ಮಾಡಲು ಈ ಕೆಳಕಂಡ ಯಾವ ಅಂತರ್ಜಾಲ ತಾಣವನ್ನು ಪ್ರಾರಂಭಿಸಲಾಗಿದೆ?
A
ಈ-ಪೋರ್ಟಲ್
B
ಈ-ಪೇಪರ್
C
ಈ-ಆಫೀಸ್
D
ಮೇಲಿನ ಯಾವುದೂ ಅಲ್ಲ
Question 6 Explanation: 
ಈ-ಪೋರ್ಟಲ್: ಲೋಕಸಭೆಯಲ್ಲಿ ಕಾಗದ ಬಳಕೆಯ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಲೋಕಸಭಾ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ರವರು ಈ-ಪೋರ್ಟಲ್ ಎಂಬ ಅಂತರ್ಜಾಲ ತಾಣವನ್ನು ಉದ್ಘಾಟಿಸಿದರು. ಈ-ಮೇಲ್ ಮತ್ತು ಮೆಸೇಜ್ ಗಳ ಮೂಲಕ ಸಚಿವಾಲಯದ ಎಲ್ಲಾ ಶಾಖೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಬ್ಬ ಸಂಸದರಿಗೂ ಪ್ರತ್ಯೇಕ ಲಾಗಿನ್ ಮತ್ತು ಪಾಸ್ ವರ್ಡ್ ನೀಡಿದ್ದು ಇದರಲ್ಲಿ ಲೋಕಸಭೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ಸದ್ಯ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ತಾಣ ಮಾಹಿತಿ ನೀಡಲಿದೆ.
Question 7
7.ಇಂಟಿಗ್ರೇಟೆಡ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ (ICJS) ವ್ಯವಸ್ಥೆಯನ್ನು ಪ್ರಪ್ರಥಮವಾಗಿ ಜಾರಿಗೊಳಿಸಿಕೊಂಡ ಭಾರತದ ಎರಡು ರಾಜ್ಯಗಳು ಯಾವುವೆಂದರೆ:
A
ತೆಲಂಗಾಣ-ಆಂಧ್ರ ಪ್ರದೇಶ
B
ಉತ್ತರಪ್ರದೇಶ-ಉತ್ತರಾಖಂಡ
C
ಬಿಹಾರ-ಜಾರ್ಖಂಡ್
D
ಕರ್ನಾಟಕ-ಗೋವ
Question 7 Explanation: 
ತೆಲಂಗಾಣ-ಆಂಧ್ರ ಪ್ರದೇಶ: ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಇಂಟಿಗ್ರೇಟೆಡ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ (ICJS) ವ್ಯವಸ್ಥೆಯನ್ನು ಇದೇ ಮೊದಲ ಬಾರಿ ಭಾರತದಲ್ಲಿ ಜಾರಿಗೊಳಿಸಿದೆ. ಈ ವ್ಯವಸ್ಥೆಯಲ್ಲಿ ನ್ಯಾಯಾಲಯಗಳು, ಪೊಲೀಸ್ ಠಾಣೆಗಳು, ವಿಚಾರಣೆ, ಬಂಧೀಖಾನೆಗಳನ್ನು ಎರಡೂ ರಾಜ್ಯಗಳಲ್ಲಿ ಬಳಸಿಕೊಳ್ಳಬಹುದಾಗಿದೆ.
Question 8
8.ರೈಲು ಅಪಘಾತಗಳನ್ನು ತಡೆಗಟ್ಟಲು ಭಾರತೀಯ ರೈಲ್ವೆಯು ಈ ಕೆಳಕಂಡ ಯಾವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
A
ತ್ರಿ-ಕೋನ
B
ತ್ರಿ-ರಕ್ಷಾ
C
ತ್ರಿ-ವೇ
D
ತ್ರಿ-ನೇತ್ರ
Question 8 Explanation: 
ತ್ರಿ-ನೇತ್ರ: ಭಾರತೀಯ ರೈಲ್ವೆಯು ರೈಲುಗಳ ನಡುವೆ ನಡೆಯಬಹುದಾದ ಅಪಘಾತಗಳನ್ನು ತಡೆಯುವ ಉದ್ದೇಶದಿಂದ The Terrain Imaging for Diesel Drivers-Infrared Enhanced Optical and Radar Assisted (Tri-NETRA) ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಪ್ರತಿ ರೈಲಿನಲ್ಲಿ ಇನ್ಪಾರೆಡ್ ಹಾಗೂ ರಾಡಾರ್ ತಾಂತ್ರಿಕತೆ ಒಳಗೊಂಡ ಸಾಧನ ಅಳವಡಿಸಿದ್ದು ಇದು 2-3 ಕಿ.ಮೀ. ದೂರದ ಸಿಗ್ನಲ್ ಸಂಗ್ರಹಿಸಿ ಮಾಹಿತಿ ನೀಡಲಿದೆ. ರೈಲಿಗೆ ಯಾವುದೇ ತರಹದ ಭೌತಿಕ ವಸ್ತುಗಳ ಅಡೆತಡೆಗಳು ಎದುರಾದಾಗ ಅದರ ಬಗ್ಗೆ ಮೊದಲೇ ಮಾಹಿತಿ ಒದಗಿಸುತ್ತದೆ, ಇದರಿಂದ ಅಪಘಾತಗಳನ್ನು ತಡೆಯಲು ಸಹಕಾರಿಯಾಗಲಿದೆ.
Question 9
9.ಕಸಮುಕ್ತ ಪ್ರದೇಶವಾಗಿಸುವ ಸಲುವಾಗಿ ಈ ಕೆಳಕಂಡ ಯಾವ ಕೇಂದ್ರಾಡಳಿತ ಪ್ರದೇಶವು ‘ಸ್ವಚ್ಛ ಬಾಲ ಸೇನ’ ವನ್ನು ರಚಿಸಿದೆ
A
ದೆಹಲಿ
B
ಪಾಂಡಿಚೆರಿ
C
ಲಕ್ಷದ್ವೀಪ
D
ಡಿಯು-ಡಾಮನ್
Question 9 Explanation: 
ಪಾಂಡಿಚೆರಿ: ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ಕಸಮುಕ್ತ ಪ್ರದೇಶವಾಗಿಸುವ ಸಲುವಾಗಿ ‘ಸ್ವಚ್ಛ ಬಾಲ ಸೇನ’ ವನ್ನು ರಚಿಸಿದೆ. ಇದರಲ್ಲಿ ಮಕ್ಕಳು ಸ್ವಚ್ಛತೆಯ ಕಾವಲುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಕ್ಕಳಿಗೆ ಹಳದೆ ಬಣ್ಣದ ವಿಶಲ್ ಗಳನ್ನು ನೀಡಿದ್ದು ಯಾರಾದರೂ ಕಸವನ್ನು ಎಲ್ಲೆಂದರಲ್ಲೆ ಎಸೆಯುವುದನ್ನು ಕಂಡರೆ ಶಬ್ಧ ಮಾಡುವ ಮೂಲಕ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿ ಹೇಳಲಿದ್ದಾರೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಪ್ರಥಮ ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ.
Question 10
10. UNESCO ಪ್ರಕಟಿಸಿದ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ 2016 ರಲ್ಲಿ ಭಾರತದ ಮೂರು ಸ್ಥಳಗಳು ಸ್ಥಾನ ಪಡೆದಿವೆ, ಪಟ್ಟಿಗೆ ಸೇರದ ಸ್ಥಳ ಯಾವುದು ಗುರುತಿಸಿ
A
ಬಿಹಾರ ನಳಂದ ಮಹಾವಿಹಾರ
B
ಗುಜರಾತ್ ಗಿರ್ ವನ್ಯಧಾಮ
C
ಚಂಡೀಗಡ ಕ್ಯಾಪಿಟಲ್ ಕಾಂಪ್ಲೆಕ್ಸ್
D
ಸಿಕ್ಕಿಂ ಕಾಂಜಿರಂಗ ವನ್ಯಜೀವಿ ಧಾಮ
Question 10 Explanation: 
ಗುಜರಾತ್ ಗಿರ್ ವನ್ಯಧಾಮ: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ನೂತನ ಪಟ್ಟಿಯನ್ನು ಬಿಡುಗಡೆಗೊಂಡಿದ್ದು, ಭಾರತದ ಬಿಹಾರ ನಳಂದ ಮಹಾವಿಹಾರ, ಚಂಡೀಗಡ ಕ್ಯಾಪಿಟಲ್ ಕಾಂಪ್ಲೆಕ್ಸ್, ಸಿಕ್ಕಿಂ ಕಾಂಜಿರಂಗ ವನ್ಯಜೀವಿ ಧಾಮ ಈ ಬಾರಿ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿವೆ. ಇಸ್ತಾಂಬುಲ್ ನಲ್ಲಿ ನಡೆದ 40ನೇ ವಿಶ್ವ ಪಾರಂಪರಿಕ ಸಮಿತಿಯ ಅಧಿವೇಶನದಲ್ಲಿ ನೂತನ ತಾಣಗಳ ಹೆಸರನ್ನು ಘೋಷಿಸಲಾಗಿದೆ. ಒಂದೇ ದೇಶದ ಮೂರು ತಾಣಗಳು ಒಂದೇ ಅಧಿವೇಶನದಲ್ಲಿ ಯುನೆಸ್ಕೊ ಪಟ್ಟಿಯನ್ನು ಸೇರ್ಪಡೆಗೊಂಡಿರುವುದು ಇದೇ ಮೊದಲು ಆಗಿದೆ.
There are 10 questions to complete.

7 Thoughts to “ಪ್ರಚಲಿತ ವಿದ್ಯಮಾನ ಕ್ವಿಜ್ – ಜುಲೈ , 2016”

  1. Anonymous

    Super one… Quizs are very helpful..

  2. Rathoda parusappa

    This is very usefull to who is unabble go to coaching centre . This is boon

  3. rock

    10th qu is very nice but 4th option must be kanchanajunga

  4. Good help full for compitative exam

Leave a Comment

This site uses Akismet to reduce spam. Learn how your comment data is processed.