ದೇಶದ ಮೊದಲ “ಸ್ಟಾರ್ಟ್ ಅಪ್ ಸೆಲ್ (Start up Cell)” ರಾಜ್ಯದಲ್ಲಿ ಆರಂಭ

ನವೋದ್ಯಮಗಳ ಪ್ರೋತ್ಸಾಹಿಸುವ ಸಲುವಾಗಿ ದೇಶದ ಮೊದಲ ಸ್ಟಾರ್ಟ್ ಅಪ್ ಸೆಲ್ ಅನ್ನು ಕರ್ನಾಟಕ ರಾಜ್ಯದಲ್ಲಿ ಆನಾವರಣಗೊಳಿಸಲಾಗಿದೆ. ನವೋದ್ಯಮವನ್ನು ಬಯಸುವವರಿಗೆ ನೋಂದಾಣಿ ಮತ್ತು ಸವಲತ್ತುಗಳ ವಿತರಣೆಗೆ ಸ್ಟಾರ್ಟ್ ಅಪ್ ಸೆಲ್ ಸಹಾಯ ಮಾಡಲಿದೆ.

  • ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-20 ರ ಅಡಿ ನಮೋದ್ಯಮವನ್ನು ಬಲಪಡಿಸುವ ಉದ್ದೇಶದೊಂದಿಗೆ ಸ್ಟಾರ್ಟ್ ಅಪ್ ಸೆಲ್ ಅನ್ನು ಜಾರಿಗೊಳಿಸಲಾಗಿದೆ.
  • ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-20 ರ ನಮೋದ್ಯಮಗಳಿಗೆ ರಿಯಾಯಿತಿ, ಮಾಹಿತಿ ಹಾಗೂ ವಿನಾಯಿತಿ ಪಡೆಯಲು ಈ ಕೋಶ ನೆರವಾಗಲಿದೆ. ಇದಕ್ಕೆಂದೆ startup.karnataka.gov.in ಅನ್ನು ಆರಂಭಿಸಲಾಗಿದೆ.
  • ಉದ್ಯಮಿಗಳು ನೇರವಾಗಿ ಸ್ಟಾರ್ಟ್​ಅಪ್ ಕರ್ನಾಟಕ ವೆಬ್​ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಟಾರ್ಟ್​ಅಪ್ ನೀತಿ ಹಾಗೂ ಇತರೆ ವೇದಿಕೆ ಮೂಲಕ ಈ ಉದ್ಯಮಕ್ಕೆ ನೀಡುವ ಸವಲತ್ತುಗಳನ್ನು ಪಡೆಯಬೇಕಿದ್ದರೆ ಈ ಸೆಲ್​ನಲ್ಲಿ ನೋಂದಾಯಿಸಿಕೊಂಡಿರಲೇಬೇಕು.
  • ಸ್ಟಾರ್ಟ್​ಅಪ್ ಸೆಲ್​ನಲ್ಲಿ ನೋಂದಾಯಿಸಿ ಕೊಂಡರೆ ಕ್ಲೌಡ್ ತಂತ್ರಜ್ಞಾನ, ಅಂತರ್ಜಾಲ ಸೇವೆ, ದೂರವಾಣಿ ಸೇವೆ, ಅಗತ್ಯ ತಂತ್ರಾಂಶ ಸೇರಿ ಇನ್ನಿತರ ಸೇವೆಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರವೇ ಕೊಡಿಸಲಿದೆ. ಈ ಸಂಬಂಧ ಐಬಿಎಂ, ಮೈಕ್ರೋಸಾಫ್ಟ್, ಏರ್​ಟೆಲ್, ವೊಡಾಫೋನ್, ಬಿಎಸ್​ಎನ್​ಎಲ್ ಸೇರಿ ಇನ್ನಿತರ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕರ್ನಾಟಕ ಸ್ಟಾರ್ಟ್ ಅಪ್ ಬೂಸ್ಟರ್ ಕಿಟ್

  • ಇದೇ ವೇಳೆ ಕರ್ನಾಟಕ ಸ್ಟಾರ್ಟ್ ಅಪ್ ಬೂಸ್ಟರ್ ಕಿಟ್ ಆರಂಭಿಸಲಾಗಿದ್ದು, ಇದರಡಿ ಕರ್ನಾಟಕ ಜೈವಿಕ ಹಾಗೂ ಮಾಹಿತಿ ತಂತ್ರಜ್ಞಾನ ಸೇವೆಗಳ ಘಟಕದಲ್ಲಿ ನೋಂದಣಿಯಾದ ಸ್ಟಾರ್ಟಪ್ ಕಂಪನಿಗಳಿಗೆ ಸಾಫ್ಟ್ವೇರ್ ಟೂಲ್’ಗಳು ಸೇರಿದಂತೆ ಕ್ಲೌಡ್ ಕ್ರೆಡಿಟ್, ಡಿಬಗ್ಗಿಂಗ್, ಟೆಸ್ಟಿಂಗ್ ಟೂಲ್ಸ್, ಹಣಕಾಸು ನೆರವು ಹಾಗೂ ಮತ್ತಿತರ ಸೇವೆಗಳನ್ನು ದೊರಕಲಿವೆ.

ಕರ್ನಾಟಕ ಸ್ಟಾರ್ಟ್ ಅಪ್ ನೀತಿ 2015-2020

ರಾಜ್ಯದಲ್ಲಿ ನಮೋದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ಸ್ಟಾರ್ಟ್ ಅಪ್ ನೀತಿ 2015-20 ನ್ನು ಜಾರಿಗೊಳಿಸಿದೆ. ಕರ್ನಾಟಕ ಸ್ಟಾರ್ ಅಪ್ ನೀತಿಯ ಪ್ರಮುಖ ಅಂಶಗಳು ಇಲ್ಲಿವೆ:

ಸ್ಟಾರ್ಟ್ ಅಪ್ ನೀತಿ 2015-2020 ರ ಪ್ರಕಾರ ನಮೋದ್ಯಮ ಎಂದರೇನು?

  • ಕರ್ನಾಟಕ ಸ್ಟಾರ್ಟ್ ಅಪ್ ನೀತಿಯ ಪ್ರಕಾರ ನಮೋದ್ಯಮವು ನಾಲ್ಕು ವರ್ಷಗಳಿಗಿಂತ ಹಿಂದಿನದಾಗಿರಬಾರದು
  • ಕಡ್ಡಾಯವಾಗಿ ಕರ್ನಾಟಕದಲ್ಲೇ ನೋಂದಾಯಿಸಿರಬೇಕು
  • ಶೇ 50 ರಷ್ಟು ಕಾರ್ಮಿಕರು ಕರ್ನಾಟಕದವರೆ ಆಗಿರಬೇಕು.
  • ಕಂಪನಿಯ ವರಮಾನವು ರೂ 50ಕೋಟಿಯನ್ನು ತಲುಪಿದಾಗ ನೀತಿ ಅಡಿ ಸಿಗುವ ಸೌವಲತ್ತುಗಳನ್ನು ಮೊಟಕುಗೊಳಿಸಲಾಗುವುದು.

ಸ್ಟಾರ್ಟ್ ಅಪ್ ನೀತಿ 2015-2020 ಉದ್ದೇಶಗಳು:

  • 2020ರ ವೇಳಗೆ ರಾಜ್ಯದಲ್ಲಿ 20 ಸಾವಿರ ತಂತ್ರಜ್ಞಾನ ಆಧರಿತ ಸ್ಟಾರ್ಟಪ್ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
  • ಇದಕ್ಕಾಗಿ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ 2 ಸಾವಿರ ಕೋಟಿ ರೂ ಹಣವನ್ನು ಕ್ರೋಢಿಕರಿಸುವುದು.
  • ಸುಮಾರು 6000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಉತ್ಪನ್ನಗಳನ್ನು ತಯಾರಿಸುವುದು
  • ವಿಶ್ವದ ಹತ್ತು ವೇಗವಾಗಿ ಸ್ಟಾರ್ಟ್ ಅಪ್ ನಗರಗಳ ಪೈಕಿ ಬೆಂಗಳೂರನ್ನು ಒಂದಾಗಿಸುವುದು. ಪ್ರಸ್ತುತ ಬೆಂಗಳೂರು 15ನೇ ಸ್ಥಾನದಲ್ಲಿದೆ.
  • ರಾಜ್ಯದಲ್ಲಿ 6 ಲಕ್ಷ ನೇರ ಮತ್ತು 1.2 ಮಿಲಿಯನ್ ಪರೋಕ್ಷವಾಗಿ ಉದ್ಯೋಗವನ್ನು ಸೃಷ್ಟಿಸುವುದು.

ನಕ್ಸಲ್ ಪ್ರದೇಶ ಪಟ್ಟಿಯನ್ನು (Red Corridor) ಪರಿಷ್ಕರಿಸಲಿರುವ ಕೇಂದ್ರ ಸರ್ಕಾರ

ನಕ್ಸಲ್ ಪೀಡಿತ ಕೆಲವು ಜಿಲ್ಲೆಗಳನ್ನು ರೆಡ್ ಕಾರಿಡಾರ್ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಕ್ರಮ ಜಾರಿಗೊಂಡರೆ ಪ್ರಸ್ತುತ ಗುರುತಿಸಲಾಗಿರುವ 106 ನಕ್ಸಲ್ ಜಿಲ್ಲೆಗಳಲ್ಲಿ 20 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳ ಪಟ್ಟಿಯಿಂದ ಹೊರಗುಳಿಯಲಿವೆ.

  • ರೆಡ್ ಕಾರಿಡಾರ್ ಎಂದರೆ ನಕ್ಸಲ್-ಮವೋವಾದಿ ಬಂಡುಕೋರರಿಂದ ಪೀಡಿತವಾಗಿರುವ ಭಾರತದ ಪೂರ್ವ ಭಾಗ.
  • ಸದ್ಯ 10 ರಾಜ್ಯಗಳ 106 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಎಂದು ಘೊಷಿಸಲಾಗಿದೆ, ಇವುಗಳಲ್ಲಿ 44 ಜಿಲ್ಲೆಗಳು ಅತಿ ಭಾದಿತ ಜಿಲ್ಲೆಗಳಾಗಿವೆ.
  • ಈ ಹತ್ತು ರಾಜ್ಯಗಳೆಂದರೆ ಆಂಧ್ರಪ್ರದೇಶ, ಬಿಹಾರ, ಛತ್ತೀಸ್​ಗಢ, ಜಾರ್ಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ
  • ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳದಲ್ಲೂ ನಕ್ಸಲ್ ಚಟುವಟಿಕೆಗಳಿವೆ. ಕರ್ನಾಟಕದ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗದಲ್ಲಿ ನಕ್ಸಲ್ ಚಟುವಟಿಕೆ ಇದೆ ಆದರೂ ಯಾವ ಜಿಲ್ಲೆಗಳು ರೆಡ್ ಕಾರಿಡಾರ್ ಪಟ್ಟಿಗೆ ಸೇರ್ಪಡೆಗೊಂಡಿಲ್ಲ.

ರೆಡ್ ಕಾರಿಡಾರ್ ಅನುಕೂಲ

  • ರೆಡ್ ಕಾರಿಡಾರ್ ಪಟ್ಟಿಯಲ್ಲಿ ಗುರುತಿಕೊಳ್ಳುವ ಜಿಲ್ಲೆಗಳ ಸಮಗ್ರ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡುತ್ತದೆ. ಒಂದು ವೇಳೆ ಪಟ್ಟಿಯಿಂದ ಕೈಬಿಟ್ಟರೆ ಈ ಅನುಕೂಲ ದೊರೆಯುವುದಿಲ್ಲ. 2006 ರಲ್ಲಿ ಕೊನೆಯ ಬಾರಿಗೆ ಕೇಂದ್ರ ಸರ್ಕಾರ ಈ ಪಟ್ಟಿಯನ್ನು ಪರಿಷ್ಕರಿಸಿತ್ತು.

ಪಿಟೀಲು ವಾದಕಿ ಎ.ಕೃಷ್ಣಕುಮಾರಿಗೆ ಸಂಗೀತಾ ಕಲಾ ನಿಧಿ ಪ್ರಶಸ್ತಿ

ದಕ್ಷಿಣ ಭಾರತದ ಪ್ರಖ್ಯಾತ ಪಿಟೀಲು ವಾದಲಿ ಎ.ಕೃಷ್ಣಕುಮಾರಿ ರವರನ್ನು ಸಂಗೀತಾ ಕಲಾ ನಿಧಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಆ ಮೂಲಕ ಈ ಪ್ರಶಸ್ತಿಯನ್ನು ಪಡೆಯಲಿರುವ ಮೊದಲ ಮಹಿಳಾ ಪಿಟೀಲು ವಾದಕಿ ಎಂಬ ಖ್ಯಾತಿಗೆ ಎ.ಕೃಷ್ಣಕುಮಾರಿ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಜನವರಿ 1,2017 ರಂದು ಪ್ರಧಾನ ಮಾಡಲಾಗುವುದು.

  • ಕೃಷ್ಣಕುಮಾರಿ ರವರು ಡಿಸೆಂಬರ್ 15, 2016 ರಿಂದ ಜನವರಿ 1, 2017 ರವರೆಗೆ ನಡೆಯಲಿರುವ ಸಂಗೀತ ಅಕಾಡೆಮಿಯ 90 ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
  • ಈವರೆಗೆ ಎಂಟು ಪಿಟೀಲು ವಾದಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅವರುಗಳೆಂದರೆ ಚಂದ್ರಶೇಖರನ್ (2005), ಎಂ.ಎಸ್. ಗೋಪಾಲ ಕೃಷ್ಣನ್ (1997), ಪಾಪ ಕೆ,ಎಸ್ ವೆಂಕಟರಾಮಯ್ಯ (1962), ಟಿ.ಕೆ.ಜಯರಾಮ ಅಯ್ಯರ್ (1960), ಟಿ ಚೌಡಯ್ಯ (1957), ಎಂ ಗೋಪಾಲಕೃಷ್ಣ ಅಯ್ಯರ್ (1955), ಕರೂರು ಚಿನ್ನಸ್ವಾಮಿ ಅಯ್ಯರ್ (1950) ಮತ್ತು ಕುಂಭಕೋಣಂ ರಾಜಮಣಿಕಂ ಪಿಳ್ಳೈ (1948).

ಕನ್ಯಾಕುಮಾರಿ ರವರ ಬಗ್ಗೆ:

  • ಆಂದ್ರಪ್ರದೇಶದ ವಿಜಯನಗರಂ ಮೂಲದವರಾದ ಕನ್ಯಾಕುಮಾರಿ ರವರು ಸುಮಾರು 50 ವರ್ಷಗಳ ಕಾಲ ಸಂಗೀತಾ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಖ್ಯಾತ ಪಿಟೀಲು ವಾದಕಿಯಾದ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತಾದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ಸಂಗೀತಾ ಕಲಾ ನಿಧಿ ಪ್ರಶಸ್ತಿ:

  • ಮದ್ರಾಸ್ ಸಂಗೀತಾ ಅಕಾಡೆಮಿ ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತಾದಲ್ಲಿ ಅಪಾರ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ನೀಡುತ್ತಿದೆ.
  • ಕರ್ನಾಟಕ ಸಂಗೀತಾ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಇದು ಒಂದಾಗಿದೆ.

ಚೀನಾದ ಚೆಂಗ್ಡು ನಲ್ಲಿ ಜಿ-20 ಆರ್ಥಿಕ ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಸ್ ಸಭೆ

ಗ್ರೂಪ್ -20 ಸದಸ್ಯ ರಾಷ್ಟ್ರಗಳ ಆರ್ಥಿಕ ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆಯನ್ನು ಚೀನಾದ ಚೆಂಗ್ಡುವಿನಲ್ಲಿ ಆಯೋಜಿಸಲಾಗಿತ್ತು. ಎರಡು ದಿನಗಳ ಕಾಲ ನಡೆದ ಈ ಸಭೆಯಲ್ಲಿ ಮಂದಗತಿಯಲ್ಲಿ ಚೇತರಿಕೆ ಕಾಣುತ್ತಿರುವ ಜಾಗತಿಕ ಆರ್ಥಿಕತೆಯನ್ನು ಸಧೃಡಗೊಳಿಸುವ ಸಲುವಾಗಿ ಸದಸ್ಯ ರಾಷ್ಟ್ರಗಳು ನಿರ್ಧಾರ ಕೈಗೊಂಡವು.

  • ಯುರೋಪಿಯನ್ ಒಕ್ಕೂಟವನ್ನು ತೊರೆಯುತ್ತಿರುವ ಬ್ರಿಟನ್ನ ನಿರ್ಧಾರದ ಬಗ್ಗೆ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ವಿಷಾದ ವ್ಯಕ್ತಪಡಿಸಿದರು ಹಾಗೂ ಬ್ರಿಟನ್ ನ ಈ ನಿರ್ಧಾರದಿಂದ ವಿಶ್ವದ ಆರ್ಥಿಕತೆ ಮೇಲಾಗುವ ಪರಿಣಾಮವನ್ನು ಗಂಭೀರವಾಗಿ ಚರ್ಚಿಸಲಾಯಿತು.
  • ಇಂತಹ ಬೆಳವಣಿಗೆಗಳಿಂದ ವಿಶ್ವದ ಆರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಸಕಾರತ್ಮವಾಗಿ ಎದುರಿಸಲು ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚಿಸಲಾಯಿತು.
  • ಸಭೆಯಲ್ಲಿ ಅತ್ಯಂತ ಪ್ರಮುಖ ವಿಷಯವಾದ ವ್ಯಾಪಾರ ರಕ್ಷಣೆ ನೀತಿಯನ್ನು ಬಲವಾಗಿ ತಿರಸ್ಕರಿಸಲಾಯಿತು.
  • ಅತಿಯಾದ ಉಕ್ಕಿನ ಉತ್ಪಾದನೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವ ಸಂಕಷ್ಟವನ್ನು ನಿವಾರಿಸುವ ಬಗ್ಗೆ ಚರ್ಚಿಸಲಾಯಿತು.