ಯುನೆಸ್ಕೂ ವಿಶ್ವ ಪಾರಂಪರಿಕ ಪಟ್ಟಿ ಸೇರ್ಪಡೆಗೊಂಡ ನಳಂದ ಮಹಾವಿಹಾರ

ಭಾರತದ ನಳಂದಾ ಮಹಾವಿಹಾರ ಅವಶೇಷ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಹಾರದಲ್ಲಿ ಇರುವ ನಳಂದಾ ಮಹಾವಿಹಾರವನ್ನು ಇತಿಹಾಸದಲ್ಲಿ ನಳಂದ ವಿಶ್ವವಿದ್ಯಾಲಯ ಎಂತಲೂ ಕರೆಯಲಾಗುತ್ತದೆ. 5ನೇ ಶತಮಾನದಿಂದ 13ನೇ ಶತಮಾನದವರೆಗೂ ಅಸ್ಥಿತ್ವದಲ್ಲಿದ್ದ ಈ ವಿದ್ಯಾಲಯದ ಕುರುಹುಗಳನ್ನು ನಳಂದ ಮಹಾವಿಹಾರದಲ್ಲಿ ಕಾಣಬಹುದಾಗಿದೆ.

  • ನಳಂದ ಮಹಾವಿಹಾರವೂ ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 26 ಕಿ.ಮೀ ದೂರದಲ್ಲಿದ್ದು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡ 26 ನೇ ಸಾಂಸ್ಕೃತಿಕ ತಾಣವಾಗಿದೆ.
  • ನಳಂದ ಮಹಾವಿಹಾರವನ್ನು ಗುಪ್ತ ಸಂತತಿಯ ಒಂದನೇ ಕುಮಾರಗುಪ್ತನು ಕ್ರಿ.ಶ 5 ಶತಮಾನದಲ್ಲಿ ನಿರ್ಮಿಸಿದ್ದಾಗಿದೆ. ತದನಂತರ ಕನೌಜ ರಾಜ ಹರ್ಷವರ್ಧನ ಮತ್ತು ಪಾಲ ದೊರೆಗಳು ಈ ವಿಶ್ವವಿದ್ಯಾಲಯವನ್ನು ಪೋಷಿಸಿದ್ದರು.
  • ಭಾರತ ಭೂಖಂಡದಲ್ಲೇ ಮೊದಲ ಯೋಜಿತ ವಿಶ್ವವಿದ್ಯಾಲಯ ಇದಾಗಿದ್ದು, ಭಾರತ ಅಷ್ಟೇ ಅಲ್ಲದೇ ವಿದೇಶಿ ನೆಲದಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ಇದು ಆಶ್ರಯವಾಗಿತ್ತು.
  • ನಳಂದಾ ಮಹಾವಿಹಾರವು ಬಿಹಾರದ ಎರಡನೇ ವಿಶ್ವ ಪಾರಂಪರಿಕ ತಾಣ. ಈ ಮುಂಚೆ ಬೋಧಗಯ ಮಹಾಬೋಧಿ ದೇವಸ್ಥಾನ ಈ ಸ್ಥಾನವನ್ನು ಪಡೆದುಕೊಂಡಿದೆ.
  • ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡ ತಾಣಗಳಿಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಂರಕ್ಷಣೆ ಮಾಡಲಾಗುವುದು, ಅಲ್ಲದೇ ಇವುಗಳ ಸಂರಕ್ಷಣೆಗೆ ಯುನೆಸ್ಕೋದಿಂದ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ.

ಅರುಣಾಚಲ ನೂತನ ಮುಖ್ಯಮಂತ್ರಿಯಾಗಿ ಪೆಮ ಖಂಡು ಪ್ರಮಾಣ ವಚನ ಸ್ವೀಕಾರ

ಕಾಂಗ್ರೆಸ್ ಪಕ್ಷದ ಪೆಮ ಖಂಡು ರವರು ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪೆಮ ಖಂಡು ರವರು ಅರುಣಾಚಲ ಪ್ರದೇಶದ ಹತ್ತನೇ ಮುಖ್ಯಮಂತ್ರಿ ಆಗಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್ ರವರು ಪ್ರಮಾಣ ವಚನ ಖಂಡು ರವರಿಗೆ ಪ್ರಮಾಣ ವಚನ ಭೋದಿಸಿದರು.

  • 1979 ರಲ್ಲಿ ತವಾಂಗ್ ಜಿಲ್ಲೆಯ ಹಳ್ಳಿಯಲ್ಲಿ ಜನಿಸಿದ 37 ವರ್ಷದ ಪೆಮಾ ಖಂಡು ಅವರು ಅರುಣಾಚಲ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಕಿರಿಯ ಮುಖ್ಯಮಂತ್ರಿ ಆಗಿದ್ದಾರೆ. ಪೆಮಾ ಖಂಡು ಅವರು ಅರುಣಾಚಲಪ್ರದೇಶ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಹಿರಿಯ ಪುತ್ರ.
  • ಪೆಮಾ ಖಂಡು ಮುಕ್ತೋ ಮೀಸಲು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005ರಿಂದ ರಾಜ್ಯ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಲಿಕೋ ಫುಲ್ ಸರ್ಕಾರದಲ್ಲಿ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.
  • ಖಂಡು ಅವರಿಗೆ ಇಬ್ಬರು ಪಕ್ಷೇತರರು ಸೇರಿ 47 ಶಾಸಕರು ಬೆಂಬಲ ಸೂಚಿಸಿದ್ದರು.
  • ಸ್ಥಾನ ಸೇರಿದಂತೆ ವಿಶ್ವದ 9 ತಾಣಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

ಇಸ್ತಾಂಬುಲ್​ನಲ್ಲಿ ನಡೆದ ಯುನೆಸ್ಕೋದ 40ನೇ ಅಧಿವೇಶನದಲ್ಲಿ ಬಿಹಾರದ ನಳಂದಾ ಮಹಾವಿಹಾರ ಸೇರಿದಂತೆ ವಿಶ್ವದ ಒಟ್ಟು 9 ಹೊಸ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ನೀಡಲಾಗಿದೆ.

ಈ ವರ್ಷ ಒಟ್ಟು 27ನಾಮ ನಿರ್ದೇಶನಗಳು ಬಂದಿದ್ದು ಅವುಗಳಿಂದ ಭಾರತ, ಚೀನಾ,ಇರಾನ್, ಮೈಕ್ರೋನೇಶ್ಯಾ, ಸ್ಪೈನ್, ಗ್ರೀಸ್, ಟರ್ಕಿ, ಬ್ರಿಟನ್ ಹಾಗೂ ಜಂಟಿ ನಾಮ ನಿರ್ದೇಶನ ನೀಡಿದ ಬೋಸ್ನಿಯಾ ಮತ್ತು ಹೆರ್ಜೆಗೊವಿನಾ, ಕ್ರೊಟಿಯಾ, ಮೊಂಟೆನೆಗ್ರೊ ಮತ್ತು ಸರ್ಬಿಯಾದ 9 ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಕೊಳ್ಳಲಾಗಿದೆ.

ಹೆಲಿಕಾಪ್ಟರ್ ತಯಾರಿಕೆ: ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಮತ್ತು ಅಮೆರಿಕದ ಬೆಲ್ ಕಂಪನಿ ಒಪ್ಪಂದ

ದೇಶದಲ್ಲಿ ಹೆಲಿಕಾಪ್ಟರ್ ತಯಾರಿಕೆ ಸಲುವಾಗಿ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಮತ್ತು ಅಮೆರಿಕದ ಬೆಲ್ ಹೆಲಿಕಾಪ್ಟರ್ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಭಾರತದಲ್ಲೇ ತಯಾರಿಸಿ (Make in India) ಅಡಿ ಭಾರತದ ವಿಮಾನಯಾನ ಸಾಮರ್ಥ್ಯ ಹೆಚ್ಚಿಸುವುದು, ಬಿಡಿಭಾಗಗಳ ತಯಾರಿಕೆ, ತಂತ್ರಜ್ಞಾನ ವಿನಿಮಯಕ್ಕೆ ಈ ಒಪ್ಪಂದ ಸಹಕಾರಿಯಾಗಲಿದೆ.

  • ಈ ಒಪ್ಪಂದದಡಿಯಲ್ಲಿ ಎರಡೂ ಕಂಪನಿಗಳು ನಾಗರಿಕ ಮತ್ತು ಸೇನಾ ಉದ್ದೇಶಗಳಿಗೆ ಬಳಸುವ ಹೆಲಿಕಾಪ್ಟರ್ ಗಳನ್ನು ತಯಾರಿಸಲಿವೆ ಆ ಮೂಲಕ ಭಾರತದ ದೇಶದಲ್ಲಿ ಹೆಲಿಕಾಪ್ಟರ್ ಮಾರುಕಟ್ಟೆ ಸೃಜನೆಯಾಗಲಿದೆ. ಅಲ್ಲದೇ ಬಿಡಿಭಾಗ ತಯಾರಿಕೆ, ತರಬೇತಿ ಮತ್ತು ನಿರ್ವಹಣೆ, ಸಂಶೋಧನೆ, ಅಭಿವೃದ್ದಿ ಮತ್ತು ತಂತ್ರಜ್ಞಾನ ವಿನಿಮಯಕ್ಕೂ ಸಹಕಾರಿಯಾಗಲಿದೆ.

ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಬಗ್ಗೆ:

  • ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಟಾಟಾ ಗ್ರೂಪ್ ನ ಪ್ರಮುಖ ವಾಯುಯಾನ ಮತ್ತು ರಕ್ಷಣಾ ಅಂಗವಾಗಿದೆ. ಟಾಟಾ ಸನ್ಸ್ ಇದರು ಸಂಪೂರ್ಣ ಸಾಮ್ವತೆಯನ್ನು ಹೊಂದಿದ್ದಾರೆ. ಪ್ರಸ್ತುತ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ದೇಶದ ರಕ್ಷಣಾ ಮತ್ತು ವಾಯುಯಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಂಪನಿಯಾಗಿದೆ.

ಬೆಲ್ ಹೆಲಿಕಾಪ್ಟರ್ ಕಂಪನಿ ಬಗ್ಗೆ:

  • ಬೆಲ್ ಹೆಲಿಕಾಪ್ಟರ್ ಕಂಪನಿ ಭಾರತಕ್ಕೆ ಸುಮಾರು 60 ವರ್ಷಗಳಿಂದ ಹೆಲಿಕಾಪ್ಟರ್ ಅನ್ನು ಪೂರೈಸುತ್ತಿದೆ. ಈ ಕಂಪನಿಯು 1953ರಲ್ಲಿ ಮೊದಲ ಹೆಲಿಕಾಪ್ಟರ್ ಅನ್ನು ಭಾರತಕ್ಕೆ ಮಾರಾಟ ಮಾಡಿತ್ತು. ಪ್ರಸ್ತುತ ಸುಮಾರು 90 ಬೆಲ್ ಹೆಲಿಕಾಪ್ಟರ್ ಭಾರತದಲ್ಲಿ ಬಳಸಲಾಗುತ್ತಿವೆ.

ಮದ್ಯಪ್ರದೇಶದಲ್ಲಿ ದೇಶದ ಮೊದಲ ಖುಷಿ ಇಲಾಖೆ (Happiness Department) ಸ್ಥಾಪನೆ

ಸಾರ್ವಜನಿಕರ ಖುಷಿ ಕಾಪಾಡುವುದಕ್ಕಾಗಿಯೇ ದೇಶದಲ್ಲೆ ಮೊದಲ ಬಾರಿಗೆ ಖುಷಿ ಸಚಿವಾಲಯವನ್ನು ಮದ್ಯಪ್ರದೇಶ ಸರ್ಕಾರ ಸ್ಥಾಪಿಸಿದೆ. ಸಾಮಾನ್ಯ ಜನರ ಸಂತೋಷ ಕಾಪಾಡುವುದಕ್ಕಾಗಿಯೇ ರಚಿಸಲಾದ ಈ ಇಲಾಖೆಯು ಭೂತಾನ್ ಸರ್ಕಾರ ಜಾರಿಗೆ ತಂದರು ಖುಷಿ ಸಚಿವಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

  • ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಸಿಂಗ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ವರ್ಷಕ್ಕೆ 3.80 ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ.
  • ಈ ಇಲಾಖೆಯು ಇದಕ್ಕೆಂದೆ ರಚಿಸಲಾಗುವ ಕಾರ್ಯಕಾರಿ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಸಮಿತಿಯು ಅಧ್ಯಕ್ಷರೊಬ್ಬರನ್ನು ಒಳಗೊಂಡಿದ್ದು, ರಾಜ್ಯದ ಒಟ್ಟಾರೆ ಸಂತೋಷದ ಮಟ್ಟವನ್ನು ಮೌಲ್ಯಮಾಪನ ಮಾಡಲಿದೆ.
  • ಈ ಹೊಸ ಇಲಾಖೆಯ ಇತರೆ ಇಲಾಖೆಗಳಾದ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕ್ರೀಡಾ ಇಲಾಖೆಗಳೊಂದಿಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದ್ದು, ರಾಜ್ಯದಲ್ಲಿ ಸಂತೋಷವನ್ನು ಹೆಚ್ಚಿಸುವ ಸಲುವಾಗಿ ರೂಪುರೇಶೆಗಳನ್ನು ಸಿದ್ದಪಡಿಸಲಿದೆ.
  • ಒಟ್ಟಾರೆಯಾಗಿ ಈ ಸಮಿತಿಯು ಜೀವನದಲ್ಲಿ ಸಂತೋಷದಿಂದಿರಲು ಅಗತ್ಯವಾದ ಅಂಶಗಳ ಬಗ್ಗೆ ಸಲಹೆಗಳನ್ನು ನೀಡಲಿದೆ.
  • ಭೂತಾನ್ ದೇಶದ ವಿಶ್ವದಲ್ಲೇ ಒಟ್ಟಾರೆ ರಾಷ್ಟ್ರೀಯ ಸಂತೋಷ (Gross National Happiness) ಪರಿಕಲ್ಪನೆಯನ್ನು ಅಳವಡಿಸಿಕೊಂಡ ಮೊದಲ ದೇಶ. ಒಬ್ಬ ವ್ಯಕ್ತಿಯು ಸಂತೋಷದಿಂದಿರಲು ಅಗತ್ಯವಾದ ಶಿಕ್ಷಣ, ಜೀವನ ಗುಣಮಟ್ಟ, ಉತ್ತಮ ಆಡಳಿತ, ಆರೋಗ್ಯ ಮುಂತಾದ ಮಾನದಂಡಗಳು ಎಷ್ಟಿರಬೇಕೆಂದ ಭೂತಾನ್ ನಲ್ಲಿ ನಿರ್ಧರಿಸಲಾಗಿದೆ.
  • ಇತ್ತೀಚೆಗೆ ವಿಶ್ವ ಸಂಸ್ಥೆ ಹೊರತಂದಿರುವ 2016 ವಿಶ್ವ ಸಂತೋಷ ಸೂಚ್ಯಂಕದಲ್ಲಿ 156 ದೇಶಗಳ ಪೈಕಿ ಭಾರತ 118ನೇ ಸ್ಥಾನಗಳಿಸಿರುವುದು ದೇಶದಲ್ಲಿ ಖುಷಿ ಸಚಿವಾಲಯದ ಅವಶ್ಯಕತೆ ಇರುವುದು ತೋರುತ್ತದೆ.