ರಾಧಿಕಾ ಮೆನನ್: ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳೆ

ಕ್ಯಾಪ್ಟನ್ ರಾಧಿಕಾ ಮೆನನ್ ರವರು ಸಾಗರದಲ್ಲಿ ತೋರಿದ ಅನ್ಯನ ಸಾಧನೆಗಾಗಿ ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ರಾಧಿಕಾ ಮೆನನ್ ರವರು ಈ ಪ್ರಶಸ್ತಿ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ರಾಧಿಕಾ ಮೆನನ್ ರವರು ತಮ್ಮ ಪ್ರಾಣವನ್ನು ಬದಿಗಿಟ್ಟು ಏಳು ಮಂದಿ ಮೀನುಗಾರರನ್ನು ರಕ್ಷಿಸಿದ ಸಾಹಸಕ್ಕಾಗಿ ಈ ಪ್ರಶಸ್ತಿ ಒಲಿದಿದೆ. 2015 ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಿಂದ ಒಡಿಶಾದ ಗೋಪಾಲಪುರಕ್ಕೆ ಹೋಗುತ್ತಿದ್ದ ದುರ್ಗಮ್ಮ ಹೆಸರಿನ ಮೀನುಗಾರಿಕಾ ನೌಕೆ ಚಂಡಮಾರುತಕ್ಕೆ ಸಿಲುಕಿ ನೌಕೆಯ ಇಂಜಿನ್ ವಿಫಲವಾಗಿ ಸಿಕ್ಕಿಹಾಕಿಕೊಂಡಿದ್ದನ್ನು ಮೆನನ್ ತಂಡ ಪತ್ತೆ ಮಾಡಿತ್ತು. ಬದುಕುವ ಆಸೆಯನ್ನ ಬಿಟ್ಟಿದ್ದ ಏಳು ಜನರನ್ನು ರಾಧಿಕಾ ಮೆನನ್ ರವರು ರಕ್ಷಿಸಿದ್ದರು.
  • ರಾಧಿಕಾ ರವರಿಗೆ ಈ ಪ್ರಶಸ್ತಿಯನ್ನು 21 ನವೆಂಬರ್ 2016 ರಂದು ನೀಡಲಾಗುವುದು. ಅಂತಾರಾಷ್ಟ್ರೀಯ ಸಾಗರ ಸಂಸ್ಥೆಯ ಕೇಂದ್ರ ಕಚೇರಿ ಇರುವ ಲಂಡನ್ ನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.

ರಾಧಿಕಾ ಮೆನನ್ ಬಗ್ಗೆ:

  • ರಾಧಿಕಾ ಮೆನನ್ ರವರು ಮೂಲತಃ ಕೇರಳದ ಕೊಡುಂಗಲ್ಲೂರು ರವರು. 1991 ರಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ದಲ್ಲಿ ಟ್ರೈನಿ ರೇಡಿಯೊ ಆಫೀಸರ್ ಆಗಿ ನೇಮಕಗೊಂಡರು.
  • 2011 ರಲ್ಲಿ ರಾಧಿಕಾ ಮೆನನ್ ಭಾರತದ ಮರ್ಚೆಂಟ್ ನೇವಿಯ ಮೊಟ್ಟಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
  • 2012 ಎಂಟಿ ಸುಮರ್ಣ ಸ್ವರಾಜ್ಯ ಹಡಗಿನ ಉಸ್ತುವಾರಿ ಹೊಂದಿದ್ದಾರೆ.

ಭಾರತೀಯ ಮೂಲದ ಅಮೆರಿಕನ್ ವೈದ್ಯರ ಸಂಘದ ಅಧ್ಯಕ್ಷರಾಗಿ ಅಜಯ್ ಲೋಧಾ ಆಯ್ಕೆ

ajay_upಭಾರತೀಯ ಮೂಲದ ಅಮೆರಿಕನ್ ವೈದ್ಯರುಗಳ ಸಂಘಕ್ಕೆ ಅಜಯ್ ಲೋಧಾ ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಲೋಧಾ ರವರು ವೈದ್ಯಕೀಯ ಸಂಘದ 34ನೇ ವಾರ್ಷಿಕ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.

  • ಈ ಸಂಘವೂ ಮೂರು ದಶಕಗಳಿಗೂ ಹಳೆಯದಾಗಿದ್ದು, ಸುಮಾರು ಒಂದು ಲಕ್ಷ ಸದಸ್ಯರನ್ನು ಒಳಗೊಂಡಿದೆ.
  • ಇದೇ ವೇಳೆ ಈ ಸಂಘದ ಸಹ ಅಧ್ಯಕ್ಷರಾಗಿ ಡಾ ಗೌತಮ್ ಸಮದ್ದರ್, ಉಪಾಧ್ಯಕ್ಷರಾಗಿ ಡಾ. ನರೇಶ್ ಪರೀಖ್, ಕಾರ್ಯದರ್ಶಿಯಾಗಿ ಡಾ. ಸುರೇಶ್ ರೆಡ್ಡಿ ಮತ್ತು ಖಜಾಂಚಿಯಾಗಿ ಡಾ. ಮಂಜು ಸಹದೇವ ಆಯ್ಕೆಯಾಗಿದ್ದಾರೆ.
  • ಭಾರತದಿಂದ ಬರುವ ಯುವ ವೈದ್ಯರಿಗೆ ವಸತಿ ಮತ್ತು ಉದ್ಯೋಗ ಅರಸುವ ನಿಟ್ಟಿನಲ್ಲಿ ಸಂಘ ನೆರವಾಗುತ್ತದೆ.

 

ಸಾಯಿ ಪ್ರಣಿತ್ ಮುಡಿಗೆ ಕೆನಡಾ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟ್ರೋಫಿ

sai_upಅದ್ಬುತ ಆಟ ಪ್ರದರ್ಶಿಸಿದ ಭಾರತದ ಬಿ. ಸಾಯಿ ಪ್ರಣೀತ್ ಅವರು ಕೆನಡಾ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹೋರಾಟದಲ್ಲಿ ಸಾಯಿ ಪ್ರಣೀತ್ 21-12, 21-10ರ ನೇರ ಗೇಮ್ಗಳಿಂದ ಕೊರಿಯಾದ ಲೀ ಹ್ಯುನ್ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಕೆನಡಾ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತರಾಗಿ ಹೊರಹೊಮ್ಮಿದರ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಪ್ರಣಿತ್ 37ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ

  • ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಅವರು ಚಾಂಪಿಯನ್ ಆಗಿದ್ದಾರೆ. ಫೈನಲ್ನಲ್ಲಿ ಮನು ಮತ್ತು ಸುಮೀತ್ 21-15, 21-19ರಲ್ಲಿ ಇಂಡೊನೇಷ್ಯಾದ ಆಡ್ರಿಯೆ ಅಡಿಸ್ಟಿಯಾ ಮತ್ತು ಕೆನಡಾದ ಡಾಂಗ್ ಆಯಡಮ್ ಅವರನ್ನು ಮಣಿಸಿದರು.