ಸ್ವದೇಶಿ ನಿರ್ಮಿತ ಯುದ್ದ ವಿಮಾನ “ತೇಜಸ್” ಸೇನೆಗೆ ಸೇರ್ಪಡೆ

ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಅನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ.ಈ ಮೂಲಕ ಭಾರತೀಯ ವಾಯು ಸೇನೆಯ ದಶಕಗಳ ಕನಸು ಇದೀಗ ನನಸಾಗಿದೆ. ತೇಜಸ್ ಅನ್ನು ಹಿಂದೂಸ್ತಾನ್ ಏರೋನಾಟಿಕಲ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಈ ಹಿಂದೆಯೇ ತೇಜಸ್ ಯುದ್ಧ ವಿಮಾನ ವಾಯು ಸೇನೆಗೆ ಸೇರ್ಪಡೆಗೊಳ್ಳಬೇಕಿತ್ತಾದರೂ, ತಾಂತ್ರಿಕ ದೋಷ ಮತ್ತು ಕಾರಣಾಂತರಗಳಿಂದ ತೇಜಸ್ ವಾಯು ಸೇನೆ ಸೇರ್ಪಡೆ ಮುಂದಕ್ಕೆ ಸಾಗುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ತನ್ನ ಎಲ್ಲ ತೊಡಕಗಳನ್ನು ನಿವಾರಿಸಿಕೊಂಡಿರುವ ತೇಜಸ್ ಅಧಿಕೃತವಾಗಿ ವಾಯು ಸೇನೆಗೆ ಸೇರ್ಪಡೆಯಾಗಿದೆ.

ತೇಜಸ್ ಲಘು ಯುದ್ದ ವಿಮಾನ ಬಗ್ಗೆ:

  • ತೇಜಸ್ ವಿಮಾನ ಯುದ್ದವೂ ವಿಶ್ವದ ಅತ್ಯಂತ ಸಣ್ಣ ಮತ್ತು ಹಗುರ ಯುದ್ದ ವಿಮಾನವಾಗಿದೆ. ರಷ್ಯಾದ ಮಿಗ್-21 ಸರಣಿಯ ವಿಮಾನಗಳ ಸ್ಥಾನ ತುಂಬಲು ಹಗುರ ಯುದ್ಧ ವಿಮಾನಗಳನ್ನು ಸ್ವದೇಶದಲ್ಲೇ ನಿರ್ಮಿಸುವ ಯೋಜನೆಯನ್ನು ಕೇಂದ್ರ ಸರ್ಕಾರ 1983 ರಲ್ಲಿ ಕೈಗೆತ್ತಿಕೊಂಡಿತ್ತು. ಪ್ರಸಕ್ತ ಆಥಿ೯ಕ ವಷ೯ದಲ್ಲಿ ಎಚ್‍ಎಎಲ್ ಸಂಸ್ಥೆ ಒಟ್ಟು 4 ತೇಜಸ್ ವಿಮಾನಗಳನ್ನು ಹಸ್ತಾ೦ತರಿಸಲಿದ್ದು, ಮು೦ದಿನ ಸಾಲಿನಲ್ಲಿ 8 ವಿಮಾನಗಳ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
  • ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಎಂಬ ಖ್ಯಾತಿಗೆ ಭಾಜನವಾಗಿರುವ ತೇಜಸ್ ಯುದ್ಧ ವಿಮಾನ ಸೇಪ೯ಡೆಗೆ 33 ವಷ೯ಗಳು ಬೇಕಾಯಿತು. 1990ರ ಏರೋನಾಟಿಕಲ್ ಡೆವಲಪ್‍ಮೆ೦ಟ್ ಏಜೆನ್ಸಿಯು ತೇಜಸ್‍ನ ವಿನ್ಯಾಸ ತಯಾರಿಸಿ ಎಚ್‍ಎಎಲ್ ಗೆ ಹಸ್ತಾ೦ತರಿಸಿತ್ತು. ಇದಕ್ಕೆ ಡಿಆರ್‍ ಡಿಒ ಸ೦ಸ್ಥೆಯ ವಿಜ್ಞಾನಿಗಳು ದೇಶಿ ನಿಮಿ೯ತ ಇ೦ಜಿನ್ ನಿಮಿ೯ಸಿಕೊಡುವ ಭರವಸೆ ನೀಡಿದ್ದರು. ಆದರೆ ಇ೦ಜಿನ್‍ನಲ್ಲಿ ದೋಷ ಕ೦ಡುಬ೦ದ ಹಿನ್ನಲೆಯಲ್ಲಿ ಅದನ್ನು ಸರಿಪಡಿಸಲು ವಿಳ೦ಬವಾದ್ದರಿ೦ದ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು.
  • ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ ಒ೦ದು ತರಬೇತಿಗೆ ಬಳಸುವ ಯುದ್ಧ ವಿಮಾನವಾದರೆ, ಮತ್ತೊಂದು ವಾಯುಪಡೆಗೆ ಹಾಗೂ ಇನ್ನೊ೦ದು ನೌಕಾಪಡೆಗೆ ಬಳಸುವ ವಿಮಾನವಾಗಿದೆ. ತರಬೇತಿ ವಿಮಾನದಲ್ಲಿ ಎರಡು ಆಸನದ ವ್ಯವಸ್ಥೆಯಿದ್ದರೆ, ಉಳಿದ ಎರಡು ಮಾದರಿಗಳಲ್ಲಿ ಒ೦ದೇ ಆಸನವಿರುತ್ತದೆ. ಇವು ರಾಕೆಟ್, ಕ್ಷಿಪಣಿ, ಬಾ೦ಬ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊ೦ದಿದೆ.
  • ಸುಧಾರಿತ ವಿಮಾನಕ್ಕೆ ತೇಜಸ್ ಎಂಕೆ-1ಎ ಎಂಬ ಹೆಸರಿಡಲಾಗುವುದು. ಇಂತಹ 80 ವಿಮಾನಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಐಎಎಫ್ ಚಿಂತನೆ ನಡೆಸಿದೆ.