ಖ್ಯಾತ ರಂಗಭೂಮಿ ಮತ್ತು ಚಿತ್ರ ನಟಿ ಸುಲಭಾ ದೇಶಪಾಂಡೆ ವಿಧಿವಶ

ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದೆ ಸುಲಭಾ ದೇಶಪಾಂಡೆ ಅವರು ವಿಧಿವಶರಾದರು. 79 ವರ್ಷ ವಯಸ್ಸಿನ ಸುಲಭಾ ದೇಶಪಾಂಡೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

  • ಸುಲಭಾ ದೇಶಪಾಂಡೆ ರವರು ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದರು. ಹಿರಿಯ ನಟ, ನಾಟಕಕಾರ ವಿಜಯ್ ತೆಂಡೂಲ್ಕರ್ ಅವರಂತಹ ಖ್ಯಾತರ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
  • ಇವರು ಅಭಿನಯಿಸಿದ್ದ ಕೆಲವು ಪ್ರಮುಖ ಹಿಂದಿ ಚಿತ್ರಗಳೆಂದರೆ ಭೂಮಿಕಾ(1977), ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್(1978), ಗಮನ್ (1978) ಮತ್ತು ಇತ್ತೀಚೆಗೆ ಬಿಡುಗಡೆಯಾದ ಗೌರಿ ಶಿಂಧೆ ಅವರ ಹಿಟ್ ಚಿತ್ರ ‘ಇಂಗೀಷ್ ವಿಂಗ್ಲಿಶ್’.
  • ವಿಜಯ್ ಮೆಹ್ತಾ, ಸತ್ಯದೇವ್ ದುಬೆ ಜತೆಗೆ ಮರಾಠಿಯಲ್ಲಿ ರಂಗಾಯಣ ತಂಡದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಸುಲಭಾ, 1971 ರಲ್ಲಿ ‘ಆವಿಷ್ಕಾರ್’ ಎಂಬ ಹೆಸರಿನ ನಾಟಕ ತಂಡವನ್ನು ತಮ್ಮ ಪತಿ ಅರವಿಂದ್ ದೇಶಪಾಂಡೆ ಜತೆ ಪ್ರಾರಂಭಿಸಿದ್ದರು.

ಬಾಕ್ಸಿಂಗ್ ಚಾಂಪಿಯನ್ ಮೊಹಮ್ಮದ್ ಅಲಿ ನಿಧನ

moh_upಬಾಕ್ಸಿಂಗ್ ಲೋಕದ ದಂತಕತೆ ಎನಿಸಿದ್ದ ಅಮೆರಿಕಾದ ಮೊಹಮ್ಮದ್ ಅಲಿ ರವರು ವಿಧಿವಶರಾದರು. 74 ವರ್ಷದ ಮೊಹಮ್ಮದ್ ಅಲಿ 32 ವರ್ಷಗಳಿಂದ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಉಸಿರಾಟ ಸಮಸ್ಯೆ ಯಿಂದಲೂ ಬಳಲುತ್ತಿದ್ದರು. ಅಲಿ ಅವರು ಕೇವಲ ಬಾಕ್ಸರ್ ಅಷ್ಟೇ ಅಲ್ಲದೇ ನಾಗರಿಕ ಹಕ್ಕುಗಳಿಗಾಗಿ ಹೋರಾಟ ಮಾಡುವುದರಲ್ಲೂ ಮುಂಚುಣಿಯಲ್ಲಿದ್ದರು.

ಅಲಿ ಅವರ ಸಾಧನೆ:

  • ಮೊಹಮ್ಮದ್ ಅಲಿ ರವರು 1960 ರಿಂದ 1980 ರವರೆಗೆ ಎರಡು ದಶಕಗಳ ಕಾಲ ಬಾಕ್ಸಿಂಗ್ ನಲ್ಲಿ ಪ್ರಾಬಲ್ಯತೆ ಮೆರೆದಿದ್ದರು.
  • ಈ ಎರಡು ದಶಕಗಳ ವೃತ್ತಿಪರ ಬಾಕ್ಸಿಂಗ್ ನಲ್ಲಿ 61 ಪಂದ್ಯಗಳನ್ನು ಆಡಿರುವ ಅಲಿಯವರು 56 ಪಂದ್ಯಗಳಲ್ಲಿ ಜಯ ಸಾಧಿಸಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದರು.
  • 1960ರ ರೋಮ್ ಒಲಿಂಪಿಕ್ಸ್ ಲೈಟ್ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 3 ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್ ಶಿಪ್ (1964, 1974, 1978) ಅಲಿ ಅವರ ಮುಡಿ ಅಲಂಕರಿಸಿದ ವಿಶ್ವ ಶ್ರೇಷ್ಟ ಗರಿಯಾಗಿದೆ.
  • 1979 ರ ಜೂನ್ ನಲ್ಲಿ ಮೊಹಮ್ಮದ್ ಅಲಿ ನಿವೃತ್ತಿ ಘೋಷಿಸಿದ ಅವರು ಕೆಲವೇ ತಿಂಗಳಲ್ಲಿ ವಾಪಸ್ಸಾಗಿ, 1980 ರ ಮಾರ್ಚ್ ನಲ್ಲಿ ಮೈಕ್ ವೀವರ್ ಅವರ ವಿರುದ್ಧ ಸೋಲು ಕಾಣಬೇಕಾಯಿತು. ಇದಾದ ನಂತರ ಏಪ್ರಿಲ್ ನಲ್ಲಿ ಹೋಮ್ಸ್, ಜೂನ್ ನಲ್ಲಿ ಡಬ್ಲ್ಯೂ ಬಿಎ ಚಾಂಪಿಯನ್ ಜಾನ್ ಟೇಟ್ ನ್ನು ಎದುರಿಸಿ ಸೋಲನ್ನು ಕಂಡಿದ್ದರು.

ನೈಜೀರಿಯಾದ ಮಾಜಿ ಪುಟ್ ಬಾಲ್ ಆಟಗಾರ ಮತ್ತು ಕೋಚ್ “ಸ್ಟೀಫನ್ ಕೇಶಿ” ನಿಧನ

football_upನೈಜೀರಿಯದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಕೋಚ್ ಸ್ಟೀಫನ್ ಕೇಶಿ  ರವರು ಹೃದಯಾಘಾತದಿಂದ ಮರಣಹೊಂದಿದರು. ಕೇಶಿ ರವರು ತಮ್ಮ ಅಭಿಮಾನಿಗಳಿಂದ ‘ಬಿಗ್ ಬಾಸ್’ ಎಂದೇ ಕರೆಯಲ್ಪಡುತ್ತಿದ್ದರು.

  • ಕೇಶಿ ರವರು 19 ವರ್ಷಗಳ ಕಾಲ ನೈಜೀರಿಯ ತಂಡದಲ್ಲಿ ಪ್ರಮುಖ ಡಿಫೆಂಡರ್ ಆಗಿದ್ದರು. ಅವರು ಆಡಿದ ಒಟ್ಟು 64 ಪಂದ್ಯಗಳಲ್ಲಿ 9 ಗೋಲುಗಳನ್ನು ಬಾರಿಸಿದ್ದರು. ಅಮೆರಿಕದಲ್ಲಿ 1994ರಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ನಲ್ಲಿ ನೈಜೀರಿಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
  • ಕೇಶಿ ಟಾಗೊ ತಂಡ 2006ರ ವಿಶ್ವ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು.
  • 2013ರಲ್ಲಿ ಕೇಶಿ ನೈಜೀರಿಯ ತಂಡ ಆಫ್ರಿಕ ಕಪ್ ಆಫ್ ನೇಶನ್ಸ್ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿದ್ದರು.
  • ಆಟಗಾರ ಹಾಗೂ ಕೋಚ್ ಆಗಿ ನೈಜೀರಿಯ ತಂಡ ಪ್ರತಿಷ್ಠಿತ ಆಫ್ರಿಕ ಕಪ್ ಆಫ್ ನೇಶನ್ಸ್ ಟ್ರೋಫಿ ಜಯಿಸಿದ್ದ ಎರಡನೆಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈಜಿಪ್ಟ್ನ ಮುಹಮ್ಮದ್ ಅಲ್-ಗೊಹರಿ ಈ ಸಾಧನೆ ಮಾಡಿದ್ದ ಮೊದಲ ಫುಟ್ಬಾಲ್ ಆಟಗಾರ.