96 ರ ಜಪಾನಿನ ಶಿಗೆಮಿ ಹಿರಾತಾ ಗಿನ್ನಿಸ್ ದಾಖಲೆ: ಜಪಾನಿನ ಶಿಗೆಮಿ ಹಿರಾತಾ ರವರು ಕ್ಯೋಟೊ ವಿಶ್ವವಿದ್ಯಾಲಯದಿಂದ ಪದವಿ ಪಡೆದು ವಿಶ್ವದಾಖಲೆ ನಿರ್ಮಿಸಿದ್ದಾನೆ. ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆದಿರುವ ಅವರು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. 1919 ರಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ ತಮ್ಮ ಪದವಿ ಮುಗಿಸಲು ಬರೊಬ್ಬರಿ 11 ವರ್ಷ ತೆಗೆದುಕೊಂಡಿದ್ದಾರೆ. ಹಿರಾತಾ ಅವರು ವಿಶ್ವಮಹಾಯುದ್ದ 2ರ ಸಂದರ್ಭದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ದಿಯಾ ಮಿರ್ಜಾ ಸ್ವಚ್ಚ ಸಾಥಿ ರಾಯಭಾರಿ: ಬಾಲಿವುಡ್ ನಟಿ ದಿಯಾ ಮಿರ್ಜಾ ರವರನ್ನು ಕೇಂದ್ರ ಸರ್ಕಾರದ “ಸ್ವಚ್ಚ ಸಾಥಿ” ಯೋಜನೆಯ ರಾಯಭಾರಿಯನ್ನಾಗಿ ನೇಮಕಮಾಡಲಾಗಿದೆ. ಸ್ವಚ್ಚ ಸಾಥೀ ಯೋಜನೆಯನ್ನು ಕೇಂದ್ರ ಸರ್ಕಾರ ಸ್ವಚ್ಚ ಭಾರತ ಅಭಿಯಾನದಡಿ ಜಾರಿಗೆ ತಂದಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2000 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅವರು ದೇಶಾದ್ಯಂತ 10 ಸಾವಿರ ಶಾಲೆಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ.

ಪುದುಚೇರಿಯ ನೂತನ ಸಿಎಂ ಆಗಿ ನಾರಾಯಣಸ್ವಾಮಿ: ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಕೇಂದ್ರ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ನಾರಾಯಣ ಸ್ವಾಮಿ ಅವರು 15 ಸದಸ್ಯ ಬಲದೊಂದಿಗೆ ಶಾಸಕಾಂಗ ಪಕ್ಷದ ನಾಯಕರಾಗಿ.

ಟೈಗರ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ: ಹುಲಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ‘ಟೈಗರ್ ಎಕ್ಸ್ಪ್ರೆಸ್’ ಹೆಸರಿನ ಅರೆ ಐಷಾರಾಮಿ ಪ್ರವಾಸಿ ರೈಲು ಸೇವೆ ಆರಂಭಿಸಿದೆ. ‘ವಿಶ್ವ ಪರಿಸರ ದಿನ’ವಾದ ಅಂಗವಾಗಿ ಮುಂಬೈನ ಸಫ್ದರ್ಜಂಗ್ ನಿಲ್ದಾಣದಿಂದ ರೈಲು ತನ್ನ ಚೊಚ್ಚಲ ಪ್ರಯಾಣ ಆರಂಭಿಸಿದೆ. ಊಟಕ್ಕೆ ಪ್ರತ್ಯೇಕ ಬೋಗಿ ಸೌಲಭ್ಯ ಹೊಂದಿರುವ ದೇಶದ ಮೊದಲ ಪ್ರವಾಸಿ ರೈಲು ಇದಾಗಿದ್ದು, ಪ್ರಯಾಣ ದರ ₹ 38,500 ರಿಂದ ಆರಂಭವಾಗಲಿದೆ. ಈ ಪ್ರವಾಸಿ ರೈಲು ಮೊದಲು ಕಟನಿಗೆ (ಮಧ್ಯಪ್ರದೇಶ) ಸಂಚರಿಸಲಿದೆ. ಪ್ರಯಾಣಿಕರು ಅಲ್ಲಿಂದ ರಸ್ತೆ ಮೂಲಕ ತೆರಳಿ ಬಾಂಧವಗಡ ನ್ಯಾಷನಲ್ ಪಾರ್ಕ್ ಹಾಗೂ ಕಾನ್ಹಾ ನ್ಯಾಷನಲ್ ಪಾರ್ಕ್ನಲ್ಲಿ ಸಫಾರಿ ನಡೆಸಲಿದ್ದಾರೆ. ಅಲ್ಲಿಂದ ಜಬಲ್ಪುರದ ಭೇಡಾಘಾಟ್ನಲ್ಲಿರುವ ಪ್ರಸಿದ್ಧ ದುವಾಂಧಾರ್ ಜಲಪಾತ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಹಿರಿಯ ಪತ್ರಕರ್ತ ಕೆ ಕೆ ಕತ್ಯಾಲ್ ನಿಧನ: ಹಿರಿಯ ಪತ್ರಕರ್ತ ಹಾಗೂ ಹಿಂದೂ ಪತ್ರಿಕೆಯ ದೆಹಲಿ ವಿಭಾಗದ ಮಾಜಿ ಸ್ಥಳೀಯ ಸಂಪಾದಕ, ಕೆ.ಕೆ.ಕತ್ಯಾಲ್ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕತ್ಯಾಲ್ ರವರು ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಅವರಿಗೆ 1994ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಜಿ.ಕೆ.ರೆಡ್ಡಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಿದ್ದರು.