ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4: ಲಿಂಗಾನುಪಾತದಲ್ಲಿ ಹೆಚ್ಚಳ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷ 2015-16 ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ 2015-16ರಲ್ಲಿ ಶಿಶು ಮರಣ ಪ್ರಮಾಣದಲ್ಲಿ ಕುಸಿತ ಹಾಗೂ ಲಿಂಗಾನುಪಾತದಲ್ಲಿ ಹೆಚ್ಚಳ ಕಂಡು ಬಂದಿದೆ. ಸಮೀಕ್ಷೆಗೆ ಸುಮಾರು 6 ಲಕ್ಷ ಕುಟುಂಬಗಳು, 7 ಲಕ್ಷ ಮಹಿಳೆಯರು ಹಾಗೂ 1.3 ಲಕ್ಷ ಪುರುಷರನ್ನು ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಅಂಕಿಅಂಶಗಳನ್ನು ನೀಡಲಾಗಿದೆ.

ಪ್ರಮುಖಾಂಶಗಳು:

  • ಶಿಶು ಮರಣ ಪ್ರಮಾಣ: ಶಿಶು ಮರಣ ಪ್ರಮಾಣ 2005-06 ಸಮೀಕ್ಷೆಗೆ ಹೋಲಿಸಿದರೆ 51 ರಿಂದ 47ಕ್ಕೆ ಇಳಿದಿದೆ. ಕಳೆದ ಒಂದು ದಶಕದಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲೂ ಶಿಶು ಮರಣ ಪ್ರಮಾಣ ಕಡಿಮೆ ಆಗಿದೆ. ತ್ರಿಪುರ, ಜಾರ್ಖಂಡ್, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ರಾಜಸ್ತಾನ ಮತ್ತು ಒಡಿಶಾದಲ್ಲಿ ಶೇ 20% ರಷ್ಟು ಕಡಿಮೆ ಆಗಿದೆ.
  • ಹುಟ್ಟುವಾಗ ಲಿಂಗ ಅನುಪಾತ: ಕಳೆದ ದಶಕದಲ್ಲಿ ಈ ಪ್ರಮಾಣ 914 ರಿಂದ 919ಕ್ಕೆ ಏರಿಕೆಯಾಗಿದೆ. ಕೇರಳ (1,047), ಮೇಘಾಲಯ (1,009) ಮತ್ತು ಚತ್ತೀಸಘರ್ (977) ಮೊದಲ ಮೂರು ಸ್ಥಾನದಲ್ಲಿವೆ.
  • ಸಾಂಸ್ಥಿಕ ಹೆರಿಗೆ: ಸಾಂಸ್ಥಿಕ ಹೆರಿಗೆ ಪ್ರಮಾಣ ಕಳೆದ ಸಮೀಕ್ಷೆಗೆ ಹೋಲಿಸಿದಾಗ ಶೇ 40ರಷ್ಟು ಹೆಚ್ಚಳವಾಗಿದೆ.
  • ಪೂರ್ಣ ಲಸಿಕೆ ಪ್ರಮಾಣ: 12-23 ತಿಂಗಳು ವಯಸ್ಸಿನ ಮಕ್ಕಳಿಗೆ ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಲಾಗಿದೆ (ಬಿಸಿಜಿ, ದಡಾರ ಮತ್ತು ಪೊಲಿಯೋ).
  • ಕಡಿಮೆ ತೂಕದ ಮಕ್ಕಳು: ಶೇ 7% ರಷ್ಟು ಕಡಿಮೆಯಾಗಿದೆ. ಎದೆ ಹಾಲು ಉಣಿಸುವುದು ಹಾಗೂ ಮಕ್ಕಳ ಪೋಷಕಾಂಶ ಆಹಾರದ ಬಳಕೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅನಿಮೀಯಾ ಕಾಯಿಲೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.

ವಲಸಿಗರ ಹಿತಾಸಕ್ತಿ ಕಾಯಲು ಕಾನೂನು ಚೌಕಟ್ಟು ರೂಪಿಸುವಂತೆ ಸಮಿತಿ ಶಿಫಾರಸ್ಸು

ದೇಶದಲ್ಲಿ ವಲಸಿಗರ ಹಿತಾಸಕ್ತಿಯನ್ನು ಕಾಪಾಡಲು ಸೂಕ್ತ ಕಾನೂನು ಹಾಗೂ ನಿಯಮ ಚೌಕಟ್ಟನ್ನು ರೂಪಿಸುವಂತೆ ಪಾರ್ಥ ಮುಖೋಪಾಧ್ಯಯ ನೇತೃತ್ವದ “ವಲಸೆ ಮೇಲಿನ ಕಾರ್ಯಪಡೆ” ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವಲಸಿಗರು ದೇಶದ ಆರ್ಥಿಕ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದು, ಅವರ ಸಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವುದು ಅತ್ಯವಶ್ಯಕ ಎಂದು ವರದಿಯಲ್ಲಿ ತಿಳಿಸಲಾಗಿದೆ. 18 ಸದಸ್ಯರನ್ನು ಒಳಗೊಂಡಿರುವ ಕಾರ್ಯಪಡೆಯನ್ನು ಕೇಂದ್ರ ವಸತಿ ಹಾಗೂ ಬಡತನ ನಿರ್ಮೂಲನೆ ಸಚಿವಾಲಯ 2015 ರಲ್ಲಿ ರಚಿಸಿತ್ತು.

ಸಮಿತಿಯ ವರದಿ:

  • ಜಾತಿ ಆಧಾರಿತ ಜನಗಣತಿ ಕೈಗೊಳ್ಳಲು ರಿಜಿಸ್ಟ್ರರ್ ಜನರಲ್ ಆಫ್ ಇಂಡಿಯಾದ ಶಿಷ್ಟಚಾರಕ್ಕೆ ತಿದ್ದುಪಡಿ ತರವು ಮೂಲಕ ವಲಸಿಗರು ಯಾವುದೇ ರಾಜ್ಯಕ್ಕೆ ವಲಸೆ ಹೋದರು ಆ ರಾಜ್ಯದಲ್ಲಿನ ಪ್ರಯೋಜನವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು.
  • ಅಂತರ್ ರಾಜ್ಯಗಳ ಪಡಿತರ ವಿತರಣೆ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ವಲಸಿಗರು ಯಾವುದೇ ರಾಜ್ಯದಲ್ಲಿದ್ದರು ಪಡಿತರ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು.
  • ಕೆಲಸ ಮತ್ತು ಉದ್ಯೋಗದಲ್ಲಿ ಯಾವುದೇ ತಾರತಮ್ಯವನ್ನು ತಡೆಗಟ್ಟಲು ಸ್ಥಳೀಯರ ಮೀಸಲಾತಿ ಸ್ಥಾನಮಾನವನ್ನು ತೊಡೆದುಹಾಕಲು ರಾಜ್ಯಗಳು ಪ್ರೋತ್ಸಾಹಿಬೇಕು.
  • ವಲಸಿಗರ ಮಕ್ಕಳನ್ನು ಸರ್ವ ಶಿಕ್ಷಣ ಅಭಿಯಾನದ ವಾರ್ಷಿಕ ಕ್ರಿಯಾ ಯೋಜನೆಯಡಿ ತರುವ ಮೂಲಕ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಲು ರಾಜ್ಯಗಳು ಶ್ರಮಿಸಬೇಕು.
  • ವಲಸಿಗರು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಬ್ಯಾಂಕುಗಳು ಸಹಕರಿಸಬೇಕು. ಖಾತೆ ತೆರೆಯುವಾಗ “ನಿಮ್ಮ ಗ್ರಾಹಕನ ಬಗ್ಗೆ ತಿಳಿಯಿರಿ” ನಿಯಮಗಳನ್ನು ಪಾಲಿಸಬೇಕು ಆದರೆ ಅನಗತ್ಯ ದಾಖಲೆಗಳನ್ನು ಕೇಳಬಾರದು.

ಹಿನ್ನಲೆ:

2011 ಜನಗಣತಿ ಹಾಗೂ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (NSSO)ಯ ವರದಿ ಪ್ರಕಾರ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 30% ರಷ್ಟು ವಲಸಿಗರಿದ್ದಾರೆ. 2016-17 ಆರ್ಥಿಕ ಸಮೀಕ್ಷೆ ಪ್ರಕಾರ 2011 ರಲ್ಲಿ 3.30 ಮಿಲಿಯನಷ್ಟಿದ್ದ ವಾರ್ಷಿಕ  ವಲಸೆ ಹೋಗುವವರ ಸಂಖ್ಯೆ 2016 ರಲ್ಲಿ 9.0 ಮಿಲಿಯನಷ್ಟಿದೆ.

ನಗರ ಆಡಳಿತ ಶ್ರೇಯಾಂಕದಲ್ಲಿ ಕೇರಳದ ತಿರುವನಂತಪುರಂ ಮೊದಲ ಸ್ಥಾನ

 ಭಾರತದ ನಗರ ವ್ಯವಸ್ಥೆ ವಾರ್ಷಿಕ ಸಮೀಕ್ಷೆ (Annual Survey’s of India’s City System) ವರದಿಯ ಪ್ರಕಾರ ನಗರ ಆಡಳಿತದಲ್ಲಿ ಕೇರಳದ ರಾಜಧಾನಿ ತಿರುವನಂತಪುರಂ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜನಾಗ್ರಹ ಸೆಂಟರ್ ಫಾರ್ ಸಿಟಿಜಿನ್ ಷಿಪ್ ಅಂಡ್ ಡೆಮಾಕ್ರೆಸಿ ಈ ಸಮೀಕ್ಷೆಯನ್ನು ನಡೆಸುತ್ತಿದೆ. ಈ ವರ್ಷದ ಸಮೀಕ್ಷೆ ನಾಲ್ಕನೇ ವಾರ್ಷಿಕ ಸಮೀಕ್ಷೆಯಾಗಿದ್ದು, 18 ರಾಜ್ಯಗಳ 21 ಪ್ರಮುಖ ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ನಗರ ಆಡಳಿತ ಕೊರತೆಯಿಂದ ಸಾರ್ವಜನಿಕ ಸೇವೆ ಮತ್ತು ಜೀವನ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ ಎಂದು ಸಮೀಕ್ಷೆಯಲ್ಲಿ ಪ್ರಮುಖವಾಗಿ ತಿಳಿಸಲಾಗಿದೆ.

ASICS ಎಂದರೇನು?

  • ASICS ಅನ್ನು ನಗರ ಆಡಳಿತದಲ್ಲಿನ ಕುಂದು ಕೊರತೆಗಳ ಬಗ್ಗೆ ಆಡಳಿತ ಮುಖಂಡರ ಗಮನಕ್ಕೆ ತರುವ ಮೂಲಕ ವಾಸಯೋಗ್ಯ ಸುಧಾರಿಸಲು ಅಗತ್ಯ ಕ್ರಮಕೈಗೊಳ್ಳಲು ಅಭಿವೃದ್ದಿಪಡಿಸಲಾಗಿದೆ.
  • 0-10 ಅಂಕಗಳನ್ನು ನೀಡುವ ಮೂಲಕ ನಗರಗಳಿಗೆ ಶ್ರೇಯಾಂಕವನ್ನು ನೀಡಲಾಗುವುದು. ಉತ್ತಮ ಅಂಕ ಪಡೆದ ನಗರವು ಸಾರ್ವಜನಿಕರಿಗೆ ಉತ್ತಮ ಆಡಳಿತವನ್ನು ನೀಡುವಲ್ಲಿ ಶಕ್ತವಾಗಿದೆ ಎಂದು ಅರ್ಥ.
  • ನಗರ ಸಾಮರ್ಥ್ಯ ಮತ್ತು ಸಂಪನ್ಮೂಲ, ನಗರ ಯೋಜನೆ ಮತ್ತು ವಿನ್ಯಾಸ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭಾಗವಹಿಸುವಿಕೆಯನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗುವುದು.

2016 ಸಮೀಕ್ಷೆಯ ಪ್ರಮುಖಾಂಶಗಳು:

  • 2016 ಸಮೀಕ್ಷೆಯಲ್ಲಿ ತಿರುವನಂತಪುರಂ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಪುಣೆ ಎರಡನೇ ಸ್ಥಾನವನ್ನು ಹಾಗೂ ಕಲ್ಕತ್ತಾ ಮೂರನೇ ಸ್ಥಾನದಲ್ಲಿವೆ.
  • ರಾಷ್ಟ್ರ ರಾಜಧಾನಿ ನವ ದೆಹಲಿ ಏಳನೇ ಸ್ಥಾನದಿಂದ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
  • ಕರ್ನಾಟಕದ ರಾಜಧಾನಿ ಬೆಂಗಳೂರು ನಾಲ್ಕನೇ ಸ್ಥಾನದಿಂದ 16ನೇ ಸ್ಥಾನಕ್ಕೆ ಕುಸಿದಿದೆ. ಲೂಧಿಯಾನ, ಜೈಪುರ್ ಮತ್ತು ಚಂಡೀಗರ್ 19, 20 ಮತ್ತು 21ನೇ ಸ್ಥಾನವನ್ನು ಪಡೆದುಕೊಂಡು ಕಳೆದ ವರ್ಷದಲ್ಲಿ ಪಡೆದುಕೊಂಡಿದ್ದ ಸ್ಥಾನದಲ್ಲಿವೆ.

2017 ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಕಟ: ಕೊಹ್ಲಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2017 ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಗೊಳಿಸಿದೆ. ದೇಶದ ಪ್ರಸಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಗೌರವಿಸುವ ಸಲುವಾಗಿ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತಿದೆ. ಮೊದಲ ಬಾರಿಗೆ ಪ್ರಶಸ್ತಿಯನ್ನು 2006-07ರಲ್ಲಿ ನೀಡಲಾಯಿತು.

ಪ್ರಶಸ್ತಿಯನ್ನು ಪಡೆದವರು:

  • ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ: ರಾಜೀಂದರ್ ಗೊಯೆಲ್ ಮತ್ತು ಪದ್ಮಾಕರ್ ಶಿವಾಲ್ಕರ್
  • ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ: ಶಾಂತ ರಂಗಸ್ವಾಮಿ
  • ಬಿಸಿಸಿಐ ವಿಶೇಷ ಪ್ರಶಸ್ತಿ: ಲೇಟ್ ರಮಾಕಾಂತ್ ದೇಸಾಯಿ, ವಿವಿ ಕುಮಾರ್
  • ಪಾಲಿ ಉಮ್ರಿಗರ್ ಪ್ರಶಸ್ತಿ: ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಅವರಿಗೆ ಮೂರನೇ ಬಾರಿಗೆ ಪಾಲಿ ಉಮ್ರಿಗರ್ ಪ್ರಶಸ್ತಿ ಗೌರವ ಒಲಿದಿದೆ. ‘ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ’ರಿಗೆ ನೀಡಲಾಗುವ ಪಾಲಿ ಉಮ್ರೀಗರ್ ಪ್ರಶಸ್ತಿಯನ್ನು ಕೊಹ್ಲಿ 2011–12 ಮತ್ತು 2014–15ರಲ್ಲಿ ಗಳಿಸಿದ್ದರು.
  • ರಣಜಿಯಲ್ಲಿ ಶ್ರೇಷ್ಠ ಆಲ್ ರೌಂಡರ್ ಗೆ ನೀಡಲಾಗುವ ಲಾಲಾ ಅಮರನಾಥ್ ಪ್ರಶಸ್ತಿ: ಜಲಜ್ ಸಕ್ಸೇನಾ (ಮಧ್ಯ ಪ್ರದೇಶ).
  • ನಿಗದಿತ ಒವರ್ ಪಂದ್ಯಗಳಲ್ಲಿ ಅತ್ಯುತ್ತಮ ಆಲ್ ರೌಂಡರ್ ನೀಡಲಾಗುವ ಲಾಲಾ ಅಮರನಾಥ್ ಪ್ರಶಸ್ತಿ: ಅಕ್ಸರ್ ಪಟೇಲ್ (ಗುಜರಾತ್)
  • ರಣಜಿ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡುವ ಮಾಧವ್ ರಾವ್ ಸಿಂಧಿಯಾ: ಶ್ರೇಯಸ್ ಅಯ್ಯರ್
  • ರಣಜಿ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರಿಗೆ ನೀಡುವ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ: ಷಹಬಾಜ್ ನದೀಮ್
  • ದಿಲೀಪ್ ಸರದೇಸಾಯಿ ಪುರಸ್ಕಾರ: ಆಫ್‌ಸ್ಪಿನ್ನರ್ ಆರ್. ಅಶ್ವಿನ್. ಆಲ್‌ರೌಂಡರ್ ಅಶ್ವಿನ್ ಅವರು ಎರಡನೇ ಬಾರಿ ಹೇಮಂತ್ ಸರದೇಸಾಯಿ ಪುರಸ್ಕಾರವನ್ನು ಪಡೆಯುತ್ತಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಅವರಾಗಿದ್ದಾರೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,2,2017”

  1. ಬಂದೇನವಾಜ್

    ಒಳ್ಳೆ ಮಾಹಿತಿ ಸರ್
    ಈ ಮಾಹಿತಿ ಕ್ರೂಡೀಕರಿಸಲು ನೇರವಾದ ಎಲ್ಲರಿಗೂ ಧನ್ಯವಾದಗಳು

Leave a Comment

This site uses Akismet to reduce spam. Learn how your comment data is processed.