Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 7

ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 7

Question 1

1. ಕಾರ್ಮಿಕರ ಪರಿಹಾರ ಕಾಯಿದೆ (Employees Compensation Act) ಜಾರಿಗೆ ಬಂದ ___________?

A
1921
B
1923
C
1934
D
1941
Question 1 Explanation: 
1923
Question 2

2. ಯಾವ ಪಂಚವಾರ್ಷಿಕ ಯೋಜನೆಯಲ್ಲಿ “ರಾಷ್ಟ್ರೀಯ ಬಾಲ ಕಾರ್ಮಿಕ ನೀತಿ (National Child Labour Policy)” ಜಾರಿಗೆ ಬಂದಿತು?

A
ಆರನೇ ಪಂಚವಾರ್ಷಿಕ ಯೋಜನೆ
B
ಐದನೇ ಪಂಚವಾರ್ಷಿಕ ಯೋಜನೆ
C
ಏಳನೇ ಪಂಚವಾರ್ಷಿಕ ಯೋಜನೆ
D
ಎಂಟನೇ ಪಂಚವಾರ್ಷಿಕ ಯೋಜನೆ
Question 2 Explanation: 
ಏಳನೇ ಪಂಚವಾರ್ಷಿಕ ಯೋಜನೆ

ರಾಷ್ಟ್ರೀಯ ಬಾಲ ಕಾರ್ಮಿಕ ನೀತಿಯನ್ನು ಕೇಂದ್ರ ಸಚಿವ ಸಂಪುಟ 14ನೇ ಆಗಸ್ಟ್ 1987 ರಲ್ಲಿ ಏಳನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಅನುಮೋದಿಸಿತು.

Question 3

3. 2011 ಜನಗಣತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು _______?

A
ಶೇ 51.3
B
ಶೇ 48.6
C
ಶೇ 49.3
D
ಶೇ 47.6
Question 3 Explanation: 
ಶೇ 48.6

2011 ಜನಗಣತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಶೇ 48.6%. ಇವರಲ್ಲಿ ಶೇ 25.67% ಮಹಿಳೆಯರು ಉದ್ಯೋಗಿಗಳಾಗಿದ್ದಾರೆ.

Question 4

4. ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ವಿಧ್ಯಾರ್ಥಿ- ಶಿಕ್ಷಕ ಅನುಪಾತ ಎಷ್ಟಿರಬೇಕು?

A
30 : 1
B
25 : 1
C
36 : 1
D
40 : 1
Question 4 Explanation: 
30 : 1

ಗಮನಿಸಿ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಪ್ರತಿ 60 ನೋಂದಾಯಿತ ವಿಧ್ಯಾರ್ಥಿ ಗಳಿಗೆ ಇಬ್ಬರು ಶಿಕ್ಷಕರು ಇರತಕ್ಕದ್ದು. 61-90 ವಿದ್ಯಾರ್ಥಿಗಳಿಗೆ ಮೂವರು, 91-120 ನಾಲ್ಕು, 121-200 ಐದು, 200 ವಿದ್ಯಾರ್ಥಿಗಳು ಮೇಲ್ಪಟ್ಟರೆ 40:1.

Question 5

5. ಸಂವಿಧಾನದ ಯಾವ ತಿದ್ದುಪಡಿಯ ಅನ್ವಯ 21-A ವಿಧಿಯನ್ನು ಸೇರ್ಪಡೆಗೊಳಿಸಲಾಗಿದೆ?

A
84ನೇ ತಿದ್ದುಪಡಿ
B
85ನೇ ತಿದ್ದುಪಡಿ
C
86ನೇ ತಿದ್ದುಪಡಿ
D
89ನೇ ತಿದ್ದುಪಡಿ
Question 5 Explanation: 
86ನೇ ತಿದ್ದುಪಡಿ

86ನೇ ತಿದ್ದುಪಡಿ-2002 ಕಾಯಿದೆ ಮೂಲಕ 21-ಎ ವಿಧಿಯನ್ನು ಸೇರ್ಪಡೆಗೊಳಿಸಲಾಗಿದ್ದು, 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಪಡೆಯುವುದನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದೆ.

Question 6

6. ಈ ಕೆಳಗಿನ ಯಾವ ಯೋಜನೆಯನ್ನು ಮಹಿಳೆಯರಿಗೆ ಕಿರು ಸಾಲ ವಿತರಸಿರುವ ಉದ್ದೇಶದೊಂದಿಗೆ ಜಾರಿಗೆ ತರಲಾಗಿದೆ?

A
ರಾಷ್ಟ್ರೀಯ ಮಹಿಳಾ ಕೋಶ್
B
ಮಹಿಳಾ ಸಮೃದ್ದಿ ಯೋಜನೆ
C
ಇಂದಿರಾ ಮಹಿಳಾ ಯೋಜನೆ
D
ಜವಹಾರ್ ರೋಜ್ಗಾರ್ ಯೋಜನೆ
Question 6 Explanation: 
ಮಹಿಳಾ ಸಮೃದ್ದಿ ಯೋಜನೆ

ಸ್ತ್ರೀಶಕ್ತಿ ಸಂಘಗಳಿಗೆ ಕಿರು ಸಾಲವನ್ನು ವಿತರಿಸಿ ಮಹಿಳೆಯರು ಸ್ವಉದ್ಯೋಗವನ್ನು ಕೈಗೊಳ್ಳಲು ಪ್ರೋತ್ಸಾಹಿಸಲು ಅಕ್ಟೋಬರ್ 2, 1993 ರಲ್ಲಿ ಮಹಿಳಾ ಸಮೃದ್ದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಸ್ತ್ರೀಶಕ್ತಿ ಸಂಘದ ಪ್ರತಿ ಸದಸ್ಯರಾಗಿ ರೂ 50,000/ ವರೆಗೆ ಸಾಲವನ್ನು ನೀಡಲಾಗುವುದು.

Question 7

7. ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I)ನ್ಯಾ. ಪಿ.ಎನ್.ಭಗವತಿ ಹಾಗೂ ಕೃಷ್ಣಾ ಐಯ್ಯರ್ ಅವರು ಪಿಐಎಲ್ ಅನ್ನು ಅನುಮೋದಿಸಿದ ಮೊದಲಿಗರು

II) ಹುಸ್ನಾರ್ ಖಾತೂನ್ v/s ಸ್ಟೇಟ್ ಆಫ್ ಬಿಹಾರ್ ಭಾರತದ ಮೊದಲ ಪಿಐಎಲ್ ಪ್ರಕರಣ

III) ಪಿಐಎಲ್ ಅನ್ನು ಕೇವಲ ಹೈಕೋರ್ಟ್ನಲ್ಲಿ ಮಾತ್ರ ಸಲ್ಲಿಸಬಹುದು

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ

A
I & II
B
II & III
C
I & III
D
I, II & III
Question 7 Explanation: 

ಮೊದಲ ಎರಡು ಹೇಳಿಕೆಗಳು ಸರಿಯಾಗಿವೆ. ಮೂರನೇ ಹೇಳಿಕೆ ತಪ್ಪು ಏಕೆಂದರೆ ಪಿಐಎಲ್ ಅನ್ನು ಹೈಕೋರ್ಟ್ ಅಲ್ಲದೇ ಸುಪ್ರೀಂಕೋರ್ಟಿನಲ್ಲಿ ಸಹ ದಾಖಲಿಸಬಹುದು. ಭಾರತ ಸಂವಿಧಾನದ 39ಎ (ಸಾಮಾನ್ಯ ನ್ಯಾಯವನ್ನು ಪ್ರೋತ್ಸಾಹಿಸುವುದು ಮತ್ತು ಬಡವರಿಗೆ ಉಚಿತ ಕಾನೂನು ನೆರವು ನೀಡುವುದು) ವಿಧಿಗೆ ಪೂರಕವಾಗಿ ಪಿಐಎಲ್ ಪರಿಕಲ್ಪನೆ ಜಾರಿಗೆ ಬಂದಿದೆ.

Question 8

8. 1898 ರಲ್ಲಿ ಸಮಾಜ ಸೇವೆಯ ಮೊದಲ ಶಾಲೆಯನ್ನು (First School of Social Work) ಎಲ್ಲಿ ತೆರೆಯಲಾಯಿತು?

A
ಲಂಡನ್
B
ನ್ಯೂಯಾರ್ಕ್
C
ಬರ್ಲಿನ್
D
ಕ್ಯಾಲಿಪೋರ್ನಿಯಾ
Question 8 Explanation: 
ನ್ಯೂಯಾರ್ಕ್
Question 9

9. “ಸೋಶಿಯಲ್ ಡಯಾಗ್ನೊಸಿಸ್ (Social Diagnosis)” ಪುಸ್ತಕದ ಲೇಖಕರು _________?

A
ಸ್ಟುವರ್ಟ್
B
ಮೇರಿ ರಿಚ್ಮಂಡ್
C
ಪಿಯರ್ಲನ್ ಮನ್
D
ಹ್ಯಾಮಿಲ್ಟನ್
Question 9 Explanation: 
ಮೇರಿ ರಿಚ್ಮಂಡ್

1917 ರಲ್ಲಿ ಮೇರಿ ರಿಚ್ಮಂಡ್ ಅವರು ತಮ್ಮ ಮೊದಲ ಪುಸ್ತಕ “ಸೋಶಿಯಲ್ ಡಯಾಗ್ನೊಸಿಸ್” ಬರೆದರು. ಈ ಪುಸ್ತಕದಲ್ಲಿ ಕ್ಲೈಂಟ್ ಗಳ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಹಾಗೂ ನಿಭಾಯಿಸಲು ವ್ಯವಸ್ಥಿತ ವಿಧಾನದ ಬಗ್ಗೆ ಮೊದಲ ಬಾರಿಗೆ ತಿಳಿಸಲಾಯಿತು.

Question 10

10. ಈ ಕೆಳಗಿನ ಯಾರು ಭಾರತದಲ್ಲಿ “ಸೋಶಿಯಲ್ ಸರ್ವೀಸ್ ಲೀಗ್ (Social Service League)” ಅನ್ನು ಸ್ಥಾಪಿಸಿದರು?

A
ಎನ್. ಎಂ. ಜೋಶಿ
B
ಎನ್.ಎಂ. ರಾಯ್
C
ದಾದಾಬಾಯಿ ನರೋಜಿ
D
ದೋರಬ್ಜಿ ಟಾಟಾ
Question 10 Explanation: 
ಎನ್. ಎಂ. ಜೋಶಿ

ಎನ್.ಎಂ.ಜೋಶಿ ಅವರು 1911 ರಲ್ಲಿ “ಸೋಶಿಯಲ್ ಸರ್ವೀಸ್ ಲೀಗ್ (Social Service League)” ಅನ್ನು ಸ್ಥಾಪಿಸಿದರು.

There are 10 questions to complete.

ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

13 Responses to “ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 7”

 1. Beeresh M.K says:

  Thank you sir…..

 2. Lingaraj G says:

  Sir pls update nots related Cdpo exam my mail I’d
  Lingarajffi@gmail.com

 3. MADHU MM says:

  best knowledge hunting place its use full thank u

  please up date CDPO SOURCE ITS MY HUMMBLE REQUST

 4. Bandenavaj says:

  Thank u sir

 5. Kumar says:

  Sir kpsc karediruva electrician post ge syllabus bagge heli

 6. Naveen kumara R says:

  Good question sir

 7. Basavaraj H E says:

  Dear Sir/ Madam,

  Very good process from Karunadu exams team

  Thanking you

 8. mahadeva prasad says:

  please uplod huge questions

 9. Sreenivas says:

  The Karunadu Exam very very good process in karnataka.

  Thanks & Regards
  Sreenivas L R

 10. manjunath bhovi says:

  Sir please publish related cdpo books or suggest the cdpo books in my mail id..
  Manjunathbhovi.msw@gmail.com

 11. Kumara P says:

  Sir pls update Kpsc last CDPO exam question paper

 12. Shekharappa g says:

  Good guide but to be continued

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.