ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -21

Question 1

1.ದೇಶದ ಪ್ರಥಮ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆ “ಟ್ರಿಣ್ ಟ್ರಿಣ್” ರಾಜ್ಯದ ಯಾವ ನಗರದಲ್ಲಿ ಆರಂಭಗೊಂಡಿದೆ?

A
ಮೈಸೂರು
B
ಬೆಂಗಳೂರು
C
ಧಾರವಾಡ
D
ಬೀದರ್
Question 1 Explanation: 
ಮೈಸೂರು:

ದೇಶದ ಪ್ರಥಮ ಸಾರ್ವಜನಿಕ ಸೈಕಲ್ ವಿನಿಯೋಗ (Public Bicycle Sharing System) ವ್ಯವಸ್ಥೆ ಮೈಸೂರಿನಲ್ಲಿ ಡಿಸೆಂಬರ್ 1ರಿಂದ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದ್ದು, ನಂತರ ನಗರದ 52 ಹಬ್ ಕೇಂದ್ರಗಳಲ್ಲಿ 450 ಬೈಸಿಕಲ್ಗಳು ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿವೆ. ಟ್ರಿಣ್ ಟ್ರಿಣ್’ ಹೆಸರಿನ ಈ ಯೋಜನೆಯನ್ನು ಮೈಸೂರು ಮೂಲದ ಗ್ರೀನ್ ವೀಲ್ ರೈಡ್ ಜಾರಿಗೆ ತಂದಿದೆ.

Question 2

2. ಈ ಕೆಳಗಿನ ಯಾವ ಮರಗಳನ್ನು ರಾಜ್ಯದಲ್ಲಿ ಬೆಳೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ?

A
ನೀಲಗಿರಿ, ಅಕೇಷಿಯಾ
B
ನೀಲಗಿರಿ, ಸರ್ವೆಮರ
C
ಅಕೇಷಿಯಾ, ಸಿಲ್ವರ್
D
ನೀಲಗಿರಿ, ಸಿಮಾರೂಬಾ
Question 2 Explanation: 
ನೀಲಗಿರಿ, ಅಕೇಷಿಯಾ:

ನೀರಿನ ಸೆಲೆಯನ್ನೇ ಬತ್ತಿಸಿ ಬರಡು ಭೂಮಿಗೆ ಕಾರಣವಾಗುವ ನೀಲಗಿರಿ ಮತ್ತು ಅಕೇಷಿಯಾ ಮರ ಬೆಳೆಸುವುದನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಅಕೇಷಿಯಾ ಮತ್ತು ನೀಲಗಿರಿ ಮರಗಳನ್ನು ಬೆಳೆಸದಂತೆ ನಿಷೇಧ ಹೇರುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ.

Question 3

3. 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯಲಿದೆ?

A
ಮೈಸೂರು
B
ಬೆಳಗಾವಿ
C
ಧಾರವಾಡ
D
ಚಿಕ್ಕಬಳ್ಳಾಪುರ
Question 3 Explanation: 
ಮೈಸೂರು:

83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕಸಾಪ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪರಿಷತ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ಸಮ್ಮೇಳನವನ್ನು ತಮ್ಮ ಜಿಲ್ಲೆಯಲ್ಲಿ ನಡೆಸಬೇಕು ಎಂದು ಮೈಸೂರು, ಹಾವೇರಿ, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಗಳವರು ಕೋರಿಕೆ ಮಂಡಿಸಿದರು. ಆದರೆ ಅಂತಿಮವಾಗಿ ಮೈಸೂರಿನಲ್ಲಿ 83ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಯಿತು.

Question 4

4. ಅಸೋಸಿಯೇಷನ್ ಫಾರ್ ಕಂಪ್ಯೂಟರ್ ಮೆಶಿನರಿ (ಎಸಿಎಂ) ಸಂಸ್ಥೆಯ ‘ಅತ್ಯುತ್ತಮ ಶಿಕ್ಷಕ’ (ಡಿಸ್ಟಿಂಗ್ವಿಷ್ ಎಜುಕೇಟರ್) ಗೌರವಕ್ಕೆ ಪಾತ್ರರಾದ ಎಂ. ವೇಣುಗೋಪಾಲ್ ರವರಯ ಯಾವ ಕಾಲೇಜಿನ ಪ್ರಾಂಶುಪಾಲ?

A
ಸಿದ್ದಗಂಗಾ ಎಂಜನಿಯರಿಂಗ್ ಕಾಲೇಜು
B
ವಿಶ್ವೇಶ್ವರಯ್ಯ ಎಂಜನಿಯರಿಂಗ್ ಕಾಲೇಜು
C
ನಾಗರ್ಜುನ ಎಂಜನಿಯರಿಂಗ್ ಕಾಲೇಜು
D
ಆರ್ ವಿ ಎಂಜನಿಯರಿಂಗ್ ಕಾಲೇಜು
Question 4 Explanation: 
ವಿಶ್ವೇಶ್ವರಯ್ಯ ಎಂಜನಿಯರಿಂಗ್ ಕಾಲೇಜು:

ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಬೆಂಗಳೂರು ವಿವಿಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಪ್ರಾಂಶುಪಾಲ ಪ್ರೊ. ಕೆ.ಆರ್. ವೇಣುಗೋಪಾಲ್ ಅವರು ಅಸೋಸಿಯೇಷನ್ ಫಾರ್ ಕಂಪ್ಯೂಟರ್ ಮೆಶಿನರಿ (ಎಸಿಎಂ) ಸಂಸ್ಥೆಯ ‘ಅತ್ಯುತ್ತಮ ಶಿಕ್ಷಕ’ (ಡಿಸ್ಟಿಂಗ್ವಿಷ್ ಎಜುಕೇಟರ್) ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ವೇಣುಗೋಪಾಲ ಅವರದ್ದು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರತಿಷ್ಠಿತ ಐಇಇಇ ಫೆಲೋ ಪ್ರಶಸ್ತಿಯನ್ನು ಈ ವರ್ಷದ ಆರಂಭದಲ್ಲಿ ಪಡೆದಿದ್ದರು.

Question 5

5. ಆಗ್ರಾ ಮೂಲದ ಭಾರತೀಯ ರಸಾಯನವಿಜ್ಞಾನ ಮಂಡಳಿ ನೀಡುವ 2016ನೇ ಸಾಲಿನ ಪ್ರತಿಷ್ಠಿತ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್ ಯಾರು?

A
ಪ್ರೊ. ಎಸ್. ಟಿ. ನಂದಿಬೇವೂರ
B
ಪ್ರೊ. ಚಂದ್ರಶೇಖರ್
C
ಪ್ರೊ. ರವಿಚಂದ್ರ ನಾಯಕ್
D
ಪ್ರೊ. ಸುರೇಶ ತವಾರ
Question 5 Explanation: 
ಪ್ರೊ. ಎಸ್. ಟಿ. ನಂದಿಬೇವೂರ:

ಆಗ್ರಾ ಮೂಲದ ಭಾರತೀಯ ರಸಾಯನವಿಜ್ಞಾನ ಮಂಡಳಿ ನೀಡುವ 2016ನೇ ಸಾಲಿನ ಪ್ರತಿಷ್ಠಿತ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನವಿಜ್ಞಾನ ವಿಭಾಗದ ಪ್ರೊ.ಎಸ್.ಟಿ. ನಂದಿಬೇವೂರ ಆಯ್ಕೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಬಂದಿದ್ದು, ಇದೇ 22ರಂದು ಪುಣೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರೊ. ನಂದಿಬೇವೂರ ಅವರು 48 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಸಾಧನೆ ಗಮನಿಸಿ ಅಮೆರಿಕನ್ ಕೆಮಿಕಲ್ ಸೊಸೈಟಿ 2011ರಲ್ಲಿ ಸರ್ಟಿಫಿಕೇಟ್ ಆಫ್ ಅಪ್ರಿಷಿಯೇಷನ್, ಆಗ್ರಾ ಮೂಲದ ಭಾರತೀಯ ರಸಾಯನವಿಜ್ಞಾನ ಮಂಡಳಿಯಿಂದ ಪ್ರೊ. ಮಲಿಕ್ ಸ್ಮಾರಕ ಪ್ರಶಸ್ತಿ, ಕೋಲ್ಕತ್ತಾದ ಇಂಡಿಯನ್ ಕೆಮಿಕಲ್ ಸೊಸೈಟಿ ನೀಡುವ ಪ್ರೊ. ಅಮೇತಾ ಪ್ರಶಸ್ತಿ ಸಂದಿದೆ.

Question 6

6. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಕರ್ನಾಟಕ ಸರ್ಕಾರಕ್ಕೆ ಇತ್ತೀಚೆಗೆ ___________ ರ ಸವಲತ್ತುಗಳ ಅನುಷ್ಠಾನಕ್ಕೆ ತರುವಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ನೀಡಿದೆ?

A
ವಿಧವೆಯರ
B
ಅಲ್ಪಸಂಖ್ಯಾತರ
C
ಅಂಗವಿಕರಲರ
D
ಹಿಂದುಳಿದ ವರ್ಗದವರ
Question 6 Explanation: 
ಅಂಗವಿಕರಲರ:

ಸರ್ಕಾರವು ವಿಕಲಚೇತನರ ಕಲ್ಯಾಣಕ್ಕಾಗಿ ಸುಮಾರು 22 ಯೋಜನೆಗಳನ್ನು ಘೋಷಿಸಿದ್ದು, ಇವುಗಳ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕಕ್ಕೆ “ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಲಭಿಸಿದೆ ಎಂದು ಯೋಜನೆ ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರು ತಿಳಿಸಿದ್ದಾರೆ. ಕರ್ನಾಟಕವನ್ನು ವಿಕಲಚೇತನ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ “ಅತ್ಯುತ್ತಮ ರಾಜ್ಯ” ಎಂಬ ರಾಷ್ಟ್ರಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿದ್ದು, ಆ ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ಭಾಗವಹಿಸಿ ಈ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಲಿದ್ದಾರೆ. ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ವಿತರಣೆ, ಬ್ರೈಲ್ಯಂತ್ರ ವಿತರಣೆ, ಕೆ.ಎ.ಎಸ್ ಐ.ಎ.ಎಸ್. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿಕಲಚೇತನರ ವಿದ್ಯಾರ್ಥಿಗಳಿಗೆ ಗರಿಷ್ಠ 1 ಲಕ್ಷದವರೆಗೆ ಧನಸಹಾಯ ನೀಡಲಾಗುತ್ತಿದೆ.

Question 7

7. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಆರ್ ಎನ್ ಭಟ್
B
ಎನ್ ಆರ್ ಶೆಟ್ಟಿ
C
ಮನೊರಂಜನ್ ಕೋರೆ
D
ನಂದಿ ಬೇವೂರ
Question 7 Explanation: 
ಎನ್ ಆರ್ ಶೆಟ್ಟಿ:

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಾಧಿಪತಿಯಾಗಿ ಪ್ರೊ. ಎನ್.ಆರ್. ಶೆಟ್ಟಿ ಅವರನ್ನು ನೇಮಿಸಿ ಭಾರತದ ಘನತೆವೆತ್ತ ರಾಪ್ಟ್ರಪತಿಯವರು ಆದೇಶ ಹೊರಡಿಸಿದ್ದಾರೆ.ಪ್ರೊ. ಎನ್.ಆರ್. ಶೆಟ್ಟಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರು. ಕಾರ್ಯಕಾರಿ ಮಂಡಳಿಯ ಶಿಫಾರಸ್ಸಿನ ಮೇರೆಗೆ ರಾಪ್ಟ್ರಪತಿಯವರು ಕುಲಾಧಿಪತಿಯೆಂದು ನೇಮಿಸಿದ್ದಾರೆ.

Question 8

8. “2016 ಬೆಂಗಳೂರುಐಟಿಇ.ಬಿಜ್ (BengaluruITE.biz)” ಧ್ಯೇಯವಾಕ್ಯ __________?

A
Define the Next
B
IT for Tomorrow
C
IT and World
D
Smart Live
Question 8 Explanation: 
Define the Next
Question 9

9. ಇತ್ತೀಚೆಗೆ ನಿಧನರಾದ “ಅಶೋಕ್ ಬಾದರದಿನ್ನಿ” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ರಂಗಭೂಮಿ
B
ಕ್ರೀಡೆ
C
ಜಾನಪದ
D
ಪರಿಸರ ಸಂರಕ್ಷಣೆ
Question 9 Explanation: 
ರಂಗಭೂಮಿ:

ಕನ್ನಡದ ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ ಅಶೋಕ್ ಬಾದರದಿನ್ನಿ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಅಶೋಕ್ ಬಾದರದಿನ್ನಿ 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಹಲವು ನಾಟಕ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು. ರವಿಚಂದ್ರನ್ ಅಭಿನಯದ 'ಅಂಜದ ಗಂಡು' ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ಮಾಡಿದ್ದರು. ಇದಲ್ಲದೆ 'ಮನ ಮೆಚ್ಚಿದ ಹುಡುಗಿ' 'ನವತಾರೆ', 'ಏಕಲವ್ಯ', 'ಆಸ್ಫೋಟ', 'ಧರ್ಮಪತ್ಮಿ', 'ಭೂತಯ್ಯನ ಮಕ್ಕಳು' ಸೇರಿದಂತೆ 80 ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ, 300 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.

Question 10

10. ತಿಮ್ಮಲಾಪುರ ಕರಡಿ ಸಂರಕ್ಷಿತ ಪ್ರದೇಶ ಯಾವ ಜಿಲ್ಲೆಯಲಿದೆ?

A
ತುಮಕೂರು
B
ಬಳ್ಳಾರಿ
C
ಚಿಕ್ಕಮಗಳೂರು
D
ಚಿತ್ರದುರ್ಗ
Question 10 Explanation: 
ತುಮಕೂರು:

ತಿಮ್ಮಲಾಪುರ ಕರಡಿ ಸಂರಕ್ಷಿತ ಪ್ರದೇಶ ತುಮಕೂರಿನ ಮಧುಗಿರಿ ಜಿಲ್ಲೆಯಲ್ಲಿದೆ. ಕೇಂದ್ರ ಸರ್ಕಾರ ಈ ಅರಣ್ಯ ಪ್ರದೇಶವನ್ನು ಕರಡಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

There are 10 questions to complete.

[button link=”http://www.karunaduexams.com/wp-content/uploads/2016/12/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-21.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.