“ಸೆಲ್ಫಿ ವಿತ್ ಡಾಟರ್” ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಮೊಬೈಲ್ ಅಪ್ಲಿಕೇಶನ್ ‘ಸೆಲ್ಫಿ ವಿತ್ ಡಾಟರ್’ಗೆ ಚಾಲನೆ ನೀಡಿದರು. ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ಆಯ್ಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಅಪ್ಲಿಕೇಶನ್ ಹೊಂದಿದೆ. ಈ ವೇಳೆ ಪ್ರಣಬ್ ಮುಖರ್ಜಿ ಅವರು ಈ ವಿನೂತನ ಪ್ರಯತ್ನವನ್ನು ದೊಡ್ಡಮಟ್ಟದಲ್ಲಿ ಯಶಸ್ವಿಗೊಳಿಸಲು ಹೆಣ್ಣುಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದ್ದಾರೆ. ಲಿಂಗ ಅಸಮತೋಲನದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅದರಿಂದಾಗುವ ಸಮಸ್ಯೆಗಳ ಬಗ್ಗೆ ಸೂಕ್ತವಾಗಿ ವ್ಯವಹರಿಸಲು ಈ ಆಯಪ್ ಸಹಾಯವಾಗಲಿದೆ.

ಹಿನ್ನಲೆ:

  • ಜೂನ್ 2015 ರಲ್ಲಿ ಮಾಜಿ ಸರ್ಪಂಚ್ ಸುನಿಲ್ ಜಗ್ಲಾನ್ ಅವರು ಹರಿಯಾಣ ಜಿಲ್ಲೆಯ’ ಬಿಬಿಪುರ ಗ್ರಾಮದಲ್ಲಿ ‘ಸೆಲ್ಫಿ ವಿತ್ ಡಾಟರ್’ ಅಭಿಯಾನವನ್ನು ಆರಂಭಿಸಿದರು.
  • ‘ಸೆಲ್ಫಿ ವಿತ್ ಡಾಟರ್’ ಅಭಿಯಾನವು ಹೆಣ್ಣು ಮಗುವನ್ನು ಹೆತ್ತರಿರುವವರು ಎಂದು ಸಮಾಜದಲ್ಲಿ ಪ್ರೇರೇಪಿಸುವ ಮೂಲಕ ಮಗುವಿನ ಲಿಂಗ ಅನುಪಾತವನ್ನು ಸುಧಾರಿಸುವಲ್ಲಿ ಧನಾತ್ಮಕ ಪ್ರಭಾವ ಬೀರುತ್ತದೆಂದು ನಿರೀಕ್ಷಿಸಲಾಗಿದೆ.
  • ಈ ಪ್ರಚಾರವು ಸಾಮಾಜಿಕ ಮಾಧ್ಯಮದ ಅಭಿಯಾನದಲ್ಲಿ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಪ್ರಸಿದ್ಧರನ್ನು ಆಕರ್ಷಿಸಿತ್ತು. ಯು.ಎಸ್.ನ ಸಿಲಿಕಾನ್ ವ್ಯಾಲಿ ಸಿಇಒಗಳ ಸಭೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಭಿಯಾನವನ್ನು ಅಂತಾರಾಷ್ಟ್ರೀಯ ಚಳುವಳಿ ಎಂದು ಬಣ್ಣಿಸಲಾಗಿದೆ.

ಗ್ರಹಕ್ಕೆ ಬೆಂಗಳೂರಿನ ಹುಡುಗಿಯನ ಹೆಸರು

ಬೆಂಗಳೂರಿನ 16 ವರ್ಷದ ಹುಡುಗಿ ಸಾಹಿತಿ ಪಿಂಗಳಿ ಅವರ ಹೆಸರನ್ನು ಮಿಲ್ಕಿ ವೇ  ಗೆಲಾಕ್ಸಿಯಲ್ಲಿರುವ ಒಂದು ಪುಟ್ಟ ಗ್ರಹಕ್ಕೆ ಇಡಲಾಗಿದೆ. ಜಲಸಂಪನ್ಮೂಲಗಳ ಮಾಲಿನ್ಯವನ್ನು ಮೇಲ್ವಿಚಾರಣೆ ಮಾಡಲು ಏಕೀಕೃತ ಮೊಬೈಲ್ ಫೋನ್ ಅಪ್ಲಿಕೇಶನ್ ಮತ್ತು ಕೆರೆ ಮೇಲ್ವಿಚಾರಣಾ ಕಿಟ್ ಅನ್ನು ಅಭಿವೃದ್ಧಿಪಡಿಸುವ ಪ್ರತಿಫಲವಾಗಿ ಗ್ರಹಕ್ಕೆ ಪಿಂಗಳಿ ಹೆಸರನ್ನು ಇಡಲಾಗಿದೆ.

            ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಫೇರ್ನಲ್ಲಿ (ಐಎಸ್ಇಎಫ್) ಸಾಹಿತಿ ಪಿಂಗಳಿ ಅವರು “ಯಾನ್ ಇನ್ನೋವೇಶನ್ ಕ್ರೌಡ್ಸೋರ್ಸಿಂಗ್ ಅಪ್ರೋಚ್ ಟು ಮಾನಿಟರಿಂಗ್ ಫ್ರೆಶ್ವಾಟರ್ ಬಾಡೀಸ್” ಎಂಬ ಶೀರ್ಷಿಕೆಯಡಿ ಸಂಶೋಧನೆಯನ್ನು ಮಂಡಿಸಿದ್ದರು. ಇದಕ್ಕಾಗಿ ಅವರು ಎರಡನೇ ಸ್ಥಾನ ಲಭಿಸಿದೆ ಮತ್ತು ಭೂವಿಜ್ಞಾನ ಮತ್ತು ಪರಿಸರ ವಿಜ್ಞಾನ ವಿಭಾಗದಲ್ಲಿ ಮೂರು ವಿಶೇಷ ಪ್ರಶಸ್ತಿಗಳು ಸಂದಿವೆ. ಇದಲ್ಲದೆ, ಅವರು ವರ್ತೂರ್ ಕೆರೆ ಮೇಲಿನ ಸಂಶೋಧನೆಗಾಗಿ ಇಂಟರ್ನ್ಯಾಷನಲ್ ಸಸ್ಟೈನಬಲ್ ವರ್ಲ್ಡ್ ಎಂಜಿನಿಯರಿಂಗ್ ಎನರ್ಜಿ ಎನ್ವಿರಾನ್ಮೆಂಟ್ ಪ್ರಾಜೆಕ್ಟ್ (ISWEEEP) ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಐಎಸ್ಇಎಫ್ ಸ್ಪರ್ಧೆ:

ಇಂಟೆಲ್ ಇಂಟರ್ನ್ಯಾಷನಲ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಫೇರ್ (ಐಎಸ್ಇಎಫ್) ಅನ್ನು ವಿಶ್ವದ ಕಾಲೇಜು ಪೂರ್ವ ವೈಜ್ಞಾನಿಕ ಸಂಶೋಧನಾ ಕಾರ್ಯಕ್ರಮವೆಂದು ಪರಿಗಣಿಸಲಾಗಿದೆ. ಮಿಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಲಿಂಕನ್ ಪ್ರಯೋಗಾಲಯದ ಸೀರೆಸ್ ಕನೆಕ್ಷನ್ ಪ್ರೋಗ್ರಾಂನೊಂದಿಗೆ ಐಎಸ್ಇಎಫ್ ಪಾಲುದಾರಿಕೆ ಹೊಂದಿದ್ದು, ಅದು ಚಿಕ್ಕ ಗ್ರಹವನ್ನು ಗುರುತಿಸುತ್ತದೆ. ಬಾಹ್ಯಾಕಾಶದಲ್ಲಿನ ಪುಟ್ಟ ಗ್ರಹಗಳಿಗೆ ಹೆಸರನ್ನು ನೀಡುವ ಮೂಲಕ ಯುವಕ ವಿಜ್ಞಾನಿಗಳನ್ನು ಪ್ರೇರೇಪಿಸುವ ಸಲುವಾಗಿ ಗ್ರಹಗಳಿಗೆ ಅವರ ಹೆಸರನ್ನು ಇಡಲಾಗುತ್ತಿದೆ.

ಟೋಕಿಯೋ ಒಲಂಪಿಕ್ ಗೆ ಹೊಸ ಕ್ರೀಡೆಗಳ ಅನುಮೋದನೆ

ಸ್ವಿಟ್ಜರ್ಲೆಂಡ್ನ ಲಾಸನ್ನೆಯಲ್ಲಿ ನಡೆದ ಐಒಸಿ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ 2020ರ ಟೋಕಿಯೋ ಒಲಂಪಿಕ್ ನಲ್ಲಿ ಹಲವು ಹೊಸ ಕ್ರೀಡೆಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನುಮೋದಿಸಿದೆ. ಲಿಂಗ ಸಮಾನತೆ ಮತ್ತು ಯುವಜನರನ್ನು ಕೇಂದ್ರಿಕರಿಸಿಕೊಂಡು ಐಒಸಿ ಹೊಸ ಕ್ರೀಡೆಗಳನ್ನು ಅನುಮೋದಿಸಿದೆ.

ಪ್ರಮುಖಾಂಶಗಳು:

  • ಟೋಕಿಯೋ ಒಲಿಂಪಿಕ್ಸ್ನಲ್ಲಿ 321 ಕ್ರೀಡೆಗಳು ಇರಲಿವೆ. ರಿಯೊ 2016 ನಲ್ಲಿ 306 ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
  • ಹೊಸ ಸೇರ್ಪಡೆಗಳು 3-ಆನ್ -3 ಬ್ಯಾಸ್ಕೆಟ್ಬಾಲ್, ಮಿಶ್ರ ರಿಲೇ, ಮಿಶ್ರ ಈಜುಗಾರಿಕೆ, ಮಿಶ್ರ ತಂಡ ಬಿಲ್ಲುಗಾರಿಕೆ, BMX ಫ್ರೀಸ್ಟೈಲ್ ಸೇರಿದಂತೆ 14 ಇತರ ಕ್ರೀಡೆಗಳ ಜೊತೆಗೆ ಮಿಶ್ರ 4x400m ರಿಲೇ ಸಹ ಸೇರಿಸಲಾಗಿದೆ. ಜೊತೆಗೆ, ಟೋಕಿಯೋ ಆಟಗಳಲ್ಲಿ ಮಿಶ್ರ ಟ್ರೈಯಥ್ಲಾನ್ ಸಹ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.
  • ಇದಲ್ಲದೆ, ಮಿಶ್ರ ಜೂಡೋ ತಂಡವನ್ನು ಸೇರಿಸಲಾಗುವುದು. ಪ್ರತಿಯೊಂದು ಜೂಡೋ ತಂಡವು 3 ಪುರುಷರು ಮತ್ತು 3 ಮಹಿಳೆಯರು, ಎಲ್ಲರೂ ವಿಭಿನ್ನ ತೂಕ ವರ್ಗಗಳನ್ನು ಪ್ರತಿನಿಧಿಸಲಿದ್ದಾರೆ. ಮಿಶ್ರ ಡಬಲ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಯನ್ನು ಸಹ ಸೇರಿಸಲಾಗುವುದು.
  • ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಿಶ್ರ ಕ್ರೀಡೆಗಳ ಸಂಖ್ಯೆ ರಿಯೊ ಒಲಿಂಪಿಕ್ಸ್ನಲ್ಲಿ 9 ರಿಂದ 18 ಕ್ಕೆ ಏರಿದೆ.

ಐಒಸಿ:

ಸ್ವಿಟ್ಜರ್ಲೆಂಡ್ನ ಲಾಸನ್ನೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಓಸಿ ಒಲಿಂಪಿಕ್ ಕ್ರೀಡಾಕೂಟದ ಸರ್ವೋಚ್ಚ ಅಧಿಕಾರವನ್ನು ಹೊಂದಿದೆ. ಇದು ಸ್ವಯಂಸೇವಕರನ್ನು ಒಳಗೊಂಡಿರುವ ಒಂದು ಲಾಭವಲ್ಲದ ಸ್ವತಂತ್ರ ಅಂತಾರಾಷ್ಟ್ರೀಯ ಸಂಘಟನೆಯಾಗಿದೆ. ಇದನ್ನು 1894ರ ಜೂನ್ 23 ರಂದು ಸ್ಥಾಪಿಸಲಾಯಿತು. ಐಒಸಿ ಅಧಿವೇಶನ ಮತ್ತು ಕಾರ್ಯನಿರ್ವಾಹಕ ಮಂಡಳಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿವೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಜೂನ್,14,2017”

  1. SHUBHA M S

    super thank ypu sir very helpful

  2. sharnappa

    Thanks karunadu

Leave a Comment

This site uses Akismet to reduce spam. Learn how your comment data is processed.