ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,4,5,6,2018

Question 1

1. ಕೇಂದ್ರ ಲೆದರ್ ಸಂಶೋಧನಾ ಸಂಸ್ಥೆ (CLRI) ಯಾವ ರಾಜ್ಯದಲ್ಲಿದೆ?

A
ಮಣಿಪುರ
B
ತಮಿಳುನಾಡು
C
ಅಸ್ಸಾಂ
D
ಕೇರಳ
Question 1 Explanation: 
ತಮಿಳುನಾಡು

ಕೇಂದ್ರ ಲೆದರ್ ಸಂಶೋಧನಾ ಸಂಸ್ಥೆ (CLRI) ತಮಿಳುನಾಡಿನ ಚೆನ್ನೈನಲ್ಲಿದೆ. ಇದು ಸಂಶೋಧನಾ ಪೇಪರ್ಸ್ ಮತ್ತು ಪೇಟೆಂಟ್ಗಳ ವಿಷಯದಲ್ಲಿ ವಿಶ್ವದ ಅತಿದೊಡ್ಡ ಚರ್ಮದ ಸಂಶೋಧನಾ ಸಂಸ್ಥೆಯಾಗಿದೆ. CLRI ಯನ್ನು 24 ಏಪ್ರಿಲ್ 1948 ರಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಡಿಯಲ್ಲಿ ಒಂದು ಘಟಕ ಪ್ರಯೋಗಾಲಯವಾಗಿ ಸ್ಥಾಪಿಸಲಾಗಿತ್ತು.

Question 2

2. 2018ರ ಇಂಟರ್ನ್ಯಾಷನಲ್ ಕೈಟ್ ಫೆಸ್ಟಿವಲ್ (ಉತ್ತರಾಯಣ) ಗುಜರಾತ್ನ ಯಾವ ನಗರದಲ್ಲಿ ಪ್ರಾರಂಭವಾಗಿದೆ?

A
ವಡೋದರಾ
B
ಸೂರತ್
C
ಗಾಂಧಿನಗರ
D
ಅಹಮದಾಬಾದ್
Question 2 Explanation: 
ಅಹಮದಾಬಾದ್

31 ನೇ ಇಂಟರ್ನ್ಯಾಷನಲ್ ಕೈಟ್ ಫೆಸ್ಟಿವಲ್ (ಉತ್ತರಾಯಣ) ಗುಜರಾತ್ನ ಅಹಮದಾಬಾದ್ನಲ್ಲಿರುವ ಸಬರ್ಮತಿ ನದಿಯ ಮುಂಭಾಗದಲ್ಲಿ 2018 ರ ಜನವರಿ 7 ರಿಂದ ಆರಂಭವಾಗಿದೆ. ವಾರಾಂತ್ಯದ ವರ್ಣರಂಜಿತ ಉತ್ಸವವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿಯವರು, ಗವರ್ನರ್ ಶ್ರೀ ಒ.ಪಿ.ಕೊಹ್ಲಿಯವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

Question 3

3. ಏಷ್ಯಾ-ಪೆಸಿಫಿಕ್ನಲ್ಲಿ 2018ರ ಅತ್ಯುತ್ತಮ ಕೇಂದ್ರೀಯ ಬ್ಯಾಂಕ್ ಗವರ್ನರ್ ಯಾರು?

A
ಉಷಾ ವಿಸ್ವಾಸ್
B
ಪ್ರಮೋದ್ ಜೈನ್
C
ರವಿ ಮೆನನ್
D
ನಿರ್ಮಲ್ ಕುಮಾರ್
Question 3 Explanation: 
ರವಿ ಮೆನನ್

ಸಿಂಗಪುರದಲ್ಲಿರುವ ಭಾರತೀಯ ಮೂಲದ ಬ್ಯಾಂಕರ್ ರವಿ ಮೆನನ್ ಅವರು ಸಿಂಗಾಪುರದ ಆರ್ಥಿಕ ವ್ಯವಸ್ಥೆಯ ಉನ್ನತಿಯಲ್ಲಿ ನೀಡಿದ ಕೊಡುಗೆಗಾಗಿ ಪ್ರಮುಖ ಯುಕೆ ಮೂಲದ ಪತ್ರಿಕೆಯಾದ 'ದ ಬ್ಯಾಂಕರ್' ಅವರನ್ನು 2018 ರ ಏಷ್ಯಾ-ಪೆಸಿಫಿಕ್ನಲ್ಲಿ ಅತ್ಯುತ್ತಮ ಕೇಂದ್ರ ಬ್ಯಾಂಕ್ ಗವರ್ನರ್ ಎಂದು ಹೆಸರಿಸಿದ್ದಾರೆ. ಅವರು ಸಿಂಗಪೂರ್ನ ಕೇಂದ್ರ ಬ್ಯಾಂಕ್ Monetary Authority of Singapore (MAS)ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Question 4

4. 2018 ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ (KITE) ಅನ್ನು ಆಯೋಜಿಸುವ ನಗರ ಯಾವುದು?

A
ಬೆಂಗಳೂರು
B
ಹುಬ್ಬಳ್ಳಿ
C
ಮೈಸುರು
D
ಬಿಜಾಪುರ
Question 4 Explanation: 
ಬೆಂಗಳೂರು

ಫೆಬ್ರವರಿ 28, 2018 ರಿಂದ ಬೆಂಗಳೂರಿನ ಇಂಟರ್ನ್ಯಾಷನಲ್ ಎಕ್ಸಿಬಿಶನ್ ಸೆಂಟರ್ (BIEC) ನಲ್ಲಿ ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೊ (KITE)ನ ಮೊದಲ ಆವೃತ್ತಿಯನ್ನು ಬೆಂಗಳೂರು ಆಯೋಜಿಸಲಿವೆ. ಎಕ್ಸ್ಪೋವನ್ನು ಭಾರತದಲ್ಲಿ ಅತಿದೊಡ್ಡ ಬಿ 2 ಬಿ ಟ್ರಾವೆಲ್ ಈವೆಂಟ್ ಎಂದು ಹೆಸರಿಸಲಾಗಿದೆ. 25 ಕ್ಕಿಂತ ಹೆಚ್ಚು ದೇಶಗಳಿಂದ 400 ಕ್ಕೂ ಹೆಚ್ಚು ನೋಂದಾಯಿತ ಖರೀದಿದಾರರು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವರು.

Question 5

5. ಈ ಕೆಳಗಿನ ರಾಷ್ಟ್ರಗಳಲ್ಲಿ UNSC ಯ ಹೊಸ ಶಾಶ್ವತ ಸದಸ್ಯರಾಗಿ ಔಪಚಾರಿಕವಾಗಿ ಯಾವ ರಾಷ್ಟ್ರ ಸೇರಿಕೊಂಡಿದೆ?

A
ಭಾರತ
B
ಈಜಿಪ್ಟ್
C
ಪೋಲ್ಯಾಂಡ್
D
ಜಪಾನ್
Question 5 Explanation: 
ಪೋಲ್ಯಾಂಡ್

2018 ರ ಜನವರಿ 3 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್ಎಸ್ಸಿ)ಯು ಆರು ಹೊಸ ಶಾಶ್ವತ ಸದಸ್ಯರನ್ನು ಸ್ವಾಗತಿಸಿದೆ - ಈಕ್ವಟೋರಿಯಲ್ ಗಿನಿಯಾ, ಐವರಿ ಕೋಸ್ಟ್, ಕುವೈಟ್, ನೆದರ್ಲೆಂಡ್ಸ್, ಪೆರು ಮತ್ತು ಪೊಲ್ಯಾಂಡ್. 2017 ರ ಡಿಸೆಂಬರ್ 31 ರಂದು UNSCಯನ್ನು ತೊರೆದ ಆರು ದೇಶಗಳು: ಈಜಿಪ್ಟ್, ಇಟಲಿ, ಜಪಾನ್, ಸೆನೆಗಲ್, ಉಕ್ರೇನ್ ಮತ್ತು ಉರುಗ್ವೆ

Question 6

6. ಅಳಿವಿನಂಚಿನಲ್ಲಿರುವ 'ಹಕ್ಕಿ ಭಾಷೆ' ಯು UNESCO ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿದೆ. ಇದು ಈ ಕೇಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ?

A
ಉರುಗ್ವೆ
B
ಟರ್ಕಿ
C
ಭಾರತ
D
ಸೆನೆಗಲ್
Question 6 Explanation: 
ಟರ್ಕಿ

ಟರ್ಕಿಯ ಅಳಿವಿನಂಚಿನಲ್ಲಿರುವ 'ಹಕ್ಕಿ ಭಾಷೆ' UNESCO ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿದೆ. ದೂರದ ಉತ್ತರ ಟರ್ಕಿಯ ಗ್ರಾಮಸ್ಥರು ಸಂವಹನ ಮಾಧ್ಯಮವಾಗಿ ಬಳಸುವ ಒಂದು ಅಸಾಮಾನ್ಯ ಮತ್ತು ಅತ್ಯಂತ ಸಮರ್ಥ ಶಬ್ಧ ಭಾಷೆಯಾಗಿದೆ. ಕಪ್ಪು ಸಮುದ್ರದ ಗ್ರಾಮಸ್ಥರ "ಪಕ್ಷಿ ಭಾಷೆ" ಯುನೆಸ್ಕೋ ತುರ್ತು ರಕ್ಷಣೆ ಅಗತ್ಯವಿರುವ ವಿಶ್ವ ಪರಂಪರೆಯ ಅಳಿವಿನಂಚಿನಲ್ಲಿರುವ ಭಾಗವಾಗಗಳನ್ನು ಸ್ವೀಕರಿಸಿದೆ.

Question 7

7. ಆರ್ಯಭಟ್ಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES) ಯಾವ ರಾಜ್ಯದಲ್ಲಿದೆ?

A
ಕೇರಳ
B
ಪಂಜಾಬ್
C
ಉತ್ತರಾಖಂಡ್
D
ಆಂಧ್ರ ಪ್ರದೇಶ
Question 7 Explanation: 
ಉತ್ತರಾಖಂಡ್

ಆರ್ಯಭಟ್ಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES) ಒಂದು ಪ್ರಮುಖ ಸಂಶೋಧನಾ ಸಂಸ್ಥೆ, ಇದು ಉತ್ತರಖಂಡದ ನೈನಿತಾಲ್ನಲ್ಲಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ಭಾರತ ಸರ್ಕಾರ (GoI) ಅಡಿಯಲ್ಲಿ ಸ್ವಾಯತ್ತ ದೇಹದ ಮತ್ತು ಖಗೋಳವಿಜ್ಞಾನ, ಆಸ್ಟ್ರೋಫಿಸಿಕ್ಸ್ ಮತ್ತು ವಾಯುಮಂಡಲದ ವಿಜ್ಞಾನಗಳಲ್ಲಿ ವಿಶೇಷತೆಯನ್ನು ಹೊಂದಿದೆ.

Question 8

8. ರಜನೀಶ್ ಗುರ್ಬಾನಿ ಈ ಕೇಳಗಿನ ಯಾವ ಕ್ರೀಡೆಯ ಆಟಗಾರ?

A
ಕ್ರಿಕೆಟ್
B
ಚೆಸ್
C
ಬಾಕ್ಸಿಂಗ್
D
ಟೇಬಲ್ ಟೆನಿಸ್
Question 8 Explanation: 
ಕ್ರಿಕೆಟ್

ರಾಜ್ನೀಶ್ ಗುರ್ಬಾನಿ ಅವರು ವಿದರ್ಭ ಕ್ರಿಕೆಟ್ ತಂಡದ ಪರವಾಗಿ ಆಡುವ ಭಾರತದ ಬಲಗೈ ವೇಗದ ಬೌಲರ್. ಇತ್ತೀಚೆಗೆ ವಿದರ್ಭ ಕ್ರಿಕೆಟ್ ತಂಡವು 2017 ರ ಜನವರಿ 1 ರಂದು ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ದೆಹಲಿಯ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿ 2017 ರ ರಣಜಿ ಟ್ರೋಫಿ ಪಂದ್ಯಾವಳಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ.

Question 9

9. ಪ್ರಸಿದ್ಧ ರಾಜಕಾರಣಿಯಾದ ಆರ್. ಮಾರ್ಗಾಬಂದೂ ಅವರು ಇತ್ತೀಚೆಗೆ ನಿಧನರಾದರು. ಅವರು ಯಾವ ರಾಜ್ಯದವರು?

A
ತಮಿಳುನಾಡು
B
ಛತ್ತೀಸ್ ಘಡ್
C
ಒಡಿಶಾ
D
ಗುಜರಾತ್
Question 9 Explanation: 
ತಮಿಳುನಾಡು

ತಮಿಳುನಾಡಿನ ಮಾಜಿ ವಿಧಾನಸಭಾ ಸದಸ್ಯರಾಗಿರುವ ಆರ್. ಮಾರ್ಗಾ ಬಂದೂ(83) ಅವರು ಡಿಸೆಂಬರ್ 28, 2017 ರಂದು ನಿಧನ ಹೊಂದಿದ್ದಾರೆ. ಅವರು ಜುಲೈ 1995 ರಿಂದ ಜುಲೈ 2001 ರ ವರೆಗೆ ಮೇಲ್ಮನೆಯಲ್ಲಿ ತಮಿಳುನಾಡಿನ ಪ್ರತಿನಿಧಿಯಾಗಿದ್ದರು.ಅವರು ಎಐಎಡಿಎಂಕೆ ಪಕ್ಷದ ಮುಖಂಡರಾಗಿದ್ದರು.

Question 10

10. ಇತ್ತೀಚಿನ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಪರ ಅತ್ಯುನ್ನತ ಶ್ರೇಯಾಂಕ ಪಡೆದ ಆಟಗಾರ ಯಾರು?

A
ಶರತ್ ಕಮಲ್
B
ಸೌಮ್ಯಜಿತ್ ಘೋಷ್
C
ಅಂಥೋನಿ ಅಮಲ್ರಾಜ್
D
ಜಿ ಸತ್ಯಾಯಾನ್
Question 10 Explanation: 
ಜಿ ಸತ್ಯಾಯಾನ್

ಜಿ ಸತ್ಯಾಯಾನ್ ಇತ್ತೀಚಿನ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಪರ ಅತ್ಯುನ್ನತ ಶ್ರೇಯಾಂಕ ಪಡೆದ ಆಟಗಾರರಾದರು. ಜಿ ಸತ್ಯಾಯಾನ್ (49 ನೇ ಸ್ಥಾನ) ತನ್ನ ದೇಶಬಾಂಧವ ದಂತಕಥೆ ಶರತ್ ಕಮಲ್ (51 ನೇ ಸ್ಥಾನ)ಅವರನ್ನು ಮೀರಿಸಿದರು. ಸೌಮ್ಯಜಿತ್ ಘೋಷ್ 58 ನೇ ಸ್ಥಾನದಲ್ಲಿದ್ದರೆ, ಹರ್ಮೀತ್ ದೇಸಾಯಿ 60 ನೇ, ಸನಿಲ್ ಶೆಟ್ಟಿ 68 ನೇ ಹಾಗೂ ಆಂಟನಿ ಅಮಲ್ರಾಜ್ 87 ನೇ ಸ್ಥಾನದಲ್ಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2018/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ4562018.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.