ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,1,2017

Question 1

1. ಭಾರತದ 48ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI-2017) ನಲ್ಲಿ ಅತ್ಯತ್ತಮ ನಟಿ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?

A
ಸುಮತ್ರಾ ಭಾವೆ
B
ರಚಿ ನಾರೈನ್
C
ಗೌತಮಿ ತಡಿಮಲ್ಲ
D
ಪಾರ್ವತಿ ತಿರುವೋತ ಕೊಟ್ಟುವಟ್ಟ
Question 1 Explanation: 

ಪಾರ್ವತಿ ತಿರುವೋತ ಕೊಟ್ಟುವಟ್ಟ ಭಾರತೀಯ ನಟರಾದ ಪಾರ್ವತಿ ತಿರುವೋತ ಕೊಟ್ಟುವಟ್ಟ ಮಲಯಾಳಂ ಚಿತ್ರ “ಟೇಕ್ ಆಫ್ “ ನಲ್ಲಿನ ತಮ್ಮ ಪಾತ್ರಕ್ಕಾಗಿ ಭಾರತದ 48ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI-2017) ನಲ್ಲಿ ಅತ್ಯತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಚಲನಚಿತ್ರವನ್ನು ಮಹೇಶ ನಾರಯಣ್ ನಿರ್ದೇಶಿಸಿದ್ದಾರೆ. ಈ ಚಿತ್ರವು 2014 ರಲ್ಲಿ, ಇರಾಕ್, ಟಕ್ರಿತ್ ನಗರದಲ್ಲಿರುವ ಭಾರತೀಯ ದಾದಿಯರ ಜೀವನ ಚರಿತ್ರೆಯನ್ನು ಆಧರಿಸಿದೆ.

Question 2

2. Amchang Wildlife Sanctuary (AWS) ಯಾವ ರಾಜ್ಯ/ಯುಟಿ ಯಲ್ಲಿದೆ?

A
ಪುದುಚೆರಿ
B
ಕರ್ನಾಟಕ
C
ಪಂಜಾಬ್
D
ಅಸ್ಸಾಂ
Question 2 Explanation: 

ಅಸ್ಸಾಂ Amchang Wildlife Sanctuary (AWS) ಧಾಮವು ಅಸ್ಸಾಂನ ಗುವಾಹಟಿಯಲ್ಲಿನ ಕಾಮ್ರುಪ್ ಜಿಲ್ಲೆಯಲ್ಲಿದೆ ಮತ್ತು 78.64 ಕಿ.ಮೀ ಪ್ರದೇಶವನ್ನು ಹೊಂದಿದೆ. ಇದು ಅಮಚಂಗ್ Reserve Forest, ದಕ್ಷಿಣ ಅಮಚಂಗ್ Reserve Forest ಮತ್ತು ಖಾನಪಾರ Reserve Forest ಗಳನ್ನು ಒಳಗೊಂಡಿದೆ.

Question 3

3. 2017 ರ ವಿಶ್ವ ಏಡ್ಸ್ ದಿನ (WAD)ದ ಧೇಯ ಯಾವುದು?

A
Getting to Zero: Zero new HIV infections
B
Leave no one behind
C
Universal Access and Human Rights
D
Right to health
Question 3 Explanation: 

Right to health ವಿಶ್ವ ಏಡ್ಸ್ ದಿನ (WAD) ಅನ್ನು ಏಡ್ಸ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ಷದಾದ್ಯಂತ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆ (WAD) ಅನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಇದು HIV ಸೊಂಕಿನಿಂಸ ಹರಡುವ ಒಂದು ಸಾಂಕ್ರಾಮಿಕ ರೋಗವಾಗಿದೆ.

Question 4

4. ಲೋಕಸಭೆಯ ಹೊಸ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?

A
ಕೇದಾರನಾಥ ಗುಪ್ತಾ
B
ಕೀರ್ತಿ ಷಾ
C
ಸ್ನೇಹಲತಾ ಶ್ರೀವಾಸ್ತವ
D
ಅನೂಪ್ ಮಿಶ್ರಾ
Question 4 Explanation: 

ಸ್ನೇಹಲತಾ ಶ್ರೀವಾಸ್ತವ ಮಧ್ಯ ಪ್ರದೇಶದ ಕೇಡರ್ನ್ ನಲ್ಲಿ 1982 ನೇ ಬ್ಯಾಚ್ನ ಅಧಿಕಾರಿಯಾಗಿದ್ದ ಸ್ನೇಹಲತಾ ಶ್ರೀವಾಸ್ತವ ಅವರು ಲೋಕಸಭೆಯ ಹೊಸ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರ ಅಧಿಕಾವಧಿಯು ನವೆಂಬರ್ 30, 2018 ರಂದು ಕೊನೆಗೊಳ್ಳುತ್ತದೆ.

Question 5

5. 18ನೇ ಹಾರ್ನ್ಬಿಲ್ ( Hornbill) ಉತ್ಸವ 2017ರಲ್ಲಿ ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು?

A
ಮಣಿಪುರ
B
ನಾಗಾಲ್ಯಾಂಡ್
C
ಅಸ್ಸಾಂ
D
ತ್ರಿಪುರ
Question 5 Explanation: 

ನಾಗಾಲ್ಯಾಂಡ್ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ಅವರು 18 ನೇ ಹಾರ್ನ್ಬಿಲ್ ( Hornbill) ಉತ್ಸವವನ್ನು ಉದ್ಘಾಟಿಸಿದರು. ಮತ್ತು ಕಿಸಾಮಾದ ನಾಗಾ ಹೆರಿಟೇಜ್ ಗ್ರಾಮದಲ್ಲಿ 54 ನೇ ರಾಜ್ಯತ್ವ ದಿನಾಚರಣೆಯನ್ನು ಡಿಸೆಂಬರ್ 1, 2017 ರಂದು ಉದ್ಘಾಟಿಸಿದರು.

Question 6

6. ಇತ್ತೀಚೆಗೆ ನಿಧನರಾದ ಸರಸ್ವತಿ ತ್ರಿಪತಿ ಅವರು ಯಾವ ರಾಜ್ಯದ ಪ್ರಮುಖ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು

A
ಒಡಿಶಾ
B
ಅಸ್ಸಾಂ
C
ಉತ್ತರ ಪ್ರದೇಶ
D
ಕೇರಳ
Question 6 Explanation: 

ಒಡಿಶಾ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸರಸ್ವತಿ ತ್ರಿಪತಿ (89) ಅವರು ಒಡಿಶಾದ ಜಜಪುರ್ ಜಿಲ್ಲೆಯಲ್ಲಿ ನವೆಂಬರ್ 30, 2017 ರಂದು ನಿಧನರಾದರು. ಆಕೆಯು ಪ್ರಮುಖ ಸ್ವಾತಂತ್ರ್ಯ ಹೋರಾಟಗಾರಳಾಗಿದ್ದಳು.

Question 7

7. “ಅಜೇಯ ವಾರಿಯರ್-2017” Combined Military ಅಭ್ಯಾಸವು ಭಾರತ ಮತ್ತು ಯಾವ ದೇಶದ ನಡುವೆ ಆರಂಭವಾಗಿದೆ?

A
ಯುನೈಟೆಡ್ ಸ್ಟೇಟ್ಸ್ (US)
B
ಮಲೇಷ್ಯಾ
C
ಜರ್ಮನಿ
D
ಯನೈಟೆಡ್ ಕಿಂಗಡಮ್ (UK)
Question 7 Explanation: 

ಯನೈಟೆಡ್ ಕಿಂಗಡಮ್ (UK) ಡಿಸೆಂಬರ್ 14. 2017 ರಂದು ರಾಜಸ್ಥಾನದ ಬಿಕಾನೆರ್ ಬಳಿ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ 14 ದಿನಗಳ ಕಾಲ “ಅಜೇಯ ವಾರಿಯರ್-2017” Combined Military ಅಭ್ಯಾಸವು ಭಾರತ ಮತ್ತು ಯನೈಟೆಡ್ ಕಿಂಗಡಮ್ (UK) ದೇಶದ ನಡುವೆ ಆರಂಭಾವಾಗಿದೆ.

Question 8

8. ‘Kathakar – International Storytellers Festival’ ನ 7ನೇ ಆವೃತ್ತಿಯನ್ನು ಯಾರು ಉದ್ಘಾಟಿಸಿದರು?

A
ರಾಮ್ ನಾಥ್ ಕೋವಿಂದ್
B
ಕಿರೆನ್ ರಿಜಿಜು
C
ನರೇಂದ್ರ ಮೋದಿ
D
ಅಮಿತ್ ಷಾ
Question 8 Explanation: 

ಕಿರೆನ್ ರಿಜಿಜು ‘Kathakar – International Storytellers Festival’ ನ 7 ನೇ ಆವೃತ್ತಿಯನ್ನು ಡಿಸೆಂಬರ್ 1, 2017 ರಂದು ಹೊಸದಿಲ್ಲಿಯ ಗೃಹ ವ್ಯವಹಾರ ಸಚಿವರಾದ ಕಿರೆನ್ ರಿಜಿಜು ಉದ್ಘಾಟಿಸಿದರು.

Question 9

9. International Film Festival of India (IFFI-2017) ನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಗೋಲ್ಡನ್ ಪಿಕಾಕ್ ಪ್ರಶಸ್ತಿಯನ್ನು ಯಾವ ಚಿತ್ರವು ಗೆದ್ದಿದೆ?

A
120 Beats Per Minute
B
Take Off
C
Angels Wear White
D
Dark Skull
Question 9 Explanation: 

120 Beats Per Minute ABS ನ “120 Beats Per Minute” ಫ್ರೆಂಚ್ ಚಿತ್ರವು International Film Festival of India (IFFI-2017) ನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಗೋಲ್ಡನ್ ಪಿಕಾಕ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಚಿತ್ರವನ್ನು ರಾಬಿನ್ ಕ್ಯಾಂಪಿಲ್ಗೊ ನಿರ್ದೇಶಿಸಿದ್ದಾರೆ.

Question 10

10. Hindustan Times Leadership Summit (HTLS) ನ 15 ನ ಆವೃತ್ತಿಯನ್ನು ಯಾವ ನಗರವು ಆಯೋಜಿಸಿತು?

A
ಪಣಜಿ
B
ಜೈಪುರ
C
ನವ ದೆಹಲಿ
D
ಪುಣೆ
Question 10 Explanation: 

ನವ ದೆಹಲಿ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 30, 2017 ರಂದು ನವ ದೆಹಲಿಯ Hindustan Times Leadership Summit (HTLS) ನ 15ನೇ ಆವೃತ್ತಿಯನ್ನು ಉದ್ಘಾಟಿಸಿದರು. ಇದು 2 ದಿನಗಳ ಸಮಾವೇಶವು “ವಿರೋಧಾಭಾಸದ ವಿಚಾರಗಳನ್ನು” ಮತ್ತು “ಭಾರತದ ಬೆಳವಣಿಗೆಯನ್ನು “ ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ವೇದಿಕೆಯ ಮೇಲೆ ಏರಿಕೆಯಾಗಲು ಒತ್ತುಕೊಡಲಾಯಿತು.

There are 10 questions to complete.

[button link=”http://www.karunaduexams.com/wp-content/uploads/2017/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್12017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.