ವೊಡಾಫೋನ್, ಐಡಿಯಾ ದೂರವಾಣಿ ಸಂಸ್ಥೆಗಳ ವಿಲೀನ

ಕುಮಾರ ಮಂಗಳಂ ಬಿರ್ಲಾ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ಐಡಿಯಾ ಸೆಲುಲಾರ್ ಯುಕೆ ಮೂಲದ ವೊಡಾಫೋನ್‌ ಸಮೂಹದ ವೊಡಾಫೋನ್‌ ಇಂಡಿಯಾದೊಂದಿಗೆ ವಿಲೀನಗೊಳ್ಳಲು ಸಮ್ಮತಿಸಿದೆ.  ಈ ವಿಲೀನ ಪ್ರಕ್ರಿಯೆ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಸಂಸ್ಥೆಯನ್ನು ಹಾಗೂ ವಿಶ್ವದ ಎರಡನೇ ಅತಿ ದೊಡ್ಡ ಸಂಸ್ಥೆಯನ್ನು ಹುಟ್ಟುಹಾಕಲಿದೆ.

ಪ್ರಮುಖಾಂಶಗಳು:

  • ವೊಡಾಫೋನ್‌–ಐಡಿಯಾ ವಿಲೀನದ ಮೂಲಕ 40 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್‌ ದೂರಸಂಪರ್ಕ ಸಂಸ್ಥೆಯಾಗಲಿದೆ. ಆ ಮೂಲಕ ಶೇ 35% ರಷ್ಟು ಗ್ರಾಹಕರ ಪಾಲು ಹಾಗೂ ಶೇ 41% ರೆವಿನ್ಯೂ ಪಾಲನ್ನು ಹೊಂದಲಿದೆ.
  • ಮುಂದಿನ 24 ತಿಂಗಳಲ್ಲಿ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಮೂಲಕ ₹80,000 ಕೋಟಿ ಆದಾಯ ಹೊಂದಿರುವ ಸಂಸ್ಥೆಯಾಗಲಿದೆ.
  • ವಿಲೀನಗೊಂಡ ಸಂಸ್ಥೆಯಲ್ಲಿ ವೊಡಾಫೋನ್‌ ಶೇ.45.1 ಪಾಲು ಹೊಂದಿರಲಿದ್ದು, ವಿಲೀನ ಪೂರ್ಣಗೊಂಡ ಬಳಿಕ ₹38,740 ಮೌಲ್ಯದ ಶೇ.4.9 ರಷ್ಟು ಐಡಿಯಾ ಪ್ರವರ್ತಕರಿಗೆ ವರ್ಗಾವಣೆಯಾಗಲಿದೆ. ಕುಮಾರ ಮಂಗಳಂ ಬಿರ್ಲಾ ಅವರು ವಿಲೀನ ಸಂಸ್ಥೆಯ ಅಧ್ಯಕ್ಷರಾಗಿರಲಿದ್ದಾರೆ.
  • 58 ಕೋಟಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಏರ್‌ಟೆಲ್‌ ಪ್ರಸ್ತುತ ದೇಶದ ಅತಿ ದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆಯಾಗಿದೆ. ಶೇ.23.58 ಮಾರುಕಟ್ಟೆ ಪಾಲುದಾರಿಗೆ ಹೊಂದಿದೆ.
  • ವೊಡಾಫೋನ್‌ ಇಂಡಿಯಾ ₹82,800 ಕೋಟಿ ಹಾಗೂ ಐಡಿಯಾ ₹72,200 ಕೋಟಿ ಮೌಲ್ಯ ಹೊಂದಿವೆ. ವಿಲೀನ ಪ್ರಕ್ರಿಯೆಯನ್ನು ವೊಡಾಫೋನ್‌ ಮತ್ತು ಆದಿತ್ಯ ಬಿರ್ಲಾ ಸಮೂಹ ಜತೆಯಾಗಿ ನಿಯಂತ್ರಿಸಲಾಗುತ್ತದೆ.

ವಿಶ್ವ ಸಂತಸ ದಿನ: ಭಾರತಕ್ಕೆ 122ನೇ ಸ್ಥಾನ

ವಿಶ್ವಸಂಸ್ಥೆ ಹೊರತಂದಿರುವ 2017 ವಿಶ್ವ ಸಂತಸ ವರದಿ (World Happiness Report)ಯಲ್ಲಿ ಭಾರತ 155 ರಾಷ್ಟ್ರಗಳ ಪೈಕಿ 122ನೇ ಸ್ಥಾನವನ್ನು ಪಡೆದುಕೊಂಡಿದೆ. ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತಸ ದಿನದ ಅಂಗವಾಗಿ ವಿಶ್ವಸಂಸ್ಥೆ ಈ ವರದಿಯನ್ನು ಪ್ರತಿವರ್ಷ ಆಚೆ ತರುತ್ತಿದೆ. ವಿವಿಧ ಬಗೆಯ ಮಾನದಂಡಗಳನ್ನು ಆಧರಿಸಿ ಯಾವ ದೇಶದ ಪ್ರಜೆಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ ಎಂಬುದನ್ನು ಸೂಚಿಸುವ ‘ಸಂತಸ ಶ್ರೇಯಾಂಕ’ ಪಟ್ಟಿಯನ್ನು ಕೂಡ ಅದೇ ವರದಿಯ ಜೊತೆಯಲ್ಲಿ ಅದೇ ದಿನ ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತಿದೆ

ಪ್ರಮುಖಾಂಶಗಳು:

  • ಟಾಪ್ ಹತ್ತು ರಾಷ್ಟ್ರಗಳು: ನಾರ್ವೆ ದೇಶ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ಐಸ್ಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಫಿನ್ ಲ್ಯಾಂಡ್, ನೆದರ್ಲ್ಯಾಂಡ್, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಸ್ವೀಡನ್ ಇವೆ.
  • ಐದು ದುಖಃಕರ ರಾಷ್ಟ್ರಗಳು: ರವಾಂಡ (151), ಸಿರಿಯಾ (152), ತಾಂಜಾನಿಯಾ (153), ಬುರುಂಡಿ (154), ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (155).
  • ಪಟ್ಟಿಯಲ್ಲಿರುವ ಟಾಪ್ ಹತ್ತು ರಾಷ್ಟ್ರಗಳು ಶ್ರೀಮಂತ ಹಾಗೂ ಮುಂದುವರೆದ ರಾಷ್ಟ್ರಗಳಾಗಿವೆ. ಆದರೆ ಹಣವೊಂದೆ ಸಂತೋಷಕ್ಕೆ ಕಾರಣವಲ್ಲವೆಂದು ವರದಿ ಹೇಳಿದೆ. ಸಹರಾ-ಆಫ್ರಿಕಾ ರಾಷ್ಟ್ರಗಳು ಹಾಗೂ ಯುದ್ದ ಸಂಘರ್ಷ ರಾಷ್ಟ್ರಗಳು ಪಟ್ಟಿಯಲ್ಲಿ ಕಡಿಮೆ ಶ್ರೇಯಾಂಕವನ್ನು ಗಳಿಸಿವೆ.
  • ಭಾರತ ಕಳೆದ ವರ್ಷ 118ನೇ ಸ್ಥಾನವನ್ನು ಪಡೆದುಕೊಂಡಿತ್ತು.
  • ಸಾರ್ಕ್ ರಾಷ್ಟ್ರಗಳಲ್ಲಿ: ಪಾಕಿಸ್ತಾನ (80), ನೇಪಾಳ (99), ಭೂತಾನ್ (97), ಬಾಂಗ್ಲದೇಶ (110), ಶ್ರೀಲಂಕಾ (120)ನೇ ಸ್ಥಾನದಲ್ಲಿವೆ.
  • ಬ್ರಿಕ್ಸ್ ರಾಷ್ಟ್ರಗಳು: ಬ್ರೆಜಿಲ್ (17), ರಷ್ಯಾ (56), ಚೀನಾ (79), ದಕ್ಷಿಣಾ ಆಫ್ರಿಕಾ (116) ಮತ್ತು ಭಾರತ (122).
  • ಸಂತಸ ಸಮೀಕ್ಷೆಯಲ್ಲಿ ಆಯಾ ದೇಶದ ಪ್ರಜೆಯ ಆದಾಯ, ಆರೋಗ್ಯವಂತ ಬದುಕಿನ ನಿರೀಕ್ಷೆ, ಸಂಕಷ್ಟದಲ್ಲಿ ನೆರವಿಗೆ ಬರುವವರ ನಿರೀಕ್ಷೆ, ಧಾರಾಳತನ, ಸ್ವಾತಂತ್ರ್ಯ ಮತ್ತು ವಿಶ್ವಾಸ ಈ ಆರು ಸೂಚಕಗಳನ್ನು ಬಳಸಲಾಗಿತ್ತು.

ವಿಜಯ್ ಹಜಾರೆ ಟ್ರೋಫಿ: ತಮಿಳುನಾಡಿಗೆ ಪ್ರಶಸ್ತಿಯ ಗರಿ

ತಮಿಳುನಾಡು ತಂಡ 2017 ವಿಜಯ್ ಹಜಾರೆ ಟ್ರೋಫಿಯನ್ನು ಸತತವಾಗಿ ಐದನೇ ಬಾರಿ ಮುಡಿಗೇರಿಸಿಕೊಂಡತು. ಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಈ ಹಿಂದೆ 2002-03, 2004-05, 2008-09 ಮತ್ತು 2009-10ರಲ್ಲಿ ತಮಿಳುನಾಡು ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 47.2 ಓವರ್‌ಗಳಲ್ಲಿ 217ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಬಂಗಾಳ ತಂಡ 45.5 ಓವರ್‌ಗಳಲ್ಲಿ 180ರನ್‌ ಗಳಿಸಲಷ್ಟೇ ಶಕ್ತವಾಯಿತು.

ವಿಜಯ್ ಹಜಾರೆ ಟ್ರೋಫಿ:

  • ವಿಜಯ್ ಹಜಾರೆ ಟ್ರೋಫಿಯನ್ನು 2002-03 ರಿಂದ ಆಯೋಜಿಸಲಾಗುತ್ತಿದೆ.
  • ರಣಜಿ ಏಕದಿನ ಟ್ರೋಫಿಯಂತಲೂ ಇದನ್ನು ಕರೆಯಲಾಗುತ್ತಿದ್ದು, ಖ್ಯಾತ ಕ್ರಿಕೆಟಿಗ ವಿಜಯ್ ಹಜಾರೆ ಹೆಸರನ್ನು ಇಡಲಾಗಿದೆ.

Leave a Comment

This site uses Akismet to reduce spam. Learn how your comment data is processed.