ಒಮನ್ ನ ಮಸ್ಕಟ್ ನಲ್ಲಿ ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ

ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ ಡಿಸೆಂಬರ್ 14-15 ರಂದು ಒಮನ್ ನ ಮಸ್ಕಟ್ ನಗರದಲ್ಲಿ ನಡೆಯಿತು. ‘Partnership towards innovation and cooperation in IT’ ಇದು ಈ ವರ್ಷದ ಸಮ್ಮೇಳನದ ಧ್ಯೇಯವಾಕ್ಯ. ಈ ಸಮ್ಮೇಳನವನ್ನು ಅರಬ್ ವಿದೇಶಾಂಗ ಸಚಿವಾಲಯ, ಅರಬ್ ಲೀಗ್ ಕಾರ್ಯಾಲಯ ಹಾಗೂ ಭಾರತ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರ ಸಚಿವಾಲಯ ಆಯೋಜಿಸಿದ್ದವು.

ಪ್ರಮುಖಾಂಶಗಳು:

  • ಎರಡು ಕಡೆಯಿಂದ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಆದ್ಯತಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳನ್ನು ತ್ವರಿತಗೊಳಿಸುವುದು ಮತ್ತು ರಪ್ತು ಉತ್ತೇಜನಕ್ಕೆ ಸೂಕ್ತ ವಾತಾವರಣವನ್ನು ಕಲ್ಪಿಸುವುದು ಸಮ್ಮೇಳನದ ಉದ್ದೇಶ.
  • ತಂತ್ರಜ್ಞಾನ, ಆರೋಗ್ಯ, ಔಷಧ ವಲಯ, ಸ್ವಚ್ಚ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಆಹಾರ ಭದ್ರತೆ, ಶಿಕ್ಷಣ, ಕೌಶಲ್ಯ ಅಭಿವೃದ್ದಿ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಯಿತು.
  • ಅರಬ್ ಲೀಗ್ ಹಾಗೂ ಭಾರತ ಸರ್ಕಾರ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಹೂಡಿಕೆದಾರರು ಸೇರಿದಂತೆ 500ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ದೇವೇಂದ್ರ ಫಡ್ನಾವೀಸ್, ಎ,ಎಸ್,ಕಿರಣ್ ಕುಮಾರ್ ಹಾಗೂ ಜಾನ್ ರಾಲ್ಸ್ಟನ್ ಗೆ SIES-ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಇಸ್ರೋದ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಅಮೆರಿಕ ಮೂಲದ ಶಿಕ್ಷಣತಜ್ಞ ಜಾನ್ ರಾಲ್ಸ್ಟನ್ ಹಾಗೂ ಹರಿಕಥೆ ನಿರೂಪಕಿ ಕಮಲ ಮೂರ್ತಿರವರಿಗೆ SIES ಶ್ರೀ ಚಂದ್ರಶೇಖರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಪ್ರಮುಖಾಂಶಗಳು:

  • ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಇಸ್ರೋದ ಅಧ್ಯಕ್ಷ ಕಿರಣ್ ಕುಮಾರ್ ರವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಸಾರ್ವಜನಿಕ ನಾಯಕತ್ವ ವಿಭಾಗದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ರವರಿಗೆ ನೀಡಲಾಗಿದೆ.
  • ಸಾಮಾಜಿಕ ವಿಚಾರಕರು, ದಾರ್ಶನಿಕರು ಹಾಗೂ ಪ್ರವಚನ ಕರ್ತರು ವಿಭಾಗದಲ್ಲಿ ಹರಿಕಥಾ ನಿರೂಪಕಿ ಕಮಲಾ ಮೂರ್ತಿ ರವರನ್ನು ಆಯ್ಕೆಮಾಡಲಾಗಿದೆ.
  • ಅಂತಾರಾಷ್ಟ್ರೀಯ ವಿಭಾಗದಲ್ಲಿ ಜಾನ್ ರಾಲ್ಸ್ಟನ್ ಮಾರ್ ರವರಿಗೆ ಪ್ರಶಸ್ತಿ ಲಭಿಸಿದೆ. ಮಾರ್ ರವರು ಸಂಸ್ಕೃತಿ, ತಮಿಳು ಮತ್ತು ತೆಲುಗು ಭಾಷೆಯ ವಿದ್ವಾಂಸರು. ಇಂಗ್ಲೆಂಡ್ ನಲ್ಲಿ ಮೂವತ್ತು ವರ್ಷಗಳಿಂದ ಕರ್ನಾಟಿಕ ಸಂಗೀತಾ ಸಿದ್ದಂತಾವನ್ನು ಬೋಧಿಸುತ್ತಿದ್ದಾರೆ.

ಪ್ರಶಸ್ತಿಯ ಬಗ್ಗೆ:

  • ಸೌಥ್ ಇಂಡಿಯನ್ ಎಜುಕೇಷನ್ ಸೊಸೈಟಿ (SIES) ಈ ಪ್ರಶಸ್ತಿಯನ್ನು ನೀಡುತ್ತಿದೆ. ಕಂಚಿಯ ಖ್ಯಾತ ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರವರ ಸ್ಮರಣಾರ್ಥ 1998ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
  • ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ನಾಯಕತ್ವ, ಸಾಮಾಜಿಕ ಚಿಂತನೆ, ದಾರ್ಶನಿಕ ಹಾಗೂ ಪ್ರವಚನ ಮತ್ತು ಅಂತಾರಾಷ್ಟ್ರೀಯ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಪ್ರಶಸ್ತಿಯು ರೂ 2.5 ಲಕ್ಷ ನಗದು, ಫಲಕ ಹಾಗೂ ಶಾಲುವನ್ನು ಒಳಗೊಂಡಿದೆ.
  • ಈ ಹಿಂದೆ ಪ್ರಶಸ್ತಿಯನ್ನು ಪಡೆದು ಹಲವು ಗಣ್ಯರೆಂದರೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಆರ್ ಚಿದಂಬರಂ, ಅನಿಲ್ ಕಾಕೊಡ್ಕರ್, ದಿಲೀಪ್ ಕುಮಾರ್, ವರ್ಗೀಸ್ ಕುರಿಯನ್ ಹಾಗೂ ಅಮಿತಾಬ್ ಬಚ್ಚನ್.

Leave a Comment

This site uses Akismet to reduce spam. Learn how your comment data is processed.