ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-11, 2016

Question 1

1. ಇಂಟರ್ ಪೋಲ್ನ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ “ಮೆಂಗ್ ಹೊಂಗ್ ವೆ (Meng Hongwei) ಯಾವ ದೇಶದವರು?

A
ಜಪಾನ್
B
ಚೀನಾ
C
ದಕ್ಷಿಣ ಕೊರಿಯಾ
D
ಉತ್ತರ ಕೊರಿಯಾ
Question 1 Explanation: 
ಚೀನಾ:

ಚೀನಾದ ಸಾರ್ವಜನಿಕ ಭದ್ರತೆಯ ಉಪಸಚಿವ ಮೆಂಗ್ ಹೊಂಗ್ ವೆ ಅವರು ಇಂಟರ್ ಪೋಲ್ ನ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಗೆ ಆಯ್ಕೆಯಾದ ಚೀನಾದ ಮೊದಲಿಗರು. ಇಂಟರ್ ಪೋಲ್ ಅನ್ನು 1914ರಲ್ಲಿ ಸ್ಥಾಪಿಸಲಾಗಿದೆ. ಇದರ ಪ್ರಧಾನ ಕಚೇರಿ ಫ್ರಾನ್ಸ್ ನ ಲಿಯಾನ್ ನಲ್ಲಿದೆ.

Question 2

2. ವಿಶ್ವದ ಅತಿ ಎತ್ತರದ ಸುರಂಗ ಮಾರ್ಗವನ್ನು ಯಾವ ದೇಶದಲ್ಲಿ ನಿರ್ಮಿಸಲಾಗಿದೆ?

A
ಚೀನಾ
B
ಸ್ವಿಟ್ಜರ್ಲ್ಯಾಂಡ್
C
ಸ್ವೀಡನ್
D
ಡೆನ್ಮಾರ್ಕ್
Question 2 Explanation: 
ಚೀನಾ:

ಚೀನದ ಸಿಚುಆನ್-ಟಿಬೆಟ್ ಹೆದ್ದಾರಿಯಲ್ಲಿ ಜಗತ್ತಿನಲ್ಲೇ ಅತೀ ಎತ್ತರದ ಸುರಂಗಮಾರ್ಗ ನಿರ್ಮಾಣಕಾರ್ಯ ಪೂರ್ಣಗೊಂಡಿದೆ. ಇದರ ಮೂಲಕ ಟಿಬೆಟ್ಗೆ ತಲುಪಲು ಎರಡು ಗಂಟೆಗೂ ಕಡಿಮೆ ಸಮಯ ಸಾಲುತ್ತದೆ. ಏಳು ಕಿಲೊಮೀಟರ್ ಉದ್ದದ ಸುರಂಗ ಸಮುದ್ದರ ಮಟ್ಟದಿಂದ 6,168 ಮೀಟರ್ ಎತ್ತರದಲ್ಲಿದೆ. ಇದು ಚೋಲ ಪರ್ವತದಮೂಲಕ ಹಾದು ಹೋಗುತ್ತದೆ.

Question 3

3. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮಹಿಳೆಯರು ಕೆಲಸ ನಿರ್ವಹಿಸಲು ಅತ್ಯಂತ ಉತ್ತಮ ಸಂಸ್ಥೆ ಎನಿಸಿದೆ?

A
ಟಿಸಿಎಸ್
B
ಇನ್ಪೋಸಿಸ್
C
ಅಸೆಂಚರ್
D
ಹೆಚ್ ಪಿ
Question 3 Explanation: 
ಅಸೆಂಚರ್:

ಜಾಗತಿಕ ವೃತ್ತಿಪರ ಸೇವಾ ಸಂಸ್ಥೆ ಅಸೆಂಚರ್ ದೇಶದ ಮಹಿಳಾ ಸ್ನೇಹಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಅಮೆರಿಕ ಮೂಲದ ನಿಯತಕಾಲಿಕೆ ವರ್ಕಿಂಗ್ ಮದರ್ ಮತ್ತು ಅವತಾರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸಲು ಉತ್ತಮ ವಾತಾವರಣವಿರುವ 100 ಸಂಸ್ಥೆಗಳ ಪೈಕಿ ಅಸೆಂಚರ್ ಅತ್ಯುತ್ತಮ ಸಂಸ್ಥೆ ಎನಿಸಿದೆ.

Question 4

4. ವಿಶ್ವ ನ್ಯೂಮೋನಿಯಾ ದಿನವನ್ನು ________ ರಂದು ಆಚರಿಸಲಾಗುತ್ತದೆ?

A
ನವೆಂಬರ್ 12
B
ನವೆಂಬರ್ 13
C
ನವೆಂಬರ್ 10
D
ನವೆಂಬರ್ 11
Question 4 Explanation: 
ನವೆಂಬರ್ 12:

ವಿಶ್ವ ನ್ಯೂಮೋನಿಯಾ ದಿನವನ್ನು ಪ್ರತಿವರ್ಷ ನವೆಂಬರ್ 12 ರಂದು ಆಚರಿಸಲಾಗುತ್ತದೆ. ನ್ಯೂಮೋನಿಯಾ ಕಾಯಿಲೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. ನ್ಯೊಮೋನಿಯಾ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಐದು ವರ್ಷದ ಮಕ್ಕಳಲ್ಲಿ ಅಧಿಕ ಸಾವು ಸಂಭವಿಸಲು ಕಾರಣವಾಗಿದೆ.

Question 5

5. 2018 ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಚೌಕಟ್ಟು ಒಪ್ಪಂದ ಪಾಲುದಾರ ದೇಶಗಳ ಸಮಾವೇಶ ಯಾವ ದೇಶದಲ್ಲಿ ನಡೆಯಲಿದೆ?

A
ಸ್ವಿಟ್ಜರ್ಲ್ಯಾಂಡ್
B
ಈಜಿಪ್ಟ್
C
ಬ್ರೆಜಿಲ್
D
ಅಮೆರಿಕ
Question 5 Explanation: 
ಸ್ವಿಟ್ಜರ್ಲ್ಯಾಂಡ್:

ಎಂಟನೇ ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಚೌಕಟ್ಟು ಒಪ್ಪಂದ ಪಾಲುದಾರ ದೇಶಗಳ ಸಮಾವೇಶ 2018 ರಲ್ಲಿ ಸ್ವಿಟ್ಜರ್ಲ್ಯಾಂಡ್ ಜಿನಿವಾದಲ್ಲಿ ನಡೆಯಲಿದೆ. ಭಾರತ ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಲಿದೆ. ಭಾರತ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಸಿ.ಕೆ.ಮಿಶ್ರಾ ಅವರನ್ನು ಸಮಾವೇಶದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಇವರು ಅಧ್ಯಕ್ಷರಾಗಿ ಇರಲಿದ್ದಾರೆ.

Question 6

6. ಈ ಕೆಳಗಿನ ಯಾವ ದೇಶದೊಂದಿಗೆ ಭಾರತ ಇತ್ತೀಚೆಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದೆ?

A
ಚೀನಾ
B
ಜಪಾನ್
C
ಇಟಲಿ
D
ಮೆಕ್ಸಿಕೊ
Question 6 Explanation: 
ಜಪಾನ್ :

ಭಾರತ ಮತ್ತು ಜಪಾನ್ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿವೆ. ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಟೋಕಿಯೋದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಭಾರತಕ್ಕೆ ಬಂದಿದ್ದಾಗ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ನಡೆದಿದ್ದು ಇದೀಗ ಫಲಪ್ರದವಾಗಿದೆ.

Question 7

7. “ಎಸ್ ಆರ್ ಕೆ-25 ಇಯರ್ಸ್ ಆಫ್ ಲೈಫ್ (SRK-25 Years of Life)” ಪುಸ್ತಕದ ಲೇಖಕರು ___?

A
ಕರಣ್ ಶೆಟ್ಟಿ
B
ಜ್ಯೋತಿ ಆರ್ಯನ್
C
ಸಮರ್ ಖಾನ್
D
ಒಮನ್ ತ್ಯಾಗಿ
Question 7 Explanation: 
ಸಮರ್ ಖಾನ್:

ಎಸ್ ಆರ್ ಕೆ-25 ಇಯರ್ಸ್ ಆಫ್ ಲೈಫ್ ಪುಸ್ತಕವನ್ನು ಲೇಖಕ ಮತ್ತು ಸಿನಿಮಾ ನಿಮಾರ್ಪಕ ಸಮರ್ ಖಾನ್ ಬರೆದಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ರವರ ಸಿನಿ ಜೀವನ ಕುರಿತು ಪುಸ್ತಕವನ್ನು ಬರೆಯಲಾಗಿದೆ.

Question 8

8. ಭಾರತೀಯ ಷೇರು ವಿನಿಮಯ ಮಂಡಳಿ (SEBI)ಯ ಪೂರ್ಣಕಾಲಿಕ ಸದಸ್ಯರಾಗಿ ಯಾರು ನೇಮಕಗೊಂಡರು?

A
ನವೀನ್ ಭಟ್ಟಚಾರ್ಯ
B
ಅಶುಥೋಷ್ ಮುಖರ್ಜಿ
C
ಜಿ ಮಹಾಲಿಂಗಂ
D
ಸದಾಶಿವ ಕಾರ್ನಡ್
Question 8 Explanation: 
ಜಿ ಮಹಾಲಿಂಗಂ:

ಗುರುಮೂರ್ತಿ ಮಹಾಲಿಂಗಂ ಅವರು ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ)ಯ ಪೂರ್ಣಕಾಲಿಕ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇವರ ಅಧಿಕಾರ ಅವಧಿ 5 ವರ್ಷ ಅಥವಾ 65 ವರ್ಷ ಆಗುವವರೆಗೆ ಇರಲಿದೆ. ಈ ಮುಂಚೆ ಮಹಾಲಿಂಗಂ ರವರು ಭಾರತೀಯ ರಿಸರ್ವ್ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

Question 9

9. ಇತ್ತೀಚೆಗೆ ನಿಧನರಾದ ಜನಾರ್ಧನ ನೇಗಿ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಅಣು ಇಂಧನ
B
ಕ್ರೀಡೆ
C
ಜಿಯೊಫಿಸಿಕ್ಸ್
D
ವೈದ್ಯಕೀಯ
Question 9 Explanation: 
ಜಿಯೊಫಿಸಿಕ್ಸ್:

ಪ್ರಸಿದ್ದ ಜಿಯೊಫಿಸಿಸ್ಟ್ ಜನಾರ್ಧನ ನೇಗಿ ನಿಧನರಾದರು. ನೇಗಿ ರವರು ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶಕ ಶ್ರೇಣಿಗೆ ಸಮನಾದ ವಿಜ್ಞಾನಿಯಾಗಿ ನಿವೃತ್ತಿ ಹೊಂದಿದ್ದರು. ಭೂಕಂಪ ಅಧ್ಯಯನ, ಡೈನೊಸಾರ್ ಪ್ರಾಣಿಗಳ ಸಾಮೂಹಿಕ ಅಳಿವು ಮತ್ತು ಭಾರತ ಉಪಖಂಡದ ಭೂಪದರ ರಚನೆ ಅಧ್ಯಯನಕ್ಕೆ ಅಪಾರ ಕೊಡುಗೆ ನೀಡಿದ್ದರು.

Question 10

10. ಈ ಕೆಳಗಿನ ಯಾವ ಅವಧಿಯನ್ನು ಭಾರತದಲ್ಲಿ ಕೃಷಿ ಬೆಳೆ ವರ್ಷವೆಂದು ಕರೆಯಲಾಗುತ್ತದೆ?

A
ಜುಲೈ-ಜೂನ್
B
ಜೂನ್-ಮೇ
C
ಮೇ-ಏಪ್ರಿಲ್
D
ಏಪ್ರಿಲ್-ಮಾರ್ಚ್
Question 10 Explanation: 
ಜುಲೈ-ಜೂನ್
There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-11.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.