ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-9, 2016

Question 1
1.ದೇಶದ ಮೊದಲ ಬ್ಯಾಂಕಿಂಗ್ ರೋಬಟ್ ಯಾವ ನಗರದಲ್ಲಿ ಕಾರ್ಯಾರಂಭ ಮಾಡಿದೆ?
A
ಮುಂಬೈ
B
ಚೆನ್ನೈ
C
ಕೊಲ್ಕತ್ತ
D
ಬೆಂಗಳೂರು
Question 1 Explanation: 
ಚೆನ್ನೈ:

ದೇಶದ ಮೊದಲ ಬ್ಯಾಂಕಿಂಗ್ ರೋಬೋಟ್ ಚೆನ್ನೈ ನಲ್ಲಿ ಕಾರ್ಯಾರಂಭ ಮಾಡಿದೆ. ಈ ರೋಬೋಟ್ಗೆ ಲಕ್ಷಿ ಎಂದು ಹೆಸರಿಡಲಾಗಿದೆ. ಚೆನ್ನೈ ನ ಸಿಟಿ ಯೂನಿಯನ್ ಬ್ಯಾಂಕ್ ಕೃತಕ ಬುದ್ಧಿಮತ್ತೆ ಹೊಂದಿರುವ ರೊಬೋಟ್ ಮೂಲಕ ಗ್ರಾಹಕರಿಗೆ ಹಲವು ಮಾಹಿತಿಯನ್ನು ನೀಡುವ ಪ್ರಯೊಗಕ್ಕೆ ಮುಂದಾಗಿದೆ. ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ ತನ್ನ ಬಳಿ ಮಾಹಿತಿ ಕೇಳುವ ಗ್ರಾಹಕರಿಗೆ ಖಾತೆಯಲ್ಲಿರುವ ಮೊತ್ತ, ಬಡ್ಡಿ ದರ, ಗೃಹ ಸಾಲ, ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ಸ್ ಸೇರಿದಂತೆ ಒಟ್ಟು 125 ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.

Question 2

2. ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾದ “ಡೋನಾಲ್ಡ್ ಟ್ರಂಪ್” ರವರ ಪಕ್ಷದ ಹೆಸರೇನು?

A
ಡೆಮಾಕ್ರಟಿಕ್ ಪಕ್ಷ
B
ರಿಪಬ್ಲಿಕನ್ ಪಕ್ಷ
C
ಲಿಬರ್ಟಿಯನ್ ಪಕ್ಷ
D
ಗ್ರೀನ್ ಪಕ್ಷ
Question 2 Explanation: 
ರಿಪಬ್ಲಿಕನ್ ಪಕ್ಷ:

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಡೆಮಾಕ್ರಟಿಕ್ ಪಕ್ಷದ ಎಂಟು ವರ್ಷದ ಆಡಳಿತ ಅಂತ್ಯವಾಗಲಿದೆ. ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರು.

Question 3

3. ಅಮೆರಿಕದ ಸೆನೆಟ್ಗೆ ಆಯ್ಕೆಯಾದ ಭಾರತೀಯ ಮೂಲದವರು ಮತ್ತು ಅವರ ರಾಜ್ಯದಲ್ಲಿ ತಪ್ಪು ಹೊಂದಾಣಿಕೆಯಾಗಿರುವುದನ್ನು ಗುರುತಿಸಿ:

A
ಕಮಲಾ ಹ್ಯಾರಿಸ್ - ಕ್ಯಾಲಿಪೋರ್ನಿಯಾ
B
ರಾಜಾ ಕೃಷ್ಣಮೂರ್ತಿ - ಇಲಿನಾಯ್
C
ಪ್ರಮೀಳಾ ಜಯಪಾಲ್ - ಫ್ಲೋರಿಡಾ
D
ರೊ ಖನ್ನಾ – ಕ್ಯಾಲಿಪೋರ್ನಿಯಾ
Question 3 Explanation: 
ಪ್ರಮೀಳಾ ಜಯಪಾಲ್ – ಫ್ಲೋರಿಡಾ:

ಭಾರತ ಮೂಲದ ಪ್ರಮೀಳಾ ಜಯಪಾಲ್ ರವರು ವಾಷಿಂಗ್ಟನ್ ನಿಂದ ಅಮೆರಿಕಾದ ಸೆನೆಟ್ಗೆ ಆಯ್ಕೆಯಾಗಿದ್ದಾರೆ.

Question 4

4. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ನೂತನ ಡೈರೆಕ್ಟರ್-ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ರೋಜರ್ ಮಾರ್ವಿನ್
B
ಸ್ಟೀಫನ್ ಸ್ಮಿತ್
C
ಗೈ ರೈಡರ್
D
ಮೈಕಲ್ ರೋಜರ್
Question 4 Explanation: 
ಗೈ ರೈಡರ್ :

ಗೈ ರೈಡರ್ (Guy Ryder) ರವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ಪುನರ್ ನೇಮಕಗೊಂಡಿದ್ದಾರೆ. ರೈಡರ್ ಅವರ ಎರಡನೇ ಅವಧಿ ಅಕ್ಟೋಬರ್ 1, 2017 ರಿಂದ ಆರಂಭಗೊಳ್ಳಲಿದ್ದು, ಮುಂದಿನ ಐದು ವರ್ಷಗಳ ಕಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿರುವರು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡ್, ಜಿನೀವಾದಲ್ಲಿದೆ.

Question 5

5. 2016 ಏಷ್ಯಾ ಫೆಸಿಫಿಕ್ ಆರ್ಥಿಕ ಸಹಕಾರ (APEC) ಸಭೆಯ ಆತಿಥ್ಯವನ್ನು ವಹಿಸಲಿರುವ ರಾಷ್ಟ್ರ ಯಾವುದು?

A
ಭಾರತ
B
ಜಪಾನ್
C
ಪೆರು
D
ಚೀನಾ
Question 5 Explanation: 
ಪೆರು:

2016 ಏಷ್ಯಾ ಫೆಸಿಫಿಕ್ ಆರ್ಥಿಕ ಸಹಕಾರ ಸಭೆ ಪೆರುವಿನಲ್ಲಿ ನವೆಂಬರ್ 19-20 ರಂದು ನಡೆಯಲಿದೆ. ಗುಣಮಟ್ಟ ಬೆಳವಣಿಗೆ ಮತ್ತು ಮಾನವ ಅಭಿವೃದ್ದಿ ಇದು ಈ ಸಭೆಯ ಧ್ಯೇಯವಾಕ್ಯ.

Question 6

6. ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ “ಪ್ರಧಾನ ಮಂತ್ರಿ ಯುವ ಯೋಜನಾ” ಯಾವುದಕ್ಕೆ ಸಂಬಂಧಿಸಿದೆ?

A
ಅಲ್ಪಸಂಖ್ಯಾತರು
B
ವಾಣಿಜೋದ್ಯಮ
C
ಕ್ರೀಡೆ
D
ಬುಡಕಟ್ಟು ಜನರ ಶಿಕ್ಷಣ
Question 6 Explanation: 
ವಾಣಿಜ್ಯೋದ್ಯಮ:

ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಪ್ರಧಾನ ಮಂತ್ರಿ ಯುವ ಯೋಜನೆ ಯನ್ನು ಜಾರಿಗೊಳಿಸಿದೆ. ವಾಣಿಜ್ಯೋದ್ಯಮ ಶಿಕ್ಷಣ ಮತ್ತು ತರಭೇತಿ ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಐದು ವರ್ಷ ಜಾರಿಯಲ್ಲಿ ಇರಲಿದ್ದು, 3050 ಸಂಸ್ಥೆಗಳ ಮೂಲಕ 7 ಲಕ್ಷ ವಿದ್ಯಾರ್ಥಿಗಳಿಗೆ ವಾಣಿಜ್ಯೋದ್ಯಮ ಶಿಕ್ಷಣ ಮತ್ತು ತರಭೇತಿಯನ್ನು ನೀಡಲಾಗುವುದು.

Question 7

7. ಎಲಿಫೆಂಟಾ ಗುಹೆಗಳು ಈ ಕೆಳಗಿನ ಯಾವ ಸಂಸ್ಥಾನಕ್ಕೆ ಸಂಬಂಧಿಸಿದೆ?

A
ಚಾಲುಕ್ಯ
B
ಚೋಳ
C
ರಾಷ್ಟ್ರಕೂಟ
D
ಪಲ್ಲವ
Question 7 Explanation: 
ರಾಷ್ಟ್ರಕೂಟ
Question 8

8. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ಇಷಾತ್ ಹುಸೇನ್
B
ಅನುರಾಗ್ ಭಾರ್ಗವಿ
C
ಅರ್ಜುನ್ ಸಿಂಗ್
D
ರತನ್ ಟಾಟಾ
Question 8 Explanation: 
ಇಷಾತ್ ಹುಸೇನ್:

ಇಷಾತ್ ಹುಸೇನ್ ಅವರನ್ನು ಟಾಟಾ ಸಮೂಹದ ಅತ್ಯಂತ ಯಶಸ್ವೀ ಕಂಪೆನಿಯಾಗಿರುವ ಟಿಸಿಎಸ್ ಗೆ ಅಧ್ಯಕ್ಷರನ್ನಾಗಿ ಟಾಟಾ ಸನ್ಸ್ ನೇಮಕ ಮಾಡಿದೆ. ಹುಸೇನ್ ಅವರು ಕಂಪೆನಿಯ ಅಧ್ಯಕ್ಷರಾಗಿ, ಮುಂದಿನ ಹೊಸ ಅಧ್ಯಕ್ಷರನ್ನು ಇವರ ಸ್ಥಾನದಲ್ಲಿ ನೇಮಕಾತಿ ಮಾಡುವ ತನಕ, ಕಾರ್ಯಭಾರ ನಿರ್ವಹಿಸುವರೆಂದು ಟಿಸಿಎಸ್ ಹೇಳಿದೆ.

Question 9

9. ಜೊಹರ್ ಜಲಸಂಧಿ ಈ ರಾಷ್ಟ್ರಗಳನ್ನು ಬೇರ್ಪಡಿಸಿದೆ ______?

A
ಕೊರಿಯಾ ಮತ್ತು ಜಪಾನ್
B
ಇಂಡೋನೇಷಿಯಾ ಮತ್ತು ಭಾರತ
C
ಸಿಂಗಾಪುರ ಮತ್ತು ಮಲೇಷಿಯಾ
D
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
Question 9 Explanation: 
ಸಿಂಗಾಪುರ ಮತ್ತು ಮಲೇಷಿಯಾ
Question 10

10. ಯಾವ ನಗರದಲ್ಲಿ 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ನಡೆಯಲಿದೆ?

A
ಬರ್ಲಿನ್
B
ನ್ಯೂಯಾರ್ಕ್
C
ಸಿಡ್ನಿ
D
ನವದೆಹಲಿ
Question 10 Explanation: 
ನ್ಯೂಯಾರ್ಕ್ :

2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ನ್ಯೂಯಾರ್ಕ್ ನಲ್ಲಿ ನಡೆಯಲಿದೆ. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲೆಸನ್ ಮತ್ತು ಸೆರ್ಗಿ ಕರ್ಜಕಿನ್ ಪ್ರಶಸ್ತಿಗೆ ಸೆಣಸಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-9.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.