ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 20, 2016

Question 1

1.ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಸುದ್ದಿಯಲ್ಲಿದ್ದ “ನ್ಯೂಯಾರ್ಕ್ ಘೋಷಣೆ (New York Declaration) ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

A
ನಿರಾಶ್ರಿತರ ಮತ್ತು ವಲಸಿತರ ಹಕ್ಕು ಸರಂಕ್ಷಣೆ
B
ಪರಮಾಣು ಶಸ್ತಾಸ್ತ್ರ ಮೇಲೆ ನಿಷೇಧ ಹೇರುವುದು
C
ಜಾಗತಿಕ ಭಯೋತ್ಪಾದನೆ ತಡೆಯುವುದು
D
ವಲಸೆ ಹಕ್ಕಿಗಳ ಸಂರಕ್ಷಣೆ
Question 1 Explanation: 
ನಿರಾಶ್ರಿತರ ಮತ್ತು ವಲಸಿತರ ಹಕ್ಕು ಸರಂಕ್ಷಣೆ:

ಇತ್ತೀಚೆಗೆ ಆರಂಭಗೊಂಡ ವಿಶ್ವಸಂಸ್ಥೆಯ 71ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು “ನ್ಯೂಯಾರ್ಕ್ ಘೋಷಣೆ”ಯನ್ನು ಅಳವಡಿಸಿಕೊಂಡಿವೆ. ನ್ಯೂಯಾರ್ಕ್ ಘೋಷಣೆಯು ನಿರಾಶ್ರಿತರ ಮತ್ತು ವಲಸಿತರ ಹಕ್ಕು ಸಂರಕ್ಷಿಸುವುದು, ಜೀವ ಉಳಿಸುವುದು ಮತ್ತು ಜಾಗತಿಕ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಿಕೊಳ್ಳುವ ಉದ್ದೇಶವನ್ನು ಒಳಗೊಂಡಿದೆ. ಈ ಘೋಷಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಸದಸ್ಯ ರಾಷ್ಟ್ರಗಳು ನಿರಾಶ್ರಿತರ ಮತ್ತು ವಲಸಿತರ ಹಕ್ಕು ರಕ್ಷಣೆಗೆ ಬದ್ದವಾಗಿವೆ ಎಂದು ಬಾನ್-ಕಿ-ಮೂನ್ ತಿಳಿಸಿದ್ದಾರೆ.

Question 2

2.ಇತ್ತೀಚೆಗೆ ಬಿಡುಗಡೆಯಾದ ಭೂಕಂಪ ನಕ್ಷೆಯಲ್ಲಿ ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇ ____ರಷ್ಟು ಭಾಗ ಸಾಮಾನ್ಯ ಅಥವಾ ತೀವ್ರತರ ಭೂಕಂಪ ಸಾದ್ಯತೆಗೆ ಒಳಪಟ್ಟಿದೆ?

A
ಶೇ 35
B
ಶೇ 48
C
ಶೇ 59
D
ಶೇ 60
Question 2 Explanation: 
ಶೇ 59:

ಇತ್ತೀಚೆಗೆ ಬಿಡುಗಡೆಯಾದ ಭೂಕಂಪ ನಕ್ಷೆ ಪ್ರಕಾರ ಭಾರತದ ಒಟ್ಟು ಭೂಪ್ರದೇಶದಲ್ಲಿ ಶೇ.59ರಷ್ಟು ಭಾಗದಲ್ಲಿ ಸಾಮಾನ್ಯ ಅಥವಾ ತೀವ್ರತರ ಭೂಕಂಪ ಸಾಧ್ಯತೆ ಇದೆ ಎನ್ನಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಬಿಲ್ಡಿಂಗ್ ಮೆಟಿರಿಯಲ್ಸ್ ಮತ್ತು ಟೆಕ್ನಾಲಜಿ ಪ್ರೊಮೊಷನ್ ಕೌನ್ಸಿಲ್ ಈ ನಕ್ಷೆಯನ್ನು ಸಿದ್ದಪಡಿಸಿದೆ. ಮುಂದಿನ ಮೂರು ತಿಂಗಳಲ್ಲಿ ಈ ನಕ್ಷೆ ಮೊಬೈಲ್ನಲ್ಲೇ ಲಭ್ಯವಾಗಲಿದೆ. ದೇಶದ ಒಟ್ಟು 30.4 ಕೋಟಿ ಕುಟುಂಬಗಳ ಪೈಕಿ 28.8 ಕೋಟಿ ಕುಟುಂಬಗಳು (ಶೇ. 95) ವಿವಿಧ ಪ್ರಮಾಣದ ಭೂಕಂಪಕ್ಕೆ ತುತ್ತಾಗುವ ಸಂಭವವಿದೆ.

Question 3

3. ಹಾರ್ವರ್ಡ್ ಫೌಂಡೇಶನ್ ನ 2016 ವರ್ಷದ ಮಾನವೀಯ ಪ್ರಶಸ್ತಿ (Humanitarian Award of the Year)ಯನ್ನು ಯಾರಿಗೆ ನೀಡಲಾಗಿದೆ?

A
ಆಂಗ್ ಸನ್ ಸೂಕಿ
B
ಮಲಾಲ್ ಯೂಸಫ್ ಝೈ
C
ನರೇಂದ್ರ ಮೋದಿ
D
ವ್ಲಾಡಿಮಿರ್ ಪುಟಿನ್
Question 3 Explanation: 
ಆಂಗ್ ಸನ್ ಸೂಕಿ :

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಯನ್ಮಾರ್ ನ ಆಂಗ್ ಸನ್ ಸೂಕಿ ಅವರಿಗೆ ಹಾರ್ವಡ್ ಫೌಂಡೇಶನ್ ನೀಡುವ 2016 ವರ್ಷದ ಮಾನವೀಯ ಪ್ರಶಸ್ತಿಯನ್ನು ನೀಡಲಾಯಿತು. ಈ ಹಿಂದೆ ಈ ಪ್ರಶಸ್ತಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸಫ್ ಝೈ ಮತ್ತು ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರಿಗೆ ನೀಡಲಾಗಿದೆ. ಜೀವನ ಗುಣಮಟ್ಟವನ್ನು ಸುಧಾರಿಸಲು ಗಣನೀಯ ಸೇವೆ ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Question 4

4. ಇಸ್ಲಾಮಿಕ್ ಸಹಕಾರ ಸಂಘಟನೆ (Organisation of Islamic Cooperation)ಯ ಈಗಿನ ಅಧ್ಯಕ್ಷರು ಯಾರು?

A
ರಿಸೆಪ್ ತಯ್ಯಿಪ್ ಎರ್ಡೊಗನ್
B
ಅಮೀನ್ ಮದನಿ
C
ಸಯ್ಯದ್ ಕಿರ್ಮಾನಿ ಖಾನ್
D
ಇಯದ್ ಚಾಂದ್ ಬೀವಿ
Question 4 Explanation: 

ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಪ್ರಸ್ತುತ ಇಸ್ಲಾಮಿಕ್ ಸಹಕಾರ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಇಸ್ಲಾಮಿಕ್ ಸಹಕಾರ ಸಂಘಟನೆ ಒಂದು ಅಂತಾರಾಷ್ಟ್ರೀಯ ಸಂಘಟನೆಯಾಗಿದ್ದು, 1969 ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಘಟನೆ 57 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಮುಸ್ಲಿಂರ ಹಿತರಕ್ಷಣೆ ಕಾಯುವ ಮೂಲಕ ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯವನ್ನು ಎತ್ತಿಹಿಡಿಯುವುದು ಈ ಸಂಘಟನೆಯ ಮುಖ್ಯ ಧ್ಯೇಯ. ಸೌಧಿ ಅರೇಬಿಯಾದ ಜೆಡ್ಡಾದಲ್ಲಿ ಇದರ ಆಡಳಿತ ಕಚೇರಿ ಇದೆ. ಅರೇಬಿಕ್, ಇಂಗ್ಲೀಷ್ ಮತ್ತು ಫ್ರೆಂಚ್ ಈ ಸಂಘಟನೆಯ ಅಧಿಕೃತ ಭಾಷೆಗಳಾಗಿವೆ.

Question 5

5. ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A
ಎಂ.ಎಸ್.ಕೆ ಪ್ರಸಾದ್
B
ವೆಂಕಟೇಶ್ ಪ್ರಸಾದ್
C
ಜತಿನ್ ಪರಾಂಜಪೆ
D
ಸರಣ್ ದೀಪ್ ಸಿಂಗ್
Question 5 Explanation: 
ಎಂ.ಎಸ್.ಕೆ ಪ್ರಸಾದ್:

ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಕೆ ಪ್ರಸಾದ್ ಅವರನ್ನು ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಬಿಸಿಸಿಐ ಆಯ್ಕೆಮಾಡಿದೆ. ದಕ್ಷಿಣ ವಲಯದಿಂದ ಈ ಬಾರಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಸಂದೀಪ್ ಪಾಟೀಲ್ ಅವರಿಂದ ತೆರವಾದ ಸ್ಥಾನದಲ್ಲಿ ಪ್ರಸಾದ್ ಕಾರ್ಯನಿರ್ವಹಿಸಲಿದ್ದಾರೆ. 41 ವರ್ಷ ವಯಸ್ಸಿನ ಪ್ರಸಾದ್ ಅವರು ಆಂಧ್ರಪ್ರದೇಶ ಮೂಲದವರಾಗಿದ್ದು, ಭಾರತದ ಪರ 6 ಟೆಸ್ಟ್ ಹಾಗೂ 17 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

Question 6

6. ಏಷ್ಯನ್ ಬ್ಯುಸಿನೆಸ್ ಪಬ್ಲಿಕೇಷನ್ ನೀಡುವ ಜೀವಮಾನ ಸಾಧನೆ ಗೌರವ ಪ್ರಶಸ್ತಿಗೆ ಭಾಜನರಾದ ಭಾರತೀಯ ಮೂಲಕ ಬ್ರಿಟನ್ ಸಂಸದ ಯಾರು?

A
ಲಾರ್ಡ್ ಸ್ವರಾಜ್ ಪಾಲ್
B
ಲಾರ್ಡ್ ನರೇಂದ್ರ ಬಾಬುಭಾಯ್
C
ಲಾರ್ಡ್ ನಂದನ್ ಕುಲಕರ್ಣಿ
D
ಚೇತನ್ ಬಡಿಗೇರ್
Question 6 Explanation: 
ಲಾರ್ಡ್ ನರೇಂದ್ರ ಬಾಬುಭಾಯ್:

ಭಾರತೀಯ ಮೂಲದ ವ್ಯಕ್ತಿ ಹಾಗೂ ಬ್ರಿಟನ್ ಸಂಸದ ಲಾರ್ಡ್ ನರೇಂದ್ರ ಬಾಬುಭಾಯ್ ಅವರಿಗೆ ಏಷ್ಯನ್ ಬ್ಯುಸಿನೆಸ್ ಪಬ್ಲಿಕೇಷನ್ ನ ಜೀವಮಾನ ಸಾಧನೆ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬ್ರಿಟನ್ನಲ್ಲಿ ಅವರು ಸಲ್ಲಿಸಿದ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ಈ 'ಏಷ್ಯಾ ಅಚೀವರ್ಸ್ ಅವಾರ್ಡ್' ನೀಡಲಾಗಿದೆ. ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರದ ಸಾಧನೆಗಾಗಿ ಸೆಲ್ವ ಪಂಕಜ್, ಏಷ್ಯಾ ಮತ್ತು ಆಫ್ರಿಕಾದ ರಾಷ್ಟ್ರಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಬಿಂತಿ ಸಂಸ್ಥೆಯ ಮಂಜಿತ್ ಗಿಲ್ ಹಾಗೂ ಕ್ರೀಡಾಪಟು ರ‍್ಯಾನ್ ರಘು ಅವರಿಗೂ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Question 7

7. ಈ ಕೆಳಗಿನ ಯಾರು “ಭಾರತ್ ಎಲೆಕ್ಟ್ರಾನಿಕ್ಸ್ ಲಿಮೆಟೆಡ್ (BEL)” ನ ಮೊದಲ ಮಹಿಳಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?

A
ಆನಂದಿ ರಾಮಲಿಂಗಂ
B
ಸುರೇಖಾ ವಿಜಯಕೃಷ್ಣ
C
ನಂದಿತಾ ದಾಸ್
D
ಸುಮಿತ್ರಾ ಜೈನ್
Question 7 Explanation: 
ಆನಂದಿ ರಾಮಲಿಂಗಂ:

ನವರತ್ನ ಕೇಂದ್ರೋದ್ಯಮ'ಗಳಲ್ಲಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ (ಬಿಇಎಲ್)ಮೊದಲ ನಿರ್ದೇಶಕಿಯಾಗಿ ಆನಂದಿ ರಾಮಲಿಂಗಂ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಸಂಸ್ಥೆಯ ಜನರಲ್ ಮ್ಯಾನೇಜರ್ ಆಗಿದ್ದ ಆನಂದಿ ಅವರು, ಇನ್ನು ಮುಂದೆ ಮಾರುಕಟ್ಟೆ ವಿಭಾಗದ ನಿರ್ದೇಶಕಿ ಹುದ್ದೆ ನಿಭಾಯಿಸಲಿದ್ದಾರೆ.

Question 8

8.ಇತ್ತೀಚೆಗೆ ನಿಧನರಾದ ಗೋಪಾಲ ವಾಜಪೇಯಿ ಯಾವ ಕ್ಷೇತ್ರದಲ್ಲಿ ಹೆಚ್ಚು ಪ್ರಸಿದ್ದಿ ಹೊಂದಿದ್ದಾರೆ?

A
ಸಂಗೀತ
B
ಕಲೆ
C
ಸಾಹಿತ್ಯ
D
ಕ್ರೀಡೆ
Question 8 Explanation: 
ಸಾಹಿತ್ಯ:

ಸಾಹಿತಿ ಗೋಪಾಲ ವಾಜಪೇಯಿ ಅವರು ಅನಾರೋಗದಿಂದ ನಿಧನರಾದರು. ಸಂಯುಕ್ತ ಕರ್ನಾಟಕ, ಕಸ್ತೂರಿ, ಕರ್ಮವೀರದಲ್ಲಿ ಗೋಪಾಲ ವಾಜಪೇಯಿ ಅವರು ಕಾರ್ಯ ನಿರ್ವಹಿಸಿದ್ದರು. ಹುಬ್ಬಳ್ಳಿಯಲ್ಲಿ 'ಅಭಿನಯ ಭಾರತಿ' ಹೆಸರಿನಲ್ಲಿ ಕಲಾ ತಂಡವೊಂದನ್ನು ಅವರು ಕಟ್ಟಿದ್ದರು. ದೊಡ್ಡಪ್ಪ ಎಂಬುದು ವಾಜಪೇಯಿ ಅವರ ಖ್ಯಾತಿ ಪಡೆದ ನಾಟಕ. ನಾಗಮಂಡಲ, ಸಂತ ಶಿಶುನಾಳ ಶರೀಫ, ಸಂತೆಯಲ್ಲಿ ನಿಂತ ಕಬೀರ ಸಿನಿಮಾಗಳಿಗೆ ಇವರು ಗೀತ ರಚನೆ ಮಾಡಿದ್ದರು.

Question 9

9.ಈ ಕೆಳಗಿನ ಯಾರನ್ನು ಪ್ರಸ್ತಕ ಸಾಲಿನ “ಲಲಿತ್ ಅರ್ಪಣ್ ಸಮ್ಮಾನ”ಕ್ಕೆ ಆಯ್ಕೆಮಾಡಲಾಗಿದೆ?

A
ಲತಾ ಮಂಗೇಶ್ಕರ್
B
ಶುಭಾ ಮುದ್ಗಲ್
C
ಲಕ್ಷೀ ಗೋಪಾಲಸ್ವಾಮಿ
D
ಮೃಣನಿ ಮಲಿಕ್
Question 9 Explanation: 
ಶುಭಾ ಮುದ್ಗಲ್:

ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಶುಭಾ ಮುದ್ಗಲ್ ಅವರನ್ನು ಪ್ರಸ್ತಕ ಸಾಲಿನ “ಲಲಿತ್ ಅರ್ಪಣ್ ಸಮ್ಮಾನ”ಕ್ಕೆ ಆಯ್ಕೆಮಾಡಲಾಗಿದೆ. ಶುಭಾ ಮದ್ಗಲ್ ಅವರು ಹಿಂದೂಸ್ತಾನಿ ಸಂಗೀತದ ಖಾಯಲ್, ಥುಮ್ರಿ ಮತ್ತು ದಾದ್ರಾ ಪ್ರಕಾರಗಳ ಗಾಯನದಲ್ಲಿ ಪ್ರಸಿದ್ದಿ ಹೊಂದಿದ್ದಾರೆ. ಪ್ರಶಸ್ತಿಯನ್ನು ಇದೇ ತಿಂಗಳಲ್ಲಿ ನಡೆಯಲಿರು 15ನೇ ಲಲಿತ್ ಅರ್ಪಣ ಉತ್ಸವದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.

Question 10

10. ಭಾರತ ಸಂವಿಧಾನದಲ್ಲಿ ಈ ಕೆಳಗಿನ ಯಾವುದರ ಸ್ಥಾಪನೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ?

A
ಹಣಕಾಸು ಆಯೋಗ
B
ಚುನಾವಣಾ ಆಯೋಗ
C
ರಾಷ್ಟ್ರೀಯ ಮಾನವ ಹಕ್ಕು ಆಯೋಗ
D
ಲೋಕ ಸಭಾ ಸಚಿವಾಲಯ
Question 10 Explanation: 
ರಾಷ್ಟ್ರೀಯ ಮಾನವ ಹಕ್ಕು ಆಯೋಗ
There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-20.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.