ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವೀಜ್ 10

Question 1
1. ಬರ್ಲಿನ್ ನಲ್ಲಿ ನಡೆದ “11 ನೇ ಗೋಲ್ಡನ್ ಸಿಟಿ ಗೇಟ್ ಟೂರಿಸಂ ಮೀಡಿಯಾ” ಪ್ರಶಸ್ತಿಯನ್ನು ಗೆದ್ದ ಭಾರತ ಪ್ರವಾಸಿ ಸಚಿವಾಲಯದ ಚಿತ್ರ ಯಾವುದು?
A
Go Beyond
B
Find What you Seek
C
The Green
D
Incredible India
Question 1 Explanation: 
Find What you Seek: (ಭಾರತ ಪ್ರವಾಸಿ ಸಚಿವಾಲಯದ ಚಿತ್ರ “Find What you Seek” ಗೆ ಬರ್ಲಿನ್ ನಲ್ಲಿ ನಡೆದ 11 ನೇ ಗೋಲ್ಡನ್ ಸಿಟಿ ಗೇಟ್ ಟೂರಿಸಂ ಮೀಡಿಯಾ ಪ್ರಶಸ್ತಿ ದೊರೆತಿದೆ)
Question 2
2. ಇತ್ತೀಚೆಗೆ ರಚಿಸಲಾದ “ಫ್ರೋ.ರವೀಂದ್ರ ಎಚ್ ದೊಲಕಿಯಾ” ಸಮಿತಿಯು ಯಾವುದಕ್ಕೆ ಸಂಬಂಧಿಸಿದೆ?
A
ಯು.ಪಿ.ಎಸ್. ಸಿ ಪರೀಕ್ಷೆಯಲ್ಲಿ ಬದಲಾವಣೆ ತರಲು
B
ಏರ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಹಣೆ ವೆಚ್ಚವನ್ನು ಕಡಿತಗೊಳಿಸಲು
C
ನೇರ ನಗದು ವರ್ಗಾವಣೆ
D
ಇದ್ಯಾವುದೂ ಅಲ್ಲ
Question 2 Explanation: 
ಏರ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಹಣೆ ವೆಚ್ಚವನ್ನು ಕಡಿತಗೊಳಿಸಲು: (ಜಾಗತಿಕ ಮಟ್ಟದಲ್ಲಿರುವ ಉತ್ತಮ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಏರ್ ಇಂಡಿಯಾ ಸಂಸ್ಥೆಯ ಕಾರ್ಯನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಶಿಫಾರಸ್ಸು ಮಾಡಲು ಸರ್ಕಾರ ಐಐಎಂ ಅಹಮದಬಾದ್ ನ ಪ್ರೋಫೆಸರ್ ಆಗಿರುವ “ರವೀಂದ್ರ ಎಚ್ ದೊಲಕಿಯಾ” ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.)
Question 3
3. ದೇಶದಲ್ಲೇ ಪ್ರಥಮ ಬಾರಿಗೆ “Ground Based Augmentation System (GBAS)” ನ್ನು ಹೊಂದುವ ವಿಮಾನ ನಿಲ್ದಾಣವಾಗಿ ಇತ್ತೀಚೆಗೆ ಸುದ್ದಿಯಲ್ಲಿದ್ದ ವಿಮಾನ ನಿಲ್ದಾಣ ಯಾವುದು?
A
ಚೆನ್ನೈ ವಿಮಾನ ನಿಲ್ದಾಣ
B
ಬೆಂಗಳೂರು ವಿಮಾನ ನಿಲ್ಧಾಣ
C
ಮುಂಬೈ ವಿಮಾನ ನಿಲ್ಧಾಣ
D
ದೆಹಲಿ ವಿಮಾನ ನಿಲ್ಧಾಣ
Question 3 Explanation: 
ಚೆನ್ನೈ ವಿಮಾನ ನಿಲ್ದಾಣ: (ಹಾರಾಡುತ್ತಿರುವ ವಿಮಾನಗಳನ್ನು ಗುರುತಿಸುವುದು ಮತ್ತು ನಿಲ್ದಾಣದಲ್ಲಿ ವಿಮಾನಗಳು ಇಳಿಯುವುದಕ್ಕೆ ಮಾರ್ಗದರ್ಶನ ನೀಡಲು ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಚೆನ್ನೈ ವಿಮಾನ ನಿಲ್ದಾಣ ಹೊಂದಲಿದೆ. ಆಮೆರಿಕಾ ಮೂಲದ ಹನಿವೆಲ್ ಸ್ಮಾರ್ಟ್ ಪಾತ್ (Honeywell Smartpath) ಚೆನ್ನೈ ವಿಮಾನ ನಿಲ್ದಾಣದಲ್ಲಿ “ಜಿಬಿಎಎಸ್” ಅಳವಡಿಸಲಿದ್ದು, ಈ ಸಂಬಂಧದ ಒಪ್ಪಂದಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಸಹಿ ಹಾಕಿದೆ. ಈ ಮೂಲಕ Ground Based Augmentation System (GBAS) ನ್ನು ಅಳವಡಿಸಿಕೊಳ್ಳುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿ ಚೆನ್ನೈ ನಿಲ್ದಾಣ ಉದಯಿಸಲಿದೆ)
Question 4
4. ದೇಶದ ಪ್ರಥಮ ಮಹಿಳಾ ಅಂಚೆ ಕಚೇರಿಯನ್ನು ಯಾವ ನಗರದಲ್ಲಿ ಆರಂಭಿಸಲಾಗಿದೆ?
A
ದೆಹಲಿ
B
ಚೆನ್ನೈ
C
ಕೊಲ್ಕತ್ತಾ
D
ನಾಗಪುರ
Question 4 Explanation: 
ದೆಹಲಿ:(ಅಂತರ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ದೆಹಲಿಯಲ್ಲಿ ದೇಶದ ಮೊದಲ ಮಹಿಳಾ ಅಂಚೆ ಕಚೇರಿಯ ಶಾಖೆಯನ್ನು ಆರಂಭಿಸಲಾಗಿದೆ. ಈ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿಗಳು ಮಹಿಳೆಯರಾಗಿದ್ದಾರೆ)
Question 5
5. ಈ ಕೆಳಗಿನ ಯಾವ ಸಂಸ್ಥೆಯು ಮಹಿಳೆಯ ಪರವಾಗಿ “ಜಾಗೋರೇ” ಎಂಬ ಸಾಮಾಜಿಕ ಚಳುವವಳಿಯನ್ನು ಆಯೋಜಿಸಿತ್ತು?
A
ಬಜಾಜ್ ಮೋಟಾರ್ಸ್
B
ಹಿಂದೂಸ್ತಾನ್ ಲೀವರ್
C
ಹಿಮಾಲಯ
D
ಟಾಟಾ ಟೀ
Question 5 Explanation: 
ಟಾಟಾ ಟೀ: (ಮಹಿಳೆಯರ ಪರವಾಗಿ ಟಾಟಾ ಟೀ ಸಂಸ್ಥೆಯು “ಜಾಗೋ ರೇ” ಎಂಬ ಸಾಮಾಜಿಕ ಚಳುವಳಿಯನ್ನು ಆರಂಭಿಸಲಿದೆ. ಈ ಅಭಿಯಾನದ ಅಂಗವಾಗಿ ಆರ್.ಬಾಲ್ಕಿ ನಿರ್ದೇಶನದ ಕಿರು ಚಿತ್ರವೊಂದರಲ್ಲಿ ಬಾಲಿವುಡ್ ಕಿಂಗ್ ಖಾನ್ “ಶಾರೂಖ್ ಖಾನ್” ರವರು ನಟಿಸಿದ್ದಾರೆ)
Question 6
6. “ದಿ ಟೆಸ್ಟ್ ಆಫ್ ಮೈ ಲೈಫ್” ಇದು ಯಾರ ಆತ್ಮಕಥೆ?
A
ರಾಹುಲ್ ದ್ರಾವಿಡ್
B
ಅನಿಲ್ ಕುಂಬ್ಳೆ
C
ಯುವರಾಜ್ ಸಿಂಗ್
D
ಹರಭಜನ್ ಸಿಂಗ್
Question 6 Explanation: 
ಯುವರಾಜ್ ಸಿಂಗ್: (ಭಾರತ ತಂಡದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ರವರು ಕ್ಯಾನ್ಸರ್ ಗೆದ್ದು ಬಂದ ಕುರಿತು ಬರೆದಿರುವ ಪುಸ್ತಕ “ದಿ ಟೆಸ್ಟ್ ಆಫ್ ಮೈ ಲೈಫ್” ಮೊದಲ 20 ಪ್ರತಿಗಳನ್ನು ಆನ್ ಲೈನ್ ಮೂಲಕ ಹರಾಜು ಮಾಡಲಾಯಿತು. ಹರಾಜಿನ ಆರಂಭಿಕ ಮೊತ್ತ 5,000 ಗಳಿದ್ದು ಇದರಿಂದ ಬರುವ ಮೊತ್ತವನ್ನು “ಯುವಿಕ್ಯಾನ್ ಫೌಂಡೇಷನ್” ಗೆ ನೀಡಲಾಗುತ್ತದೆ.)
Question 7
7. ಇತ್ತೀಚೆಗೆ ನಿಧನರಾದ “ವಿರೇನ್ ಜೆ ಶಾ” ರವರು ಯಾವ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದರು?
A
ಪಶ್ಚಿಮ ಬಂಗಾಳ
B
ಕರ್ನಾಟಕ
C
ಕೇರಳ
D
ಮಹಾರಾಷ್ಟ್ರ
Question 7 Explanation: 
ಪಶ್ಚಿಮ ಬಂಗಾಳ:(ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಉದ್ಯಮಿ ವಿರೇನ್ ಜೆ ಶಾ ರವರು ನಿಧನರಾದರು. 86 ವರ್ಷ ವಯಸ್ಸಿನ ಶಾ ರವರು ಜೋರ್ಡನ್ ಪ್ರವಾಸದಲ್ಲಿದ್ದ ವೇಳೆ ಸಂಭವಿಸಿದ ಹಠಾತ್ ಹೃದಯಾಘಾತದಿಂದ ಮರಣಹೊಂದಿದ್ದಾರೆ. ಕೊಲ್ಕತ್ತಾದಲ್ಲಿ ಮೇ 12, 1926 ರಲ್ಲಿ ಜನಿಸಿದ ಶಾ ರವರು ಬಾಂಬೆ ವಿವಿಯಿಂದ ಪದವಿ ಪಡೆದಿದ್ದರು. ಗುಜರಾತ್ ನ ಜುನಗಢ್ ನಿಂದ ಶಾ ರವರು 1967 ರಲ್ಲಿ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. 1975 ರಿಂದ 1981 ರ ವರೆಗೆ ಮತ್ತು 1990 ರಿಂದ 1996 ರ ವರೆಗೆ ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿ ಅವರು ನೇಮಕಗೊಂಡಿದ್ದರು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ 1999 ರಿಂದ 2004 ರ ತನಕ ಸೇವೆ ಸಲ್ಲಿಸಿದ ಶಾ ರವರು ಮುಕುಲ್ ಲಿಮಿಟೆಡ್ ಸ್ಟೀಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸಹ ಕಾರ್ಯನಿರ್ವಹಿಸಿದ್ದರು)
Question 8
8. ಈ ಕೆಳಗಿನವರಲ್ಲಿ ಯಾರು ಕೀನ್ಯಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ರೈಲ ಒಡಿಂಗಾ
B
ಉಹುರು ಕೆನ್ಯಾಟ್ಯಾ
C
ಮರ್ಲಿನ್ ಗ್ಯಾಬ್ಲೊ
D
ನಿಕೊಲಾಸ್ ಮಡುರೋ
Question 8 Explanation: 
ಉಹುರು ಕೆನ್ಯಾಟ್ಯಾ:(ಕೀನ್ಯಾದ ರಾಷ್ಟ್ರಪತಿ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮಾನವೀಯತೆಯ ವಿರುದ್ಧ ಆಪಾದಿತ ಅಪರಾಧಗಳನ್ನು ಎದುರಿಸುತ್ತಿರುವ ಕೀನ್ಯಾದ ಉಪಪ್ರಧಾನಿ ಉಹುರು ಕೆನ್ಯಾಟ್ಯಾ ರವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಕೀನ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ)
Question 9
9. ಈ ಕೆಳಗಿನ ಯಾವ ಬ್ಯಾಂಕ್ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ವಾರ್ಷಿಕ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಪ್ರಕಟಿಸಿದೆ?
A
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
C
ಕೆನರಾ ಬ್ಯಾಂಕ್
D
ಸಿಂಡಿಕೇಟ್ ಬ್ಯಾಂಕ್
Question 9 Explanation: 
ಕೆನರಾ ಬ್ಯಾಂಕ್:(ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವ ಸಲುವಾಗಿ ವಾರ್ಷಿಕ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಪ್ರಕಟಿಸಿದೆ. ಅಂತರ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಆರ್.ಕೆ.ದುಬೆ ರವರು ಈ ನಿರ್ಣಯವನ್ನು ತಿಳಿಸಿದ್ದಾರೆ. ಕೆನರಾ ಬ್ಯಾಂಕ್ ನಿಂದ ಸಾಲ ಪಡೆದ ಯಶಸ್ವಿ ಮಹಿಳಾ ಉದ್ಯಮಿಗಳಿಗೆ ರೂ.25000, ರೂ.50000 ಮತ್ತು ರೂ 100000 ಮೊತ್ತದ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯನ್ನು ಹೊರತುಪಡಿಸಿ ಮಹಿಳಾ ಸಿಬ್ಬಂದಿಯನ್ನೇ ಹೊಂದಿರುವ 10 ಶಾಖೆಗಳನ್ನು ಸಹ ತೆರೆಯಲು ಬ್ಯಾಂಕ್ ನಿರ್ಧರಿಸಿದೆ)
Question 10
10. ವಂಚನೆ ಆರೋಪದ ಮೇಲೆ “ವಿಶ್ವ ಬ್ಯಾಂಕ್” ನಿಂದ ಆರು ತಿಂಗಳ ನಿಷೇಧಕೊಳಗಾದ ಭಾರತದ ಕಂಪನಿ ಯಾವುದು?
A
GMR
B
L & T
C
TMR Coach
D
Bharati cement
Question 10 Explanation: 
L & T: (ಲಾರ್ಸನ್ ಅಂಡ್ ಟರ್ಬೊ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಮಾಡಿರುವ ವಂಚನೆಯಿಂದ ವಿಶ್ವ ಬ್ಯಾಂಕ್ ಈ ಕಂಪನಿಯ ಮೇಲೆ ನಿಷೇಧ ಹೇರಿದೆ. ನಿಷೇಧದ ಅನ್ವಯ ವಿಶ್ವ ಬ್ಯಾಂಕ್ ಜೊತೆಗಿನ ಕಂಪನಿಯ ಎಲ್ಲಾ ವಹಿವಾಟುಗಳು ಸ್ಥಗಿತಗೊಳ್ಳಲಿದೆ. ಅಲ್ಲದೇ ವಿವಿಧ ಯೋಜನೆಗಳಿಗೆ ವಿಶ್ವ ಬ್ಯಾಂಕ್ ನೀಡಿರುವ ಸಾಲವನ್ನು ಆರು ತಿಂಗಳ ಕಾಲ ತಡೆಹಿಡಿಯಲಿದೆ. ಈ ನಿಷೇಧವು ಆರು ತಿಂಗಳ ಕಾಲಾವಧಿ ತನಕ ಅಂದರೆ ಸೆಪ್ಟೆಂಬರ್ 6, 2013 ರ ತನಕ ಜಾರಿಯಲ್ಲಿ ಇರಲಿದೆ)
There are 10 questions to complete.