ಸಾಮಾನ್ಯ ಜ್ಞಾನ ಕ್ವಿಜ್ 7: ಸಾಮಾನ್ಯ ಜ್ಞಾನ ಕ್ವಿಜ್ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ಕ್ವೀಜ್ 7

Question 1
1. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವೂ (Corbett National Park) ಯಾವ ರಾಜ್ಯದಲ್ಲಿದೆ?
A
ಬಿಹಾರ
B
ಉತ್ತರಖಂಡ್
C
ಗುಜರಾತ್
D
ಹಿಮಾಚಲ ಪ್ರದೇಶ
Question 1 Explanation: 
ಉತ್ತರಖಂಡ್: (ಕಾರ್ಬೆಟ್ ರಾಷ್ಟ್ರೀಯ ಉದ್ಯಾನವು ಉತ್ತರಖಂಡದಲ್ಲಿದೆ. ಪೋಲಿಸ್ ಅಧಿಕಾರಿಯೊಬ್ಬರು ಅರಣ್ಯ ಕಾವಲುಗಾರನನ್ನು ಥಳಿಸಿದ ಕಾರಣ ಇತ್ತೀಚೆಗೆ ಈ ಉದ್ಯಾನವನದ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದರು.)
Question 2
2. ಈ ಕೆಳಗಿನ ಯಾರು ಇತ್ತೀಚೆಗೆ ಆಮೆರಿಕಾದ ನೂತನ ರಕ್ಷಣಾ ಸಚಿವರಾಗಿ ನೇಮಕಗೊಂಡರು?
A
ಚಕ್ ಹೆಗೆಲ್
B
ಜಾನ್ ಕೆರ್ರಿ
C
ಜಾನ್ ನಿಕೋಲಸ್
D
ಮೈಕಲ್ ಜೇಕಬ್
Question 2 Explanation: 
ಚಕ್ ಹೆಗೆಲ್: (ಮಾಜಿ ರಿಪಬ್ಲಿಕ್ ಸೆನೆಟರ್ ಚಕ್ ಹೆಗೆಲ್ ರವರನ್ನು ಆಮೆರಿಕಾದ ನೂತನ ರಕ್ಷಣಾ ಸಚಿವರನ್ನಾಗಿ ಬರಾಕ್ ಒಬಾಮರವರು ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಭಾರತ ಆಫ್ಘಾನಿಸ್ತಾನವನ್ನು ಬಳಸಿಕೊಂಡು ಕುಮ್ಮಕ್ಕು ನೀಡುತ್ತಿದೆ ಎಂಬ ವಿವಾದತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದರು. 66 ರ ವರ್ಷದ ಚಕ್ ಹಗೆಲ್ ರವರು ಲಿಯೋನ್ ಪನ್ನೆಟಾ ರವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.)
Question 3
3. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡುವ “ಲಾಡ್ಲಿ ಲಕ್ಷಿ” ಯೋಜನೆ ಯಾವ ರಾಜ್ಯದ ಯೋಜನೆಯಾಗಿದೆ?
A
ಕೇರಳ
B
ಮಹಾರಾಷ್ಟ್ರ
C
ಗೋವಾ
D
ತಮಿಳುನಾಡು
Question 3 Explanation: 
ಗೋವಾ: (ಲಾಡ್ಲಿ ಲಕ್ಷಿ ಯೋಜನೆಯು ಗೋವಾ ರಾಜ್ಯದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಹೆಣ್ಣು ಶಿಶುವಿನ ಹೆಸರಿನಲ್ಲಿ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ರೂ.1 ಲಕ್ಷ ಠೇವಣಿಯನ್ನು ಇಡಲಾಗುವುದು. ಈ ಯೋಜನೆಯು ವರದಕ್ಷಿಣೆ ಪದ್ದತಿಯನ್ನು ಪ್ರೇರೆಪಿಸುವಂತಿದೆ ಆದ್ದರಿಂದ ಇದನ್ನು ಪುನರ್ ವಿಮರ್ಶಿಸಬೇಕು ಎಂಬ ಕೂಗು ಕೇಳಿಬಂದಿದೆ.)
Question 4
4. ಇತ್ತೀಚೆಗೆ “ಕಂಗಾಲ್ ಮಲ್ಸತ್” ಎಂಬ ಚಿತ್ರದ ಪ್ರದರ್ಶನವನ್ನು ಯಾವ ರಾಜ್ಯದಲ್ಲಿ ತಡೆಹಿಡಿಯಲಾಗಿತ್ತು?
A
ಓಡಿಶಾ
B
ಆಂಧ್ರ ಪ್ರದೇಶ
C
ಪಶ್ಚಿಮ ಬಂಗಾಳ
D
ತಮಿಳು ನಾಡು
Question 4 Explanation: 
ಪಶ್ಚಿಮ ಬಂಗಾಳ: (ಖ್ಯಾತ ಲೇಖಕಿ ಮಹಾಶ್ವೇತದೇವಿಯವರ ಮಗನಾದ ನಬುರಣ್ ಭಟ್ಟಚಾರ್ಯ ರವರ ಪುಸ್ತಕ ಆಧಾರಿತ “ಕಂಗಾಲ್ ಮಲ್ಸತ್” ಚಿತ್ರದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಾಟಾ ಕಾರು ಕಂಪನಿಯನ್ನು ಹೊರಹಾಕಿದ ಚಳುವಳಿ ಕ್ರಮವನ್ನು ಹಾಸ್ಯಸ್ಪದವಾಗಿ ಚಿತ್ರಿಸಲಾಗಿದೆ ಎಂಬ ಅಂಶದ ಮೇಲೆ ಪಶ್ಚಿಮ ಬಂಗಾಳದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿತ್ತು.)
Question 5
6. ಯೂರೋಪ್ ಖಂಡದ ಕೆಲವು ದೇಶಗಳಲ್ಲಿ ಇತ್ತೀಚೆಗೆ ಯಾವ ಪ್ರಾಣಿಯ ಮಾಂಸವನ್ನು ಆಹಾರ ಕಲಬೆರಕೆಗೆ ಬಳಸಿರುವುದಾಗಿ ಸುದ್ದಿಯಲ್ಲಿತ್ತು?
A
ಕುದುರೆ ಮಾಂಸ
B
ನಾಯಿ ಮಾಂಸ
C
ಜಿಂಕೆ ಮಾಂಸ
D
ದನದ ಮಾಂಸ
Question 5 Explanation: 
ಕುದುರೆ ಮಾಂಸ
Question 6
7. ಮುಂಬೈನಲ್ಲಿ ನಡೆದ “ಹೀರೋ ಮಹಿಳಾ ಗಾಲ್ಪ್ ಟೂರ್-2013” ನ್ನು ಗೆದ್ದವರು ಯಾರು?
A
ಶರ್ಮಿಳಾ ನಿಕೋಲೆಟ್:
B
ನೇಹಾ ತ್ರಿಪಾಠಿ
C
ಶರ್ಮಿಳಾ ನಿಕೋಲೆಟ್
D
ಸ್ಮೃತಿ ಮೆಹ್ರಾ
Question 6 Explanation: 
ಶರ್ಮಿಳಾ ನಿಕೋಲೆಟ್:(ಶರ್ಮಿಳಾ ನಿಕೋಲೆಟ್: ಬೆಂಗಳೂರಿನ ಆಟಗಾರ್ತಿ ಶರ್ಮಿಳಾ ನಿಕೋಲೆಟ್ ರವರು ಮುಂಬೈನಲ್ಲಿ ನಡೆದ “ಹೀರೋ ಮಹಿಳಾ ಗಾಲ್ಪ್ ಟೂರ್-2013” ಪ್ರಶಸ್ತಿಯನ್ನು ಗೆದ್ದರು. ಶರ್ಮಿಳಾ ರವರಿಗೆ ಅತ್ಯಂತ ಕಠಿಣ ಸ್ಪರ್ಧೆ ನೀಡಿದ ಸ್ನೇಹಾ ತ್ರಿಪಾಠಿರವರು ಎರಡನೇ ಸ್ಥಾನ ಪಡೆದುಕೊಂಡರು.)
Question 7
8. “ವಾಕಿಂಗ್ ವಿಥ್ ಲಯನ್ಸ್: ಟೇಲ್ ಫ್ರಮ್ ಎ ಡಿಪ್ಲೋಮೆಟಿಕ್ ಫಾಸ್ಟ್” ಪುಸ್ತಕದ ಲೇಖಕರು ಯಾರು?
A
ಕುಶ್ವಂತ್ ಸಿಂಗ್
B
ಯಶ್ವಂತ್ ಸಿಂಗ್
C
ನಟವರ್ ಸಿಂಗ್
D
ಹರಭಜನ್ ಸಿಂಗ್
Question 7 Explanation: 
ನಟವರ್ ಸಿಂಗ್:(ನಟವರ್ ಸಿಂಗ್ ಬರೆದಿರುವ ಈ ಪುಸ್ತಕವನ್ನು ಭಾರತದ ಉಪರಾಷ್ಟ್ರಪತಿಗಳಾದ ಹಮೀದ್ ಅನ್ಸಾರಿಯವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ನಟವರ್ ಸಿಂಗ್ ರವರು ಭಾರತದ ಮಾಜಿ ವಿದೇಶಾಂಗ ಸಚಿವರು.)
Question 8
9. ಭಾರತದ ಬಜೆಟ್ ಮಂಡನೆ ಇತಿಹಾಸದಲ್ಲಿ ಈ ಕೆಳಗಿನ ಯಾರು ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ?
A
ಪ್ರಣಬ್ ಮುಖರ್ಜಿ
B
ಮೊರಾರ್ಜಿ ದೇಸಾಯಿ
C
ಚಿದಂಬರಂ
D
ಕೃಷ್ಣಮಾಚಾರ್
Question 8 Explanation: 
ಮೊರಾರ್ಜಿ ದೇಸಾಯಿ:(ಮೊರಾರ್ಜಿ ದೇಸಾಯಿಯವರು 10 ಬಾರಿ ಬಜೆಟ್ ಮಂಡಿಸುವ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ಹಿರಿಮೆಯನ್ನು ಹೊಂದಿದ್ದಾರೆ. 2013-14 ನೇ ಸಾಲಿನ ಬಜೆಟ್ ಚಿದಂಬರಂ ರವರ ಪಾಲಿಗೆ 8 ನೇ ವಾರ್ಷಿಕ ಬಜೆಟ್. ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿಯವರ ನಂತರ ಅತಿ ಹೆಚ್ಚು ಬಜೆಟ್ ಮಂಡಿಸಿದ ಎರಡನೆಯವರು ಚಿದಂಬರಂ. ರಾಷ್ಟ್ರಪತಿಗಳಾದ ಪ್ರಣಭ್ ಮುಖರ್ಜಿ, ವೈ.ಬಿ.ಚವಾಣ್, ಯಶ್ವಂತ್ ಸಿನ್ಹಾ ಮತ್ತು ಸಿ.ಡಿ.ದೇಶಮುಖ್ ರವರು 7 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.)
Question 9
10. ಇತ್ತೀಚೆಗೆ ಈ ಕೆಳಗಿನ ಯಾವ ನಗರ ವಿಶ್ವದ “ ನವ ನವೀನ ನಗರ (Most Innovative City)” ಎಂದೆನಿಸಿದೆ?
A
ನ್ಯೂಯಾರ್ಕ್
B
ಟೆಲ್ ಅವೀವ್
C
ಮೆಡೆಲಿನ್
D
ಸಿಡ್ನಿ
Question 9 Explanation: 
ಮೆಡೆಲಿನ್: (ಕೊಲಂಬಿಯಾದ ಮೆಡಿಲಿನ್ ನಗರ ವಿಶ್ವದ “ನವೀನ ಪರಿಕಲ್ಪನೆಗಳ ನಗರ” ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಕೊಲಂಬಿಯಾ ದೇಶದ ಎರಡನೇ ಅತಿ ದೊಡ್ಡ ನಗರವಾದ ಮೆಡಲಿನ್ ನಲ್ಲಿ ಸಾರಿಗೆ ವ್ಯವಸ್ಥೆ, ಪರಿಸರ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳು ಅಚ್ಚುಕಟ್ಟಾಗಿರುವ ಕಾರಣ ಇದನ್ನು “ನವೀನ ಪರಿಕಲ್ಪನೆಗಳ ನಗರ” ಎಂದು ಪರಿಗಣಿಸಲಾಗಿದೆ. ನವೀನ ಪರಿಕಲ್ಪನೆಯ ವಾರ್ಷಿಕ ಸ್ಪರ್ಧೆಯಲ್ಲಿ ಈ ನಗರವೂ ನ್ಯೂಯಾರ್ಕ್ ಮತ್ತು ಟೆಲ್ ಅವೀವಾ ನಗರಗಳನ್ನು ಹಿಂದಿಕ್ಕಿದೆ.)
Question 10
ಇವುಗಳನ್ನು ಹೊಂದಿಸಿ

ಅ. ನೈನಾ ಲಾಲ್ ಕಿದ್ವಾಯಿ        1. HSBC

ಆ. ಚಂದಾ ಕೊಚ್ಚರ್               2. ICICI

ಇ. ನೀಲಂ ಧವನ್                 3. HP

ಈ. ಶಿಖಾ ಶರ್ಮಾ                 4. Axis Bank

A
ಅ-1, ಆ-2, ಇ-3, ಈ-4
B
ಅ-3, ಆ-2, ಇ-3, ಈ-4
C
ಅ-1, ಆ-3, ಇ-4, ಈ-2
D
ಅ-2, ಆ-4, ಇ-3, ಈ-1
Question 10 Explanation: 
ಅ-1, ಆ-2, ಇ-3, ಈ-4: (ನೈನಾ ಲಾಲ್ ಕಿದ್ವಾಯಿ ರವರು 2006 ರಿಂದ HSBC ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ ಚಂದಾ ಕೊಚ್ಚರ್ ರವರು 2009 ರಿಂದ ICICI ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀಲಂ ಧವನ್ ರವರು ಹೆಲ್ವೆಟ್ ಪ್ಯಾಕರ್ಡ್ (HP) ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್. ಇನ್ನೂ ಶಿಖಾ ಶರ್ಮಾ ರವರು ಆಕ್ಸಿಸ್ ಬ್ಯಾಂಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ)
There are 10 questions to complete.