ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,29,30,2017

Question 1

1. ಯುಪಿ ಯ ಪ್ರವಾಸೋದ್ಯಮ ಯೋಜನೆಗೆ ವಿಶ್ವ ಬ್ಯಾಂಕ್ (WB) ನೊಂದಿಗೆ ಎಷ್ಟು ಮೊತ್ತದ ಸಾಲ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ?

A
$33 ಮಿಲಿಯನ್
B
$40 ಮಿಲಿಯನ್
C
$75 ಮಿಲಿಯನ್
D
$54 ಮಿಲಿಯನ್
Question 1 Explanation: 

2017 ರ ಡಿಸೆಂಬರ್ 28 ರಂದು ಯುಪಿ ಯ ಪ್ರವಾಸೋದ್ಯಮ ಯೋಜನೆಗೆ ವಿಶ್ವ ಬ್ಯಾಂಕ್ (WB) ನೊಂದಿಗೆ $40 ಮಿಲಿಯನ್ ಮೊತ್ತದ ಸಾಲ ಒಪ್ಪಂದಕ್ಕೆ ಭಾರತವು ಸಹಿ ಹಾಕಿದೆ. ಉತ್ತರ ಪ್ರದೇಶದ ಸ್ಥಳಿಯ ಸಮುದಾಯಗಳಿಗೆ ಪ್ರವಾಸೋದ್ಯಮ ಸಂಬಂಧಿತ ಲಾಭಗಳನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

Question 2

2. ರೈತರ ಕೃಷಿ ಉತ್ವನ್ನಗಳನ್ನು ಖರೀದಿಸಲು ಯಾವ ಭಾರತೀಯ ಬ್ಯಾಕ್ ಇತ್ತೀಚೆಗೆ POORTI ಅಗ್ರಿ ಸರ್ವಿಸಸ್ ಪ್ರೈ ಲಿಮಿಟೆಡ್ನೊಂದಿಗೆ (MoU ಗೆ) ಸಹಿ ಹಾಕಿದೆ?

A
ಪಂಜಾಬ್ ನ್ಯಾಷನಲ್ ಬ್ಯಾಂಕ್
B
ದೇನಾ ಬ್ಯಾಂಕ್
C
ಬ್ಯಾಂಕ್ ಆಫ್ ಇಂಡಿಯಾ
D
ಬ್ಯಾಂಕ್ ಆಫ್ ಬರೋಡಾ
Question 2 Explanation: 

ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಆಫ್ ಬರೋಡಾ ಇತ್ತೀಚೆಗೆ POORTI ಅಗ್ರಿ ಸರ್ವಿಸಸ್ ಪ್ರೈ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಸಗೊಬ್ಬರ, ಬೀಜ, ಕೀಟನಾಶಕ ಮುಂತಾದ ಕೃಷಿ ಉತ್ವನ್ನಗಳನ್ನು ಖರೀದಿಸಲು ರೈತರಿಗೆ ಅವಕಾಶ ಕಲ್ಪಿಸುವುದು.

Question 3

3. ಈ ಕೆಳಗಿನವುಗಳಲ್ಲಿ ಯಾವ ಅಪ್ಲಿಕೇಶನ್ ಅನ್ನು ಭಾರತದ ಮೊದಲ ಬಿಟ್ಕೋಯಿನ್ ವ್ಯಾಪಾರ ಅಪ್ಲಿಕೇಶನ್ ಆಗಿ ಪ್ರಾರಂಭಿಸಲಾಯಿತು?

A
Pluto Exchange
B
Uranus Exchange
C
Bitcoin Exchange
D
Venus Exchange
Question 3 Explanation: 

Pluto Exchange ವಾಸ್ತವಿಕ ಕರೆನ್ಸಿಗಳಲ್ಲಿ ವ್ಯವಹಾರ ನಡೆಸಲು ಭಾರತದ ಮೊದಲ ಬಿಟ್ಕೊಯಿನ್ ವ್ಯಾಪಾರ ಅಪ್ಲಿಕೇಶನ್ ಅನ್ನು Pluto Exchange ಪ್ರಾರಂಭಿಸಿದೆ. Pluto Exchange ಮೋಬೈಲ್ ಅಪ್ಲಿಕೇಶನ್, ಪೇಮೆಂಟ್ ಪ್ರೊಸೆಸರ್ಗಳ, ಹಣಕಾಸು ಗೇಟ್ವೇಗಳ ಮತ್ತು ಬ್ಯಾಂಕಗಳ ನಡುವಿನ ಹೊಂದಾಣಿಕೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

Question 4

4. ಇಂಡಿಯನ್ ಹಿಸ್ಟರಿ ಕಾಂಗ್ರೆಸ್ (IHC) ನ 78 ನೇ ಅಧಿವೇಶನವನ್ನು ಯಾವ ನಗರವು ಆಯೋಜಿಸಿದೆ?

A
ಕೊಲ್ಕತ್ತಾ
B
ನವ ದೆಹಲಿ
C
ಲಕ್ನೋ
D
ಭೋಪಾಲ್
Question 4 Explanation: 

ಕೊಲ್ಕತ್ತಾ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ (IHC) ನ 78 ನೇ ಅಧಿವೇಶನವು ಪಶ್ಚಿಮ ಬಂಗಾಳದ ಕೊಲ್ಕತ್ತಾದ ಜಾದವಪುರ್ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಡಿಸೆಂಬರ್ 28, 2017 ರಂದು ಪ್ರಾರಂಭವಾಗಿದೆ. ಈ 3 ದಿನಗಳ IHC ನ 78 ನೇ ಅಧಿವೇಶನವು ಆರು ವಿಭಾಗಗಳನ್ನು ಹೊಂದಿರುತ್ತದೆ- ಪ್ರಾಚೀನ ಭಾರತ, ಮಧ್ಯಯುಗದ ಭಾರತ, ಆಧುನಿಕ ಭಾರತ, ಬೇರೆ ದೇಶಗಳಿಗಿಂತ ಭಿನ್ನ ದೇಶ ಭಾರತ, ಪುರಾತತ್ವ ಶಾಸ್ತ್ರ ಮತ್ತು ಸಮಕಾಲೀನ ಭಾರತ.

Question 5

5. ಯಾರ ಅಧ್ಯಕ್ಷತೆಯಲ್ಲಿ “ಕ್ರಾಪ್ ರೆಸಿಡ್ಯೂ ಮ್ಯಾನೇಜ್ಮೆಂಟ್ ಮೂಲಕ ರೈತರಿಗೆ ಕ್ಲೈಮೇಟ್ ರಿಸೈಲೆನ್ಸ್ ಬಿಲ್ಡಿಂಗ್” ಎಂಬ ಪ್ರಾದೇಶಿಕ ಯೋಜನೆಯನ್ನು ಪ್ರಾರಂಭಿಸಲಾಗಿದೆ?

A
ಹರ್ಷ ವರ್ಧನ್
B
ಜಗತ್ ಪ್ರಕಾಶನ್ ನಡ್ಡ
C
ಡಿ ಸದಾನಂದ ಗೌಡ
D
ಸಿ ಕೆ ಮಿಶ್ರಾ
Question 5 Explanation: 

ಸಿ ಕೆ ಮಿಶ್ರಾ. ಡಿಸೆಂಬರ್ 28, 2017 ರಂದು ಸಿ ಕೆ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ “ಕ್ರಾಪ್ ರೆಸಿಡ್ಯೂ ಮ್ಯಾನೇಜ್ಮೆಂಟ್ ಮೂಲಕ ರೈತರಿಗೆ ಕ್ಲೈಮೇಟ್ ರಿಸೈಲೆನ್ಸ್ ಬಿಲ್ಡಿಂಗ್” ಎಂಬ ಪ್ರಾದೇಶಿಕ ಯೋಜನೆಯನ್ನು ಪ್ರಾರಂಭಿಸಲಾಗಿದೆ

Question 6

6. 25 ನೇ ಆವೃತ್ತಿಯ ನ್ಯಾಷನಲ್ ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್ಸ್ (NCSC- 2017) ಅನ್ನು ಯಾವ ನಗರವು ಆಯೋಜಿಸುತ್ತದೆ?

A
ಅಹಮದಾಬಾದ್
B
ನವ ದೆಹಲಿ
C
ಕಾನ್ಪುರ್
D
ಉಜ್ಜೈನ್
Question 6 Explanation: 

ಅಹಮದಾಬಾದ್ 25 ನೇ ಆವೃತ್ತಿಯ ನ್ಯಾಷನಲ್ ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್ಸ್ (NCSC- 2017) ಅನ್ನು ಡಿಸೆಂಬರ್ 27, 2017 ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಆಯೋಜಿಸಲಾಯಿತು. ಐದು ದಿನಗಳ ನ್ಯಾಷನಲ್ ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್ಸ್ (NCSC- 2017) ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗಿದೆ.

Question 7

7. ರಿಯಾದ್ನಲ್ಲಿ 2017ರ ವರ್ಡ್ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಅನ್ನು ಯಾರು ಗೆದ್ದಿದ್ದಾರೆ?

A
ಮ್ಯಾಗ್ನಸ್ ಕಾರ್ಲೆನ್
B
ಪೀಟರ್ ಲೆಕೊ
C
ವಿಶ್ವನಾಥನ್ ಆನಂದ್
D
ವ್ಲಾದಿಮಿರ್ ಫೆಡೊಸೇವ್
Question 7 Explanation: 

ವಿಶ್ವನಾಥನ್ ಆನಂದ್ ಭಾರತದ ವಿಶ್ವನಾಥನ್ ಆನಂದ್ ಅವರು ಡಿಸೆಂಬರ್ 28, 2017 ರಂದು ರಿಯಾದ್ನಲ್ಲಿ ನಡೆದ 2017ರ ವರ್ಡ್ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ ಅನ್ನು ಗೆದ್ದಿದ್ದಾರೆ. ಅವರು ರಷ್ಯಾದ ವ್ಲಾಡಿಮಿರ್ ಫಡ್ಸಯೋವ್ ಅವರನ್ನು 2-0 ಅಂತರದಿಂದ ಸೋಲಿಸಿದರು.

Question 8

8. ರಾಷ್ಟ್ರೀಯ ಹಸಿರು ನ್ಯಾಯಮೂರ್ತಿ (NGT) ಅಧ್ಯಕ್ಷರಾಗಿ ಯಾರು ನೇಮಕಗೊಂಡರು?

A
ಮದನ್ ಬಿ ಲೋಕೂರ್
B
ಬಿ ಎಂ ರೈಕರ್
C
ಯು ಡಿ ಸಾಲ್ವಿ
D
ಮೋಹಿತ್ ಸೇಥ್
Question 8 Explanation: 

ಯು ಡಿ ಸಾಲ್ವಿ ರಾಷ್ಟ್ರೀಯ ಹಸಿರು ನ್ಯಾಯಮೂರ್ತಿ (NGT) ಅಧ್ಯಕ್ಷರಾಗಿ ಜಸ್ಟಿನ್ ಉಮೇಶ್ ದತ್ತಾತ್ರೇಯ ಸಾಲ್ವಿ ಅವರು ಅಧ್ಯಕ್ಷರಾಗಿ ನೇಮಕಗೊಂಡರು

Question 9

9. ಕೇಂದ್ರ ಸರ್ಕಾರವು ಕ್ರಿಡಾಪಟು ನಿತಿಶಾ ನೇಗಿಯವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಅನುದಾನ ನೀಡಿದೆ. ನೇಗಿಯವರು ಈ ಕೆಳಗಿನ ಯಾವ ಕ್ರಿಡೆಯ ಆಟಗಾರ?

A
ಹಾಕಿ
B
ಫುಟ್ಬಾಲ್
C
ಬಾಸ್ಕೆಟ್ ಬಾಲ್
D
ಈಜು
Question 9 Explanation: 

ಡಿಸೆಂಬರ್ 29 ರಂದು ಕೇಂದ್ರ ಕ್ರೀಡಾ ಸಚಿವ ಕರ್ನಲ್ ರಾಜವರ್ಧನ್ ರಾಥೋಡ್ ಅವರು ನೇಗಿಯವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಅನುದಾನ ನೀಡಿದರು.

Question 10

1. CARE ಶ್ರೇಯಾಂಗಳ ಇತ್ತೀಚಿನ ವರದಿಯ ಪ್ರಕಾರ, ಅತ್ಯಧಿಕ ಕಾರ್ಯನಿರ್ವಹಿಸದ ಆಸ್ತಿಗಳ (NPA) ಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ?

A
9 ನೇ
B
5 ನೇ
C
13 ನೇ
D
25 ನೇ
Question 10 Explanation: 

CARE ಶ್ರೇಯಾಂಗಳ ಇತ್ತೀಚಿನ ವರದಿಯ ಪ್ರಕಾರ, ಅತ್ಯಧಿಕ ಕಾರ್ಯನಿರ್ವಹಿಸದ ಆಸ್ತಿಗಳ (NPA) ಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತವು 5 ನೇ ಸ್ಥಾನ ಪಡೆದಿದೆ ಮತ್ತು BRICS ದೇಶಗಳಲ್ಲಿ ಅಗ್ರಸ್ಥಾನದಲ್ಲಿದೆ. (NPA) ಪಟ್ಟಿಯಲ್ಲಿ ಗ್ರೀಸ್( 36.44%) ಅಗ್ರಸ್ಥಾನದಲ್ಲಿದೆ ಹಾಗೂ ಇಟಲಿ (16.44%), ಪೋರ್ಚುಗಲ್ (15.5%) ಮತ್ತು ಐರ್ಲೆಂಡ್ (11.9%) ನಂತರದ ಸ್ಥಾನಗಳನ್ನು ಪಡೆದಿವೆ.

There are 10 questions to complete.

[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್29302017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,29,30,2017”

  1. Mallamma .A.Mallapur

    Very useful

  2. Pleas send me quations related jto exams

Leave a Comment

This site uses Akismet to reduce spam. Learn how your comment data is processed.