ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,27,2017

Question 1

1. ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಶ್ರೀಲಂಕಾದಲ್ಲಿ ಯಾವ ಭಾರತೀಯ ಬರಹಗಾರರನ್ನು ಸನ್ಮಾನಿಸಲಾಯಿತು?

A
ರವೀಂದರ್ಸಿಂಗ್
B
ರಾಮೇಂದ್ರ ಕುಮಾರ್
C
ಅಶ್ವಿನ್ ಸಂಘಿ
D
ಕುಮಾಲ್ ನಂಜನಿಯಾ
Question 1 Explanation: 

ರಾಮೇಂದ್ರ ಕುಮಾರ್ ಪ್ರಖ್ಯಾತ ಭಾರತೀಯ ಲೇಖಕ ಮತ್ತು ಕಥೆಗಾರ ರಮೇಂದ್ರ ಕುಮಾರ್ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಶ್ರೀಲಂಕಾದ ಕೊಲಂಬೋದಲ್ಲಿ ಸನ್ಮಾನಿಸಲಾಯಿತು. ಅವರ ಕಥೆಗಳು ಶ್ರೀಲಂಕಾದ ಪಠ್ಯಪುಸ್ತಕಗಳಲ್ಲಿವೆ. ಅವರ ಬರಹಗಳನ್ನು 14 ಭಾರತೀಯ ಮತ್ತು 13 ವಿದೇಶಿ ಭಾಷೆಗಳಿಗೆ ಭಾಷಾಂತರಿಸಲಾಗಿದೆ ಮತ್ತು ವಿದೇಶಗಳಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಮತ್ತು ಸಂಕಲನಗಳಲ್ಲಿ ಸ್ಥಾನ ಪಡೆದಿವೆ.

Question 2

2. ಸಿಂಬಲ್ಬರಾ ರಾಷ್ಟ್ರೀಯ ಉದ್ಯಾನ (SNP) ಯಾವ ರಾಜ್ಯದಲ್ಲಿದೆ?

A
ಮಧ್ಯಪ್ರದೇಶ
B
ಹಿಮಾಚಲ ಪ್ರದೇಶ
C
ಒಡಿಶಾ
D
ಜಾರ್ಖಂಡ್
Question 2 Explanation: 

ಹಿಮಾಚಲ ಪ್ರದೇಶ ಸಿಂಬಲ್ಬರಾ ರಾಷ್ಟ್ರೀಯ ಉದ್ಯಾನ (SNP)ವು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಪೌಂಟಾ ಕಣಿವೆಯಲ್ಲಿದೆ. ಇದು ಹರಿಯಾಣದ ಗಡಿಯಲ್ಲಿದೆ ಮತ್ತು ಸುಮಾರು 27.22 ಚ.ಕಿ ಪ್ರದೇಶವನ್ನು ಹೊಂದಿದೆ.

Question 3

3. 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ (NCSC-2017)ರ ವಿಷಯ(Theme) ಯಾವುದು?

A
ಸೈನ್ಸ್ ಅಂಡ್ ಯೂತ್: ಜಾಯಿಂಟ್ ವೆಂಚರ್
B
ಸಮರ್ಥನೀಯ ಅಭಿವೃದ್ದಿಗಾಗಿ ವಿಜ್ಞಾನ ಮತ್ತು ಇನ್ನೋವೇಶನ್
C
ವಿಜ್ಞಾನ ಮತ್ತು ಗುಪ್ತಚರ
D
ಭವಿಷ್ಯದ ವಿಜ್ಞಾನ
Question 3 Explanation: 

ಸಮರ್ಥನೀಯ ಅಭಿವೃದ್ದಿಗಾಗಿ ವಿಜ್ಞಾನ ಮತ್ತು ಇನ್ನೋವೇಶನ್ ಡಿಸೆಂಬರ್ 27 ರಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು 25 ನೇ ಆವೃತ್ತಿಯ ನ್ಯಾಷನಲ್ ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್ (NCSC-2017)ಅನ್ನು ಉದ್ಘಾಟಿಸಿದರು.

Question 4

4. “Indian Economic Association (IEA)”ನ 100ನೇ ವಾರ್ಷಿಕ ಸಮ್ಮೇಳನವನ್ನು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ (IEA) ದಲ್ಲಿ ಯಾರು ಉದ್ಘಾಟಿಸಿದರು?

A
ಅರುಣ್ ಜೇಟ್ಲಿ
B
ನರೇಂದ್ರ ಮೋದಿ
C
ಜಿತೇಂದ್ರ ಸಿಂಗ್
D
ರಾಮ್ ನಾಥ್ ಕೋವಿಂದ್
Question 4 Explanation: 

ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಆಂದ್ರಪ್ರದೇಶದ ಗುಂಟೂರಿನ ಬಳಿಯಿರುವ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ (IEA) ದಲ್ಲಿ ಡಿಸೆಂಬರ್ 27 ರಂದು ಭಾರತೀಯ ಆರ್ಥಿಕ ಸಂಘಟನೆಯ 100 ನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು.

Question 5

5. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸಸ್ ರಿಸರ್ಚ್ (IISR) ಯಾವ ರಾಜ್ಯದಲ್ಲಿದೆ?

A
ಕೇರಳ
B
ತಮಿಳುನಾಡು
C
ಕರ್ನಾಟಕ
D
ಆಂದ್ರಪ್ರದೇಶ
Question 5 Explanation: 

ಕೇರಳ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸಸ್ ರಿಸರ್ಚ್(IISR) ಭಾರತದ ಕೇರಳದಲ್ಲಿದೆ. ಇದು ಮಸಾಲೆಗಳಿಗೆ ಸಂಬಂಧಿಸಿದ ಕೃಷಿ ಸಂಶೋಧನೆಯಲ್ಲಿ ತೊಡಗಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸಸ್ ರಿಸರ್ಚ್ ಕೇರಳದ ಕ್ಯಾಲಿಕಟ್ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ ಮತ್ತು ಕೃಷಿ ಸಚಿವಾಲಯದ ಅಡಿಯಲ್ಲಿ ಭಾರತೀಯ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ICAR – ನವದೆಹಲಿ)ಯ ಅಂಗಸಂಸ್ಥೆಯಾಗಿದೆ.

Question 6

6. ಸ್ಯಾಮ್ಸಂಗ್ ಪೇನಲ್ಲಿ “ಬಿಲ್ ಪೇಮೆಂಟ್ಸ್” ನೀಡಲು ಯಾವ ಬ್ಯಾಂಕಿನೊಂದಿಗೆ ಸ್ಯಾಮ್ಸಂಗ್ ಒಪ್ಪಂದ ಮಾಡಿಕೊಂಡಿದೆ?

A
SBI
B
ICICI Bank
C
HDFC Bank
D
Axis Bank
Question 6 Explanation: 

Axis Bank ಸ್ಯಾಮ್ಸಂಗ್ ಪೇನಲ್ಲಿ “ಬಿಲ್ ಪೇಮೆಂಟ್ಸ್” ನೀಡಲು Axis ಬ್ಯಾಂಕಿನೊಂದಿಗೆ ಸ್ಯಾಮ್ಸಂಗ್ ಒಪ್ಪಂದ ಮಾಡಿಕೊಂಡಿದೆ. ಸ್ಯಾಮ್ಸಂಗ್ ಕಂಪನಿಯು ಪ್ರಾರಂಭಿಸಿದ ಹೊಸ ವೈಶಿಷ್ಟ್ಯವು ಸಾಮ್ಸಂಗ್ ಪೇನ ಸುರಕ್ಷಿತ ಮತ್ತು ಅನುಕೂಲಕರ ವೇದಿಕೆಯ ಮೂಲಕ ಬಳಕೆದಾರರು ತಮ್ಮ ಸೌಲಭ್ಯಗಳನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.

Question 7

7. ಎಲ್ಲ ಸರ್ಕಾರಿ ವಿವರಗಳನ್ನು ಆನ್ಲೈನ್ ಮೂಲಕ ಪ್ರವೇಶ (ಎಂಟ್ರಿ) ಮಾಡಲು ಕೇಂದ್ರ ಸರಕಾರಿ ನೌಕರರಿಗೆ e-HRMS ಅನ್ನು ಯಾವ ಕೇಂದ್ರ ಸಚಿವರು ಉದ್ಘಾಟಿಸಿದರು?

A
ನರೇಂದ್ರ ಮೋದಿ
B
ಅರುಣ್ ಜೇಟ್ಲಿ
C
ಜಿತೇಂದ್ರ ಸಿಂಗ್
D
ಸ್ಮೃತಿ ಇರಾನಿ
Question 7 Explanation: 

ಜಿತೇಂದ್ರ ಸಿಂಗ್ ಎಲ್ಲ ಸರ್ಕಾರಿ ವಿವರಗಳನ್ನು ಆನ್ಲೈನ್ ಮೂಲಕ ಪ್ರವೇಶ (ಎಂಟ್ರಿ) ಮಾಡಲು ಕೇಂದ್ರ ಸರಕಾರಿ ನೌಕರರಿಗೆ e-HRMS ಅನ್ನು ಜಿತೇಂದ್ರ ಸಿಂಗ್ ಅವರು ನವದೆಹಲಿಯಲ್ಲಿ ಉದ್ಘಾಟಿಸಿದರು. ಈ ಪೋರ್ಟಲ್ನಲ್ಲಿ ನೌಕರರು ತಮ್ಮ ವೇತನ, ರಜೆ ಮತ್ತು ಇತರೆ ಸೇವೆಗಳಿಗೆ ಸಂಬಂಧಿತ ಮಾಹಿತಿಯನ್ನು ಎಂಟ್ರಿ ಮಾಡಬಹುದಾಗಿದೆ.

Question 8

8. “2018 ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್” ಎಂಬ ಶೀರ್ಷಿಕೆಯ ಪ್ರಕಾರ, 2018 ರಲ್ಲಿ ಭಾರತವು 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಈ ವರದಿಯನ್ನು ಯಾವ ಅಂತರಾಷ್ಟ್ರೀಯ ಸಂಘಟನೆಯಿಂದ ಪ್ರಕಟಿಸಲ್ಪಟ್ಟಿದೆ? ಅ) ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF)

A
ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF)
B
ವರ್ಲ್ಡ್ ಬ್ಯಾಂಕ್ (WB)
C
ಅರ್ಥಶಾಸ್ತ್ರ ಮತತು ವ್ಯಾಪಾರ ಸಂಶೋಧನಾ ಕೇಂದ್ರ (CEBR)
D
ಟ್ರೇಡ್ ಆ್ಯಂಡ್ ಡೆವಲಪ್ಮೆಂಟ್ ಕುರಿತು ಯುನೈಟೆಡ್ ನೇಶನ್ಸ್ ಕಾನ್ಫರೆನ್ಸ್ (UNCTAD)
Question 8 Explanation: 

ಅರ್ಥಶಾಸ್ತ್ರ ಮತತು ವ್ಯಾಪಾರ ಸಂಶೋಧನಾ ಕೇಂದ್ರ (CEBR) ಇತ್ತೀಚೆಗೆ ಬಿಡುಗಡೆಯಾದ “2018 ವರ್ಲ್ಡ್ ಎಕನಾಮಿಕ್ ಲೀಗ್ ಟೇಬಲ್” ಎಂಬ ಶೀರ್ಷಿಕೆಯ ಪ್ರಕಾರ, 2018 ರಲ್ಲಿ ಭಾರತವು 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ.

Question 9

9. ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸದ ಜೈರಾಮ್ ಠಾಕೂರ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು?

A
ಗ್ಯಾಗೇಟ್
B
ನಳಗಡ್
C
ಹಮೀರ್ಪುರ್
D
ಸೆರಾಜ್
Question 9 Explanation: 

ಸೆರಾಜ್ ಮಂಡಿಯ ಸೆರಾಜ್ ಕ್ಷೇತ್ರದ ಶಾಸಕರಾದ ಜೈರಾಮ್ ಠಾಕೂರ್ ಅವರು ಹಿಮಾಚಲ ಪ್ರದೇಶದ ಹೊಸ ಮುಖ್ಯಮಂತ್ರಿಯಾಗಿದ್ದಾರೆ. ಗವರ್ನರ್ ಆಚಾರ್ಯ ದೇವ್ ವ್ರತ್ ಅವರು ಡಿಸೆಂಬರ್ 5, 2017 ರಂದು ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಶ್ರೀ ಜೈರಾಮ್ ಠಾಕೂರ್ ಮತ್ತು 11 ಇತರ ಸಚಿವರಿಗೆ ಕಚೇರಿ ಮತ್ತು ಗೌಪ್ಯತೆ ಪ್ರಮಾಣ ವಚನ ನೀಡಿದರು.

Question 10

10. ನಾಕ್ರಾಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನ ಹೊಸ ಜನರಲ್ ನಿರ್ದೇಶಕರು ಯಾರು?

A
ಜಿತೇಂದ್ರ ಸಿಂಗ್
B
ಆರ್ ಆರ್ ಭಟ್ನಾಗರ್
C
ದಿನೇಶ್ವರ ಶರ್ಮಾ
D
ಅಭಯ್
Question 10 Explanation: 

ಅಭಯ್ ಹಿರಿಯ ಐಪಿಎಸ್ ಅಧಿಕಾರಿ ಅಭಯ್ ಅವರನ್ನು ನಾಕ್ರಾಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನ ಹೊಸ ಜನರಲ್ ನಿರ್ದೇಶಕರಾಗಿ ನೇಮಿಸಲಾಗಿದೆ. 2017 ರ ಡಿಸೆಂಬರ್ 27 ರಂದು ಕ್ಯಾಬಿನೆಟ್ ನೇಮಕಾತಿ ಸಮಿತಿಯು 2019 ರ ನವೆಂಬರ್ 18 ರ ವರೆಗೆ ಮುಂದುವರಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2018/04/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್272017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಡಿಸೆಂಬರ್,27,2017”

Leave a Comment

This site uses Akismet to reduce spam. Learn how your comment data is processed.