ಕಾಗದ ಮುಕ್ತ ವ್ಯವಹಾರಕ್ಕೆ ಇ-ಸಂಸದ್ ಮತ್ತು ಇ-ವಿಧಾನ್

ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಕಾಗದ ರಹಿತ ಕಾರ್ಯಾಚರಣೆಯನ್ನು ಉತ್ತೇಜಿಸುವ ಸಲುವಾಗಿ ಇ-ಸಂಸದ್ ಮತ್ತು ಇ-ವಿಧಾನ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.

ಇ-ಸಂಸದ್ & ಇ-ವಿಧಾನ್:

ಇ-ಸಂಸದ್ ಮತ್ತು ಇ-ವಿಧಾನ್ ಸಂಸತ್ ಮತ್ತು ರಾಜ್ಯ ಶಾಸಕಾಂಗಗಳ ಕಾರ್ಯಚಟುವಟಿಕೆಯನ್ನು ಕಾಗದ ಮುಕ್ತ ಕಾರ್ಯರೂಪಕ್ಕೆ ತರಲು, ಡಿಜಿಟಲ್ ಇಂಡಿಯಾ ಅಡಿಯಲ್ಲಿ ಭಾರತದ ಸರ್ಕಾರದ ಯೋಜನೆಗಳಾಗಿವೆ. ಸಂಸದೀಯ ವ್ಯವಹಾರ ಸಚಿವಾಲಯ ಈ ಎರಡೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯವಾಗಿದೆ.

ಮಹತ್ವ:

ಈ ಎರಡು ಯೋಜನೆಗಳು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಕಾರ್ಯಚಟುವಟಿಕೆಗಳನ್ನು ಪಾರದರ್ಶಕವಾಗಿಸಲು, ಮತ್ತು ಸಾರ್ವಜನಿಕ ಜವಾಬ್ದಾರಿಯಾಗಿ ಸಂಪೂರ್ಣ ಶಾಸನ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಉದ್ದೇಶವನ್ನು ಹೊಂದಿವೆ. ಇದಲ್ಲದೆ, ಈ ಪರಿಸರ ಸ್ನೇಹಿ ಉಪಕ್ರಮವು ಸರ್ಕಾರದ ‘ಗೋ ಗ್ರೀನ್’ ಯೋಜನೆಗೆ ಅನುಗುಣವಾಗಿದೆ.

ಭಾರತದ ವೇಗದ ಕಂಪ್ಯೂಟರ್ “ಪ್ರತ್ಯುಷ್” ಲೋಕಾರ್ಪಣೆ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರು ಪುಣೆಯಲ್ಲಿ ಭಾರತದ ಅತೀ ವೇಗದ ಮತ್ತು ಮೊದಲ ‘ಮಲ್ಟಿ ಪೆಟಫ್ಲಾಪ್ಸ್’ ಸೂಪರ್ ಕಂಪ್ಯೂಟರ್‌ನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಇದರ ಗರಿಷ್ಠ ವೇಗ 6.8 ಪೆಟಪ್ಲಾಪ್ಸ್. ಪೆಟಫ್ಲಾಪ್ಸ್ ಎಂಬುದು ಕಂಪ್ಯೂಟರ್‌ನ ಪ್ರೊಸೆಸಿಂಗ್ ಸ್ಪೀಡ್ ಅಳೆಯುವ ವಿಧಾನವಾಗಿದೆ. ಈ ಸೂಪರ್ ಕಂಪ್ಯೂಟರ್‌ಗೆ ‘ಪ್ರತ್ಯುಷ್’ ಎಂದು ಹೆಸರಿಸಲಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರೊಫಿಕಲ್ ಮೆಟ್ರಾಲಜಿ ಪುಣೆಯಲ್ಲಿ ಇದನ್ನು ಅಳವಡಿಸಲಾಗಿದೆ.

  • ಭಾರತವು ಈಗ ಯುನೈಟೆಡ್ ಕಿಂಗ್ಡಮ್, ಜಪಾನ್ ಮತ್ತು ಯುಎಸ್ಎಗ ನಂತರ ಹವಾಮಾನ ಮತ್ತು ವಾತಾವರಣ ಸಂಬಂಧಿಸಿದ ವಿಷಯಗಳಿಗೆ ಮೀಸಲಾದ ಸಾಮರ್ಥ್ಯಗಳ ಸೂಪರ್ ಕಂಪ್ಯೂಟರ್ ಗಳಲ್ಲಿ ನಾಲ್ಕನೇ ಸ್ಥಾನವನ್ನು ಆಕ್ರಮಿಸಲಿದೆ. ಯು.ಕೆ 4 ಪೆಟಫ್ಲಾಪ್ಸ್, ಸಾಮರ್ಥ್ಯವನ್ನು ಹೊಂದಿದೆ, ನಂತರದಲ್ಲಿ ಜಪಾನ್ 20 ಪೆಟಫ್ಲಾಪ್ಸ್ ಮತ್ತು ಯುಎಸ್ಎ 10.7 ಪೆಟಾಫ್ಲಾಪ್ ಹೊಂದಿವೆ.
  • ಪ್ರಪಂಚದ ಅತಿವೇಗದ ಸೂಪರ್ ಕಂಪ್ಯೂಟರ್ಸ್ ಟಾಪ್ 500 ಪಟ್ಟಿಯಲ್ಲಿ ಭಾರತದ ಸೂಪರ್ ಕಂಪ್ಯೂಟರ್ ಸ್ಥಾನವು 300ರಿಂದ 30ಕ್ಕೆ ಏರಿಕೆಯಾಗಲಿದೆ.

ಪ್ರತ್ಯುಷ್ ಉಪಯೋಗ:

ಪ್ರತೂಶ್ ಹವಾಮಾನ ಮುನ್ಸೂಚನೆಗಳು ಮತ್ತು ವಿಸ್ತೃತ ಶ್ರೇಣಿ ಮುನ್ಸೂಚನೆಗಳನ್ನು ಸುಧಾರಿಸಲಿದೆ. ಅಲ್ಪ ಸಮಯದಲ್ಲಿ ಚಂಡಮಾರುತಗಳು ಮತ್ತು ಸುನಾಮಿಗಳನ್ನು ನಿಖರವಾಗಿ ಗ್ರಹಿಸಲಿದೆ. ಇದರಿಂದ ಕೃಷಿ, ಜಲಶಾಸ್ತ್ರ ಮತ್ತು ವಿದ್ಯುತ್ ವಲಯಗಳ ಮೇಲೆ ಅವಲಂಬಿತವಾಗಿರುವವರಿಗೆ ಸಹಾಯ ಆಗಲಿದೆ.

ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಮಾಜಿ ಸೈನಿಕರ ಪ್ರಾದೇಶಿಕ ಸೈನ್ಯದ ಬೆಟಾಲಿಯನ್

ಗಂಗಾನದಿಯನ್ನು 2020ರ ಹೊತ್ತಿಗೆ ಸ್ವಚ್ಚಗೊಳಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ, ಸ್ವಚ್ಚ ಗಂಗಾ ಮಿಷನ್ ಭಾಗವಾಗಿ ಮಾಜಿ ಸೈನಿಕರನ್ನು ಒಳಗೊಂಡಿರುವ ಪ್ರಾದೇಶಿಕ ಸೈನ್ಯ ಬೆಟಾಲಿಯನ್ ಅನ್ನು ಮಂಜೂರು ಮಾಡಿದೆ. ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ) ಕಾಂಪೋಸಿಟ್ ಇಕಾಲಾಜಿಕಲ್ ಟಾಸ್ಕ್ ಫೋರ್ಸ್ (ಸಿಇಟಿಎಫ್) ಆಗಿ ಈ ಬೆಟಾಲಿಯನ್ ಅನ್ನು ಸ್ಥಾಪಿಸಲಾಗುವುದು.

ಬೆಟಾಲಿಯನ್ ಬಗ್ಗೆ:

ಸಿಇಟಿಎಫ್ ಬೆಟಾಲಿಯನ್ ಕರ್ನಲ್-ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಎಂಟು ಅಧಿಕಾರಿಗಳು, 20 ಜ್ಯೂನಿಯರ್ ಕಮಾಂಡರ್ ಗಳು ಮತ್ತು ಸುಮಾರು 500 ಇತರ ಶ್ರೇಣಿಯ ಅಧಿಕಾರಗಳನ್ನು ಹೊಂದಿರಲಿದೆ.

ಕರ್ತವ್ಯಗಳು:

ನದಿಗೆ ಸಂಬಂಧಿಸಿದ ಪರಿಸರ ಮತ್ತು ಪರಿಸರ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯು ಬೆಟಾಲಿಯನ್ ಹೊಂದಿರಲಿದೆ. ಅಲ್ಲದೆ ಶಿಬಿರಗಳ ಮೂಲಕ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಡ್ರೋಣ್ ಕ್ಯಾಮೆರ ಬಳಸಲು ರೈಲ್ವೆ ನಿರ್ಧಾರ

ವಿವಿಧ ರೈಲ್ವೇ ಚಟುವಟಿಕೆಗಳು ವಿಶೇಷವಾಗಿ ಟ್ರ್ಯಾಕ್ಗಳು ಮತ್ತು ಇತರ ರೈಲ್ವೆ ಮೂಲಸೌಕರ್ಯಗಳ ಯೋಜನೆ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ “ಡ್ರೋನ್” ಕ್ಯಾಮೆರಾಗಳನ್ನು (UAV/NETRA) ನಿಯೋಜಿಸಲು ಭಾರತೀಯ ರೈಲ್ವೇ ನಿರ್ಧರಿಸಿದೆ,. ಈ ನಿಟ್ಟಿನಲ್ಲಿ, ಡ್ರೋಣ್ ಕ್ಯಾಮೆರಾಗಳನ್ನು ಖರೀದಿಸಲು ಝೋನಲ್ ರೈಲ್ವೆಗಳಿಗೆ ನಿರ್ದೇಶನ ನೀಡಲಾಗಿದೆ. ರೈಲು ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸುರಕ್ಷತೆ ಮತ್ತು ದಕ್ಷತೆ ಹೆಚ್ಚಿಸಲು ರೈಲ್ವೇ ಇಲಾಖೆ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ.

  • ಡ್ರೋನ್ “ಕ್ಯಾಮೆರಾಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ, ಯೋಜನೆಯ ಮೇಲ್ವಿಚಾರಣೆ, ಪ್ರಮುಖ ಕೆಲಸಗಳ ಪ್ರಗತಿ, ಟ್ರ್ಯಾಕ್ ಪರಿಸ್ಥಿತಿಗಳು ಮತ್ತು ತಪಾಸಣೆ ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತವೆ.
  • ಮೇಳಗಳು ಮತ್ತು ಉತ್ಸವ ಸಮಯದಲ್ಲಿ ಜನರ ಗುಂಪಿನ ನಿರ್ವಹಣೆ, ತ್ಯಾಜ್ಯಗಳನ್ನು ಗುರುತಿಸಲು ಮತ್ತು ರೈಲು ನಿಲ್ದಾಣಗಳ ವೈಮಾನಿಕ ಸಮೀಕ್ಷೆಗಾಗಿ ಸಹ ಇದನ್ನು ಬಳಸಿಕೊಳ್ಳಬಹುದಾಗಿದೆ.
  • ಟ್ರಾಕ್ ಮತ್ತು ಇತರ ರೈಲ್ವೆ ಮೂಲಸೌಕರ್ಯಗಳ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ನೈಜ ಸಮಯದ ಮಾಹಿತಿಗಳನ್ನು ಒದಗಿಸುವುಲ್ಲಿ ಡ್ರೋನ್ಸ್ ಪ್ರಮುಖ ಪಾತ್ರವಹಿಸುತ್ತದೆ.

ಈ ಉಪಕ್ರಮದ ಅಡಿಯಲ್ಲಿ “ವೆಸ್ಟ್ ಸೆಂಟ್ರಲ್ ರೈಲ್ವೇಸ್” ಜಬಲ್ಪುರ್ “ಡ್ರೋನ್” ಕ್ಯಾಮೆರಾಗಳನ್ನು ಖರೀದಿಸಿದ ಮೊದಲ ರೈಲ್ವೆ ವಲಯ ಆಗಿದೆ.

ಅಖಿಲ ಭಾರತ ಸಚೇತಕರ ಸಮಾವೇಶ (Whip Conference)

18ನೇ ಅಖಿಲ ಭಾರತ ಸಚೇತಕರ ಸಮಾವೇಶ ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಉದ್ಘಾಟಿಸಲಾಯಿತು. ಸಮ್ಮೇಳನದಲ್ಲಿ 19 ರಾಜ್ಯಗಳು ಮತ್ತು ಕೇಂದ್ರಕ್ಕೆ ಸೇರಿದ ಸುಮಾರು 90 ಪ್ರತಿನಿಧಿಗಳನ್ನು ಭಾಗವಹಿಸಿದ್ದರು.

ಸಚೇತಕರ ಸಮಾವೇಶ:

ಈ ಸಮಾವೇಶದ ಉದ್ದೇಶವು ಸಂಸತ್ತಿನ ಪ್ರಜಾಪ್ರಭುತ್ವ, ಅದರ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಅಂತಿಮವಾಗಿ ಸಾರ್ವಜನಿಕರಿಗೆ ದೊಡ್ಡಮಟ್ಟದಲ್ಲಿ ಸೇವೆಯನ್ನು ನೀಡುವುದು. ಸಮಾವೇಶವು ಹಲವಾರು ರಾಜಕೀಯ ಪಕ್ಷಗಳ ಸಚೇತಕರಿಗೆ ಅವರ ಅಭಿಪ್ರಾಯಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.

ಸಚೇತಕ?

ಸಚೇತಕ ಅಥವಾ ವಿಪ್ ರಾಜಕೀಯ ಪಕ್ಷದ ಪ್ರಮುಖ ಸದಸ್ಯ. ಸಂಸತ್ತಿನ ಎರಡು ಮನೆಗಳಲ್ಲಿ ತನ್ನ ಪಕ್ಷದ ಸದಸ್ಯರ ನಿರ್ವಹಣೆ ಮತ್ತು ಶಿಸ್ತನ್ನು ಕಾಪಾಡುವುದು ಸಚೇತಕರ ಪ್ರಮುಖ ಜವಾಬ್ದಾರಿ. ಪಕ್ಷದ ಸದಸ್ಯರು ಸಂಸತ್ತಿನಲ್ಲಿ ಮತ್ತು ಶಾಸಕಾಂಗದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನೀತಿಗೆ ಅನುಗುಣವಾಗಿ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಚೇತಕರ ಕರ್ತವ್ಯ.

  • 1952ರಲ್ಲಿ ಮೊದಲ ಅಖಿಲ ಭಾರತ ಸಚೇತಕರ ಸಮಾವೇಶವನ್ನು ಇಂದೋರ್ ನಲ್ಲಿ ಆಯೋಜಿಸಲಾಗಿತ್ತು.
  • ಅಖಿಲ ಭಾರತ ಸಚೇತಕರ ಸಮ್ಮೇಳನವನ್ನು ಸಂಘಟಿಸುವುದು ಸಂಸತ್ತಿನ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿ. ಸಂವಿಧಾನದ ಪರಿಚ್ಛೇದ 77 (3) ರ ಅಡಿಯಲ್ಲಿ ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1961ರ ಅಡಿಯಲ್ಲಿ ಸಂಸತ್ತಿನ ವ್ಯವಹಾರಗಳ ಸಚಿವಾಲಯಕ್ಕೆ ವಹಿಸಲಾಗಿದೆ.

6 Thoughts to “ಪ್ರಚಲಿತ ವಿದ್ಯಮಾನಗಳು -ಜನವರಿ,13,2018”

  1. MALLIKARJUN MULAWAD

    Thanks ri

  2. raju devaramani

    thankas ri

Leave a Reply to raju devaramani Cancel reply

This site uses Akismet to reduce spam. Learn how your comment data is processed.